»   » ಸಂಭಾವನೆಯಲ್ಲಿ ದೀಪಿಕಾರನ್ನು ಹಿಂದಿಕ್ಕಿದ ಪ್ರಿಯಾಂಕ ಚೋಪ್ರಾ

ಸಂಭಾವನೆಯಲ್ಲಿ ದೀಪಿಕಾರನ್ನು ಹಿಂದಿಕ್ಕಿದ ಪ್ರಿಯಾಂಕ ಚೋಪ್ರಾ

Posted By: Sonu
Subscribe to Filmibeat Kannada

ಹಿಂದಿ ಚಿತ್ರರಂಗಕ್ಕಿಂತ ಹೆಚ್ಚಾಗಿ ಹಾಲಿವುಡ್ ಕ್ಷೇತ್ರದಲ್ಲಿ ಟೆಂಟ್ ಹಾಕಿರುವ ನಟಿ ಪ್ರಿಯಾಂಕ ಚೋಪ್ರಾ, ಎಲ್ಲರಿಗಿಂತ ವಿಭಿನ್ನವಾಗಿ ಕಾಣುತ್ತಾರೆ. ತಮ್ಮ ಅದ್ಭುತ ಪ್ರತಿಭೆಯಿಂದ ಮೆಚ್ಚುಗೆ ಗಳಿಸಿರುವ ಪಿಗ್ಗಿ, ಇದೀಗ ಸಂಭಾವನೆ ವಿಚಾರದಲ್ಲೂ ಬಹಳ ಎತ್ತರದಲ್ಲಿದ್ದಾರೆ.

ಹಾಲಿವುಡ್ ನ 'ಕ್ವಾಂಟಿಕೋ' ಧಾರಾವಾಹಿಯಲ್ಲಿ ಪ್ರಿಯಾಂಕ ಚೋಪ್ರಾ ಅವರು ನಟಿಸಲು ಆರಂಭಿಸಿದ ಮೇಲೆ, ಇಡೀ ಬಿಟೌನ್ ನಲ್ಲಿ ಪಿಗ್ಗಿ ಎಲ್ಲರ ಕೇಂದ್ರ ಬಿಂದುವಾಗಿದ್ದಾರೆ. ಜೊತೆಗೆ ಅವರ ಸಂಪಾದನೆ ಕೂಡ ಎರಡು ಪಟ್ಟು ಹೆಚ್ಚಾಗಿದೆ.[ಪ್ರಿಯಾಂಕ ಕಾಲುಗಳಿಂದ ಎಷ್ಟು ಜನಕ್ಕೆ ಉಪಯೋಗ ಇದೆ ಗೊತ್ತಾ?]

ಇದೀಗ ಹೊಸದಾಗಿ ಪ್ರಿಯಾಂಕ ಚೋಪ್ರಾ ಅವರು, ಟಿವಿ ಶೋ ಮತ್ತು ಜಾಹೀರಾತಿನಿಂದಾಗಿ ಜಗತ್ತಿನ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಅತೀ ಹೆಚ್ಚು ಸಂಭಾವನೆ ಮೂಲಕ ಫೋರ್ಬ್ಸ್ ಪಟ್ಟಿಗೆ ಪಿಗ್ಗಿ ಸೇರ್ಪಡೆಯಾಗಿದ್ದಾರೆ. ಮುಂದೆ ಓದಿ....

ಫೋರ್ಬ್ಸ್ ಪಟ್ಟಿಯಲ್ಲಿ ಪಿಗ್ಗಿಗೆ ಸ್ಥಾನ

'ಕ್ವಾಂಟಿಕೋ' ಸೀರಿಯಲ್ ಮತ್ತು ವಿಭಿನ್ನ ಜಾಹೀರಾತುಗಳಿಂದ ಪಿಗ್ಗಿ ಅವರಿಗೆ ಹೆಚ್ಚು ಸಂಭಾವನೆ ದೊರೆಯುತ್ತಿದೆ. ಆದ್ದರಿಂದ ಇದೀಗ ಫೋರ್ಬ್ಸ್ ಪಟ್ಟಿಯಲ್ಲಿ ಪ್ರಿಯಾಂಕ ಅವರು 8ನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಅಮೆರಿಕದ ನಟಿ ಸೋಫಿಯಾ ವರ್ಗರ ಅವರು ಸತತ 5ನೇ ಬಾರಿಗೆ ಮೊದಲ ಸ್ಥಾನವನ್ನು ಕಾಯ್ದಿರಿಸಿಕೊಂಡಿದ್ದಾರೆ. ಇದೀಗ ಪಿಗ್ಗಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಕಿರುತೆರೆ ನಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.[ಉಸ್ಸಪ್ಪಾ! 10 ನಿಮಿಷ ಕುಣಿಯಲು ಪ್ರಿಯಾಂಕ ಪಡೆದ ಸಂಭಾವನೆ ಇಷ್ಟಾ?]

ಪ್ರಿಯಾಂಕ ವಾರ್ಷಿಕ ಆದಾಯ ಎಷ್ಟು.?

ಇಲ್ಲಿಯವರೆಗೆ ನಟಿ ಪ್ರಿಯಾಂಕ ಚೋಪ್ರಾ ಅವರ ವಾರ್ಷಿಕ ಅದಾಯ ಸುಮಾರು 11 ದಶಲಕ್ಷ ಡಾಲರ್ ನಷ್ಟಿದೆ. 'ಕ್ವಾಂಟಿಕೋ' ಸೀರಿಯಲ್ ನಲ್ಲಿ ನಟಿಸಲು ಆರಂಭಿಸಿದ ಮೇಲೆ ಪಿಗ್ಗಿ ಇನ್ನೂ ಹೆಚ್ಚು ಸಂಪಾದಿಸಲು ಆರಂಭಿಸಿದರು. ಇನ್ನು ಹಾಲಿವುಡ್ ನಟಿ ಸೋಫಿಯಾ ಅವರ ವಾರ್ಷಿಕ ಆದಾಯ 43 ದಶಲಕ್ಷ ಅಮೆರಿಕನ್ ಡಾಲರ್ ಇದೆ.['ವೈಟ್ ಹೌಸ್' ಡಿನ್ನರ್ ಗೆ ಪ್ರಿಯಾಂಕಗೆ ಒಬಾಮಾರಿಂದ ಆಹ್ವಾನ]

ದೀಪಿಕಾರನ್ನು ಸೋಲಿಸಿದ ಪ್ರಿಯಾಂಕ

ಇಲ್ಲಿಯವರೆಗೆ ಅತೀ ಹೆಚ್ಚು ಸಂಪಾದನೆ ಮಾಡುವ ನಟಿಯರ ಸಾಲಿನಲ್ಲಿ ದೀಪಿಕಾ ಪಡುಕೋಣೆ ಇದ್ದರು. ಅವರು ಬರೀ ಸಿನಿಮಾಗಳ ಮೂಲಕ ಬರೋಬ್ಬರಿ 10 ಮಿಲಿಯನ್ ಡಾಲರ್ ಸಂಪಾದನೆ ಮಾಡಿದ್ದಾರೆ. ಇದೀಗ 11 ದಶಲಕ್ಷ ಡಾಲರ್ ಸಂಪಾದನೆ ಮೂಲಕ ದೀಪಿಕಾರನ್ನು ಪ್ರಿಯಾಂಕ ಹಿಂದಿಕ್ಕಿದ್ದಾರೆ.

ಹಾಲಿವುಡ್ ನಲ್ಲಿ ಚೋಪ್ರಾ ಹವಾ

ಇನ್ನು ನಟಿ ಪ್ರಿಯಾಂಕ ಅವರು ಅಪ್ಪಟ ಭಾರತೀಯ ನಟಿಯಾಗಿದ್ದರೂ ಕೂಡ, ಇಲ್ಲಿಗಿಂತ ಜಾಸ್ತಿ ಹಾಲಿವುಡ್ ಕ್ಷೇತ್ರದಲ್ಲೇ ಹೆಚ್ಚು ಖ್ಯಾತಿ ಗಳಿಸಿದ್ದಾರೆ. ಇನ್ನು ದೀಪಿಕಾ ಅವರು ಕೂಡ 'XXX' ಮೂಲಕ ಹಾಲಿವುಡ್ ಗೆ ಹಾರಿ, ಸ್ವಲ್ಪ ಮಟ್ಟಿಗೆ ಪರಿಚಯಗೊಂಡಿದ್ದಾರೆ.

ಡ್ವೈನ್ ಜಾನ್ಸನ್ ಜೊತೆ ಪ್ರಿಯಾಂಕ

ಪ್ರಿಯಾಂಕ ಅವರು ಬಾಲಿವುಡ್ ನಲ್ಲಿ 'ಬಾಜೀರಾವ್ ಮಸ್ತಾನಿ' ಮತ್ತು 'ಗಂಗಾಜಲ್' ಎಂಬ ಚಿತ್ರದಲ್ಲಿ ಮಿಂಚಿದ ನಂತರ, ಹಾಲಿವುಡ್ ನಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯೋ ನಟ ಡ್ವೈನ್ ಜಾನ್ಸನ್ ಅವರ ಜೊತೆ 'ಬೇವಾಚ್' ಚಿತ್ರ ಪೂರ್ತಿಗೊಳಿಸಿದ್ದಾರೆ. ಮುಂದಿನ ವರ್ಷ ಬಿಡುಗಡೆ ಆಗಲಿರುವ ಈ ಚಿತ್ರದ ಬಗ್ಗೆ ಎಲ್ಲರೂ ಕುತೂಹಲ ಇಟ್ಟುಕೊಂಡಿದ್ದಾರೆ.

English summary
Actress Priyanka Chopra has just defeated Deepika Padukone as the world's highest paid TV actress from around the world by a Million dollars. Forbes released the list showing Priyanka Chopra's earning as $11 Million and Deepika Padukone with $10 Million. That's a Million dollars ahead than her contemporary.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X