»   » ಬಾಲಿವುಡ್ ಬಿಟ್ಟು ಎತ್ತ ಹೊರಟಳು ಪರಿಣಿತಿ?

ಬಾಲಿವುಡ್ ಬಿಟ್ಟು ಎತ್ತ ಹೊರಟಳು ಪರಿಣಿತಿ?

Subscribe to Filmibeat Kannada

ಬೆಂಗಳೂರು, ನ.12: ಪರಿಣಿತಿ ಛೋಪ್ರಾ ಹತ್ತು ತಿಂಗಳು ಬಾಲಿವುಡ್ ನಿಂದ ಮಾಯವಾಗಲಿದ್ದಾರೆ. ಇದರರ್ಥ ಅವರೇನು ಹಾಲಿವುಡ್ ಗೆ ಹಾರುತ್ತಿಲ್ಲ. ತಮ್ಮ ಬಹುನಿರೀಕ್ಷಿತ ಚಿತ್ರ 'ಕಿಲ್ ದಿಲ್' ಬಿಡುಗಡೆಯ ನಂತರ 10 ತಿಂಗಳು ಬ್ರೇಕ್ ತೆಗೆದಿಕೊಳ್ಳುತ್ತಾರಂತೆ.

ಇದು ಯಾರೋ ಹುಟ್ಟುಹಾಕಿದ ಗಾಸಿಪ್ಪು ಅಲ್ಲ. ಗಾಳಿ ಸುದ್ದಿಯೂ ಅಲ್ಲ. ಸ್ವತಃ ಛೋಪ್ರಾನೇ ನಾನು ಬ್ರೇಕ್ ತಗೋತಿದೀನಿ ಅಂಥ ಹೇಳಿದ್ದಾರೆ.

ಹಾಗಾದರೆ ಬಾಲಿವುಡ್ ಬಿಟ್ಟು ಏನಮ್ಮಾ ಮಾಡ್ತೀಯಾ? ಎಂದು ಕೇಳಿದರೆ 'ನನಗೆ ಹೊರಗಡೆ ತಿರುಗಬೇಕೆಂಬ ಆಸೆ ಉಂಟಾಗಿದೆ, ಸ್ನೇಹಿತರ ಜತೆ ಪ್ರವಾಸ ಹೋಗಬೇಕೆಂದಿದ್ದೇನೆ. ನೀರಿನ ಒಳಗಡೆ ಡೈವ್ ಮಾಡಬೇಕೆಂಬ ಹುಚ್ಚು ಆಸೆಯಿದೆ. ಇದೆಲ್ಲಕ್ಕೆ ಇದೇ ಸಕಾಲ' ಎಂದು ಉತ್ತರ ಕೊಡ್ತಾರೆ.

ಮುಂಬೈ ಮಹಾನಗರ ಬಿಡಬೇಕು ಎಂದು ತೀರ್ಮಾನಿಸಿದ್ದೇನೆ. 'ಕಿಲ್ ದಿಲ್' ಚಿತ್ರ ಇದೇ ಶುಕ್ರವಾರ ಬಿಡುಗಡೆಯಾಗಲಿದ್ದು ಪ್ರೇಕ್ಷಕರ ಪ್ರತಿಕ್ರಿಯೆ ಆಧರಿಸಿ ಮುಂದೆ ನಡೆಯುತ್ತೇನೆ ಎಂದು ಹೇಳಿದ್ದಾರೆ.

chopra 1

ಜನ ಇಲ್ಲಿಯವರೆಗೆ ನೋಡಿರದ ಪರಿಣಿತಿಯನ್ನು ಕಿಲ್ ದಿಲ್ ಚಿತ್ರದಲ್ಲಿ ನೋಡಲಿದ್ದಾರೆ. ಇಲ್ಲಿ ನನ್ನ ಪಾತ್ರ ಹಿಂದಿನ ಎಲ್ಲ ಸಿನಿಮಾಗಳಿಗಿಂತ ವಿಭಿನ್ನವಾಗಿದೆ. ಇದು ನನ್ನ ಸಿನಿಮಾ ಬದುಕಿಗೆ ಹೊಸ ತಿರುವು ನೀಡಲಿದೆ ಎಂದು ಛೋಪ್ರಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶಾದ್ ಅಲಿ ನಿರ್ದೇಶನದಲ್ಲಿ ಮೂಡಿಬಂದಿರುವ ಕಿಲ್ ದಿಲ್ ಚಿತ್ರದಲ್ಲಿ ರಣವೀರ್ ಸಿಂಗ್ ಗೆ ಪರಿಣಿತಿ ಛೋಪ್ರಾ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

ಪರಿಣಿತಿ ಪ್ರಯಾಣ ಎಲ್ಲಿಗೆ?
ಇದರೊಂದಿಗೆ ಹಾಗಾದರೆ ಛೋಪ್ರಾ ಪ್ರಯಾಣ ಎಲ್ಲಿಗೆ? ಕರಾಚಿಗೋ? ದುಬೈಗೋ? ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿದೆ. ಕರಾಚಿ ಮತ್ತು ದುಬೈನಲ್ಲಿ ನನ್ನ ಸ್ನೇಹಿತರು ಬಹಳಷ್ಟು ಜನ ಇದ್ದಾರೆ. ಅಲ್ಲಿಯ ಇಂಚಿಂಚೂ ನನಗೆ ಗೊತ್ತು ಎಂದು ಛೋಪ್ರಾ ಹೇಳಿರುವುದನ್ನು ಲೆಕ್ಕ ಹಾಕಿದರೆ ಇವೆರಡರಲ್ಲಿ ಒಂದು ಜಾಗಕ್ಕೆ ಹಾರೋದು ಪಕ್ಕಾ.

English summary
Parineeti Chopra, who is busy in shooting back-to-back films, says she will go on a break after the release of upcoming action movie 'Kill Dil'. The 26-year-old actress said she just wants to run away from Mumbai for sometime.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada