For Quick Alerts
  ALLOW NOTIFICATIONS  
  For Daily Alerts

  ಬುರ್ಜ್ ಖಲೀಫಾ ಮೇಲೆ ನಿಂತು ಜಾಹಿರಾತು ಚಿತ್ರೀಕರಿಸಿದ್ದು ನಿಜವೇ?

  |

  ಜಗತ್ತನ್ನೇ ಸೆಳೆದಿದೆ ಎಮರೈಟ್ಸ್ ವಿಮಾನಯಾನ ಸಂಸ್ಥೆ ಬಿಡುಗೆ ಮಾಡಿರುವ ಜಾಹೀರಾತು. ಎಮರೈಟ್ಸ್ ಸಂಸ್ಥೆಯು ದುಬೈನಲ್ಲಿ ತಮ್ಮ ಸೇವೆ ಹೊಸ ಮೈಲಿಗಲ್ಲು ಸ್ಥಾಫಿಸಿದ್ದಕ್ಕೆ ಬಿಡುಗಡೆ ಮಾಡಿರುವ ಜಾಹೀರಾತು ಬಲು ಚರ್ಚೆ ಹುಟ್ಟುಹಾಕಿದೆ.

  ಜಾಹೀರಾತಿನಲ್ಲಿ ಯುವತಿಯೊಬ್ಬಾಕೆ ಎಮರೈಟ್ಸ್‌ ವಿಮಾನ ಪರಿಚಾರಿಕೆಯ ಸಮವಸ್ತ್ರ ತೊಟ್ಟು 'ಯುಎಇ ಅನ್ನು ಯುಕೆ ಅಂಬರ್ ಲಿಸ್ಟ್‌ಗೆ ಸೇರುವಂತೆ ಮಾಡಿದ್ದಕ್ಕೆ ನಮಗೆ ಹೆಮ್ಮೆ ಎನಿಸುತ್ತಿದೆ. ಅದಕ್ಕಾಗಿ ನಮಗೆ ಆಕಾಶದಲ್ಲಿ ಹಾರಿದ ಅನುಭವವಾಗುತ್ತಿದೆ. ಎಮರೈಟ್ಸ್ ಜೊತೆ ಹಾರಾಟ ಮಾಡಿ' ಎಂದು ಪ್ಲ ಕಾರ್ಡ್‌ಗಳನ್ನು ತೋರಿಸುತ್ತಿದ್ದಾಳೆ. ಕ್ಯಾಮೆರಾ ಹಿಂದಕ್ಕೆ ಸರಿದಾಗ ಗೊತ್ತಾಗುತ್ತದೆ ಆ ಯುವತಿ ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾದ ತುತ್ತತುದಿಯಲ್ಲಿ ನಿಂತು ಆ ಪ್ಲಕಾರ್ಡ್‌ಗಳನ್ನು ತೋರಿಸುತ್ತಿದ್ದಾಳೆಂದು. ಈ ಜಾಹೀರಾತು ಭಾರಿ ವೈರಲ್ ಆಗಿದೆ.

  ಆ ಯುವತಿ ಯಾರು? ಆಕೆ ನಿಜಕ್ಕೂ ಬುರ್ಜ್‌ ಖಲೀಫಾ ಮೇಲೆ ನಿಂತು ಜಾಹೀರಾತು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಳೆ. ಆ ಜಾಹೀರಾತನ್ನು ಚಿತ್ರೀಕರಣ ಮಾಡಿದ್ದು ಹೇಗೆ ಇನ್ನೂ ಹಲವು ವಿಷಯಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆ ಆರಂಭವಾಗಿದೆ.

  ಇದಕ್ಕೆ ಪ್ರತಿಕ್ರಿಯಿಸಿರುವ ಎಮರೈಟ್ಸ್ ಏರ್‌ಲೈನ್ ಜಾಹೀರಾತು ಚಿತ್ರೀಕರಣದ ವಿಡಿಯೋವನ್ನು ಬಿಡುಗಡೆ ಮಾಡಿದೆ. ವಿಡಿಯೋದ ಪ್ರಕಾರ ಜಾಹೀರಾತು ನಿಜವೇ ಆಗಿದೆ. ಯಾವುದೇ ಗ್ರಾಫಿಕ್ಸ್, ಗ್ರೀನ್ ಮ್ಯಾಟ್‌ನ ಬಳಕೆ ಇಲ್ಲದೆ ನಿಜವಾಗಿಯೂ ಆ ಯುವತಿ ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್‌ ಖಲೀಫಾ ಮೇಲೆ ನಿಂತು ಅಭಿನಯಿಸಿದ್ದಾಳೆ.

  ಜಾಹೀರಾತಿನಲ್ಲಿ ನಟಿಸಿರುವ ಯುವತಿ ಹೆಸರು ನಿಕೋಲ್ ಸ್ಮಿತ್ ಲುಡ್ವಿಕ್ ಎಂದು. ಜಾಹೀರಾತು ಚಿತ್ರೀಕರಿಸುವ ಮೊದಲಿಗೆ ತಾಲೀಮು ನಡೆಸಿ ನಟಿಯ ಸೊಂಟಕ್ಕೆ ಬಂಗಿ ಜಂಪ್‌ಗೆ ಬಳಸುವ ಹುಕ್‌ಗಳನ್ನು ಹಾಕಿ ಭದ್ರ ಪಡಿಸಿ ಆಕೆಯನ್ನು ಬುರ್ಜ್ ಖಲೀಫಾ ಮೇಲೆ ನಿಲ್ಲಿಸಲಾಗಿದೆ. ಅಲ್ಲಿ ಡ್ರೋನ್ ಕ್ಯಾಮೆರಾಗಳನ್ನು ಬಳಸಿ ಜಾಹೀರಾತು ಚಿತ್ರೀಕರಣ ಮಾಡಲಾಗಿದೆ. ಈಗ ಮೂಲ ಜಾಹೀರಾತಿಗಿಂತಲೂ ಅದರ ಮೇಕಿಂಗ್ ವಿಡಿಯೋ ಹೆಚ್ಚು ವೈರಲ್ ಆಗುತ್ತಿದೆ. ಅಷ್ಟು ಅಪಾಯಕಾರಿ ಸನ್ನಿವೇಶದಲ್ಲಿ ಆ ಜಾಹೀರಾತನ್ನು ಚಿತ್ರೀಕರಿಸಲಾಗಿದೆ.

  ವಿಶ್ವದ ಅತ್ಯಂತ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾ ನೆಲದಿಂದ 828 ಮೀಟರ್ ಎತ್ತರದಲ್ಲಿದೆ. ಜಾಹೀರಾತಿನಲ್ಲಿ ಅಭಿನಯಿಸಿರುವ ನಿಕೋಲ್ ಸ್ಮಿತ್ ಲುಡ್ವಿಕ್ ವೃತ್ತಿಪರ ಬಂಗಿ ಜಂಪರ್ ಮತ್ತು ತರಬೇತಿದಾರಳು ಸಹ.

  English summary
  Fly Emirates shot an advertisement on the top of Burj Khalifa. People doubting the ad then fly Emirates released behind the camera video as clarification.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X