Don't Miss!
- Lifestyle
Today Rashi Bhavishya: ಶನಿವಾರದ ದಿನ ಭವಿಷ್ಯ: ಈ ರಾಶಿಯ ವ್ಯಾಪಾರಿಗಳಿಗೆ ಅದೃಷ್ಟದ ದಿನ
- News
ಸರಕಾರಿ ಡಿಜಿಟಲ್ ಕರೆನ್ಸಿ: ಅಳೆದು ತೂಗುತ್ತಿರುವ ಆರ್ಬಿಐ
- Sports
"ಇಂಥಾ ಆಟಗಾರರು, ಇಂಥಾ ಅಭಿಮಾನಿಗಳಿಂದಾಗಿ ಹೆಮ್ಮೆಯಾಗುತ್ತಿದೆ": ಸೋತ ಬಳಿಕ ಆರ್ಸಿಬಿ ನಾಯಕನ ಭಾವುಕ ಮಾತು!
- Finance
ಕಾರು, ಬೈಕು ಖರೀದಿಗೆ ಮುನ್ನ ಗಮನಿಸಿ, ಜೂನ್ 1ರಿಂದ ವಿಮೆ ಮೊತ್ತ ಏರಿಕೆ
- Automobiles
ಹೊಸ ಟ್ರಯಂಫ್ ಟೈಗರ್ 1200 ಅಡ್ವೆಂಚರ್ ಬೈಕ್ ವಿಶೇಷತೆಗಳು
- Education
KCET 2022 Syllabus : 2022ರ ಸಿಇಟಿ ಪರೀಕ್ಷೆಯ ಪಠ್ಯಕ್ರಮ ರಿಲೀಸ್
- Technology
ಸ್ಯಾಮ್ಸಂಗ್ನಿಂದ ಮತ್ತೆ ನೂತನ ಸ್ಮಾರ್ಟ್ಫೋನ್ ಅನಾವರಣ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾರತದಲ್ಲಿ ಮುಸ್ಲೀಮರ ಮೇಲಿನ ದೌರ್ಜನ್ಯವನ್ನು ಸಂಭ್ರಮಿಸಲಾಗುತ್ತಿದೆ: ಸೂಪರ್ ಮಾಡೆಲ್ ಪದ್ಮಾ ಲಕ್ಷ್ಮಿ
ಭಾರತ ಮೂಲದ ಅಮೆರಿಕ ಸೂಪರ್ ಮಾಡೆಲ್ ಹಾಗೂ ಲೇಖಕಿ ಪದ್ಮಾ ಲಕ್ಷ್ಮಿ ಭಾರತದಲ್ಲಿ ಮುಸ್ಲೀಮರ ಮೇಲೆ ದೌರ್ಜನ್ಯವಾಗುತ್ತಿದೆ ಎಂದಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಪದ್ಮಾ ಲಕ್ಷ್ಮಿ, ''ಹಿಂದು ಧರ್ಮಕ್ಕೆ ಭಾರತದಲ್ಲಾಗಲಿ, ವಿಶ್ವದ ಯಾವುದೇ ಮೂಲೆಯಲ್ಲಾಗಲಿ ಆತಂಕ ಇಲ್ಲ. ಯಾವುದೇ ಧರ್ಮದ, ನಂಬಿಕೆಯ ಜನರಾಗಲಿ ಶಾಂತಿಯುತವಾಗಿ ಭಾರತದ ಪುರಾತನ, ಪುಣ್ಯ ನೆಲದ ಮೇಲೆ ಬದುಕುವಂತಾಗಬೇಕು'' ಎಂದಿದ್ದಾರೆ.
ಆಭರಣ
ಜಾಹೀರಾತಿನಲ್ಲಿ
ಕರೀನಾ
ಕಪೂರ್:
ಬಿಂದಿ
ಧರಿಸಿಲ್ಲವೆಂದು
ಟ್ರೋಲ್
ದೇಶದಲ್ಲಿ ಮುಸ್ಲಿಂ ವಿರೋಧಿ ಮನೊಭಾವ ಹೆಚ್ಚು ಪಸರಿಸಿದೆ. ಹಿಂದುಗಳು ಈ ಭೀತಿಗೊಳಿಸುವ, ಭಯ ಹುಟ್ಟಿಹಾಕುವ ಪ್ರೊಪಾಗಾಂಡಾಕ್ಕೆ ಬಲಿ ಆಗಬಾರದು ಎಂದು ಸೂಪರ್ ಮಾಡೆಲ್ ಪದ್ಮಾ ಲಕ್ಷ್ಮಿ ಹೇಳಿದ್ದಾರೆ.
''ಮುಸ್ಲಿಂರ ವಿರುದ್ಧ ದೌರ್ಜನ್ಯ, ಹಿಂಸಾಚಾರವನ್ನು ಸಂಭ್ರಮಿಸುತ್ತಿರುವುದು ನೋಡಿದರೆ ಬಹಳ ಬೇಸರವಾಗುತ್ತಿದೆ. ಮುಸ್ಲಿಂ ವಿರೋಧಿ ಮಾತುಗಳು, ಹೇಳಿಕೆಗಳು ಹಿಂಸೆಗೆ ಇನ್ನಷ್ಟು ಪ್ರಚೋದನೆ ನೀಡುತ್ತಿವೆ. ಈ ರೀತಿಯ ಮುಸ್ಲಿಂ ದ್ವೇಷಿ ಪ್ರಚಾರ ಅಪಾಯಕಾರಿ ಮತ್ತು ಹಾನಿಕಾರಕ. ನಿಮಗಿಂತಲೂ ತುಚ್ಛ ಎಂದು ನೀವು ಯಾರನ್ನಾದರೂ ನಿರ್ಧರಿಸಿದರೆ ಅವರನ್ನು ತುಳಿಯುವ ಕ್ರಿಯೆಯಲ್ಲಿ ಸುಲಭವಾಗಿ ಭಾಗವಹಿಸುತ್ತೀರ'' ಎಂದು ಪದ್ಮಾ ಲಕ್ಷ್ಮಿ ಹೇಳಿದ್ದಾರೆ.
ತಮ್ಮ ಟ್ವೀಟ್‌ಗಳಿಗೆ ಸಾಕ್ಷಿಯಾಗಿ ಭಾರತದಲ್ಲಿ ಮುಸ್ಲೀಮರ ಪರಿಸ್ಥಿತಿಯನ್ನು ಬಿಂಬಿಸುವ ಕೆಲವು ಲೇಖನಗಳ ಲಿಂಕ್‌ಗಳನ್ನು ಪದ್ಮಾ ಲಕ್ಷ್ಮಿ ಹಂಚಿಕೊಂಡಿದ್ದಾರೆ. 'ದಿ ಗಾರ್ಡಿಯನ್', ಲಾಸ್ ಏಂಜಲ್ಸ್ ಟೈಮ್ಸ್' ಅವುಗಳು ಡೆಲ್ಲಿಯಲ್ಲಿ ನಡೆದ ಜಾಂಗಿರಿಪುರಿ ಗಲಭೆ, ಹನುಮಂತ ಜಯಂತಿ ಸಂದರ್ಭದಲ್ಲಿ ನಡೆದ ಗಲಭೆ, ಕೊರೆಂಗಾವ್ ಹಿಂಸಾಚಾರ ಮುಂತಾದವುಗಳ ಬಗ್ಗೆ ವಿವರ ವಿಶ್ಲೇಷಣೆ ಮಾಡಿರುವ ಆರ್ಟಿಕಲ್‌ಗಳನ್ನು ಪದ್ಮಾ ಲಕ್ಷ್ಮಿ ಹಂಚಿಕೊಂಡಿದ್ದಾರೆ. ಜೊತೆಗೆ 'ನಿಜವಾದ ಭಕ್ತಿ ಇರುವ ಜಾಗದಲ್ಲಿ ದ್ವೇಷಕ್ಕೆ ಸ್ಥಳವೇ ಇರುವುದಿಲ್ಲ'' ಎಂದಿದ್ದಾರೆ.
Lucky
Ali
on
Halal
Row:
ಹಲಾಲ್
ಮಾಂಸ
ಮುಸ್ಲಿಮೇತರರಿಗೆ
ಅಲ್ಲ:
ಗಾಯಕ
ಲಕ್ಕಿ
ಅಲಿ
ಅಂತರಾಷ್ಟ್ರೀಯ ಫುಟ್‌ಬಾಲ್ ಆಟಗಾರ ಮೆಸೀತ್ ಒಜಿಲ್ ಸಹ ಭಾರತೀಯ ಮುಸ್ಲೀಮರ ಪರವಾಗಿ ಟ್ವೀಟ್ ಮಾಡಿದ್ದು, ''ಭಾರತದಲ್ಲಿ ದೌರ್ಜನ್ಯ ಅನುಭವಿಸುತ್ತಿರುವ ನಮ್ಮ ಮುಸಲ್ಮಾನ ಸಹೋದರ-ಸಹೋದರಿಯರ ಯೋಗಕ್ಷೇಮಕ್ಕೆ ಪ್ರಾರ್ಥಿಸುತ್ತಾ ರಂಜಾನ್‌ನ ಲಲಿತ್ ಅಲ್ ಖದಾರ್ ಪುಣ್ಯ ರಾತ್ರಿಯಲ್ಲಿ ಫುಟ್‌ಬಾಲ್ ಆಡುತ್ತಿದ್ದೇನೆ. ಈ ನಾಚಿಕೆಗೇಡಿನ ಪರಿಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸೋಣ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಕರೆಯಲ್ಪಡುವ ಆ ದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ'' ಎಂದಿದ್ದಾರೆ.
ಹಿಂದುಪರ ಸಂಘಟನೆಗಳು ಪದ್ಮಾ ಲಕ್ಷ್ಮಿ ಹಾಗೂ ಮೆಸೀತ್ ಒಜಿಲ್ ಅವರ ಟ್ವೀಟ್‌ಗಳನ್ನು ಅಂತರಾಷ್ಟ್ರೀಯ ಟೂಲ್‌ಕಿಟ್‌ನ ಭಾಗ ಎಂದು ಖಂಡಿಸಿದ್ದಾರೆ.