For Quick Alerts
  ALLOW NOTIFICATIONS  
  For Daily Alerts

  ಆಶಾ ಭೋಂಸ್ಲೆ ರೆಸ್ಟೊರೆಂಟ್‌ಗೆ ಭೇಟಿ ನೀಡಿ ಭಾರತೀಯ ಖಾದ್ಯ ಸವಿದ ಟಾಮ್ ಕ್ರೂಸ್

  |

  ವಿಶ್ವದಲ್ಲೇ ಅತಿ ಹೆಚ್ಚು ಚಿರಪರಿಚಿತ ನಟರಲ್ಲಿ ಒಬ್ಬರು ಟಾಮ್ ಕ್ರೂಸ್. ಆಕ್ಷನ್ ಸಿನಿಮಾಗಳ ದೊರೆ ಎಂದೇ ಹೇಳಬಹುದಾದ ಟಾಮ್ ಕ್ರೂಸ್ ಸಿನಿಮಾಗಳಿಗಾಗಿ ವಿಶ್ವದಾದ್ಯಂತ ಸಿನಿ ಪ್ರೇಮಿಗಳು ಕಾತರರಾಗಿ ಕಾಯುತ್ತಾರೆ.

  ಇಂಥಹಾ ಟಾಮ್ ಕ್ರೂಸ್ ಬಾಲಿವುಡ್‌ನ ಜನಪ್ರಿಯ ಗಾಯಕಿ ಆಶಾ ಭೋಂಸ್ಲೆ ಒಡೆತನದ ರೆಸ್ಟೊರೆಂಟ್‌ ಭೇಟಿ ನೀಡಿ ಭಾರತೀಯ ಖಾದ್ಯವನ್ನು ಸವಿದಿದ್ದಾರೆ. ಅಲ್ಲದೆ ಭಾರತೀಯ ಖಾದ್ಯದ ರುಚಿಯನ್ನು ಮನಸಾರೆ ಹೊಗಳಿದ್ದಾರೆ ಸಹ.

  'ಮಿಷನ್ ಇಂಪಾಸಿಬಲ್ 7' ಸಿನಿಮಾದ ಚಿತ್ರೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಟಾಮ್ ಕ್ರೂಸ್, ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿರುವ ಆಶಾ ಭೋಂಸ್ಲೆ ಒಡೆತನದ 'ಆಶಾಸ್' ರೆಸ್ಟೊರೆಂಟ್‌ಗೆ ಆಗಸ್ಟ್ 21ರಂದು ಭೇಟಿ ನೀಡಿದ್ದರು. ಈ ವಿಷಯವನ್ನು ಆಶಾ ಭೋಂಸ್ಲೆ ಹೆಮ್ಮೆಯಿಂದ ಟ್ವೀಟ್ ಮಾಡಿದ್ದಾರೆ.

  ''ಟಾಮ್ ಕ್ರೂಸ್ ನಮ್ಮ ರೆಸ್ಟೊರೆಂಟ್‌ಗೆ ಬಂದು ಭೋಜನ ಸವಿದಿದ್ದಾರೆಂದು ತಿಳಿದು ಬಹಳ ಸಂತಸವಾಯ್ತು. ಅವರು ಮತ್ತೊಮ್ಮೆ ನಮ್ಮ ರೆಸ್ಟೊರೆಂಟ್‌ಗೆ ಭೇಟಿ ನೀಡುತ್ತಾರೆ ಎಂಬ ನಿರೀಕ್ಷೆ ಇದೆ'' ಎಂದು ಟ್ವೀಟ್‌ ಮಾಡಿದ್ದಾರೆ ಆಶಾ ಭೋಂಸ್ಲೆ. ನಟಿಯ ಟ್ವೀಟ್‌ಗೆ ಹಲವರು ಪ್ರತಿಕ್ರಿಯಿಸಿದ್ದಾರೆ. 'ಆಶಾಸ್' ಹೋಟೆಲ್‌ ಬಹಳ ಚೆನ್ನಾಗಿದೆಯೆಂದು ಕೆಲವರು ತಮ್ಮ ಸ್ವ-ಅನುಭವ ಹಂಚಿಕೊಂಡಿದ್ದಾರೆ.

  ಟಾಮ್ ಕ್ರೂಸ್ ಮೆಚ್ಚಿದ ತಿನಿಸು ಇದು

  ಟಾಮ್ ಕ್ರೂಸ್ ಮೆಚ್ಚಿದ ತಿನಿಸು ಇದು

  ಆಗಸ್ಟ್ 21ರ ಸಂಜೆ ಕೆಲವರು ಗೆಳೆಯರೊಂದಿಗೆ ರೆಸ್ಟೊರೆಂಟ್‌ಗೆ ಬಂದಿದ್ದ ಟಾಮ್ ಕ್ರೂಸ್ ಭಾರತೀಯ ಖಾದ್ಯಗಳನ್ನು ಆರ್ಡರ್ ಮಾಡಿ ಗೆಳೆಯರೊಟ್ಟಿಗೆ ಹಂಚಿಕೊಂಡು ತಿಂದಿದ್ದಾರೆ. ವಿಶೇಷವೆಂದರೆ ಚಿಕ್ಕನ್ ಟಿಕ್ಕಾ ಮಸಾಲಾ ರುಚಿಗೆ ಮನಸೋತ ಟಾಮ್ ಕ್ರೂಸ್ ಅದನ್ನು ಎರಡು ಬಾರಿ ಆರ್ಡರ್ ಮಾಡಿದ್ದಾರೆ ರೆಸ್ಟೊರೆಂಟ್‌ನ ಮ್ಯಾನೇಜರ್ ನೋಮನ್ ಫಾರುಕಿ ಹೇಳಿದ್ದಾರೆ. ಟಾಮ್ ಕ್ರೂಸ್ ಮತ್ತು ಗೆಳೆಯರು ಬಹಳ ಸರಳವಾದ ಆಹಾರಗಳನ್ನಷ್ಟೆ ಆರ್ಡರ್ ಮಾಡಿದರು, ಆದರೆ ಬಹುತೇಕ ಎಲ್ಲ ಭಾರತೀಯ ಆಹಾರವನ್ನೇ ಆರ್ಡರ್ ಮಾಡಿ ಸವಿದರು ಎಂದಿದ್ದಾರೆ ನೋಮನ್.

  ವಿಶೇಷ ಆತಿಥ್ಯ ಬೇಡವೆಂದ ಸೂಪರ್ ಸ್ಟಾರ್ ನಟ

  ವಿಶೇಷ ಆತಿಥ್ಯ ಬೇಡವೆಂದ ಸೂಪರ್ ಸ್ಟಾರ್ ನಟ

  ''ಟಾಮ್ ಕ್ರೂಸ್ ನಮ್ಮ ಹೋಟೆಲ್‌ಗೆ ಬರುತ್ತಿದ್ದಾರೆಂದು ಕೇವಲ ಒಂದು ಗಂಟೆ ಮೊದಲು ನಮಗೆ ಹೇಳಲಾಯಿತು. ಜೊತೆಗೆ ವಿಶೇಷ ಆತಿಥ್ಯ ಬೇಡ ಎಲ್ಲರಂತೆ ನಮಗೂ ಸರ್ವ್ ಮಾಡಿ ಎಂಬ ವಿಶೇಷ ಬೇಡಿಕೆಯನ್ನು ಟಾಮ್ ಕ್ರೂಸ್ ಇಟ್ಟಿದ್ದರು. ರೆಸ್ಟೊರೆಂಟ್‌ನಲ್ಲಿ ಸಾಮಾನ್ಯರು ಕುಳಿತುಕೊಳ್ಳುವ ಜಾಗದಲ್ಲಿಯೇ ಟಾಮ್ ಕ್ರೂಸ್ ಮತ್ತು ಗೆಳೆಯರು ಕುಳಿತುಕೊಂಡರು. ಸೂಪರ್ ಸ್ಟಾರ್ ನಟನನ್ನು ಹಲವರು ಗುರುತಿಸಿದರಾದರೂ ಯಾರೂ ಅವರಿಗೆ ಸಮಸ್ಯೆ ಕೊಡಲಿಲ್ಲ. ಅವರು ಆರಾಮವಾಗಿ ಭೋಜನ ಸವಿಯಬೇಕೆಂಬುದು ನಮ್ಮ ಉದ್ದೇಶವಾಗಿತ್ತು. ಆದರೆ ಟಾಮ್ ಕ್ರೂಸ್ ಊಟ ಮುಗಿಸಿ ಹೊರಡುವಾಗ ರೆಸ್ಟಾರೆಂಟ್‌ನ ಹೊರಗೆ ಚಿತ್ರಗಳಿಗೆ ಫೋಸ್ ಕೊಟ್ಟರು. ಒಳಗೆ ಊಟ ಮಾಡುತ್ತಿರುವವರಿಗೆ ಸಮಸ್ಯೆ ಕೊಡಬಾರದೆಂಬುದು ಅವರ ಉದ್ದೇಶವಾಗಿತ್ತು'' ಎಂದಿದ್ದಾರೆ ಮ್ಯಾನೇಜರ್ ನೋಮನ್.

  ಅಂತರಿಕ್ಷದಲ್ಲಿ ಸಿನಿಮಾದ ಚಿತ್ರೀಕರಣ

  ಅಂತರಿಕ್ಷದಲ್ಲಿ ಸಿನಿಮಾದ ಚಿತ್ರೀಕರಣ

  ಟಾಮ್ ಕ್ರೂಸ್‌ ಪ್ರಸ್ತುತ 'ಮಿಷನ್ ಇಂಬಾಸಿಬಲ್ 7' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ವಿಶ್ವದ ಅತಿ ದೊಡ್ಡ ಬಜೆಟ್‌ನ ಸಿನಿಮಾಗಳಲ್ಲಿ ಇದು ಒಂದು. ಅಂತರಿಕ್ಷದಲ್ಲಿ ಈ ಸಿನಿಮಾವನ್ನು ಚಿತ್ರೀಕರಿಸುವ ಯೋಜನೆಯಲ್ಲಿದ್ದಾರೆ ಟಾಮ್ ಕ್ರೂಸ್. ಕೊರೊನಾ ಕಾರಣಕ್ಕೆ ಚಿತ್ರೀಕರಣವು ಕೆಲವು ಭಾರಿ ತಡವಾಗಿದೆ. ಕೊರೊನಾ ಇದ್ದ ಸಮಯದಲ್ಲಿಯೂ ಚಿತ್ರತಂಡಕ್ಕೆ ಬಹಳ ಕಠಿಣ ನಿಯಮಗಳನ್ನು ವಿಧಿಸಿ ಚಿತ್ರೀಕರಣ ಮಾಡಿದ್ದರು ಟಾಮ್ ಕ್ರೂಸ್. 'ಮಿಷನ್ ಇಂಪಾಸಿಬಲ್ 7' ಸಿನಿಮಾದಲ್ಲಿ ಭಾರತ ಮೂಲದ ಇಂದಿರಾ ವರ್ಮಾ ಸಹ ನಟಿಸುತ್ತಿದ್ದಾರೆ. ಸಿನಿಮಾವು ಮುಂದಿನ ವರ್ಷ ಮಾರ್ಚ್ 22ಕ್ಕೆ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ.

  ಭಾರತಕ್ಕೆ ಬಂದಿದ್ದ ಟಾಮ್ ಕ್ರೂಸ್

  ಭಾರತಕ್ಕೆ ಬಂದಿದ್ದ ಟಾಮ್ ಕ್ರೂಸ್

  ಭಾರತದೊಂದಿಗೆ ಆಪ್ತ ಸಂಬಂಧವನ್ನೇ ಹೊಂದಿದ್ದಾರೆ ಟಾಮ್ ಕ್ರೂಸ್. 'ಮಿಷನ್ ಇಂಪಾಸಿಬಲ್ 6' ಸಿನಿಮಾದ ಕೆಲವು ದೃಶ್ಯಗಳನ್ನು ಭಾರತದಲ್ಲಿ ಚಿತ್ರೀಕರಣ ಮಾಡಿದ್ದರು. ಆ ಸಿನಿಮಾದಲ್ಲಿ ಅನಿಲ್ ಕಪೂರ್ ಸಹ ನಟಿಸಿದ್ದರು. ಭಾರತಕ್ಕೆ ಭೇಟಿ ನೀಡಿದ್ದಾಗ ತಾಜ್‌ ಮಹಲ್‌ಗೆ ಭೇಟಿ ನೀಡಿದ್ದ ಟಾಮ್ ಕ್ರೂಸ್ ಸಲ್ಮಾನ್ ಖಾನ್ ಸೇರಿದಂತೆ ಹಲವು ಬಾಲಿವುಡ್‌ ನಟರನ್ನು ಭೇಟಿ ಮಾಡಿದ್ದರು.

  English summary
  Hollywood actor Tom Cruise visited Asha Bhosle's restaurant in Barmingham and tasted Indian dish. He ordered Chicken Tikka masala twice.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X