»   » ಬಿಡುಗಡೆಯಲ್ಲಿ ಸಾರ್ವಕಾಲಿಕ ದಾಖಲೆ ಬರೆದ ಹಾಲಿವುಡ್ ಚಿತ್ರ

ಬಿಡುಗಡೆಯಲ್ಲಿ ಸಾರ್ವಕಾಲಿಕ ದಾಖಲೆ ಬರೆದ ಹಾಲಿವುಡ್ ಚಿತ್ರ

Posted By:
Subscribe to Filmibeat Kannada
Spider Man on 1000 plus screens in India
ಯಾವುದೇ ಹಾಲಿವುಡ್ ಚಿತ್ರ ಇದುವರೆಗೂ ಭಾರತದಲ್ಲಿ ಈ ಪ್ರಮಾಣದಲ್ಲಿ ಪ್ರದರ್ಶನ ಕಂಡ ಇತಿಹಾಸವಿಲ್ಲ. ದಿ ಅಮೇಝಿಂಗ್ ಸ್ಪೈಡರ್ ಮ್ಯಾನ್ ಚಿತ್ರ ಅಂಥದೊಂದು ದಾಖಲೆ ನಿರ್ಮಿಸಲು ಸಜ್ಜಾಗಿದೆ. ಇದೇ ಶುಕ್ರವಾರ (ಜೂ 29 ) ಭಾರತದಾದ್ಯಂತ ಜೇಡರಮನುಷ್ಯನ ಸಾಹಸಗಾಥೆ ಅನಾವರಣಗೊಳ್ಳಲಿದೆ.

ಹಾಲಿವುಡ್ ನಲ್ಲಿ ಸೂಪರ್ ಹೀರೋಗಳ ಕಥೆಗೆನೂ ಬರವಿಲ್ಲ. ಅದರಲ್ಲೂ ಸ್ಪೈಡರ್ ಮ್ಯಾನ್ ಈ ಮೊದಲೇ ಬೇರೆ ಬೇರೆ ಕಂತುಗಳಲ್ಲಿ ಜನರನ್ನು ರಂಜಿಸಿದ್ದಾಗಿದೆ. ಸ್ಪೈಡರ್ ಮ್ಯಾನ್ ಸರಣಿ ಚಿತ್ರಗಳಿಗೆ 2012ರ ಕೊಡುಗೆ ಈ ಅಮೇಝಿಂಗ್ ಸ್ಪೈಡರ್ ಮ್ಯಾನ್. ಸ್ಟಾನ್ಲಿ ಮತ್ತು ಸ್ಟೀವ್ ಬರೆದಿರುವ ಸ್ಪೈಡರ್ ಮ್ಯಾನ್ ಕಾಮಿಕ್ಸ್ ಆಧರಿಸಿ ಸಿದ್ದಗೊಂಡಿರುವ ಚಿತ್ರ. ಚಿತ್ರಕ್ಕೆ ಮಾರ್ಕ್ ವೆಬ್ ನಿರ್ದೇಶಕ.

ಎ ಗಾರ್ಫೀಲ್ಡ್ ಮತ್ತು ಎಮ್ಮಾ ಸ್ಟೋನ್ ಪ್ರಮುಖ ಪಾತ್ರದಾರಿಗಲಾಗಿರುವ ಈ ಚಿತ್ರಕ್ಕೆ ಮಕ್ಕಳಿಂದ ಹಿಡಿದು ಮುದುಕರಾದಿಯಾಗಿ ಎಲ್ಲರೂ ಎದಿರು ನೋಡುತ್ತಿದ್ದಾರೆ. ಸ್ಪೈಡರ್ ಮ್ಯಾನ್ ಸರಣಿ ಚಿತ್ರಗಳು ಜನರನ್ನು ಮಂತ್ರಮುಗ್ದ ಮಾಡಿರುವ ಪರಿ ಅಂಥದ್ದು.

ಭಾರತದಲ್ಲಿ ಸೋನಿ ಪಿಚ್ಚರ್ಸ್ ಸಂಸ್ಥೆ ಈ ಚಿತ್ರವನ್ನು ಸುಮಾರು ಒಂದು ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಪ್ರದರ್ಶನಕ್ಕೆ ಸಿದ್ದ ಮಾಡಿದೆ. ಈ ಹಿಂದಿನ ದಾಖಲೆಗಳಾದ ಅವತಾರ್ ಮತ್ತು ಮಿಷನ್ ಇಂಪಾಸಿಬಲ್ ಸಿನಿಮಾಗಳನ್ನು ಸ್ಪೈಡರ್ ಮ್ಯಾನ್ ಹಿಂದಿಕ್ಕಿದ್ದಾನೆ. 136 ನಿಮಿಷಗಳ ಕಾಲಾವಧಿಯ ಈ ತ್ರೀಡಿ ಸಿನಿಮಾ ಇಂಗ್ಲೀಷ್ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು ಭಾಷೆಗಳಿಗೆ ಡಬ್ ಆಗಿ ತೆರೆ ಮೇಲೆ ಮೂಡಿ ಬರುತ್ತಿದೆ. ಅವತಾರ್ 762 , ಮಿಷನ್ ಇಂಪಾಸಿಬಲ್ 700, ಹ್ಯಾರಿ ಪೊಟಾರ್ 600ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿತ್ತು.

ಪೀಟರ್ ಪಾರ್ಕರ್ ಎಂಬ ಬಾಲಕನೊಬ್ಬ ತನ್ನ ತಂದೆಯ ನಿಗೂಢತೆ ಮತ್ತೂ ತನ್ನ ಭೂತಕಾಲದ ಸತ್ಯಗಳನ್ನು ತಿಳಿದುಕೊಳ್ಳಲು ನಡೆಸುವ ಸಾಹಸಗಾಥೆಯೇ ಅಮೇಝಿಂಗ್ ಸ್ಪೈಡರ್ ಮ್ಯಾನ್. ಈ ಪ್ರಕ್ರಿಯೆಯ ನಡುವೆ ಆಟ ತನ್ನ ಸಹಪಾಠಿ ಗೈನ್ ಳ ಮನ ಕದಿಯುವುದಕ್ಕಾಗಿ ನಡೆಸುವ ಪ್ರವರಗಳೂ ಬಂದು ಹೋಗುತ್ತದೆ.

ತಾಂತ್ರಿಕ ವೈಭವದ ಕಾರಣದಿಂದಲೇ ಹಾಲಿವುಡ್ ನ ಬಹುತೇಕ ಚಿತ್ರಗಳು ಜಗತ್ತಿನಾದ್ಯಂತ ಹುಚ್ಚು ಕೆರಳಿಸಿದ್ದಿದೆ. ಸ್ಪೈಡರ್ ಮ್ಯಾನ್ ಕೂಡಾ ಅದಕ್ಕೆ ಹೊರತಾದುದ್ದಲ್ಲ. ಇದರಲ್ಲೂ ಅಂಥ ಕಣ್ಮನ ಸೆಳೆಯುವಂಥ, ಮೈಜುಮ್ಮೆನಿಸುವಂತ ದೃಶ್ಯಾವಳಿಗಳ ಗೊಂಚಲೇ ಇದೆ ಎಂಬ ವದಂತಿಗಳಿವೆ.

ಹೆಚ್ಚು ದಿನ ಕಾಯಬೇಕಾಗಿಲ್ಲ. ನಾಳೆಯೇ ಚಿತ್ರ ಬಿಡುಗಡೆ. ಆಸಕ್ತರು ಹೋಗಿ ಖುದ್ದು ತಾವೇ ಆ ಅನುಭವ ಮನಗಾಣಬಹುದು.

English summary
Sony pictures India will splashing The Amazing Spider-Man across 1000 plus screens, making it the widest release for any Hollywood movie. The 136 minute movie will be released in English, Hindi, Tamil and Telugu in 2D and 3D format.
Please Wait while comments are loading...