Don't Miss!
- News
ಎನ್ಐಎಗೆ ಭಯೋತ್ಪಾದನಾ ದಾಳಿಯ ಬೆದರಿಕೆ ಸಂದೇಶ: ಮುಂಬೈನಲ್ಲಿ ಹೈ ಅಲರ್ಟ್!
- Automobiles
ಕಡಿಮೆ ಬೆಲೆಯ ಟಾಟಾ ಎಲೆಕ್ಟ್ರಿಕ್ ಕಾರಿನ ವಿತರಣೆ ಪ್ರಾರಂಭ: 2,000 ಕಾರುಗಳ ಹಸ್ತಾಂತರ
- Sports
Border-Gavaskar Trophy: ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ ಈ ವೇಗಿ ಬೌಲಿಂಗ್ ಮಾಡಲ್ಲ; ಪ್ಯಾಟ್ ಕಮ್ಮಿನ್ಸ್
- Finance
ಅದಾನಿ ಗ್ರೂಪ್ ಬಿಕ್ಕಟ್ಟಿನ ಮಧ್ಯೆ ಭರವಸೆ ನೀಡಿದ ವಿತ್ತ ಸಚಿವೆ, ಹೇಳಿದ್ದೇನು?
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Iran Anti Hijab row: ಆಸ್ಕರ್ ವಿಜೇತ ಚಿತ್ರದ ನಟಿ ತರನೆಹ್ ಅಲಿದೋಸ್ತಿ ಬಂಧನ
ಇಸ್ಲಾಮಿಕ್ ದೇಶ ಇರಾನ್‌ನಲ್ಲಿ ಬಲವಂತದ ಹಿಜಾಬ್ ವಿರುದ್ಧದ ಪ್ರತಿಭಟನೆಯ ಕಾವು ಇನ್ನು ಆರಿಲ್ಲ. ಈ ಪ್ರತಿಭಟನೆಯಲ್ಲಿ ಈಗಾಗಲೇ ಸಾಕಷ್ಟು ಸಾವು ನೋವು ಸಂಭವಿಸಿದೆ. ಇನ್ನು ಈ ಪ್ರತಿಭಟನೆಗಳ ಕುರಿತು ಸುಳ್ಳು ಸುದ್ದಿ ಹರಡಿದ್ದಾರೆ ಎಂದು ಆರೋಪಿಸಿ ಆಸ್ಕರ್ ವಿಜೇತ ಚಿತ್ರದ ನಟಿ ತರನೆಹ್ ಅಲಿದೋಸ್ತಿ ಅವರನ್ನು ಇರಾನ್ ಸರ್ಕಾರ ಬಂಧಿಸಿದೆ.
ಹಿಜಾಬ್ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಭಾಗಿಯಾಗಿ ಅಪರಾಧ ಕೃತ್ಯ ಎಸಗುತ್ತಿರುವರನ್ನು ಅಲ್ಲಿ ಬಂಧಿಸಲಾಗುತ್ತಿದೆ. ಈಗಾಗಲೇ ಕೆಲವರಿಗೆ ಮರಣ ದಂಡನೆ ಘೋಷಣೆಯಾಗಿದೆ. ಇದೇ ರೀತಿ ಮರಣ ದಂಡನೆಗೆ ಗುರಿಯಾದ ಮುಹ್ಸೆನ್ ಷೆಕಾರಿ(23) ಎಂಬ ವ್ಯಕ್ತಿಯನ್ನು ಬೆಂಬಲಿಸಿ ನಟಿ ತರನೆಹ್ ಅಲಿದೋಸ್ತಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಆಕೆಯನ್ನು ಬಂಧಿಸಿರುವುದಾಗಿ ಇರಾನ್ ಮಾಧ್ಯಮಗಳನ್ನು ವರದಿಯಾಗಿದೆ. 2016ರಲ್ಲಿ 'ದಿ ಸೇಲ್ಸ್‌ಮನ್' ಚಿತ್ರದಲ್ಲಿ ತರನೆಹ್ ಅಲಿದೋಸ್ತಿ ನಟಿಸಿದ್ದರು. ಈ ಚಿತ್ರಕ್ಕೆ ಅತ್ಯುತ್ತಮ ವಿದೇಶಿ ಸಿನಿಮಾ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಸಿಕ್ಕಿತ್ತು.
ಅವತಾರ್
2
ಮೊದಲ
ದಿನ
ಭಾರತದ
ಯಾವ
ರಾಜ್ಯದಲ್ಲಿ
ಹೆಚ್ಚು
ಕಲೆಕ್ಷನ್
ಮಾಡಿದೆ?
ಮುಹ್ಸೆನ್ ಷೆಕಾರಿ ಮರಣ ದಂಡನೆಗೆ ಸಂಬಂಧಿಸಿ ಡಿಸೆಂಬರ್ 8ರಂದು ನಟಿ ತರನೆಹ್ ಅಲಿದೋಸ್ತಿ ಪೋಸ್ಟ್ ಮಾಡಿದ್ದರು. "ಈ ರಕ್ತಪಾತವನ್ನು ನೋಡಿಯೂ ಯಾವುದೇ ಕ್ರಮ ಕೈಗೊಳ್ಳದ ಅಂತರಾಷ್ಟ್ರೀಯ ಸಂಸ್ಥೆಗಳು ಮಾನವತ್ವಕ್ಕೆ ಅವಮಾನಕರ" ಎಂದು ಬರೆದುಕೊಂಡಿದ್ದರು. ಕಳೆದ 20 ವರ್ಷಗಳಿಂದ ತರನೆಹ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಆಕೆ ನಟಿಸಿದ 'ಲಿಲಿಯಾಸ್ ಬ್ರದರ್ಸ್' ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು.

ಮೆಹ್ಸಾ ಅಮಿನಿ ಸಾವಿನ ಬಳಿಕ, ಇರಾನ್‌ನಲ್ಲಿ ಹಿಜಾಬ್ ವಿರೋಧಿ ಪ್ರತಿಭಟನೆ ತಾರಕಕ್ಕೇರಿತ್ತು. ಜಿನ್.. ಜಿಯಾನ್.. ಆಜಾದಿ ಘೋಷಣೆ ಎಲ್ಲೆಲ್ಲೂ ಮಾರ್ದಿನಿಸಿತ್ತು. ಮೆಹ್ಸಾ ಅಮಿನಿ ಸಾವಿನ ಬಳಿಕ, ಇರಾನ್‌ನ ನೈತಿಕ ಪೊಲೀಸ್ ಘಟಕದ ವಿರುದ್ಧ ಆಕ್ರೋಶ ಭುಗಿಲೆದ್ದಿತ್ತು. ಪ್ರತಿಭಟನೆಯನ್ನು ಹತ್ತಿಕ್ಕಲು ನೂರಾರು ಜನರನ್ನು ಇರಾನ್‌ನ ಭದ್ರತಾ ಪಡೆಗಳು ಹತ್ಯೆ ಮಾಡಿದೆ ಎಂದು ಹೇಳಲಾಗಿತ್ತು. ಇತ್ತೀಚೆಗೆ ಈ ಹೋರಾಟಕ್ಕೆ ಮಣಿದಿದ್ದ ಅಲ್ಲಿನ ಸರ್ಕಾರ ತನ್ನ ನೈತಿಕ ಪೊಲೀಸ್ ಘಟಕವನ್ನು ರದ್ದುಗೊಳಿಸಿರುವುದಾಗಿ ಘೋಷಿಸಿತ್ತು. ಈ ಹಿಂದೆ ಕೂಡ ನಟಿ ತರನೆಹ್ ಅಲಿದೋಸ್ತಿ ಹಿಜಾಬ್ ಧರಿಸದೇ ಪ್ರತಿಭಟನೆ ಕುರಿತು ಮಾತನಾಡಿದ್ದರು.