»   » ಪ್ರಿಯಾಂಕಾ ಅಭಿನಯದ 3ನೇ ಹಾಲಿವುಡ್ ಸಿನಿಮಾ ಶುರು!

ಪ್ರಿಯಾಂಕಾ ಅಭಿನಯದ 3ನೇ ಹಾಲಿವುಡ್ ಸಿನಿಮಾ ಶುರು!

Posted By:
Subscribe to Filmibeat Kannada

'ಬೇವಾಚ್' ಚಿತ್ರದ ಮೂಲಕ ಹಾಲಿವುಡ್ ಗೆ ಲಗ್ಗೆಯಿಟ್ಟ ಬಾಲಿವುಡ್ ಸುಂದರಿ ಪ್ರಿಯಾಂಕಾ ಚೋಪ್ರಾ, ಈಗ ತನ್ನ ಮೂರನೇ ಹಾಲಿವುಡ್ ಚಿತ್ರವನ್ನ ಶುರು ಮಾಡಿದ್ದಾರೆ. ನ್ಯೂಯಾರ್ಕ ನಗರದಲ್ಲಿ ಹಾಲಿವುಡ್ ನಟ ಆಡಮ್ ಡಿವೈನ್ ಜೊತೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.

ಹೌದು, 'ಬೇವಾಚ್' ಸಿನಿಮಾ ಸೂಪರ್ ಹಿಟ್ ಆದ ನಂತರ ಪ್ರಿಯಾಂಕಾಗೆ ಹಾಲಿವುಡ್ ನಿಂದ ಹೆಚ್ಚಿನ ಅವಕಾಶಗಳು ಸಿಕ್ಕಿದ್ದು, ಈಗ ಸತತ ಎರಡು ಹಾಲಿವುಡ್ ಚಿತ್ರಗಳಲ್ಲಿ ಪಿಗ್ಗಿ ಅಭಿನಯಿಸುತ್ತಿದ್ದಾರೆ. ಸದ್ಯ, ಆಡಮ್ ಡಿವೈನ್ ಜೊತೆ ಕಾಣಿಸಿಕೊಳ್ಳುತ್ತಿರುವ 'Isn't it romantic' ಚಿತ್ರದ ಶೂಟಿಂಗ್ ಶುರುವಾಗಿದೆ.

ಹಾಲಿವುಡ್‌ನಲ್ಲಿ ಮೊದಲ ಸ್ಥಾನಕ್ಕೆ ಪ್ರಿಯಾಂಕ-ದೀಪಿಕಾ ನಡುವೆ ಕಾಂಪಿಟೇಶನ್!

Priyanka Chopra Starts Shooting Her Next Hollywood Film

ನ್ಯೂಯಾರ್ಕ್ ನಗರದ ಪಾರ್ಕ್ ವೊಂದರಲ್ಲಿ ಚಿತ್ರೀಕರಣ ಮಾಡುತ್ತಿರುವ 'Isn't it romantic' ಚಿತ್ರದಲ್ಲಿ ಪ್ರಿಯಾಂಕಾ ಅವರ ಗೆಟಪ್ ಬಹಿರಂಗವಾಗಿದೆ. ದೃಶ್ಯವೊಂದರಲ್ಲಿ ಪ್ರಿಯಾಂಕಾ ಪಾರ್ಕ್ ನಲ್ಲಿ ನಿಂತಿರುತ್ತಾರೆ. ಹಿಂದೆ ಬಂದ ಆಡಮ್ ಡಿವೈನ್, ಪ್ರಿಯಾಂಕಾ ಅವರನ್ನ ಹಿಂದೆಯಿಂದ ಎತ್ತಿಕೊಳ್ಳುತ್ತಾರೆ. ಈ ದೃಶ್ಯದಲ್ಲಿ ಪ್ರಿಯಾಂಕಾ ಪಿಂಕ್ ಬಣ್ಣದ ಕಾಸ್ಟ್ಯೂಮ್ ನಲ್ಲಿ ಮಿಂಚಿದ್ದಾರೆ. 'Isn't it romantic' ಚಿತ್ರದ ಶೂಟಿಂಗ್ ಚಿತ್ರಗಳು ಲೀಕ್ ಆಗಿದ್ದು, ಎಲ್ಲೆಡೆ ವೈರಲ್ ಆಗಿದೆ.

ಕಾಲು ಆಯ್ತು.. ಈಗ ಎಲ್ಲರ ಕಣ್ಣು ಪ್ರಿಯಾಂಕಾ ಚೋಪ್ರಾ ತುಟಿ ಮೇಲೆ ಬಿತ್ತು..

Priyanka Chopra Starts Shooting Her Next Hollywood Film

ಅಂದ್ಹಾಗೆ, 'Isn't it romantic ಚಿತ್ರದಲ್ಲಿ ಆಡಮ್ ಮತ್ತು ಪ್ರಿಯಾಂಕಾ ಜೊತೆಯಲ್ಲಿ ರೆಬೆಲ್ ವಿಲ್ಸನ್, ಲಿಯಾಮ್ ಹೆಮ್ಸ್ವರ್ತ್, ಬೆಟ್ಟಿ ಗಿಲ್ಪಿನ್ ಮತ್ತು ಯೂಜೀನಿಯಾ ಕುಜ್ಮಿನಾ ಸೇರಿದಂತೆ ಹಲವರು ಅಭಿನಯಿಸುತ್ತಿದ್ದಾರೆ. ಈ ಚಿತ್ರವನ್ನ ಟಾಡ್ ಸ್ಟ್ರಾಸ್ schulson (todd strauss-schulson) ನಿರ್ದೇಶನ ಮಾಡುತ್ತಿದ್ದಾರೆ.

ಕೇಂದ್ರ ಸರ್ಕಾರದ 'ಕೌಶಲ ಭಾರತ'ಕ್ಕೆ ಪ್ರಿಯಾಂಕ ರಾಯಭಾರಿ

'Isn't it romantic' ಚಿತ್ರದ ಜೊತೆ 'ಎ ಕಿಡ್ ಲೈಕ್ ಜ್ಯಾಕ್' (A Kid Like Jake) ಎಂಬ ಮತ್ತೊಂದು ಚಿತ್ರದಲ್ಲೂ ಪ್ರಿಯಾಂಕಾ ಚೋಪ್ರಾ ಅಭಿನಯಿಸುತ್ತಿದ್ದಾರೆ. ಈ ಹಿಂದೆ ದಿ ರಾಕ್ ಖ್ಯಾತಿಯ ಡ್ವೇನ್ ಜಾನ್ಸನ್ ಜೊತೆ 'ಬೇವಾಚ್' ಚಿತ್ರದಲ್ಲಿ ಪ್ರಿಯಾಂಕಾ ಅಭಿನಯಿಸಿದ್ದಾರೆ.

English summary
Bollywood Actress Priyanka Chopra and Adam Devine were shooting their upcoming film Isn't It Romantic? in New York City on Tuesday - and her character got in a bit of a bind.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada