»   » ಜುರಾಸಿಕ್ ವರ್ಲ್ಡ್ ಗೆ ಮೊದಲ ವಾರವೇ ಭರ್ಜರಿ ಬೆಳೆ

ಜುರಾಸಿಕ್ ವರ್ಲ್ಡ್ ಗೆ ಮೊದಲ ವಾರವೇ ಭರ್ಜರಿ ಬೆಳೆ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಜುರಾಸಿಕ್ ಪಾರ್ಕ್ ಸರಣಿಯ ನಾಲ್ಕನೇ ಚಿತ್ರ ಜುರಾಸಿಕ್ ವರ್ಲ್ಡ್ ಬಿಡುಗಡೆಯಾದ ಮೊದಲ ವಾರವೇ ಭರ್ಜರಿ ಲಾಭ ಪಡೆದುಕೊಂಡಿದೆ. ವಿಶ್ವದೆಲ್ಲೆಡೆ ತುಂಬಿದ ಗೃಹ ಪ್ರದರ್ಶನದಿಂದಾಗಿ ಜುರಾಸಿಕ್ ಪಾರ್ಕ್ ಸೃಷ್ಟಿಸಿದ್ದ ಲೋಕಕ್ಕೆ ಮತ್ತೊಮ್ಮೆ ಪ್ರೇಕ್ಷಕರನ್ನು ಕರೆದೊಯ್ದಿದೆ. ಮೊದಲ ವಾರದ ಗಳಿಕೆ 500 ಮಿಲಿಯನ್ ಡಾಲರ್ ಮೀರಿದೆ.

ಅಮೆರಿಕವೊಂದರಲ್ಲೇ 204.6 ಮಿಲಿಯನ್ ಡಾಲರ್ ಗಳಿಸಿದೆ. ಚೀನಾದಲ್ಲಿ 100 ಮಿಲಿಯನ್ ಡಾಲರ್, ಯುಕೆ ಹಾಗೂ ಐರ್ಲೆಂಡ್ ಸೇರಿ 29.6 ಮಿಲಿಯನ್ ಡಾಲರ್ ಬಂದಿದೆ. ಒಟ್ಟಾರೆ ನಿವ್ವಳ ಆದಾಯ ಜಾಗತಿಕವಾಗಿ 511.8 ಮಿಲಿಯನ್ ಡಾಲರ್ ಗಳಿಕೆ ಕಂಡು ಬಂದಿದೆ. [ಥ್ರಿಲ್ ಇರದ ಟ್ರೇಲರ್ ಗೂ ಕೋಟಿ ಮಂದಿ ಮೆಚ್ಚುಗೆ]

ಟ್ರೇಲರ್ ಬಿಡುಗಡೆಗೂ ಮುನ್ನ ಟೀಸರ್ ಬಿಟ್ಟು ಕುತೂಹಲ ಕಾಯ್ದುಕೊಂಡಿದ್ದ ಜುರಾಸಿಕ್ ವರ್ಲ್ಡ್ ಚಿತ್ರದ ಮೊದಲ ಟ್ರೇಲರ್ ಯೂಟ್ಯೂಬ್ ನಲ್ಲಿ ಕಿಚ್ಚು ಹಬ್ಬಿಸಿತ್ತು. ಜನರ ಕುತೂಹಲಕ್ಕೆ ತಕ್ಕ ಹಾಗೆ ಚಿತ್ರ ಮೂಡಿ ಬಂದಿರುವುದರಿಂದ ಗಳಿಕೆ ಇಮ್ಮಡಿಯಾಗುವ ಸಾಧ್ಯತೆ ಹೆಚ್ಚಿದೆ.

Jurassic World's Record Opening Weekend

ಸುಮಾರು 961 ಕೋಟಿ ರು ಬಂಡವಾಳದಲ್ಲಿ ನಿರ್ಮಾಣವಾದ ಜುರಾಸಿಕ್ ವರ್ಲ್ಡ್ ಚಿತ್ರ ಮೊದಲ ವಾರದಲ್ಲೇ 511.8 ಮಿಲಿಯನ್ ಡಾಲರ್ ಗಳಿಸಿದ್ದು ಎಲ್ಲಾ ದಾಖಲೆಗಳನ್ನು ಮುರಿಯುವ ಸನ್ನಾಹದಲ್ಲಿದೆ.

ಡೈನೋಸಾರ್ ನಿಜವಾದ ಸೂಪರ್ ಹೀರೋ: ಎಕ್ಸಿಬಿಟರ್ ರಿಲೇಷನ್ಸ್ ಸಂಸ್ಥೆ ವಿಶ್ಲೇಷಕ ಜೆಫ್ ಬಾಕ್ ಅವರು ಜುರಾಸಿಕ್ ವರ್ಲ್ಡ್ ಗಳಿಕೆಗೆ ಪ್ರತಿಕ್ರಿಯಿಸಿ, ಐರನ್ ಮ್ಯಾನ್, ಸೂಪರ್ ಮ್ಯಾನ್ ಅಥವಾ ಬ್ಯಾಟ್ ಮನ್ ಗಳಿಗಿಂತ ಡೈನೋಸಾರ್ ಗಳೇ ನಿಜವಾದ ಸೂಪರ್ ಹೀರೋ ಎಂದಿದ್ದಾರೆ.

1993ರಲ್ಲಿ ‘ಜುರಾಸಿಕ್ ಪಾರ್ಕ್' , 1997ರಲ್ಲಿ ದ ಲಾಸ್ಟ್ ವರ್ಲ್ಡ್: ಜುರಾಸಿಕ್ ಪಾರ್ಕ್', 2001ರಲ್ಲಿ ‘ಜುರಾಸಿಕ್ ಪಾರ್ಕ್ 3' ಸೂಪರ್ ಹಿಟ್ ಆಗಿದ್ದು ಎಲ್ಲರಿಗೂ ತಿಳಿದೇ ಇದೆ. ‘ಜುರಾಸಿಕ್ ವರ್ಲ್ಡ್' ಈಗ ಟಾಪ್ 5 ಬ್ಲಾಕ್​ಬಸ್ಟರ್ ಚಿತ್ರಗಳಲ್ಲಿ ಮುಂಚೂಣಿಯಲ್ಲಿ ಸ್ಥಾನದಲ್ಲಿದೆ. ಯುಎಸ್ ನಲ್ಲಿ 2012ರಲ್ಲಿ ದಿ ಅವೆಂಜರ್ಸ್ ಮಾತ್ರ ಮೊದಲ ವಾರದಲ್ಲಿ 207.4 ಮಿಲಿಯನ್ ಡಾಲರ್ ಗಳಿಸಿತ್ತು.

ಯುನಿವರ್ಸಲ್ ಪಿಕ್ಚರ್ಸ್ ನಿರ್ಮಾಣ ಈ ಚಿತ್ರಕ್ಕೆ ಮೊದಲ ಎರಡು ಜುರಾಸಿಕ್ ಪಾರ್ಕ್ ಸಿನಿಮಾಗಳನ್ನು ನಿರ್ಮಿಸಿ, ನಿರ್ದೇಶಿಸಿ ಇತಿಹಾಸ ಸೃಷ್ಟಿಸಿದ ಹಾಲಿವುಡ್ ನ ಶ್ರೇಷ್ಠ ಚಿತ್ರಕರ್ಮಿ ಸ್ಟೀವನ್ ಸ್ಪೀಲ್ಬರ್ಗ್ ಕೈಜೋಡಿಸಿದ್ದು ಫಲ ನೀಡಿದೆ. ಮೈಕಲ್ ಕ್ರಿಚ್ಟನ್ ಅವರ ಡೈನೋಸರರ್ಸ್ ಕಾದಂಬರಿ ಆಧಾರದ ಮೇಲೆ ಜುರಾಸಿಕ್ ಪಾರ್ಕ್ ಚಿತ್ರಗಳು ರೂಪುಗೊಂಡಿದೆ.

English summary
As expected, Jurassic World ate the global box office like a monster. In its very opening weekend, the reboot of the classic Jurassic Park has swept away the box office with a record. It is the first film to gross more than $500m world-wide in a single weekend.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada