»   » ಫಾಸ್ಟ್ ಅಂಡ್ ಫ್ಯೂರಿಯಸ್ ನಟ ದುರ್ಮರಣ

ಫಾಸ್ಟ್ ಅಂಡ್ ಫ್ಯೂರಿಯಸ್ ನಟ ದುರ್ಮರಣ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಹಾಲಿವುಡ್ ನ ಬಹುನಪ್ರಿಯ ಚಿತ್ರ 'ಫಾಸ್ಟ್ ಅಂಡ್ ಫ್ಯೂರಿಯಸ್' ಸರಣಿಯ ನಟ ಪಾಲ್ ವಾಕರ್ ಶನಿವಾರ ಲಾಸ್ ಏಂಜಲೀಸ್ ನಲ್ಲಿ ಅಪಘಾತಕ್ಕೀಡಾಗಿ ದುರಂತ ಸಾವು ಕಂಡಿದ್ದಾರೆ.

ಹೆಚ್ಚು ವೇಗವಾಗಿ ಕಾರು ಓಡಿಸುವ, ವೈವಿಧ್ಯಮಯ ಕಾರುಗಳನ್ನು ಬಳಸಿಕೊಂಡು ಮೈನವಿರೇಳಿಸುವ ಸಾಹಸ ಪ್ರದರ್ಶನ ನೀಡುವ ಸಾಹಸಭರಿತ ಸರಣಿಯಲ್ಲಿ ಕಾಣಿಸಿಕೊಂಡಿದ್ದ ಪಾಲ್ ಅವರು ಕಾರು ಅಪಘಾತದಲ್ಲೆ ಸಾವನ್ನಪ್ಪಿದ್ದು ದುರಂತ. ಪಾಲ್ ಅವರು 15 ವರ್ಷದ ಮಗಳು ಹಾಗೂ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ.

40 ವರ್ಷದ ಪಾಲ್ ಅವರು ರೀಚ್ ಔಟ್ ವರ್ಲ್ಡ್ ವೈಲ್ಡ್ ಎಂಬ ದಾನದತ್ತಿ ಸಂಸ್ಥೆ ಸ್ಥಾಪಿಸಿದ್ದರು. ಇದರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಗೆಳೆಯರೊಡನೆ ತೆರಳುವಾಗ ಈ ಅಪಘಾತ ಸಂಭವಿಸಿದೆ.

ಕಾರು ಅಪಘಾತಕ್ಕೀಡಾದ ತಕ್ಷಣ ಬೆಂಕಿ ಹತ್ತಿಕೊಂಡ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸುಟ್ಟು ಕರಕಲಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಲಾಸ್ ಏಂಜಲೀಸ್ ಕೌಂಟಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಕೆಂಪು ಬಣ್ಣದ ಪೊರ್ಶೆ(porsche) ಕಾರು ಸಿಗ್ನಲ್ ಕಂಬಕ್ಕೆ ಗುದ್ದಿದ ನಂತರ ಹತ್ತಿರವಿದ್ದ ಮರಕ್ಕೆ ಡಿಕ್ಕಿ ಹೊಡೆದಿದೆ. ನಂತರ ಬೆಂಕಿ ಹತ್ತಿಕೊಂಡಿದೆ ಎಂದು ಸಾಂಟಾ ಕ್ಲಾರಿಟಾ ಸಿಗ್ನಲ್ ವರದಿ ಹೇಳಿದೆ.

ಫಾಸ್ಟ್ ಅಂಡ್ ಫ್ಯೂರಿಯಸ್ ಸರಣಿಯ ಏಳನೇ ಚಿತ್ರದಲ್ಲಿ ಪಾಲ್ ನಟಿಸುತ್ತಿದ್ದರು. Hours ಎಂಬ ಮತ್ತೊಂದು ಚಿತ್ರ ಈ ತಿಂಗಳ ಅಂತ್ಯಕ್ಕೆ ತೆರೆ ಕಾಣಲಿದೆ. ಪಾಲ್ ಸಾವಿಗೆ ಅಭಿಮಾನಿಗಳು ಫೇಸ್ ಬುಕ್ ನಲ್ಲಿ ಕಂಬನಿ ಮಿಡಿದಿದ್ದಾರೆ.ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ #RIPPaulwalker ಟ್ವೀಟ್ ಗಳ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ಪಾಲ್ ಗೆ ಸಿಕ್ಕಿರುವ ಶುಭ ವಿದಾಯ ಸಂದೇಶ, ಕಾರು ಅಪಘಾತ ಚಿತ್ರ ಮುಂದಿದೆ

ವಾರ್ಸಿಟಿ ಬ್ಲೂಸ್ ನಟ

ಅಮೆರಿಕದ ನಟ ಪಾಲ್ ವಾಕರ್ ಜನಪ್ರಿಯತೆ ಗಳಿಸಿದ್ದು 1999 ರ ವಾರ್ಸಿಟಿ ಬ್ಲೂಸ್ ಚಿತ್ರದ ಮೂಲಕವಾದರೂ ಜಗತ್ತಿಗೆ ಪಾಲ್ ಸಾಹಸ ದೃಶ್ಯಗಳು ಇಂದಿಗೂ ನೆನಪಿರುವುದು ಬ್ರಿಯಾನ್ ಓ ಕಾನ್ನರ್ ಆಗಿ 'ಫಾಸ್ಟ್ ಅಂಡ್ ಫ್ಯೂರಿಯಸ್' ಸರಣಿ ಚಿತ್ರಗಳ ಮೂಲಕ ಎಂದರೆ ತಪ್ಪಾಗಲಾರದು

ಎನ್ ಜಿಸಿಗಾಗಿ ಪಾಲ್

ಫಾಸ್ಟ್ ಅಂಡ್ ಫ್ಯೂರಿಯಸ್ ಸರಣಿ ಅಲ್ಲದೆ ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್ ನ ಎಕ್ಸೆಡಿಷನ್ ಗ್ರೇಟ್ ವೈಟ್ ಸರಣಿಯಲ್ಲೂ ಪಾಲ್ ಕಾಣಿಸಿಕೊಂಡಿದ್ದರು. ಎಂಟ್ ಬಿಲೋ, ಇನ್ ಟು ದ ಬ್ಲೂ, ಶೀಸ್ ಆಲ್ ದಟ್, ಟೇಕರ್ ಮುಂತಾದ ಚಿತ್ರಗಳು ಹೆಸರು ತಂದು ಕೊಂಡಿದ್ದವು

ಅಭಿಮಾನಿಗಳ ಟ್ವೀಟ್

Live fast Die young ಎಂದು ಅಭಿಮಾನಿಯೊಬ್ಬರು ಕಳಿಸಿದ ಟ್ವೀಟ್

ಮಾನವೀಯ ಗುಣ ಹೊಂದಿದ್ದ

ಫಿಲಿಪೈನ್ಸ್ ಚಂಡ ಮಾರುತ ಸಂತ್ರಸ್ತರಿಗಾಗಿ ದೇಣಿಗೆ ಸಂಗ್ರಹ ಕಾರ್ಯದಲ್ಲಿ ತೊಡಗಿದ್ದ ಪಾಲ್ ವಾಕರ್ ಒಬ್ಬ ಸಮಾಜಮುಖಿ ನಟನಾಗಿದ್ದ

ವಿನ್ ಡೀಸೆಲ್ ಕಂಬನಿ

ಪಾಲ್ ವಾಕರ್ ಕಳೆದುಕೊಂಡ ವಿನ್ ಡೀಸೆಲ್ ಕಂಬನಿಧಾರೆ

ಪಾಲ್ ವಾಕರ್ ಟ್ವೀಟ್

ಪಾಲ್ ವಾಕರ್ ಅಧಿಕೃತ ಟ್ವೀಟ್ ಐಡಿ ಮೂಲಕ ಸುದ್ದಿ ಪ್ರಸಾರ ಜತೆಗೆ ಫೇಸ್ ಬುಕ್ ಖಾತೆಯಲ್ಲಿ ವಿವರಗಳು ಪ್ರಕಟವಾಗಿದೆ. ಇದು ನಿಜವಾದ ಸುದ್ದಿ ಅಲ್ಲ ಎಂದು ಅಭಿಮಾನಿಗಳು ಈಗಲೂ ನಂಬಿದ್ದಾರೆ.

rn
Post by Showbiz.

ವಿನ್ ಡೀಸೆಲ್ ಕಂಬನಿ

ಅಮೆರಿಕದ ನಟ ಪಾಲ್ ವಾಕರ್

English summary
Los Angeles: Paul Walker, the star of the "Fast & Furious" movie series, died Saturday in a car crash that killed one other person north of Los Angeles, his publicist said. He was 40.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada