»   » ಹೆಬ್ಬಾವಿನೊಂದಿಗೆ ಜಾರಿಜಾರಿ ಹೊರಬಂದ ಜೆನ್ನಿಫರ್!

ಹೆಬ್ಬಾವಿನೊಂದಿಗೆ ಜಾರಿಜಾರಿ ಹೊರಬಂದ ಜೆನ್ನಿಫರ್!

By: ರವಿಕಿಶೋರ್
Subscribe to Filmibeat Kannada

ಹಾವು ಕಂಡರೇನೇ ಮೈ ಎಲ್ಲಾ ಝುಂ ಎಂದು ಬಹಳಷ್ಟು ಮಂದಿ ಕಾಲಿಗೆ ಬುದ್ಧಿ ಹೇಳಿತ್ತಾರೆ. ಆದರೆ ಕೆಲವರು ಅವುಗಳೊಂದಿಗೆ ಸರಸವಾಡಿ ಎಲ್ಲರ ಗಮನಸೆಳೆಯುವ ಪ್ರಯತ್ನವನ್ನೂ ಮಾಡುತ್ತಾರೆ. ಆ ಒಂದು ವಿಭಾಗಕ್ಕೆ ಸೇರಿದ ಹಾಲಿವುಡ್ ತಾರೆ ಜೆನ್ನಿಫರ್ ಲಾರೆನ್ಸ್.

ತನ್ನ ಓರಗೆಯ ತಾರೆಗಳಾದ ಕಿಮ್ ಕರ್ದಾಷಿಯನ್, ಕೆಂಡಾಲ್ ಜೆನ್ನರ್, ಮಿಲೆ ಸೈರಸ್ ಸೇರಿದಂತೆ ಮುಂತಾದವರು ಪ್ರಚಾರಕ್ಕಾಗಿ ನಾನಾ ತಂತ್ರ ಪ್ರತಿತಂತ್ರಗಳನ್ನು ಬಳಸುತ್ತಿದ್ದಾರೆ. ಅವರನ್ನು ಮೀರಿಸುವಂತೆ ಏನಾದರೂ ಮಾಡಲು ಜೆನ್ನಿಫರ್ ಹೂಡಿದ ಹೊಸ ಅಸ್ತ್ರವೇ ಹಾವಿನೊಂದಿಗೆ ಸರಸ. [ಸೀಕ್ರೆಟ್ ಫ್ಯಾಷನ್ ಶೋನಲ್ಲಿ ಧುಮ್ಮುಕ್ಕಿದ ಸೌಂದರ್ಯ]

Jennifer Lawrence goes naked wrapped a snake

ಆಸ್ಕರ್ ಪ್ರಶಸ್ತಿ ಪುರಸ್ಕೃತ ಈ ತಾರೆ ಅರೆನಗ್ನವಾಗಿ ತನ್ನ ಅಂದಚೆಂದಗಳನ್ನು ಆವಿಷ್ಕರಿಸಿ ಹಾವಿನೊಂದಿಗೆ ಭಾವ ಭಂಗಿಗಳನ್ನು ಅನಾವರಣಗೊಳಿಸಿದ್ದಾರೆ. ಇಷ್ಟಕ್ಕೂ ಜೆನ್ನಿಫರ್ ಈ ಫೋಟೋಶೂಟ್ ನಡೆಸಿದ್ದು 'ವಾನಿಟಿ ಫೇಯಿರ್' ನಿಯತಕಾಲಿಕೆಗಾಗಿ ಎಂಬುದು ವಿಶೇಷ.

ಒಟ್ನಲ್ಲಿ ಜೆನ್ನಿಫರ್ ಮೈಮೇಲೆ ಹಾವು ಹರಿದಾಡುತ್ತಿದ್ದರೆ ನೋಡುಗರ ಎದೆ ಧಸಕ್ ಎನ್ನದೆ ಇರದು. ಇನ್ನು ಜೆನ್ನಿಫರ್ ಪರಿಸ್ಥಿತಿ ಏನಾಗಿರಬೇಡ. ಎಲ್ಲರ ಗಮನಸೆಳೆಯಬೇಕಾದರೆ ಈ ರೀತಿಯ ಸಾಹಸ ತಪ್ಪಿದ್ದಲ್ಲ.

ಮೈ ಮೇಲೆ ಇರುವೆಬಿಟ್ಟುಕೊಂಡರಂತೆ ಎಂಬ ಮಾತು ಕೇಳಿದ್ದೀವಿ, ಯೋಗರಾಜ್ ಭಟ್ ರು ಹಾವು ಬಿಟ್ಟುಕೊಂಡಂತೆ ಎಂಬ ವಿಶೇಷಣವನ್ನು ತಮ್ಮ ಹಾಡಿನಲ್ಲಿ ಬಳಸಿದ್ದಾರೆ. ಜೆನ್ನಿಫರ್ ಮಾತ್ರ ಆ ಮಾತನ್ನು ಅಕ್ಷರಶಃ ನಿಜವಾಗಿಸಿದ್ದಾರೆ.

English summary
We were not getting over Kim Kardashian, Kendall Jenner and Miley Cyrus, and now Oscar-winning actress Jennifer Lawrence also decided to strip her clothe.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada