»   » ಪ್ರತಿಷ್ಠಿತ 'ಪೀಪಲ್ಸ್ ಚಾಯ್ಸ್ ಅವಾರ್ಡ್' ಮುಡಿಗೇರಿಸಿಕೊಂಡ ಪ್ರಿಯಾಂಕ ಚೋಪ್ರಾ

ಪ್ರತಿಷ್ಠಿತ 'ಪೀಪಲ್ಸ್ ಚಾಯ್ಸ್ ಅವಾರ್ಡ್' ಮುಡಿಗೇರಿಸಿಕೊಂಡ ಪ್ರಿಯಾಂಕ ಚೋಪ್ರಾ

Posted By:
Subscribe to Filmibeat Kannada

ತಮ್ಮ ನೆಚ್ಚಿನ ನಟ ನಟಿಯರಿಗೆ ಮತ್ತು ಕಾರ್ಯಕ್ರಮಗಳಿಗೆ ಅಭಿಮಾನಿಗಳು ವೋಟ್ ಮಾಡಿದ ಆಧಾರದ ಮೇಲೆ ನೀಡಲಾಗುವ '43ನೇ ಪೀಪಲ್ಸ್ ಚಾಯ್ಸ್ ಅವಾರ್ಡ್' ಪಡೆದವರ ಲೀಸ್ಟ್ ಹೊರಬಿದ್ದಿದೆ. ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ ನಲ್ಲಿನ ಮೈಕ್ರೋಸಾಫ್ಟ್ ಥಿಯೇಟರ್ ನಲ್ಲಿ ನಡೆದ ಈ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜೋಯಲ್ ಮೆಕ್ಹೇಲ್ ಹೋಸ್ಟ್ ಮಾಡಿದರು.[ಫೋಟೋಗಳು: 'ಗೋಲ್ಡನ್ ಗ್ಲೋಬ್' ಪ್ರಶಸ್ತಿ ಸಮಾರಂಭದಲ್ಲಿ ಪ್ರಿಯಾಂಕ ಚೋಪ್ರಾ]

'43ನೇ ಪೀಪಲ್ಸ್ ಚಾಯ್ಸ್ ಅವಾರ್ಡ್' ಅನ್ನು 64 ವಿಭಾಗಗಳಲ್ಲಿ ಆಯ್ಕೆಯಾದ ಉತ್ತಮ ನಟ ನಟಿಯರಿಗೆ ನೀಡಲಾಗಿದೆ. ವಿಶೇಷ ಅಂದ್ರೆ ಭಾರತದಿಂದ ಬಾಲಿವುಡ್ ನ ಜಿಂಕೆ ನಟಿ ಪ್ರಿಯಾಂಕ ಚೋಪ್ರಾ ಸಹ ಈ ಪ್ರಶಸ್ತಿಯನ್ನು ಪಡೆದಿದ್ದಾರೆ. 43ನೇ ಪೀಪಲ್ಸ್ ಚಾಯ್ಸ್ ಅವಾರ್ಡ್ ಅನ್ನು ಪಡೆದವರಲ್ಲಿ ಪ್ರಮುಖವಾದವರು ಯಾವ ವಿಭಾಗದಲ್ಲಿ ಯಾರ್ಯಾರು ಈ ಪ್ರಶಸ್ತಿ ಪಡೆದಿದ್ದಾರೆ ಎಂಬ ಲೀಸ್ಟ್ ಇಲ್ಲಿದೆ ನೋಡಿ.[74ನೇ 'ಗೋಲ್ಡನ್ ಗ್ಲೋಬ್' ಪ್ರಶಸ್ತಿ ಯಾರ್ಯಾರಿಗೆ ಸಿಕ್ತು?]

ಜೆನ್ನಿಫರ್ ಲೋಪೇಜ್

ಪ್ರಖ್ಯಾತ ಪಾಪ್ ಸಿಂಗರ್ ಜೆನ್ನಿಫರ್ ಲೊಪೆಜ್ ನೆಚ್ಚಿನ ಟಿವಿ ಕ್ರೈಮ್ ಡ್ರಾಮಾ ನಟಿ ವಿಭಾಗದಲ್ಲಿ '43ನೇ ಪೀಪಲ್ಸ್ ಚಾಯ್ಸ್ ಅವಾರ್ಡ್' ಅನ್ನು ಸ್ವೀಕರಿಸಿದ್ದಾರೆ. ಇವರು ಒಟ್ಟಾರೆ 8 ವಿಭಾಗದಲ್ಲಿ ನಾಮಿನೇಷನ್ ಆಗಿದ್ದರು.

ಪ್ರಿಯಾಂಕ ಚೋಪ್ರಾ

ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ ನೆಚ್ಚಿನ ಡ್ರಾಮಾ ಟಿವಿ ನಟಿ ವಿಭಾಗದಲ್ಲಿ ಹೆಚ್ಚಿನ ಅಭಿಮಾನಿಗಳಿಂದ ವೋಟ್ ಪಡೆದು ಪ್ರಶಸ್ತಿ ಪಡೆದಿದ್ದಾರೆ.[ಶೂಟಿಂಗ್ ವೇಳೆ ಪ್ರಿಯಾಂಕಾ ಚೋಪ್ರಾಗೆ ಗಾಯ: ಆಸ್ಪತ್ರೆಯಿಂದ ಡಿಸ್ಚಾರ್ಜ್!]

Ellen DeGeneres

ಅಮೆರಿಕದ ಖ್ಯಾತ ಹಾಸ್ಯಗಾರ ಮತ್ತು ಟಿವಿ ಹೋಸ್ಟ್ 'Ellen DeGeneres' ಅವರು ನೆಚ್ಚಿನ ಆನಿಮೇಟೆಡ್ ಸಿನಿಮಾ ವಾಯ್ಸ್, ನೆಚ್ಚಿನ ಡೇಟೈಮ್ ಟಿವಿ ಹೋಸ್ಟ್, ನೆಚ್ಚಿನ ಹಾಸ್ಯ ಸಹಕಾರ ವಿಭಾಗಗಳಲ್ಲಿ ಪೀಪಲ್ಸ್ ಚಾಯ್ಸ್ ಅವಾರ್ಡ್ ಪ್ರಶಸ್ತಿಗೆ ಆಯ್ಕೆ ಆಗಿ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಲಿಲ್ಲಿ ಸಿಂಗ್

ಕೆನಡಾದ ಯೂಟ್ಯೂಬ್ ಪರ್ಸನಾಲಿಟಿ ಆದಂತಹ ಲಿಲ್ಲಿ ಸಿಂಗ್ ನೆಚ್ಚಿನ ಯೂಟ್ಯೂಬ್ ಸ್ಟಾರ್ ವಿಭಾಗದಲ್ಲಿ 43ನೇ ಪೀಪಲ್ಸ್ ಚಾಯ್ಸ್ ಅವಾರ್ಡ್ ಪಡೆದಿದ್ದಾರೆ.

ರಾಬರ್ಟ್ ಡೌನಿ ಜೂನಿಯರ್

2017 ರ ಪೀಪಲ್ಸ್ ಚಾಯ್ಸ್ ಅವಾರ್ಡ್ ಅನ್ನು ಅಮೆರಿಕ ನಟ ರಾಬರ್ಟ್ ಡೌನಿ ಜೂನಿಯರ್ ನೆಚ್ಚಿನ ಆಕ್ಷನ್ ಸಿನಿಮಾ ವಿಭಾಗದಲ್ಲಿ ಆಯ್ಕೆ ಯಾಗಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

'ದಿ ಬಿಗ್ ಬ್ಯಾಂಗ್ ಥಿಯರಿ'

ನೆಚ್ಚಿನ ನೆಟ್‌ವರ್ಕ್‌ ಕಾಮಿಡಿ ಟಿವಿ ವಿಭಾಗದಲ್ಲಿ "ದಿ ಕಾಸ್ಟ್ ಅಂಡ್ ಕ್ರಿವ್ ಆಫ್ 'ದಿ ಬಿಗ್ ಬ್ಯಾಂಗ್ ಥಿಯರಿ'" ಟೀಮ್, ಅಭಿಮಾನಿಗಳಿಂದ ಹೆಚ್ಚಿನ ವೋಟ್ ಪಡೆದು 43ನೇ ಪೀಪಲ್ಸ್ ಚಾಯ್ಸ್ ಅವಾರ್ಡ್ ಗೆ ಭಾಜನವಾಗಿದೆ.

Jamie Chung ಮತ್ತು Adam Rodriguez

ಪ್ರಿಯಾಂಕ ಚೋಪ್ರಾ ಪೀಪಲ್ಸ್ ಚಾಯ್ಸ್ ಅವಾರ್ಡ್ ಸ್ವೀಕರಿಸಿ ಮಾತನಾಡುವ ವೇಳೆ ಅವರ ಎಡಭಾಗದಲ್ಲಿ ಅಮೆರಿಕದ ಖ್ಯಾತ ನಟಿ Jamie Chung ಮತ್ತು ಖ್ಯಾತ ನಟ Adam Rodriguez ನಿಂತಿರುವ ದೃಶ್ಯ.

ಕುನಾಲ್ ನಾಯರ್ ಮತ್ತು ನೆಹಾ ಕಪುರ್

43ನೇ ಪೀಪಲ್ಸ್ ಚಾಯ್ಸ್' ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಕುನಾಲ್ ನಾಯರ್ ಮತ್ತು ನೆಹಾ ಕಪುರ್ ಮೈಕ್ರೋಸಾಫ್ಟ್ ಥಿಯೇಟರ್‌ ಗೆ ಆಗಮಿಸಿದ ವೇಳೆ ಕ್ಲಿಕ್ಕಿಸಿದ ಫೋಟೋ. ನೆಹಾ ಕಪುರ್ ಭಾರತದ ಮಾಡೆಲ್ ಹಾಗೂ ನಟಿ. ಇವರು '2006 ರ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆ'ಯಲ್ಲಿ ವಿಜೇತವಾದ ಬ್ಯೂಟಿ ಕ್ವೀನ್ ಸಹ.

'ಕುನಾಲ್ ನಾಯರ್ ಬ್ರಿಟಿಷ್ ಮೂಲದ ಭಾರತೀಯ ನಟ ಹಾಗೂ ಬರಹಗಾರ. 'ದಿ ಬಿಗ್ ಬ್ಯಾಂಗ್ ಥಿಯರಿ' ಯಲ್ಲಿ ಆಕ್ಟ್ ಮಾಡುವ ಮೂಲಕ ಪ್ರಖ್ಯಾತವಾಗಿದ್ದಾರೆ.

English summary
People's Choice Awards 2017: Ellen DeGeneres, Priyanka Chopra and Other Big Winners. Hosted by Joel McHale.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada