For Quick Alerts
  ALLOW NOTIFICATIONS  
  For Daily Alerts

  ಮಗಳಿಗೆ ಭಾರತೀಯ ಹೆಸರಿಟ್ಟ ಪ್ರಿಯಾಂಕಾ-ನಿಕ್

  |

  ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಹಾಲಿವುಡ್ ಗಾಯಕ ನಿಕ್ ಜೋನಸ್ ಕೆಲವು ತಿಂಗಳ ಹಿಂದಷ್ಟೆ ಸೆರೊಗಸಿ ಮಾದರಿಯಲ್ಲಿ ಹೆಣ್ಣು ಮಗುವೊಂದಕ್ಕೆ ಪೋಷಕರಾಗಿದ್ದಾರೆ.

  ಜನವರಿ 15 ರಂದು ಈ ಜೋಡಿ ತಂದೆ-ತಾಯಿಯಾಗಿದ್ದಾರೆ. ಈ ಜೋಡಿ ತಮ್ಮ ಮಗಳ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲವಾದರೂ ಹಾಲಿವುಡ್ ಮಾಧ್ಯಮವೊಂದು ಮಗುವಿನ ಬರ್ತ್ ಸರ್ಟಿಫಿಕೇಟ್‌ ಅನ್ನು ಪಡೆದುಕೊಂಡಿದ್ದು, ಅದರಲ್ಲಿ ಮಗುವಿನ ಹೆಸರು ನಮೂದಾಗಿರುವುದಾಗಿ ವರದಿ ಮಾಡಿದೆ.

  ಜನನ ಪ್ರಮಾಣ ಪತ್ರದ ಅನುಸಾರ ಪ್ರಿಯಾಂಕಾ-ನಿಕ್‌ರ ಹೆಣ್ಣು ಮಗುವಿನ ಹೆಸರು ಮಾಲತಿ ಮೇರಿ ಎಂದಾಗಿದೆ. ಪ್ರಿಯಾಂಕಾ ಚೋಪ್ರಾ ತನ್ನ ಮಗುವಿಗೆ ಭಾರತೀಯ ಹೆಸರಿಟ್ಟಿರುವ ಬಗ್ಗೆ ನೆಟ್ಟಿಗರು ಹರ್ಷ ವ್ಯಕ್ತಪಡಿಸಿದ್ದಾರೆ.

  ಪ್ರಿಯಾಂಕಾ ವಿದೇಶದಲ್ಲಿಯೇ ನೆಲೆಸಿದ್ದು, ವಿದೇಶಿ ಗಾಯಕ ನಿಕ್ ಜೋನಸ್ ಅನ್ನು ವಿವಾಹವಾಗಿದ್ದರೂ ಮಗಳಿಗೆ ಭಾರತೀಯ ಹೆಸರೇ ಇಟ್ಟಿರುವುದಕ್ಕೆ ಹಲವರು ಸಂತಸ ವ್ಯಕ್ತಪಡಿಸಿದ್ದಾರೆ. ದೇಶದಿಂದ ದೂರ ಇದ್ದರೂ, ಸಂಸ್ಕೃತಿ ಮರೆತಿಲ್ಲವೆಂದು ಪ್ರಿಯಾಂಕಾರನ್ನು ಹೊಗಳಿದ್ದಾರೆ.

  ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ 2018 ರ ಡಿಸೆಂಬರ್ 01 ರಂದು ಭಾರತದಲ್ಲಿಯೇ ವಿವಾಹವಾದರು. ಮದುವೆಗೆ ಮುಂಚಿನಿಂದಲೇ ಪ್ರಿಯಾಂಕಾ ಹಾಲಿವುಡ್‌ನಲ್ಲಿ ಕೆಲಸ ಮಾಡಲು ಆರಂಭಿಸಿದ್ದರು, ಮದುವೆಯ ಬಳಿಕವಂತೂ ಬಹುತೇಕ ಹಾಲಿವುಡ್‌ನಲ್ಲೇ ಸೆಟಲ್ ಆದರು. ಆದರೂ ಆಗಾಗ್ಗೆ ಭಾರತೀಯ ಸಿನಿಮಾಗಳಲ್ಲಿ ಸಹ ಕಾಣಿಸಿಕೊಳ್ಳುತ್ತಿರುತ್ತಾರೆ.

  ನಿಕ್ ಹಾಗೂ ಪ್ರಿಯಾಂಕಾ ಸೆರೊಗೆಟರಿ ಮಾದರಿಯಲ್ಲಿ ಬಾಡಿಗೆ ತಾಯಿಯ ಮೂಲಕ ಜನವರಿ 15 ರಂದು ಹೆಣ್ಣು ಮಗುವನ್ನು ಪಡೆದರು. ಅಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿದ್ದ ಪ್ರಿಯಾಂಕಾ, ''ನಾವು ಬಾಡಿಗೆ ತಾಯ್ತನದ ಮೂಲಕ ಮಗು ಪಡೆದಿದ್ದೇವೆ. ಈ ವಿಶೇಷ ಸಂದರ್ಭದಲ್ಲಿ ಎಲ್ಲರೂ ನಮ್ಮ ಖಾಸಗಿತನವನ್ನು ಗೌರವಿಸಬೇಕು ಎಂದು ಮನವಿ ಮಾಡುತ್ತೇನೆ. ಈಗ ನಮ್ಮ ಗಮನ ನಮ್ಮ ಕುಟುಂಬದ ಮೇಲಿದೆ'' ಎಂದಿದ್ದರು.

  ಪ್ರಿಯಾಂಕಾ ಚೋಪ್ರಾ ನಟಿಸಿದ್ದ 'ದಿ ಮೇಟ್ರಿಕ್ಸ್; ರಿಸರಕ್ಷನ್' ಸಿನಿಮಾ 2021 ರಲ್ಲಿ ಬಿಡುಗಡೆ ಆಗಿತ್ತು, ಇದೀಗ ಪ್ರಿಯಾಂಕಾರ ಮತ್ತೊಂದು ಹಾಲಿವುಡ್ ಸಿನಿಮಾ 'ಇಟ್ಸ್ ಆಲ್ ಕಮಿಂಗ್ ಬ್ಯಾಕ್‌ ಟು ಮಿ' ಸಿನಿಮಾ ಬಿಡಗುಡೆಗೆ ತಯಾರಾಗಿದೆ. ಇದರ ಜೊತೆಗೆ ಹಾಲಿವುಡ್ ವೆಬ್ ಸೀರೀಸ್, 'ಸಿಟಾಡೆಲ್'ನಲ್ಲಿ ಸಹ ಪ್ರಿಯಾಂಕಾ ನಟಿಸುತ್ತಿದ್ದಾರೆ. ಬಾಲಿವುಡ್‌ನ 'ಜೀ ಲೇ ಜರಾ', 'ಶೀಲಾ' ಹಾಗೂ ಕಲ್ಪನಾ ಚಾವ್ಲಾ ಜೀವನ ಆಧರಿಸಿದ ಸಿನಿಮಾದಲ್ಲಿ ನಟಿಸಲಿದ್ದಾರೆ.

  English summary
  Actress Priyanka Chopra and Nick Jonas named their girl child as Malati Marie. Both welcomed girl child on January 15 through surrogacy method.
  Thursday, April 21, 2022, 15:26
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X