For Quick Alerts
  ALLOW NOTIFICATIONS  
  For Daily Alerts

  ವಿದೇಶಿ ನಟಿಯ ಟ್ವಿಟ್ಟರ್‌ನಲ್ಲಿ ಹಿಂದು ದೇವತೆ ಲಕ್ಷ್ಮಿಯ ಚಿತ್ರ!

  |

  ಭಾರತೀಯ ಸಂಸ್ಕೃತಿಯನ್ನು ಗೌರವಿಸುವವರು, ಆರಾಧಿಸುವವರು ವಿಶ್ವದ ಹಲವು ಮೂಲೆಗಳಲ್ಲಿದ್ದಾರೆ. ವಿದೇಶಿಗರೂ ಸಹ ಎಷ್ಟೋ ಮಂದಿ ಭಾರತೀಯ ಸಂಸ್ಕೃತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

  ಇದೀಗ ವಿದೇಶಿ ನಟಿಯೊಬ್ಬರು ತಾವು ಹಿಂದು ದೇವತೆ ಲಕ್ಷ್ಮಿಯ ಭಕ್ತೆ ಎಂಬುದಾಗಿ ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ. ದೇವತೆಯ ಲಕ್ಷ್ಮಿಯ ಚಿತ್ರವನ್ನೂ ಸಹ ಅವರು ಟ್ವಿಟ್ಟರ್‌ನಲ್ಲಿ ಪ್ರಕಟಿಸಿದ್ದಾರೆ.

  ಅಮೆರಿಕನ್-ಮೆಕ್ಸಿಕನ್ ನಟಿ ಸಲ್ಮಾ ಹಯೇಕ್ ತಾವು ಹಿಂದು ದೇವತೆ ಲಕ್ಷ್ಮಿಯ ಭಕ್ತೆ. 'ಯಾವಾಗ ನನ್ನ ಆತ್ಮವನ್ನು ನಾನು ಶೋಧಿಸಿಕೊಳ್ಳಬೇಕು ಎನಿಸುತ್ತದೆಯೋ ಆವಾಗೆಲ್ಲಾ ನಾನು ಲಕ್ಷ್ಮಿಯ ಕುರಿತು ಧ್ಯಾನ ಮಾಡುತ್ತೇನೆ' ಎಂದು ಬರೆದುಕೊಂಡಿದ್ದಾರೆ.

  'ಲಕ್ಷ್ಮಿಯು ಹಿಂದುಗಳ ದೇವತೆಯಾಗಿದ್ದು, ಐಶ್ವರ್ಯ, ಅದೃಶ್ಟ, ಪ್ರೀತಿ, ಸೌಂದರ್ಯ, ಮಾಯೆ, ಸಂತೋಷ, ಅಭಿವೃದ್ಧಿಗಳ ಅಧಿದೇವತೆ ಆಗಿದ್ದಾಳೆ. ಆಕೆಯ ಮುಖ ನೋಡಿದರೆ ನನಗೆ ಆನಂದವಾಗುತ್ತದೆ' ಎಂದು ಬರೆದಿದ್ದಾರೆ ನಟಿ ಸಲ್ಮಾ ಹಯೇಕ್.

  ಅಲೆಗಳನ್ನು ಯಾರು ತಡೆಯಲು ಆಗುವುದಿಲ್ಲ ಎಂದು Yash | Filmibeat Kannada

  ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಸಲ್ಮಾ ಖ್ಯಾತ ನಟಿ. ಸ್ಪೈ ಕಿಡ್ಸ್, ಫ್ರಿಡಾ, ಟ್ರಾಫಿಕ್, ಒನ್ಸ್ ಅಪಾನ್ ಟೈಮ್ ಇನ್‌ ಮೆಕ್ಸಿಕೋ, ಲೋನ್ಲಿ ಹಾರ್ಟ್ಸ್‌ ಇನ್ನು ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.

  English summary
  American-Mexican actress Salma Hayek posts Hindu goddess Lakshmi's photo in her twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X