»   » ಆಸ್ಕರ್‌ನಲ್ಲಿ ಭಾರೀ ಪ್ರಮಾದ : ಅತ್ಯುತ್ತಮ ಚಿತ್ರ ಲಾಲಾ ಲ್ಯಾಂಡ್ ಅಲ್ಲ

ಆಸ್ಕರ್‌ನಲ್ಲಿ ಭಾರೀ ಪ್ರಮಾದ : ಅತ್ಯುತ್ತಮ ಚಿತ್ರ ಲಾಲಾ ಲ್ಯಾಂಡ್ ಅಲ್ಲ

Posted By:
Subscribe to Filmibeat Kannada

ಲಾಸ್ ಏಂಜಲಿಸ್ ನಲ್ಲಿ ನಡೆಯುತ್ತಿರುವ 89ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರೀ ಪ್ರಮಾದ ಜರುಗಿದೆ. ಇದರಿಂದಾಗಿ ಆಯೋಜಕರು ತಲೆ ತಗ್ಗಿಸುವಂತಾಗಿದೆ.

ಆಗಿದ್ದೇನೆಂದರೆ, ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಗೆದ್ದವರ ಹೆಸರು ಓದಲು ಬಂದಿದ್ದ ವಾರನ್ ಬೀಟಿ 'ಲಾ ಲಾ ಲ್ಯಾಂಡ್' ಅತ್ಯುತ್ತಮ ಚಲನಚಿತ್ರ ಎಂದು ಘೋಷಿಸಿಬಿಟ್ಟರು. ಆದರೆ, ಗೆದ್ದಿದ್ದು ಮೂನ್ ಲೈಟ್!

ಪ್ರಮಾದವಾಗಿರುವುದನ್ನು ಪ್ರಕಟಿಸುತ್ತಿದ್ದಂತೆ ಮೂನ್ ಲೈಟ್ ಚಿತ್ರದ ನಿರ್ಮಾಪಕ ನಿರ್ದೇಶಕರಿಗೆ ಭಾರೀ ಅಚ್ಚರಿ ಕಾದಿದ್ದರೆ, ಲಾ ಲಾ ಲ್ಯಾಂಡ್ ಚಿತ್ರತಂಡಕ್ಕೆ ಭಾರೀ ನಿರಾಶೆ.

ವಾರನ್ ಬೀಟಿ ಅವರನ್ನು ಈ ಪ್ರಮಾದಕ್ಕಾಗಿ ದೂಷಿಸುವಂತೆಯೂ ಇರಲಿಲ್ಲ. ಏಕೆಂದರೆ, ಆ ಪ್ರಶಸ್ತಿ ಪ್ರಕಟಣೆಯ ಕವರಿನಲ್ಲಿ ಇದ್ದಿದ್ದು ಅತ್ಯುತ್ತಮ ನಟಿಯ ಹೆಸರು, ಚಿತ್ರ ಲಾ ಲಾ ಲ್ಯಾಂಡ್. ಇದೇ ಅತ್ಯುತ್ತಮ ಚಿತ್ರವಿರಬಹುದೆಂದು ವಾರನ್ ಲಾ ಲಾ ಲ್ಯಾಂಡ್ ಹೆಸರನ್ನು ಘೋಷಿಸಿಬಿಟ್ಟರು.

English summary
Biggest goof up as presenters read it wrong. Moonlight wins Oscar for Best Film, not La La Land.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada