For Quick Alerts
  ALLOW NOTIFICATIONS  
  For Daily Alerts

  ಸ್ತನಛೇದನ ಶಸ್ತ್ರಚಿಕಿತ್ಸೆಗೆ ಒಳಗಾದ ಏಂಜಲೀನಾ ಜೋಲಿ

  By ದಾಕ್ಷಾಯಿಣಿ, ಬೆಂಗಳೂರು
  |
  <ul id="pagination-digg"><li class="next"><a href="/hollywood/angelina-jolie-thanked-fans-support-074050.html">Next »</a></li></ul>

  ಜಗತ್ತಿನಾದ್ಯಂತ ಮಹಿಳೆಯರನ್ನು ಬೆಚ್ಚಿಬೀಳಿಸುತ್ತಿರುವ ಪದ 'ಸ್ತನ ಕ್ಯಾನ್ಸರ್'. ಸ್ತನಕ್ಯಾನ್ಸರಿಗೆ ಸೂಕ್ತ ಚಿಕಿತ್ಸೆ ನೀಡದಿದ್ದರೆ ಸ್ತ್ರೀಯ ಆಕರ್ಷಕ ಅಂಗವೆನಿಸಿರುವ, ಕರುಳ ಕುಡಿಗೆ ಅಮೃತ ಉಣಿಸುವ ಸ್ತನಗಳೇ ಇಲ್ಲವಾಗಬಹುದು. ಈ ಬಗ್ಗೆ ಅನೇಕ ಸಿನಿಮಾ ತಾರೆಗಳು ಜಾಗೃತಿ ಮೂಡಿಸುತ್ತಲೇ ಇದ್ದಾರೆ. ಆದರೂ ಆತಂಕ ತಪ್ಪಿಲ್ಲ.

  ಈಗ ಹಾಲಿವುಡ್ ಚೆಲುವೆ ಏಂಜಲೀನಾ ಜೋಲಿ (37) ಅವರು ಹೊಸ ಸಾಹಸ ಮಾಡಿ ತೋರಿಸಿದ್ದಾರೆ. ಅವರಲ್ಲಿ ಕ್ಯಾನ್ಸರ್ ಗೆ ಕಾರಣವಾಗುವ BCRA1 ವಂಶವಾಹಿನಿ ಇರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಪತ್ತೆಯಾಗಿತ್ತು, ಅವರಿಗೆ ಶೇ.87ರಷ್ಟು ಸ್ತನ ಕ್ಯಾನ್ಸರ್ ಬರುವ ಸಾಧ್ಯತೆಗಳಿವೆ ಎಂದು ವೈದ್ಯರು ಅಂದಾಜಿಸಿದ್ದರು.

  ಸ್ತನ ಕ್ಯಾನ್ಸರ್ ಆತಂಕದಿಂದ ಅವರು ಪಾರಾಗಲು ಹೊಸ ನಿರ್ಧಾರ ಕೈಗೊಂಡರು. ಅದೇನೆಂದರೆ ತಮ್ಮ ಎರಡು ಸ್ತನಗಳನ್ನು ಶಸ್ತ್ರಚಿಕಿತ್ಸೆ ಮೂಲಕ (double mastectomy) ತೆಗೆಸಿಬಿಡುವುದು. ಯಾವ ಮಹಿಳೆ ತಾನೆ ಇಂತಹ ಕೆಲಸಕ್ಕೆ ಕೈಹಾಕಲು ಸಾಧ್ಯ? ಆದರೂ ಏಂಜಲೀನಾ ಜೋಲಿ ಮಾತ್ರ ಹಿಂದೆಮುಂದೆ ಯೋಚಿಸಲಿಲ್ಲ. ಇದಕ್ಕೆ ಆಕೆಯ ಪತಿ ಬ್ರ್ಯಾಡ್ ಪಿಟ್ ಸಹ ಬೆನ್ನೆಲುಬಾಗಿ ನಿಂತರು.

  ಸಿನಿಮಾ ತಾರೆಯೊಬ್ಬಳ ಪ್ರಮುಖ ಆಕರ್ಷಣೆ ಎಂದರೆ ಅವರ ಎದೆಯ ಭಾಗ. ಈಗ ಅದೇ ಇಲ್ಲದಿದ್ದರೆ ಹೇಗೆ? ಶಸ್ತ್ರಚಿಕಿತ್ಸೆ ಮೂಲಕ ತೆಗೆಸಿದರೆ ಅವರ ಮುಂದಿನ ಭವಿಷ್ಯವೇನು? ಎಂಬ ಪ್ರಶ್ನೆಗಳು ಎದುರಾಗುತ್ತವೆ. ಆದರೆ ಏಂಜಲೀನಾ ಜೋಲಿ ಇದ್ಯಾವುದಕ್ಕೂ ಕೇರ್ ಮಾಡಲಿಲ್ಲ.

  ಕಡೆಗೆ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡು ತಮ್ಮ ಎರಡೂ ಸ್ತನಗಳನ್ನು ಕಳೆದುಕೊಂಡರು. ಅವರ ಪಾಡಿಗೆ ಅವರು ಸುಮ್ಮನಾಗಿರಬಹುದಿತ್ತು. ತಮ್ಮ ಪಾಡಿಗೆ ತಾವು ಚಿತ್ರಗಳಲ್ಲಿ ತೊಡಗಿಕೊಳ್ಳಬಹುದಿತ್ತು. ಕೃತಕ ಸ್ತನಗಳ ಮೂಲಕ ಅಭಿಮಾನಿಗಳ ನಿದ್ದೆಗೆಡಿಸಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ನ್ಯೂಯಾರ್ಕ್ ಟೈಂಸ್ ಪತ್ರಿಕೆಗೆ ಪತ್ರ ಬರೆದರು. ತಾವು ಮಾಡಿಸಿಕೊಂಡ ಸ್ತನಛೇದನ ಶಸ್ತ್ರಚಿಕಿತ್ಸೆ ಬಗ್ಗೆ ಹೇಳಿಕೊಂಡರು.

  <ul id="pagination-digg"><li class="next"><a href="/hollywood/angelina-jolie-thanked-fans-support-074050.html">Next »</a></li></ul>
  English summary
  Hollywood actress Angelina Jolie (37) undergone double mastectomy after tests showed she carries the BCRA1 cancer gene which means she has an 87% chance of getting breast cancer. The actress has thanked fans for their well wishes after revealing her choice to go ahead with the procedure.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X