For Quick Alerts
  ALLOW NOTIFICATIONS  
  For Daily Alerts

  'ಅವತಾರ್ 2' ಹಿಟ್ ಬೆನ್ನಲ್ಲೆ 'ಅವತಾರ್' ಸರಣಿಯ ಬದಲಿಗೆ ಹೊಸ ಸಿನಿಮಾ ಕೈಗೆತ್ತಿಕೊಂಡ ನಿರ್ದೇಶಕ!

  |

  ವಿಶ್ವದ ಟಾಪ್ ನಿರ್ದೇಶಕರಲ್ಲಿ ಜೇಮ್ಸ್ ಕ್ಯಾಮರನ್ ಪ್ರಮುಖರು. ಈಗ ವಿಶ್ವದೆಲ್ಲೆಡೆ ಅದ್ಧೂರಿ ಪ್ರದರ್ಶನ ಕಾಣುತ್ತಿರುವ 'ಅವತಾರ್ 2' ನಿರ್ದೇಶಕರಾಗಿರುವ ಜೇಮ್ಸ್, ಇದಕ್ಕೂ ಮುನ್ನ ಹಲವು ಸೂಪರ್ ಡೂಪರ್ ಸಾರ್ವಕಾಲಿಕ ಹಿಟ್ ಸಿನಿಮಾಗಳನ್ನು ನೀಡಿದವರು. ಅದರಲ್ಲಿ ಪ್ರಮುಖವಾದುದು 'ಟೈಟ್ಯಾನಿಕ್'.

  ಜೇಮ್ಸ್ ನಿರ್ದೇಶನದ ಸಿನಿಮಾ ಒಂದು ಬಿಡುಗಡೆ ಆಗಿ ಹದಿಮೂರು ವರ್ಷಗಳಾಗಿತ್ತು. ಅದುವೇ 'ಅವತಾರ್' ಇದೀಗ ಹದಿಮೂರು ವರ್ಷಗಳ ಬಳಿಕ 'ಅವತಾರ್ 2' ಸಿನಿಮಾದೊಟ್ಟಿಗೆ ಮರಳಿ ಬಂದಿದ್ದಾರೆ ಜೇಮ್ಸ್.

  'ಅವತಾರ್ 2' ಹಿಟ್ ಆಗಿದ್ದು, 'ಅವತಾರ್ 3', 'ಅವತಾರ್ 4' ಹಾಗೂ 'ಅವತಾರ್ 5' ಸಿನಿಮಾಗಳು ಮುಂದಿನ ದಿನಗಳಲ್ಲಿ ಬರಲಿವೆ. ಜೇಮ್ಸ್ ಕ್ಯಾಮರನ್ ಇನ್ನು ಮುಂದೆ 'ಅವತಾರ್' ಸಿನಿಮಾ ಸರಣಿಗೆ ಮಾತ್ರವೇ ಸೀಮಿತವಾಗಿರಲಿದ್ದಾರೆ ಎನ್ನಲಾಗಿತ್ತು. ಆದರೆ ಅದು ಸುಳ್ಳಾಗಲಿದ್ದು, ತಾವೇ ಪ್ರಾರಂಭಿಸಿದ್ದ ಜನಪ್ರಿಯ ಸಿನಿಮಾ ಸರಣಿಯೊಂದನ್ನು ಜೇಮ್ಸ್ ಮತ್ತೆ ಕೈಗೆತ್ತಿಕೊಳ್ಳಲಿದ್ದಾರೆ.

  'ಟೈಟ್ಯಾನಿಕ್', 'ಅವತಾರ್' ಮಾದರಿಯಲ್ಲಿಯೇ 'ಟರ್ಮಿನೇಟರ್' ಸಿನಿಮಾ ಸರಣಿಯನ್ನು ಸಹ ಜೇಮ್ಸ್ ಹುಟ್ಟು ಹಾಕಿದ್ದಾರೆ. ಸೂಪರ್ ಹಿಟ್ ಆದ 'ಟರ್ಮಿನೇಟರ್ 1' ಹಾಗೂ 2 ಅನ್ನು ಜೇಮ್ಸ್ ನಿರ್ದೇಶನ ಮಾಡಿದ್ದರು. ಅದರ ನಂತರ ಬಂದ 'ಟರ್ಮಿನೇಟರ್' ಸರಣಿಯ ನಾಲ್ಕು ಸಿನಿಮಾಗಳನ್ನು ಜೇಮ್ಸ್ ನಿರ್ದೇಶಿಸಿರಲಿಲ್ಲ. ಆದರೆ ಈಗ ಮತ್ತೆ 'ಟರ್ಮಿನೇಟರ್' ಸರಣಿಗೆ ಮರಳುತ್ತಿದ್ದಾರೆ ಜೇಮ್ಸ್.

  ಅವರೇ ಹೇಳಿರುವಂತೆ, 'ಟರ್ಮಿನೇಟರ್' ಸಿನಿಮಾ ಸರಣಿಯ ಹೊಸ ಸಿನಿಮಾ ನಿರ್ದೇಶನ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಒಂದೊಮ್ಮೆ ಸಿನಿಮಾ ಪ್ರಾರಂಭವಾದರೆ ಹಿಂದಿನ ಸಿನಿಮಾಗಳಂತೆ ರೋಬೋಟ್ ನಡುವೆ ಜಗಳದ ಬದಲಿಗೆ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ವಿಷಯವನ್ನು ಎತ್ತಿಕೊಳ್ಳುವುದಾಗಿ ಜೇಮ್ಸ್ ಹೇಳಿದ್ದಾರೆ.

  ಜೇಮ್ಸ್ ಕ್ಯಾಮರನ್ 'ಟರ್ಮಿನೇಟರ್' ಸಿನಿಮಾ ಮಾಡಿದಾಗ ರೋಬೋಟ್ ಆವಿಷ್ಕಾರ, ಬಳಕೆ ಬಗ್ಗೆ ಜೋರಾದ ಚರ್ಚೆಗಳು ಯತ್ನಗಳು ನಡೆಯುತ್ತಿದ್ದವು. ಆಗ ಜೇಮ್ಸ್ ರೋಬೋಟ್‌ಗಳ ಅಪಾಯಗಳ ಬಗ್ಗೆ 'ಟರ್ಮಿನೇಟರ್' ಸಿನಿಮಾ ಮಾಡಿದ್ದರು. ಈಗಲೂ ಎಐ ಬಗ್ಗೆ ದೊಡ್ಡ ಮಟ್ಟದ ಸಂಶೋಧನೆ, ಬಳಕೆ, ಅವಲಂಬನೆ ನಡೆಯುತ್ತಿವೆ ಹಾಗಾಗಿ ಈಗ ಎಐ ಅನ್ನು 'ಟರ್ಮಿನೇಟರ್' ಸಿನಿಮಾಕ್ಕೆ ವಿಷಯವಾಗಿ ಆರಿಸಿಕೊಳ್ಳುವುದಾಗಿ ಹೇಳಿದ್ದಾರೆ.

  'ಟರ್ಮಿನೇಟರ್' ಪಾತ್ರದಲ್ಲಿ ಅರ್ನಾಲ್ಡ್ ಶ್ವಾಸ್ನೆಗರ್ ಈವರೆಗೆ ನಟಿಸುತ್ತಾ ಬಂದಿದ್ದಾರೆ. ಆದರೆ ಈಗ ಅವರಿಗೆ ವಯಸ್ಸಾಗಿದೆ. ಹಾಗಾಗಿ ಮುಂಬರಲಿರುವ 'ಟರ್ಮಿನೇಟರ್'ನಲ್ಲಿಯೂ ಅವರೇ ಮುಖ್ಯಪಾತ್ರದಲ್ಲಿ ಅವರೇ ಇರುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

  ಇನ್ನುಳಿದಂತೆ ಜೇಮ್ಸ್‌ನ 'ಅವತಾರ್ 3' ಸಿನಿಮಾ 2024 ರ ಡಿಸೆಂಬರ್‌ನಲ್ಲಿ, 'ಅವತಾರ್ 4' ಸಿನಿಮಾ 2026 ರ ಡಿಸೆಂಬರ್‌ನಲ್ಲಿ ಬಿಡುಗಡೆ ಆಗಲಿದೆ.

  English summary
  Hollywood director James Cameron to direct new Terminator movie. He said he will choose AI as subject for his next Terminator movie.
  Wednesday, December 28, 2022, 21:07
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X