Avatar 2: 'ಅವತಾರ್ 2' ಟೀಸರ್ ಬಿಡುಗಡೆಗೆ ದಿನಾಂಕ ಪ್ರಕಟ

2009 ರಲ್ಲಿ ಬಿಡುಗಡೆ ಆಗಿದ್ದ 'ಅವತಾರ್' ಸಿನಿಮಾ ವೀಕ್ಷಕರನ್ನು ಅದ್ಭುತ ಲೋಕಕ್ಕೆ ಕರೆದುಕೊಂಡು ಹೋಗಿ ಮಂತ್ರಮುಗ್ಧಗೊಳಿಸಿತ್ತು.

ಸಿನಿಮಾ ಮಾರುಕಟ್ಟೆ ಈಗಿನಂತೆ 'ಈಸಿ ರೀಚ್' ಅಲ್ಲದ ಸಮಯದಲ್ಲಿ ಬಿಡಗುಡೆ ಆಗಿದ್ದ 'ಅವತಾರ್' ಸಿನಿಮಾ ವಿಶ್ವದಾದ್ಯಂತ ಭಾರಿ ದೊಡ್ಡ ಹಿಟ್ ಆಗಿತ್ತು. ಇಂಗ್ಲೀಷ್ ಸಿನಿಮಾಗಳು ತಲುಪಲು ಕಷ್ಟವಾಗಿದ್ದ ಪಟ್ಟಣ, ಹಳ್ಳಿಗಳನ್ನೂ 'ಅವತಾರ್' ಸಿನಿಮಾ ತಲುಪಿತ್ತು. ಆ ಮಟ್ಟಿಗೆ ಸಿನಿಮಾ ಜನಪ್ರಿಯಗೊಂಡಿತ್ತು.

'ಟೈಟಾನಿಕ್' ನಿರ್ದೇಶಿಸಿದ್ದ ಜೇಮ್ಸ್ ಕ್ಯಾಮರನ್‌ನ ಈ ಕನಸಿನಂಥಹಾ ಸಿನಿಮಾದ ಎರಡನೇ ಭಾಗ ತಯಾರಾಗಿದ್ದು ಸಿನಿಮಾ ಕೆಲವೇ ತಿಂಗಳುಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾ ಬಿಡುಗಡೆಗೆ ಮುನ್ನ ಟೀಸರ್ ಬಿಡುಗಡೆ ಆಗುತ್ತಿದ್ದು, ಟೀಸರ್ ಬಿಡುಗಡೆ ದಿನಾಂಕವನ್ನು ಘೋಷಿಸಿದೆ ನಿರ್ಮಾಣ ಸಂಸ್ಥೆ.

Avatar 2 Teaser Will Be Released On May 06

ಹಲವು ಹೊಸ ತಂತ್ರಜ್ಞಾನಗಳನ್ನು ಬಳಸಿ ಚಿತ್ರೀಕರಣ ಮಾಡಲಾಗಿರುವ 'ಅವತಾರ್ 2' ಸಿನಿಮಾದ ಟೀಸರ್ ಅನ್ನು ಕಣ್ಣು ತುಂಬಿಸಿಕೊಳ್ಳಲು ಅಭಿಮಾನಿಗಳು ಒಂದು ತಿಂಗಳಿಗಿಂತಲೂ ಹೆಚ್ಚು ಕಾಲ ಕಾಯಬೇಕಾಗಿದೆ. ಮೇ 06 ರಂದು ಸಿನಿಮಾದ ಟೀಸರ್ ಬಿಡುಗಡೆ ಆಗಲಿದೆ.

ಟೀಸರ್‌ ಬಿಡುಗಡೆಯ ಮತ್ತೊಂದು ವಿಶೇಷತೆಯೆಂದರೆ 'ಅವತಾರ್ 2' ಸಿನಿಮಾದ ಟೀಸರ್ ಅನ್ನು ಮಾರ್ವೆಲ್ ಸಿನಿಮಾಸ್‌ನ 'ಡಾಕ್ಟರ್ ಸ್ಟ್ರೇಂಜ್‌' ಸಿನಿಮಾ ಸರಣಿಯ ಹೊಸ ಸಿನಿಮಾದೊಟ್ಟಿಗೆ ಬಿಡುಗಡೆ ಮಾಡಲಾಗುತ್ತಿದೆ. ಇದು ಸಹ ಕುತೂಹಲ ಕೆರಳಿಸಿದೆ. 'ಅವತಾರ್ 2' ಸಿನಿಮಾವನ್ನು ಸಿನಿಮಾದ ನಿರ್ದೇಶಕರೂ ಆಗಿರುವ ಜೇಮ್ಸ್ ಕ್ಯಾಮರೂನ್ ನಿರ್ಮಾಣ ಮಾಡಿದ್ದಾರೆ. ಇವರ ಜೊತೆಗೆ 'ಟೈಟಾನಿಕ್' ಸಿನಿಮಾಕ್ಕೆ ಬಂಡವಾಳ ಹೂಡಿದ್ದ ಜೇಮ್ಸ್ ಲಾಂಡೌ ಸಹ ಇದ್ದಾರೆ. ಸಿನಿಮಾವನ್ನು ಲೈಟ್‌ಸ್ಟ್ರಾಮ್ ನಿರ್ಮಾಣ ಸಂಸ್ಥೆಯ ವತಿಯಿಂದ ನಿರ್ಮಾಣ ಮಾಡಲಾಗುತ್ತಿದೆ. ವಿತರಣೆ ಮಾಡಲಿರುವುದು 20 ಸೆಂಚುರಿ ಫಾಕ್ಸ್.

'ಅವತಾರ್ 2' ಹಾಗೂ 'ಅವತಾರ್ 3' ಸಿನಿಮಾ ಏಕಕಾಲದಲ್ಲಿ ಚಿತ್ರೀಕರಣ ಪ್ರಾರಂಭಿಸಿದವು. 2017 ರಲ್ಲಿ ಪ್ರಾರಂಭವಾದ ಚಿತ್ರೀಕರಣ ಇದೀಗ ಐದು ವರ್ಷಗಳ ಬಳಿಕ ಬಹುತೇಕ ಪೂರ್ಣವಾಗಿದ್ದು ಕೆಲವು ಪೋಸ್ಟ್ ಪ್ರೊಡಕ್ಷನ್ ಕೆಲಸಗಳ ಬಳಿಕ ಮೊದಲಿಗೆ 'ಅವತಾರ್ 2' ಸಿನಿಮಾ ಇದೇ ವರ್ಷದ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ನಂತರ 2024ರ ಡಿಸೆಂಬರ್ ವೇಳೆಗೆ 'ಅವತಾರ್ 3' ಸಿನಿಮಾ ಬಿಡುಗಡೆ ಆಗಲಿದೆ. ಆ ಬಳಿಕ ಅವತಾರ್ ಸಿನಿಮಾ ಸರಣಿಯ ನಾಲ್ಕನೇ ಸಿನಿಮಾ 'ಅವತಾರ್: ಟಲ್ಕನ್ ರೈಡರ್' ಸಿನಿಮಾ 2026 ಕ್ಕೆ ಬಿಡುಗಡೆ ಆಗಲಿದೆ. ಬಳಿಕ 2028 ಕ್ಕೆ 'ಅವತಾರ್ 5' ಬಿಡುಗಡೆ ಆಗಲಿದೆ. ಈ ಎಲ್ಲ ಸಿನಿಮಾಗಳನ್ನು ಜೇಮ್ಸ್ ಕ್ಯಾಮರನ್ ಅವರೇ ನಿರ್ದೇಶಿಸಲಿದ್ದಾರೆ.

ಜೇಮ್ಸ್ ಕ್ಯಾಮೆರಾನ್ ವಿಶ್ವದ ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. 1982 ರಲ್ಲಿ 'ಫಿರ್ಹಾನಾ 2' ಸಿನಿಮಾ ಮೂಲಕ ನಿರ್ದೇಶನ ಆರಂಭಿಸಿದ ಜೇಮ್ಸ್, ಆ ಬಳಿಕ ಆಲ್‌ ಟೈಮ್ ಬ್ಲಾಕ್‌ ಬಸ್ಟರ್ 'ಟರ್ಮಿನೇಟರ್', 'ಟರ್ಮಿನೇಟರ್ 2' ಸಿನಿಮಾಗಳನ್ನು ನಿರ್ದೇಶಿಸಿದರು. ಅದರ ಜೊತೆ 'ಏಲಿಯನ್ಸ್', 'ದಿ ಅಬಿಸ್', 'ಟ್ರು ಲೈಸ್', 'ಗೋಸ್ಟ್ಸ್ ಆಫ್‌ ದಿ ಅಬೀಸ್', 'ಏಲಿಯನ್ಸ್ ಆಫ್‌ ದಿ ಡೀಪ್', 'ಅವತಾರ್' ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. 2009 ರಲ್ಲಿ ಬಿಡುಗಡೆ ಆದ 'ಅವತಾರ್' ಸಿನಿಮಾದ ಬಳಿಕ ಇನ್ಯಾವ ಸಿನಿಮಾವನ್ನು ಜೇಮ್ಸ್ ನಿರ್ದೇಶಿಸಿಲ್ಲ. ತಮ್ಮನ್ನು ಸಂಪೂರ್ಣವಾಗಿ 'ಅವತಾರ್' ಸಿನಿಮಾ ಸರಣಿಗೆ ಸಮರ್ಪಿಸಿಕೊಂಡಿದ್ದಾರೆ ಜೇಮ್ಸ್.

More from Filmibeat

English summary
Avatar 2 teaser is releasing on May 06 with MCU's Doctor Strange new movie. Avatar 2 is directed by James Cameron.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X