»   » ಈ ಹಾಲಿವುಡ್ ವಜ್ರಕಾಯ ಹೊಟ್ಟೆಗೆ ಏನು ತಿಂತಾನೆ?

ಈ ಹಾಲಿವುಡ್ ವಜ್ರಕಾಯ ಹೊಟ್ಟೆಗೆ ಏನು ತಿಂತಾನೆ?

Posted By:
Subscribe to Filmibeat Kannada

ಇತ್ತೀಚೆಗೆ ಬಿಡುಗಡೆಯಾದ ಹಾಲಿವುಡ್ ನ 'ಫಾಸ್ಟ್ ಅಂಡ್ ಫ್ಯೂರಿಯಸ್ 7' ಚಿತ್ರವನ್ನು ನೋಡಿದವರು ಈತನ ವಜ್ರಕಾಯ ನೋಡಿ ಮೂಗಿನ ಮೇಲೆ ಬೆರಳಿಟ್ಟರು. ಈ ಅಮೆರಿಕನ್ - ಕೆನಡಿಯನ್ ಹೆಸರು 'ದಿ ರಾಕ್' (ರಿಂಗ್ ನೇಮ್). ಡಬ್ಲ್ಯುಡಬ್ಲ್ಯುಎಫ್ ನ ಈ ಜಟ್ಟಿಯ ನಿಜ ನಾಮಧೇಯ ಡ್ವೇನ್ ಜಾನ್ಸನ್.

ಹಾಲಿವುಡ್ ಚಿತ್ರಗಳಲ್ಲಿ ತನ್ನದೇ ಶೈಲಿಯ ಆಕ್ಷನ್ ಮೂಲಕ ಗಮನಸೆಳೆಯುತ್ತಿದ್ದಾರೆ. ಚಲನಚಿತ್ರೋದ್ಯಮದಲ್ಲಿ ವರ್ಷಕ್ಕೆ ಈತನ ಆದಾಯ ಸರಿಸುಮಾರು ರು.300 ಕೋಟಿಗಳಂತೆ. 42ರ ಹರೆಯದ ದಿ ರಾಕ್ ಅವರ ಮೈಕಟ್ಟು ನೋಡಿದರೆ ಹೊಟ್ಟೆಗೆ ಏನ್ ತಿಂತೀಯಪ್ಪಾ ಎಂದು ಕೇಳುವವರೇ ಹೆಚ್ಚು.

Dwayne Johnson, The Rock fitness secret and diet

ಹರ್ಕ್ಯುಲಸ್, ಎಂಪೈರ್ ಸ್ಟೇಟ್, ಫಾಸ್ಟ್ ಅಂಡ್ ಫ್ಯೂರಿಯಸ್ 6 ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿರುವ ರಾಕ್ ಈ ರೀತಿಯ ಮೈಕಟ್ಟಿಗಾಗಿ ಏನೆಲ್ಲಾ ತಿನ್ನುತ್ತಾರೆ ಎಂಬುದನ್ನು ಸ್ವತಃ ಅವರೇ ಇತ್ತೀಚೆಗೆ ಹೇಳಿಕೊಂಡಿದ್ದಾರೆ.

ಪ್ರತಿದಿನ 284 ಗ್ರಾಂ ಕಾಡ್ ಮೀನಿನ ಚಾಪ್ಸ್, ಜೊತೆಗೆ 6 ಕಪ್ ಅನ್ನ, ಮೂರು ಕಪ್ ಹಸಿ ತರಕಾರಿ, ಪ್ರತಿ ದಿನ ಬೆಳಗ್ಗೆ ಮೀನಿನೊಂದಿಗೆ ಎರಡು ಮೊಟ್ಟೆಯ ಆಮ್ಲೆಟ್ ಸೇವಿಸುತ್ತೀನಿ ಎಂದಿದ್ದಾರೆ. ಅದೇ ರೀತಿ ರಾತ್ರಿ ಮಲಗುವ ಮುನ್ನ 10 ಎಗ್ ವೈಟ್ ಆಮ್ಲೆಟ್ ತಿಂತಾರೆ.

ಪ್ರತಿದಿನ ಸರಿಸುಮಾರು 7 ಬಾರಿ ಈ ಆಹಾರವನ್ನು ನ್ಯೂಟ್ರಿಷಿಯನ್ ಸೂಚನೆಗಳ ಮೇರೆಗೆ ತೆಗೆದುಕೊಳ್ಳುತ್ತಾರೆ. ಇದರ ಜೊತೆಗೆ ಫಿಟ್ ನೆಸ್ ನಿಪುಣರ ಸಮ್ಮುಖದಲ್ಲಿ ವ್ಯಾಯಾಮ ಮಾಡುತ್ತೇನೆ ಎನ್ನುತ್ತಾರೆ ಅವರು. ಇದಿಷ್ಟು ದಿ ರಾಕ್ ಅವರ ಮೈಕಟ್ಟಿನ ಮಹಿಮೆ ಹಿರಿಮೆ ಗರಿಮೆ. (ಏಜೆನ್ಸೀಸ್)

English summary
Dwayne Johnson, also known by his ring name The Rock, is an American-Canadian actor, producer and professional wrestler, shares the meal plan that gets his physique in bodybuilder shape.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada