Don't Miss!
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
24 ಗಂಟೆಯಲ್ಲಿ 'ಅವತಾರ್ 2' ಟೀಸರ್ ನೋಡಿದ್ದೆಷ್ಟು ಮಂದಿ? ಚೀನಾ ಮಂದಿಗೆ ಹುಚ್ಚು ಹಿಡಿಸಿದ್ದೇಗೆ?
'ಅವತಾರ್ 2'.. ವಿಶ್ವದಾದ್ಯಂತ ಬಹುನಿರೀಕ್ಷೆಯಿಂದ ಕಾಯುತ್ತಿರುವ ಸಿನಿಮಾ. ಕಳೆದ 12 ವರ್ಷಗಳಿಂದ 'ಅವತಾರ್ 2' ಸಿನಿಮಾ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಈ ಕುತೂಹಲವನ್ನು 'ಅವತಾರ್ 2' ಸಿನಿಮಾದ ಟೀಸರ್ ಮತ್ತಷ್ಟು ಹೆಚ್ಚಿಸಿದೆ. ವಿಶ್ವದ ಬಹುನಿರೀಕ್ಷೆಯ ಸಿನಿಮಾ 'ಅವತಾರ್ 2' ಟೀಸರ್ ಈಗಾಗಲೇ ಆಗಿದ್ದು, ದಾಖಲೆ ಮಟ್ಟದಲ್ಲಿ ವೀವ್ಸ್ ಪಡೆದುಕೊಂಡಿದೆ.
'ಅವತಾರ್ 2' ವಿಶ್ವದಾದ್ಯಂತ ಇರುವ ಸಿನಿಪ್ರಿಯರು ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಈ ಸಿನಿಮಾಗೆ ಚಿತ್ರತಂಡ ಅಧಿಕೃತವಾಗಿ 'ಅವತಾರ್: ದಿ ವೇ ಆಫ್ ವಾಟರ್' ಹೆಸರಿನಲ್ಲಿ ಟೀಸರ್ ಬಿಡುಗಡೆ ಮಾಡಿತ್ತು. ಈ ಟೀಸರ್ ನೋಡುತ್ತಿದ್ದಂತೆ ಸಿನಿಪ್ರೇಮಿಗಳು ಥ್ರಿಲ್ ಆಗಿದ್ದಾರೆ. ಅದಕ್ಕೆ ಉತ್ತಮ ಉದಾಹರಣೆ ಟೀಸರ್‌ಗೆ ವರ್ಲ್ಡ್ ವೈಡ್ ಸಿಕ್ಕಿರುವ ವೀವ್ಸ್. ಹಾಗಿದ್ದರೆ, ವಿಶ್ವದಾದ್ಯಂತ 24 ಅತೀ ಹೆಚ್ಚು ವೀವ್ಸ್ ಪಡೆದ ಟೀಸರ್ ಯಾವುದು? ಚೀನಾದಲ್ಲಿ 'ಅವತಾರ್ 2'ಗೆ ಇಷ್ಟೊಂದು ರೆಸ್ಪಾನ್ಸ್ ಸಿಕ್ಕಿದ್ದೇಕೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
Avatar
2:
'ಅವತಾರ್
2'
ಟೀಸರ್
ಬಿಡುಗಡೆಗೆ
ದಿನಾಂಕ
ಪ್ರಕಟ

ದಾಖಲೆ ಮಟ್ಟದಲ್ಲಿ 'ಅವತಾರ್ 2' ಟೀಸರ್ ವೀಕ್ಷಣೆ
ಜೇಮ್ಸ್ ಕ್ಯಾಮರೋನ್ ವಿಶ್ವ ಕಂಡ ಶ್ರೇಷ್ಠ ನಿರ್ದೇಶಕ. ವಿಶಿಷ್ಟ ಹಾಗೂ ಆಧುನಿಕ ತಂತ್ರಜ್ಞಾನ ಬಳಿಸಿ ಸಿನಿಮಾಗಳನ್ನು ನಿರ್ದೇಶಿಸುವ ನಿರ್ದೇಶಕ. ವರ್ಲ್ಡ್ ಸಿನಿಮಾದಲ್ಲಿ ಅತಿ ಹೆಚ್ಚು ಯಶಸ್ಸು ಕಂಡಿರುವ ನಿರ್ದೇಶಕ ಜೇಮ್ಸ್ ಕ್ಯಾಮರೋನ್. ಇವರೇ ನಿರ್ದೇಶಿಸಿದ ಸಿನಿಮಾ 'ಅವತಾರ್' 13 ವರ್ಷಗಳ ಹಿಂದೆ ಸಿನಿಮಾರಂಗದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿತ್ತು. ಈಗ ಅದರ ಸೀಕ್ವೆಲ್ 'ಅವತಾರ್: ದಿ ವೇ ಆಫ್ ವಾಟರ್' ಬಿಡುಗಡೆಗೆ ಸಿದ್ಧವಾಗಿದೆ. ಇತ್ತೀಚೆಗೆ ಇದೇ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ವಿಶ್ವದಾದ್ಯಂತ 24 ಗಂಟೆಗಳಲ್ಲಿ 148.6 ಮಿಲಿಯನ್ ವೀವ್ಸ್ ಪಡೆದುಕೊಂಡಿದ್ದು, ಸಿನಿ ಮಂದಿಯ ನಿದ್ದೆಕೆಡಿಸಿದೆ.
11
ವರ್ಷಗಳ
ಬಳಿಕ
ಮತ್ತೆ
'ಅವತಾರ್
2'
ರಿಲೀಸ್:
ಈ
ದಿನ
ಬಿಡುಗಡೆಯಾಗುವುದು
ಪಕ್ಕಾ!

'ಅವತಾರ್ 2' ಟೀಸರ್ ಚೀನಾ ಮಂದಿ ಥ್ರಿಲ್
'ಅವತಾರ್ 2' ಸಿನಿಮಾ ಟೀಸರ್ ರಿಲೀಸ್ ಆಗುತ್ತಿದ್ದಂತೆ ವಿಶ್ವದ ಮೂಲೆ ಮೂಲೆಯಲ್ಲಿರುವ ಸಿನಿಪ್ರೇಮಿಗಳು ಥ್ರಿಲ್ ಆಗಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ, ಚೀನಾ ಮಂದಿಗೆ ಈ ಟೀಸರ್ ಕಿಕ್ ಕೊಟ್ಟಿದೆ. ವಿಶ್ವದಾದ್ಯಂತ 148.6 ಮಿಲಿಯನ್ ವೀವ್ಸ್‌ನಲ್ಲಿ ಸುಮಾರು 23 ಮಿಲಿಯನ್ ವೀವ್ಸ್ ಚೀನಾದಿಂದಲೇ ಬಂದಿದೆ. ಇದು 'ಅವತಾರ್' ತಂಡಕ್ಕೆ ಹೊಸ ಹುರುಷು ನೀಡಿದೆ. ಚೀನಾ ಬಾಕ್ಸಾಫೀಸ್ ವಿಶ್ವದಲೇ ಅತಿ ದೊಡ್ಡದು. ಅತಿ ಹೆಚ್ಚು ಚಿತ್ರಮಂದಿರಗಳು ಚೀನಾದಲ್ಲಿವೆ. ಹೀಗಾಗಿ ಬಾಕ್ಸಾಫೀಸ್‌ನಲ್ಲಿ ದಾಖಲೆ ಸೃಷ್ಟಿಸಲು 'ಅವತಾರ್' ಇದು ಚೀನಾ ಮಾರುಕಟ್ಟೆ ಬಹುಮುಖ್ಯವೆನಿಸಿದೆ.

ಚೀನಾ ಮಂದಿ 'ಅವತಾರ್' ಇಷ್ಟಪಟ್ಟಿದ್ದೇಕೆ?
2009ರಲ್ಲಿ 'ಅವತಾರ್' ರಿಲೀಸ್ ಆದಾಗ, ಚೀನಾದಲ್ಲಿ ಕೆಲವೇ ಕೆಲವು ಐಮ್ಯಾಕ್ಸ್ ಥಿಯೇಟರ್‌ಗಳಿದ್ದವು. ಆದರೆ, ಈಗ ಸುಮಾರು 700ಕ್ಕೂ ಅಧಿಕ ಐಮ್ಯಾಕ್ ಚಿತ್ರಮಂದಿರಗಳು ಚೀನಾದಲ್ಲಿವೆ. ಹೀಗಾಗಿ 'ಅವತಾರ್' ಅಲ್ಲಿನ ಜನರಿಗೆ ಹೊಸ ಎಕ್ಸ್‌ಪಿರೀಯನ್ಸ್ ನೀಡಲಿದೆ. ಇನ್ನೊಂದು ಕಡೆ ಕಳೆದ ವರ್ಷವಷ್ಟೇ 'ಅವತಾರ್' ಸಿನಿಮಾವನ್ನು ಮರುಬಿಡುಗಡೆ ಮಾಡಲಾಗಿತ್ತು. ಈ ಮೂಲಕ 'ಅವತಾರ್' ಸೀಕ್ವೆಲ್‌ಗೆ ಪ್ರಮೋಷನ್ ಮಾಡುವುದರ ಜೊತೆಗೆ ಜನರಿಗೆ ಐಮ್ಯಾಕ್ ಎಕ್ಸ್‌ಪಿರೀಯನ್ಸ್ ನೀಡುವುದಾಗಿತ್ತು. ಈ ಮೂಲಕ ಕೇವಲ 10 ದಿನಗಳಲ್ಲಿ 44 ಮಿಲಿಯನ್ ಡಾಲರ್ ಗಳಿಕೆ ಮಾಡಿತ್ತು. ಅಲ್ಲದೆ ಚೀನಾದ IMDb, Maoyanನಲ್ಲಿ 10ಕ್ಕೆ 9.3 ರೇಟಿಂಗ್ ಸಿಕ್ಕಿದೆ. ಚೀನಾದ ಜನರಿಗೆ ಇವೆಲ್ಲದರ ಜೊತೆ ವಿಜ್ಯೂವಲ್ ಟ್ರೀಟ್ಮೆಂಟ್ ಹಾಗೂ ಸಿನಿಮಾದಲ್ಲಿ ಹೊಸ ಲೋಕವನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ.
'ಅವತಾರ್
2'
ಅಸಲಿ
ಟೈಟಲ್
'ಅವತಾರ್:
ದಿ
ವೇ
ಆಫ್
ವಾಟರ್'!

ಈ ಸಿನಿಮಾದ ದಾಖಲೆ ಮುರಿಯಲಿಲ್ಲ
'ಅವತಾರ್ 2' ಟೀಸರ್ ಕೇವಲ 4 ಗಂಟೆ ವಿಶ್ವದಾದ್ಯಂತ 148.6 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಆದರೂ, F9 ಸಿನಿಮಾದ ಟೀಸರ್ ಮಾಡಿದ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ. F9 ಸಿನಿಮಾ, 202.7 ಮಿಲಿಯನ್ ವೀವ್ಸ್ ಪಡೆದುಕೊಂಡಿತ್ತು. ಈ ದಾಖಲೆಯನ್ನು ಮುರಿಯಲು 'ಅವತಾರ್ 2'ಗೆ ಸಾಧ್ಯವಾಗಿಲ್ಲ. 'ಸ್ಕೈವಾಕರ್ ಸಾಗ' 112.4 ಮಿಲಿಯನ್, ''ಬ್ಲ್ಯಾಕ್ ವಿಡೋ' 116.8 ಹಾಗೂ 'ಇನ್‌ಕ್ರೆಡಿಬಲ್ 2' 113.1 ಮಿಲಿಯನ್ ವೀವ್ಸ್ ಪಡೆದುಕೊಂಡಿತ್ತು.