For Quick Alerts
  ALLOW NOTIFICATIONS  
  For Daily Alerts

  ವಿಶ್ವದ ಟಾಪ್ 10 ಸುಂದರ ಮಹಿಳೆಯರ ಪಟ್ಟಿಯಲ್ಲಿ ಭಾರತದ ಒಬ್ಬ ನಟಿಗೆ ಸ್ಥಾನ!

  |

  ವಿಶ್ವ ಸುಂದರಿ, ಭುವನ ಸುಂದರಿ ಹೀಗೆ ಹಲವು ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಗಳಲ್ಲಿ ದಶಕಗಳಿಂದಲೂ ಗಮನ ಸೆಳೆಯುತ್ತಿದ್ದಾರೆ ಭಾರತೀಯ ನಟಿಮಣಿಯರು.

  ವಿಶ್ವದಲ್ಲಿಯೇ ಅತಿ ಹೆಚ್ಚು ಸುಂದರಿಯರು ಇರುವ ದೇಶದಲ್ಲಿ ಭಾರತವೂ ಒಂದು. ಇದೀಗ 'ದಿ ಗೋಲ್ಡನ್ ರೇಶಿಯೊ ಆಫ್ ಬ್ಯೂಟಿ ಫೈ' ವಿಶ್ವದ ಟಾಪ್ 10 ಸುಂದರಿಯರ ಪಟ್ಟಿಯನ್ನು ಪ್ರಕಟಿಸಿದೆ. ಆದರೆ ಈ ಪಟ್ಟಿಯಲ್ಲಿ ಕೇವಲ ಒಬ್ಬ ಭಾರತೀಯ ನಟಿಯಷ್ಟೆ ಸ್ಥಾನ ಪಡೆದಿದ್ದಾರೆ.

  ಪ್ರೇಮ್ ಮುಂದಿನ ಚಿತ್ರಕ್ಕಾಗಿ ಒಂದಾಗಲಿದ್ದಾರೆ ವಿವಿಧ ಇಂಡಸ್ಟ್ರಿಯ ಆರು ಜನ ಹೀರೊಗಳು; ಇಲ್ಲಿದೆ ಪಟ್ಟಿಪ್ರೇಮ್ ಮುಂದಿನ ಚಿತ್ರಕ್ಕಾಗಿ ಒಂದಾಗಲಿದ್ದಾರೆ ವಿವಿಧ ಇಂಡಸ್ಟ್ರಿಯ ಆರು ಜನ ಹೀರೊಗಳು; ಇಲ್ಲಿದೆ ಪಟ್ಟಿ

  'ದಿ ಗೋಲ್ಡನ್ ರೇಶಿಯೋ' ಎಂಬುದು ವೈಜ್ಞಾನಿಕವಾಗಿ ಸೌಂದರ್ಯವನ್ನು ಅಳೆಯುವ ಯೂನಿವರ್ಸಲ್ ಮಾಪನವಾಗಿದ್ದು. ಈ ಮಾಪನ ಪ್ರಕಾರ ವಿಶ್ವದ ಹತ್ತು ಸೌಂದರ್ಯವತಿಯರ ಪಟ್ಟಿಯನ್ನು ತಯಾರಿಸಲಾಗಿದೆ. ಅದರಲ್ಲಿ ಭಾರತದ ಒಬ್ಬ ನಟಿಯ ಹೆಸರಿದೆ.

  ದೀಪಿಕಾ ಪಡುಕೋಣೆಗೆ ಯಾವ ಸ್ಥಾನ

  ದೀಪಿಕಾ ಪಡುಕೋಣೆಗೆ ಯಾವ ಸ್ಥಾನ

  ಟಾಪ್ ಹತ್ತು ಸೌಂದರ್ಯವತಿಯರ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದಾರೆ ನಟಿ ದೀಪಿಕಾ ಪಡುಕೋಣೆ. ಅವರ ಸೌಂದರ್ಯದ ಸರಾಸರಿ 91.22% ಇದೆಯೆಂದು ಸಂಶೋಧನೆ ಹೇಳಿದೆ. ಸೌಂದರ್ಯವನ್ನು ಅಳೆಯುವ ಸೂತ್ರವೊಂದಿದ್ದು, ಅದರನುಸಾರ ವ್ಯಕ್ತಿಗಳ ಮುಖ, ದೇಹದ ಅಳತೆಗಳನ್ನು ಲೆಕ್ಕ ಹಾಕಿದಾಗ ಒಟ್ಟು 1.618 ಸಂಖ್ಯೆ ಬರಬೇಕಿರುತ್ತದೆ. ಈ ಸಂಖ್ಯೆಗೆ ಹೆಚ್ಚು ಹತ್ತಿರ ಬಂದವರನ್ನು ಹೆಚ್ಚು ಸುಂದರಿಯೆಂದು ನಿರ್ಣಯಿಸಲಾಗುತ್ತದೆ.

  ಮೊದಲ ಸ್ಥಾನದಲ್ಲಿರುವ ನಟಿ ಯಾರು?

  ಮೊದಲ ಸ್ಥಾನದಲ್ಲಿರುವ ನಟಿ ಯಾರು?

  ಟಾಪ್ ಹತ್ತು ನಟಿಯರಲ್ಲಿ ಮೊದಲ ಸ್ಥಾನದಲ್ಲಿರುವುದು ಬ್ರಿಟೀಷ್ ನಟಿ ಜೂಡಿ ಕೋಮರ್ ಅವರ ಸೌಂದರ್ಯ ಸರಾಸರಿ 98.7% ಇದೆ. ಎರಡನೇ ಸ್ಥಾನದಲ್ಲಿ 26 ವರ್ಷದ ಜನಪ್ರಿಯ ಹಾಲಿವುಡ್ ನಟಿ ಜೆಂಡಿಯಾ ಇದ್ದಾರೆ. ಈಕೆಯ ಸೌಂದರ್ಯದ ಸರಾಸರಿ 94.37% ಆಗಿದೆ. ಸ್ಪೈಡರ್‌ಮ್ಯಾನ್, ಡ್ಯೂನ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಈ ನಟಿ ನಟಿಸಿದ್ದಾರೆ. ಮೂರನೇ ಸ್ಥಾನದಲ್ಲಿ ಖ್ಯಾತ ಮಾಡೆಲ್ ಬೆಲ್ಲಾ ಹದೀದ್ ಇದ್ದಾರೆ. ಇವರ ಸೌಂದರ್ಯ ಸರಾಸರಿ 94.35% ಆಗಿದೆ.

  ಯಾವ ಸೆಲೆಬ್ರಿಟಿಗಳಿಗೆ ಎಷ್ಟನೇ ಸ್ಥಾನ?

  ಯಾವ ಸೆಲೆಬ್ರಿಟಿಗಳಿಗೆ ಎಷ್ಟನೇ ಸ್ಥಾನ?

  ನಾಲ್ಕನೇ ಸ್ಥಾನದಲ್ಲಿ ಖ್ಯಾತ ನಟಿ, ಗಾಯಕಿ ಬಿಯಾನ್ಸೆ ಇದ್ದಾರೆ. ಇವರ ಸೌಂದರ್ಯ ಸರಾಸರಿ 92.44 ಆಗಿದೆ. ಐದನೇ ಸ್ಥಾನದಲ್ಲಿ ನಟಿ ಅರಿಯಾನಾ ಗ್ರಾಂಡೆ ಇದ್ದಾರೆ ಇವರ ಸೌಂದರ್ಯ ಸರಾಸರಿ 91.81 ಆಗಿದೆ. ಆರನೇ ಸ್ಥಾನದಲ್ಲಿ ಸೆಲೆಬ್ರಿಟಿ ಗಾಯಕಿ ಟೇಲರ್ ಸ್ವಿಫ್ಟ್‌ ಇದ್ದಾರೆ. ಇವರ ಸೌಂದರ್ಯ ಸರಾಸರಿ 91.64 ಆಗಿದೆ. ಏಳನೇ ಸ್ಥಾನದಲ್ಲಿ ಜೋರ್ಡನ್ ಡೋನ್ ಇದ್ದಾರೆ ಇವರ ಸರಾಸರಿ 91.39 % ಇದೆ.

  ಕಿಮ್ ಕಾರ್ದಾಶಿಯನ್‌ಗೆ ಎಷ್ಟನೇ ಸ್ಥಾನ?

  ಕಿಮ್ ಕಾರ್ದಾಶಿಯನ್‌ಗೆ ಎಷ್ಟನೇ ಸ್ಥಾನ?

  ಎಂಟನೇ ಸ್ಥಾನದಲ್ಲಿ ವಿಶ್ವದ ಅತಿ ಶ್ರೀಮಂತ ಮಹಿಳಾ ಸೆಲೆಬ್ರಿಟಿ ಕಿಮ್ ಕರ್ದಾಶಿಯನ್ ಇದ್ದಾರೆ. ಇವರ ಸೌಂದರ್ಯ ಸರಾಸರಿ 91.28 ಇದೆ. ಭಾರತದ ನಟಿ ದೀಪಿಕಾ ಪಡುಕೋಣೆಯ ಸೌಂದರ್ಯ ಸರಾಸರಿ 91.22 ಇದೆ. ದೀಪಿಕಾ ನಂತರದ ಸ್ಥಾನದಲ್ಲಿ ಕೊರಿಯನ್ ನಟಿ ಹೋಯೆನ್ ಜುಂಗ್ ಅವರದ್ದಾಗಿದ್ದು ಅವರ ಸೌಂದರ್ಯದ ಸರಾಸರಿ 89.63 % ಆಗಿದೆ.

  English summary
  Actress Deepika Padukone is the only Indian among world's 10 most beautiful women. British actress Jodie Comer is in first place.
  Tuesday, October 18, 2022, 13:46
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X