»   » ಪ್ರತಿಷ್ಠಿತ ಗೋಲ್ಡನ್ ಗೋಬ್ಸ್ 2018 ಪ್ರಶಸ್ತಿ ಪ್ರದಾನ

ಪ್ರತಿಷ್ಠಿತ ಗೋಲ್ಡನ್ ಗೋಬ್ಸ್ 2018 ಪ್ರಶಸ್ತಿ ಪ್ರದಾನ

Posted By:
Subscribe to Filmibeat Kannada

ಈ ವರ್ಷದ ಗೋಲ್ಡನ್ ಗ್ಲೋಬ್ಸ್ ಅವಾರ್ಡ್ ವಿಜೇತರ ಪಟ್ಟಿ ಪ್ರಕಟವಾಗಿದೆ. ಹಾಲಿವುಡ್ ಫಾರಿನ್ ಪ್ರೆಸ್ ಅಸೋಸಿಯೇಷನ್ ಆಯೋಜನೆ ಮಾಡುವ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಮೇರಿಕಾದ ಸಿನಿಮಾ ಹಾಗೂ ಕಿರುತೆರೆಯ ಕಲಾವಿದರು ಮತ್ತು ತಂತ್ರಜ್ಞರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತದೆ.

ಪ್ರಶಸ್ತಿ ಸಮಾರಂಭದಲ್ಲಿ ಮಾರ್ಟಿನ್ ಮೆಕ್ಡೊನಾಗ್ ಹೀರೋ ಅಂದರೆ ತಪ್ಪಿಲ್ಲ ಕಾರಣ ಅವರೇ ನಿರ್ದೇಶನ ಮಾಡಿದ 'ಥ್ರೀ ಬಿಲ್‌ಬೋರ್ಡ್ಸ್ ಔಟ್ ಸೈಡ್ ಎಂಬಿಂಗ್ನ್ ಮಿಸ್ಸೌರಿ' ಚಿತ್ರಕ್ಕೆ ನಾಲ್ಕು ಕ್ಯಾಟಗರಿಯಲ್ಲಿ ಪ್ರಶಸ್ತಿ ಸಿಕ್ಕಿದೆ.

ರೇಟಾ ಗೆರ್ವಿಗ್ ನಿರ್ದೇಶನದ 'ಲೇಡಿ ಬರ್ಡ್' ಸಿನಿಮಾ ಸ್ಯಾಮ್ ರಾಕ್ ವೆಲ್ ಬೆಸ್ಟ್ ಸಪೋರ್ಟಿಂಗ್ ಆಕ್ಟರ್ ಪ್ರಶಸ್ತಿಯನ್ನ ಪಡೆದುಕೊಂಡಿದ್ದಾರೆ. ಅದಷ್ಟೇ ಅಲ್ಲದೆ ಹಾಸ್ಯದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಕೂಡ 'ಲೇಡಿ ಬರ್ಡ್' ಚಿತ್ರತಂಡಕ್ಕೆ ಸಿಕ್ಕಿದೆ.

golden globes 2018 award winners list

ಟೆಲಿವಿಷನ್ ಸೀರಿಸ್ ಕಾಮಿಡಿಯಲ್ಲಿ ಅತ್ಯುತ್ತಮ ನಟಿ ರಾಚೆಲ್ ಬ್ರಾನ್ಸಾನನ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಟೆಲಿವಿಷನ್ ಸೀರಿಸ್ ಡ್ರಾಮಾ ಕ್ಯಾಟಗರಿಯಲ್ಲಿ ನಟಿ ಎಲಿಸಬೆತ್ ಮಾಸ್ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

golden globes 2018 award winners list

ಇನ್ನು ಚಲನಚಿತ್ರ ವಿಭಾಗದಲ್ಲಿ ಥ್ರೀ ಬಿಲ್‌ ಬೋರ್ಡ್ಸ್ ಔಟ್ ಸೈಡ್ ಎಂಬಿಂಗ್ನ್ ಮಿಸ್ಸೌರಿ ಚಿತ್ರ ಬೆಸ್ಟ್ ಸ್ಕ್ರೀನ್ ಪ್ಲೇ ಪ್ರಶಸ್ತಿ ಪಡೆದುಕೊಂಡಿದೆ. ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನ ವಿನ್ನರ್ ಇನ್ ದಿ ಫೇಡ್ ಚಿತ್ರಕ್ಕೆ ಸಿಕ್ಕಿದೆ.

golden globes 2018 award winners list

ಗೆಲ್ಲೆರ್ಮೊ ಡೆಲ್ ಟೊರೊ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿದ್ದಾರೆ. ಗ್ಯಾರಿ ಓಲ್ಡ್ಮನ್ 'ದಿ ಡಾರ್ಕೆಸ್ಟ್ ಅವರ್' ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟನ ಪ್ರಶಸ್ತಿ ಪಡೆದಿದ್ದಾರೆ.

English summary
Golden globes 2018 award winners List announced .This is the award Presented by the Hollywood Foreign Press Association.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X