ಜೇಮ್ಸ್ ಬಾಂಡ್ ಸಿನಿಮಾ ಬಿಡುಗಡೆ ಮತ್ತೆ ಮುಂದಕ್ಕೆ: ಕಾರಣವೇನು?
ಜೇಮ್ಸ್ ಬಾಂಡ್ ಸಿನಿಮಾ ಸರಣಿ ಪ್ರೇಮಿಗಳಿಗೆ ಮತ್ತೆ ನಿರಾಸೆಯಾಗಿದೆ. ಜೇಮ್ಸ್ ಬಾಂಡ್ ಸರಣಿಯ ಹೊಸ ಸಿನಿಮಾ 'ನೋ ಟೈಮ್ ಟು ಡೈ' ಸಿನಿಮಾ ಬಿಡುಗಡೆ ಮತ್ತೆ ಮುಂದೂಡಲಾಗಿದೆ.
ಡ್ಯಾನಿಯಲ್ ಕ್ರೇಗ್ ನಟನೆಯ 'ನೋ ಟೈಮ್ ಟು ಡೈ' ಸಿನಿಮಾ ಕಳೆದ ವರ್ಷದಲ್ಲೇ ಬಿಡುಗಡೆ ಆಗಬೇಕಿತ್ತು. ಆದರೆ ಕೊರೊನಾ ಕಾರಣಕ್ಕೆ ಮುಂದೂಡಲಾಗಿತ್ತು. ಏಪ್ರಿಲ್ ನಲ್ಲಿ ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿತ್ತು. ಆದರೆ ಅದನ್ನು ಮತ್ತೆ ಮುಂದಕ್ಕೆ ಹಾಕಲಾಗಿದೆ.
ಸಿನಿಮಾವನ್ನು ಅಕ್ಟೋಬರ್ 08 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದೆ ಚಿತ್ರತಂಡ. ಭಾರಿ ಬಜೆಟ್ ನ ಈ ಸಿನಿಮಾವನ್ನು ಕೊರೊನಾ ಪೂರ್ಣವಾಗಿ ಕಡಿಮೆ ಆದಮೇಲೆಯೇ ಚಿತ್ರಮಂದಿರಕ್ಕೆ ತರಲು ನಿರ್ಧರಿಸಿದೆ ಚಿತ್ರತಂಡ.

ಕೊರೊನಾ ನಡುವೆಯೇ ಬಿಡುಗಡೆ ಆಗ 'ಟೆನೆಟ್', 'ವಂಡರ್ ವುಮನ್' ಸಿನಿಮಾಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚು ಲಾಭ ಗಳಿಸಲು ವಿಫಲವಾದ ಕಾರಣ ಚಿತ್ರತಂಡವು ಈ ನಿರ್ಧಾರ ಕೈಗೊಂಡಿದೆ ಎನ್ನಲಾಗುತ್ತಿದೆ.
ಹಾಲಿವುಡ್ ಸಿನಿಮಾಗಳ ಮುಖ್ಯ ಮಾರುಕಟ್ಟೆಯಾದ ಅಮೆರಿಕದಲ್ಲಿ ಚಿತ್ರಮಂದಿರಗಳ ಟಿಕೆಟ್ ಮಾರಾಟ 50% ಹೆಚ್ಚು ಕುಸಿದಿದೆ. ಚೀನಾ, ಭಾರತದಲ್ಲೂ ಸಹ ಟಿಕೆಟ್ ಮಾರಾಟ ಇನ್ನೂ ಸಾಮಾನ್ಯ ಸ್ಥಿತಿಗೆ ಬಂದಿಲ್ಲ. ಇವುಗಳನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಸಿನಿಮಾ ಬಿಡುಗಡೆ ಮುಂದೂಡಲಾಗಿದೆ.
Recommended Video
'ನೋ ಟೈಮ್ ಟು ಡೈ' ಸಿನಿಮಾಕ್ಕೆ 1825 ಕೋಟಿ ಬಂಡವಾಳ ಹಾಕಲಾಗಿದೆ. ಸಿನಿಮಾದ ಟ್ರೇಲರ್ ಕಳೆದ ವರ್ಷವೇ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿತ್ತು. ಸಿನಿ ಪ್ರೇಮಿಗಳು ಬಾಂಡ್ ಸಿನಿಮಾಕ್ಕಾಗಿ ಕಾಯುತ್ತಿರುವಾಗ ಚಿತ್ರತಂಡ ಈ ನಿರ್ಣಯ ಕೈಗೊಂಡಿದೆ.


Click it and Unblock the Notifications











