twitter
    For Quick Alerts
    ALLOW NOTIFICATIONS  
    For Daily Alerts

    ಬಾಫ್ಟಾ ಪ್ರಶಸ್ತಿ 2015 ಬಾಚಿದ ಬಾಯ್ ಹುಡ್

    By ಜೇಮ್ಸ್ ಮಾರ್ಟಿನ್
    |

    ಸಿನಿ ಪ್ರೇಮಿಗಳ ನಿರೀಕ್ಷೆಯಂತೆ 72ನೇ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಟ್ಟಿಯಲ್ಲಿ ಮಿಂಚಿದ ಅನೇಕ ಚಿತ್ರಗಳು ಬ್ರಿಟಿಷ್ ಅಕಾಡೆಮಿ ಆಫ್ ಫಿಲಂ ಅಂಡ್ ಟೆಲಿವಿಷನ್ ಆರ್ಟ್ಸ್(BAFTA) ಅವಾರ್ಡ್ಸ್ ಸಮಾರಂಭದಲ್ಲೂ ಪ್ರಶಸ್ತಿಗಳನ್ನು ಬಾಚಿದ್ದು ವಿಶೇಷವಾಗಿದೆ. ಬಾಫ್ಟಾ ಪ್ರಶಸ್ತಿ 2015 ವಿಜೇತರ ಪಟ್ಟಿ ಸೋಮವಾರ ಲಂಡನ್ನಿನಲ್ಲಿ ಘೋಷಿಸಲಾಗಿದೆ.

    ಲಂಡನ್ನಿನ ರಾಯಲ್ ಒಪೆರಾ ಹೌಸ್ ನಲ್ಲಿ ಭಾನುವಾರ ರಾತ್ರಿ ನಡೆದ ಸಮಾರಂಭದಲ್ಲಿ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಲಾಗುತ್ತದೆ. ಆಸ್ಕರ್ ಗೆಲ್ಲುವ ನೆಚ್ಚಿನ ಚಿತ್ರ ಎನಿಸಿರುವ ರಿಚರ್ಡ್ ಲಿಂಕ್ಲೇಟರ್ ಅವರ 'ಬಾಯ್ ಹುಡ್' ಚಿತ್ರ ಬಾಫ್ಟಾ ಅಂಗಳದಲ್ಲೂ ಸದ್ದು ಮಾಡಿದೆ. ಉಳಿದಂತೆ ದಿ ಗ್ರ್ಯಾಂಡ್ ಬುಡಾಪೆಸ್ಟ್ ಹೋಟೆಲ್ 5 ಪ್ರಶಸ್ತಿ ಬಾಚಿಕೊಂಡಿದೆ. [72ನೇ ಗೋಲ್ಡನ್ ಗ್ಲೋಬ್ : 'ಬಾಯ್ ಹುಡ್' ಗೆ ಶ್ರೇಷ್ಠ ಚಿತ್ರ]

    ಬರ್ಡ್ ಮ್ಯಾನ್, ದಿ ಗ್ರ್ಯಾಂಡ್ ಬುಡಾಪೆಸ್ಟ್ ಹೋಟೆಲ್, ದಿ ಇಮಿಟೇಷನ್ ಗೇಮ್, ದಿ ಥಿಯರಿ ಆಫ್ ಎವರಿಥಿಂಗ್ ಚಿತ್ರಗಳನ್ನು ಹಿಂದಿಕ್ಕಿ ಬಾಯ್ ಹುಡ್ ಪ್ರಶಸ್ತಿ ಗಳಿಸಿದೆ. ಅಸ್ಕರ್ ರೇಸಿನಲ್ಲೂ ಬಹುತೇಕ ಇದೇ ಚಿತ್ರಗಳು ಪಟ್ಟಿಯಲ್ಲಿವೆ.

    ಬಾಫ್ತಾ ಪ್ರಶಸ್ತಿ 2015 ವಿಜೇತರ ಪಟ್ಟಿ : * ಅತ್ಯುತ್ತಮ ಚಿತ್ರ: ಬಾಯ್ ಹುಡ್ * ಅತ್ಯುತ್ತಮ ಬ್ರಿಟಿಷ್ ಚಿತ್ರ: ದಿ ಥಿಯರಿ ಆಫ್ ಎವರಿಥಿಂಗ್ * ಅತ್ಯುತ್ತಮ ನಟ: ಎಡ್ದಿ ರೆಡ್ಮಾಯ್ನೆ: ದಿ ಥಿಯರಿ ಆಫ್ ಎವರಿಥಿಂಗ್ * ಅತ್ಯುತ್ತಮ ನಟಿ: ಜೂಲಿಯನ್ ಮೂರ್: ಸ್ಟಿಲ್ ಅಲೈಸ್

    ಬಾಯ್ ಹುಡ್ ರಿಚರ್ಡ್ ಹೆಣೆದಿರುವ ಜೀವನ ಕಾವ್ಯ. ಮೇಸನ್ ಎಂಬವನ ಬಾಲ್ಯ, ಯೌವನ 5 ರಿಂದ 18 ವರ್ಷ ವಯಸ್ಸಿನ ಬದುಕಿನ ಕಥಾನಕ ಹೃದಯಸ್ಪರ್ಶಿಯಾಗಿ ಎಲ್ಲರ ಮನ ಮುಟ್ಟಿದೆ. ಹಾಲಿವುಡ್ ಇತಿಹಾಸದಲ್ಲಿ ಕ್ಲಾಸಿಕ್ ಚಿತ್ರಗಳ ಪಟ್ಟಿಗೆ ಈ ಚಿತ್ರ ಸೇರುವುದು ಖಚಿತ ಎನ್ನಲಾಗಿದೆ. [ಆಸ್ಕರ್ ಪ್ರಶಸ್ತಿ 2015: ನಾಮನಿರ್ದೇಶಿತ ಸಮಗ್ರ ಪಟ್ಟಿ]

    2014ರಲ್ಲಿ ಇಂಟರ್ ಸ್ಟೆಲ್ಲರ್, ಹಂಗರ್ ಗೇಮ್ಸ್, ಸ್ಪೈಡರ್ ಮ್ಯಾನ್, ಎಕ್ಸ್ ಮೆನ್, ಪ್ಲಾನೆಟ್ ಆಫ್ ಏಪ್ಸ್, ಅನಾಬೆಲ್ ನಿರೀಕ್ಷಿತ ಯಶಸ್ಸಿನ ಜೊತೆಗೆ ಬಾಯ್ ಹುಡ್, ಗಾನ್ ಗರ್ಲ್ಸ್, ಹಾಬಿಟ್, ಎಕ್ಸೊಡಸ್ ಚಿತ್ರಗಳು ಕೂಡಾ ಸದ್ದು ಮಾಡಿತ್ತು. [2014ರ ಟಾಪ್ ಚಿತ್ರಗಳು ನೋಡಿ]

    ಇಂಗ್ಲಿಷೇತರ ವಿಭಾಗದಲ್ಲಿ ಸ್ಪರ್ಧಿಸಿದ್ದ ಇರ್ಫಾನ್ ಖಾನ್ ಮತ್ತು ನಿಮ್ರತ್ ಕೌರ್ 'ದ ಲಂಚ್ ಬಾಕ್ಸ್' ಚಿತ್ರ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದೆ. ಪೋಲಿಶ್-ಡ್ಯಾನಿಶ್ ಸಿನೆಮಾ 'ಇಡಾ' ಈ ಪ್ರಶಸ್ತಿಯನ್ನು ಗಳಿಸಿದೆ.

    ಬಾಫ್ಟಾ ಪ್ರಶಸ್ತಿ 2015 ವಿಜೇತರ ಪಟ್ಟಿ :

    * ಅತ್ಯುತ್ತಮ ಚಿತ್ರ: ಬಾಯ್ ಹುಡ್

    * ಅತ್ಯುತ್ತಮ ಬ್ರಿಟಿಷ್ ಚಿತ್ರ: ದಿ ಥಿಯರಿ ಆಫ್ ಎವರಿಥಿಂಗ್

    * ಅತ್ಯುತ್ತಮ ನಟ: ಎಡ್ದಿ ರೆಡ್ಮಾಯ್ನೆ: ದಿ ಥಿಯರಿ ಆಫ್ ಎವರಿಥಿಂಗ್

    * ಅತ್ಯುತ್ತಮ ನಟಿ: ಜೂಲಿಯನ್ ಮೂರ್: ಸ್ಟಿಲ್ ಅಲೈಸ್

    * ಅತ್ಯುತ್ತಮ ಪೋಷಕ ನಟ: ಜೆಕೆ ಸಿಮನ್ಸ್: ವ್ಹಿಪ್ಲಾಶ್

    * ಅತ್ಯುತ್ತಮ ಪೋಷಕ ನಟಿ: ಪ್ಯಾಟ್ರಿಕಾ ಅರ್ಕ್ಯೂಟೆ: ಬಾಯ್ ಹುಡ್

    * ಅತ್ಯುತ್ತಮ ನಿರ್ದೇಶಕ: ರಿಚರ್ಡ್ ಲಿಂಕ್ಲೇಟರ್ : ಬಾಯ್ ಹುಡ್

    * ಅತ್ಯುತ್ತಮ ಸ್ಕ್ರೀನ್ ಪ್ಲೇ: ದಿ ಥಿಯರಿ ಆಫ್ ಎವರಿಥಿಂಗ್: ಅಂಟೋನಿ ಮೆಕ್ ಕಾರ್ಟೆನ್

    BAFTA 2015 Winners List

    * ಅತ್ಯುತ್ತಮ ಮೂಲ ಕಥೆ : ದಿ ಗ್ರ್ಯಾಂಡ್ ಬುಡಾಪೆಸ್ಟ್ ಹೋಟೆಲ್: ವೆಸ್ ಆಂಡರ್ಸನ್

    * ಅತ್ಯುತ್ತಮ ಅನಿಮೇಟೆಡ್ ಸಿನಿಮಾ: ದಿ ಲೆಗೊ

    * ಅತ್ಯುತ್ತಮ ಡಾಕ್ಯುಮೆಂಟರಿ: ಸಿಟಿಜನ್ ಫೋರ್

    * ಅತ್ಯುತ್ತಮ ವಿದೇಶಿ ಚಿತ್ರ: ಇಡಾ

    * ಅತ್ಯುತ್ತಮ ಸಿನಿಮಾಟೋಗ್ರಾಫಿ: ಬರ್ಡ್ ಮ್ಯಾನ್- ಇಮ್ಯಾನುಯಲ್ ಲೆಬೆಜ್ಕಿ

    * ಅತ್ಯುತ್ತಮ ವಸ್ತ್ರ ವಿನ್ಯಾಸ: ದಿ ಗ್ಯಾಂಡ್ ಬುಡಾಪೆಸ್ಟ್ ಹೋಟೆಲ್

    * ಅತ್ಯುತ್ತಮ ಸಂಕಲನ: ದಿ ವ್ಹಿಫ್ಲಾಶ್: ಟಾಮ್ ಕ್ರಾಸ್

    * ಅತ್ಯುತ್ತಮ ಕೇಶ ವಿನ್ಯಾಸ ಹಾಗೂ ಮೇಕಪ್: ದಿ ಗ್ಯಾಂಡ್ ಬುಡಾಪೆಸ್ಟ್ ಹೋಟೆಲ್, ಫ್ರಾನ್ಸೆಸ್ ಹನಾನ್

    * ಅತ್ಯುತ್ತಮ ಸಂಗೀತ: ದಿ ಗ್ಯಾಂಡ್ ಬುಡಾಪೆಸ್ಟ್ ಹೋಟೆಲ್, ಅಲೆಕ್ಸಾಂಡ್ರೆ ಡೆಸ್ಪಾಟ್

    * ಅತ್ಯುತ್ತಮ ಪ್ರೊಡೆಕ್ಷನ್ ವಿನ್ಯಾಸ: ದಿ ಗ್ಯಾಂಡ್ ಬುಡಾಪೆಸ್ಟ್ ಹೋಟೆಲ್

    * ಅತ್ಯುತ್ತಮ ದನಿ ಸಂಯೋಜನೆ: ವ್ಹಿಫ್ಲಾಶ್: ಥಾಮಸ್ ಕರ್ಲೆ, ಬೆನ್ ವಿಕಿನ್ಸ್, ಕ್ರೆಗ್ ಮನ್

    * ಅತ್ಯುತ್ತಮ ವಿಷ್ಯುಯಲ್ ಎಫೆಕ್ಟ್ಸ್: ಇಂಟರ್ ಸ್ಟೆಲ್ಲರ್: ಪಾಲ್ ಫ್ರಾಂಕ್ಲಿನ್, ಸ್ಕಾಟ್ ಫಿಷರ್, ಆಂಡ್ರ್ಯೂ ಲಾಕ್ಲಿ

    * ಬ್ರಿಟಿಷ್ ಶಾರ್ಟ್ ಅನಿಮೇಷನ್: ದಿ ಬಿಗ್ಗರ್ ಪಿಕ್ಚರ್: ಕ್ರಿಸ್ ಹೀಸ್, ಡೈಸಿ ಜಾಕಬ್ಸ್, ಜೆನ್ನಿಫರ್ ಮಜ್ಕಾ

    * ಬ್ರಿಟಿಷ್ ಕಿರುಚಿತ್ರ: ಬೂಗಲೂ ಅಂಡ್ ಗ್ರಾಹಂ: ಬ್ರಿಯಾನ್ ಜೆ ಫಾಲ್ಕೊನರ್, ಮೈಕಲ್ ಲೆನೊಕ್ಸ್, ರೊನಾನ್ ಬ್ಲಾನೆ

    * ಉದಯೋನ್ಮುಖ ತಾರೆ: ಜಾಕ್ ಓ ಕಾನೆಲ್

    Read in English: BAFTA 2015 Winners List
    English summary
    "Boyhood", a coming-of-age story about growing up, Sunday night won the top honours of Best Film and Best Director at the British Academy of Film and Television Arts (BAFTA) Awards, where "The Grand Budapest Hotel" walked away with five trophies.
    Monday, February 9, 2015, 11:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X