For Quick Alerts
  ALLOW NOTIFICATIONS  
  For Daily Alerts

  ಅವತಾರ್ 2 ಮೊದಲ ವಾರಾಂತ್ಯ ಯಾವ ದೇಶಗಳಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದೆ? ಇಲ್ಲಿದೆ ಟಾಪ್ 6 ಪಟ್ಟಿ

  |

  ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಅವತಾರ್ ದ ವೇ ಆಫ್ ವಾಟರ್ ಕಳೆದ ಶುಕ್ರವಾರವಷ್ಟೇ ( ಡಿಸೆಂಬರ್ 16 ) ವಿಶ್ವದಾದ್ಯಂತ ಬಿಡುಗಡೆಗೊಂಡು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು ಹಾಗೂ ಕೆಲವು ಸಿನಿ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಯನ್ನು ಸಹ ಪಡೆದುಕೊಂಡಿತ್ತು. ಚಿತ್ರದ ಮೇಕಿಂಗ್ ಹಾಗೂ ವಿಷುಯಲ್ಸ್‌ಗೆ ಮನಸೋತ ಸಿನಿ ರಸಿಕರು ಅವತಾರ್ ದ ವೇ ಆಫ್ ವಾಟರ್ ಒಂದು ಮಾಸ್ಟರ್‌ಪೀಸ್ ಎಂದು ಹಾಡಿ ಹೊಗಳಿದ್ದರು.

  ಇನ್ನು ವಿಶ್ವದೆಲ್ಲೆಡೆ ತನ್ನ ಮಾರುಕಟ್ಟೆಯನ್ನು ಹೊಂದಿರುವ ಹಾಲಿವುಡ್ ಚಿತ್ರಗಳನ್ನು ಭಾರತದಲ್ಲಿಯೂ ದೊಡ್ಡ ಮಟ್ಟದಲ್ಲಿಯೇ ವೀಕ್ಷಿಸುತ್ತಾರೆ. ಹಾಗೆಯೇ ಅವತಾರ್ ದ ವೇ ಆಫ್ ವಾಟರ್ ಚಿತ್ರವನ್ನು ವೀಕ್ಷಿಸಲು ಭಾರತದ ಸಿನಿ ರಸಿಕರು ಹಲವು ದಿನಗಳಿಂದ ಟಿಕೆಟ್‌ಗಳನ್ನು ಖರೀದಿಸಿ ಕಾಯುತ್ತಾ ಕುಳಿತಿದ್ದರು. ಇನ್ನು ತ್ರೀಡಿ, ಐಮ್ಯಾಕ್ಸ್ 4 D ವರ್ಷನ್‌ಗಳಲ್ಲಿಯೂ ಅವತಾರ್ ದ ವೇ ಆಫ್ ವಾಟರ್ ಬಿಡುಗಡೆಯಾಗಿದ್ದರಿಂದ ಚಿತ್ರದ ಕ್ರೇಜ್ ಮತ್ತೊಂದು ಹಂತ ತಲುಪಿತ್ತು.

  ಹೀಗಾಗಿ ಮೊದಲ ದಿನ ಭಾರತದಲ್ಲಿ ಅವತಾರ್ ದ ವೇ ಆಫ್ 58 ಕೋಟಿ ಗಳಿಸಿ ಭರ್ಜರಿ ಓಪನಿಂಗ್ ಕೂಡ ಪಡೆದುಕೊಂಡಿತ್ತು. ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡಿದ ಅವತಾರ್ ದ ವೇ ಆಫ್ ವಾಟರ್ ಮೊದಲ ಮೂರು ದಿನಗಳಿಗೆ ಅಂದರೆ ಮೊದಲ ವಾರಾಂತ್ಯಕ್ಕೆ 150.6 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದೆ. ಈ ಮೂಲಕ ಮೊದಲ ಮೂರು ದಿನಗಳಲ್ಲಿ ಅವತಾರ್ ದ ವೇ ಆಫ್ ವಾಟರ್ ಅತಿಹೆಚ್ಚು ಕಲೆಕ್ಷನ್ ಮಾಡಿದ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ ಆರನೇ ಸ್ಥಾನ ಲಭಿಸಿದೆ.

  ಅವತಾರ್ 2 ಮೊದಲ ಆರು ದಿನಗಳಲ್ಲಿ ಅತಿಹೆಚ್ಚು ಗಳಿಸಿರುವ ಟಾಪ್ 6 ದೇಶಗಳ ಪಟ್ಟಿ:

  ಉತ್ತರ ಅಮೆರಿಕಾ : 112.7 ಕೋಟಿ ರೂಪಾಯಿಗಳು

  ಚೈನಾ : 472.4 ಕೋಟಿ ರೂಪಾಯಿಗಳು

  ದಕ್ಷಿಣ ಕೊರಿಯಾ: 204.3 ಕೋಟಿ ರೂಪಾಯಿಗಳು

  ಜರ್ಮನಿ: 164.5 ಕೋಟಿ ರೂಪಾಯಿಗಳು

  ಫ್ರಾನ್ಸ್ : 159.6 ಕೋಟಿ ರೂಪಾಯಿಗಳು

  ಭಾರತ: 150. 5 ಕೋಟಿ ರೂಪಾಯಿಗಳು

  ಒಟ್ಟು: 3600 ಕೋಟಿ ರೂಪಾಯಿಗಳು

  English summary
  Avatar 2 first weekend collection: Here is the 6 contributors list. Take a look
  Monday, December 19, 2022, 18:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X