For Quick Alerts
  ALLOW NOTIFICATIONS  
  For Daily Alerts

  ಬಾಕ್ಸಾಫೀಸ್ ಕೊಳ್ಳೆ ಹೊಡೆದ ಟಾಪ್ 10 ಚಿತ್ರಗಳು

  By Mahesh
  |

  ಭಾರತದಲ್ಲಿ ಅತಿ ಹೆಚ್ಚು ಚಿತ್ರಗಳು ತಯಾರಿಯಾಗುತ್ತೆ ನಿಜ. ಆದರೆ, ಗಳಿಕೆಯಲ್ಲಿ ಹಾಲಿವುಡ್ ಚಿತ್ರಗಳನ್ನು ಇನ್ನೂ ಹಿಂದಿಕ್ಕಲು ಆಗಿಲ್ಲ. ತಂತ್ರಜ್ಞಾನ, ವಿನೂತನ ಪ್ರಯೋಗದಲ್ಲಿ ಇಂಗ್ಲೀಷ್ ಚಿತ್ರಗಳು ಬೇರೆಡೆಗಿಂತ ಭಾರತದಲ್ಲೇ ಹೆಚ್ಚಿನ ಒಲವು ಇದೆ ಎನ್ನಬಹುದು.

  ಸಸ್ಪೆನ್, ಥ್ರಿಲ್ಲರ್, ಸಾಹಸ, ಸೂಪರ್ ಹೀರೋ, ಕಾಮಿಡಿ, ಕಾರ್ಟೂನ್ ಕಡೆಗೆ ಮಕ್ಕಳ ಚಿತ್ರಗಳು ಕೂಡಾ ಮುಖ್ಯವಾಹಿನಿಯಲ್ಲಿ ದುಡ್ಡು ಬಾಚಿರುವ ಉದಾಹರಣೆಗಲಿವೆ. ಹಾಲಿವುಡ್ ಚಿತ್ರದ ಗಳಿಕೆ ಮುಖ್ಯ ಕಾರಣ ವಿಶಾಲವಾದ ಮಾರುಕಟ್ಟೆ ವ್ಯಾಪ್ತಿ, ವೈವಿಧ್ಯಮಯ ಚಿತ್ರಗಳು ಹಾಗೂ ಜನರ ಮೆಚ್ಚುಗೆ.

  ನೂರಾರು ಚಿತ್ರಗಳು ಪ್ರತಿವರ್ಷ ಬೆಳ್ಳಿತೆರೆಗೆ ಬರುತ್ತವೆ. ಅದಕ್ಕೆ ನೂರಾರು ಕೋಟಿ ಬಂಡವಾಳ ಹೂಡಲಾಗಿರುತ್ತದೆ. ಇದರ ಜೊತೆಗೆ ವಿವಿಧ ದೇಶಗಳಲ್ಲಿ ಪ್ರಚಾರ ಮಾಡಲಾಗುತ್ತದೆ. ಆದರೆ, ಅನೇಕ ಬಾರಿ ಇದೆಲ್ಲದರ ಹೊರತಾಗಿಯೂ ಚಿತ್ರ ಇನ್ನಿಲ್ಲದ್ದಂತೆ ನೆಲಕಚ್ಚುವಂತೆ ಇದಕ್ಕೆ ವಾಟರ್ ವರ್ಲ್ಡ್ ವಿತ್ರ ದೊಡ್ಡ ಉದಾಹರಣೆ.

  ಅದೇನೇ ಇದ್ದರೂ ಅವತಾರ್, ಟೈಟಾನಿಕ್, ದಿ ಅವೇಂಜರ್ಸ್, ಟ್ರಾನ್ಸ್ ಫಾರ್ಮರ್ಸ್, ಹ್ಯಾರಿ ಪಾಟರ್ ನಂಥ ಚಿತ್ರಗಳು ಭಾರತದಲ್ಲಿ ಜನ ಮೆಚ್ಚುಗೆ ಹಾಗೂ ಗಳಿಕೆಯಲ್ಲೂ ಮುಂದಿತ್ತು. ಸದ್ಯಕ್ಕೆ ಇಲ್ಲಿ ತನಕ ವಿಶ್ವದ ಎಲ್ಲಾ ಬಾಕ್ಸಾಫೀಸ್ ಕೊಳ್ಳೆ ಹೊಡದ 10 ಪ್ರಮುಖ ಚಿತ್ರಗಳನ್ನು ಹೆಕ್ಕಿ ನಿಮ್ಮ ಮುಂದಿಡುತ್ತಿದ್ದೇವೆ ನೋಡಿ

  #1 ಅವತಾರ್

  #1 ಅವತಾರ್

  ಡಿ.19, 2009ರಂದು ಬಿಡುಗಡೆಯಾದ ನಿರ್ದೇಶಕ ಜೇಮ್ಸ್ ಕೆಮರೂನ್ ಅವರ ಅವತಾರ್ ಚಿತ್ರಕ್ಕೆ ವಿಶ್ವದೆಲ್ಲೆಡೆ ಮನ್ನಣೆ ಸಿಕ್ಕಿದೆ. 9 ಆಸ್ಕರ್ ಪ್ರಶಸ್ತಿಗೆ ನಾಮಾಂಕಿತವಾಗಿತ್ತು. 250 ಮಿಲಿಯನ್ ಡಾಲರ್ ಬಜೆಟ್ ನಲ್ಲಿ ತಯಾರಾದ ಈ ಚಿತ್ರ 2.782 ಬಿಲಿಯನ್ ಡಾಲರ್ ದೋಚಿದೆ.

  ಈ ಮೂಲಕ ಟೈಟಾನಿಕ್ ರೆಕಾರ್ಡ್ ಮುರಿಯಿತು. 2 ಬಿಲಿಯನ್ ಡಾಲರ್ ಗುರಿ ಮುಟ್ಟಿದ ಮೊದಲ ಚಿತ್ರ ಇದಾಗಿದೆ. ಅವತಾರ್ 2 ತಯಾರಿ ಜಾರಿಯಲ್ಲಿದ್ದು, ಸ್ಯಾಮ್ ವರ್ತಿಂಗ್ಟನ್, ಸ್ಟೀಫನ್ ಲಾಂಗ್ ನಟಿಸುತ್ತಿದ್ದಾರೆ.

  #2 ಟೈಟಾನಿಕ್

  #2 ಟೈಟಾನಿಕ್

  ಡಿ.19, 1997ರಂದು ತೆರೆ ಕಂಡ ದುರಂತ ಪ್ರೇಮ ಕಥೆ ಟೈಟಾನಿಕ್ ಚಿತ್ರವನ್ನು ಕೂಡಾ ಜೇಮ್ಸ್ ಕ್ಯಾಮರೂನ್ ನಿರ್ದೇಶಿಸಿದ್ದಾರೆ.

  ಟೈಟಾನಿಕ್ ನಿರ್ಮಾಣದ ಬಜೆಟ್ 200 ಮಿಲಿಯನ್ ಡಾಲರ್, ಗಳಿಸಿದ್ದು 2.1 ಬಿಲಿಯನ್ ಡಾಲರ್.ಲಿಯಾನಾರ್ಡೊ ಡಿ'ಕಾಪ್ರಿಯೋ, ಕೇಟ್ ವಿನ್ಸ್ ಲೆಟ್ ಮುಖ್ಯಭೂಮಿಕೆಯ ಈ ಚಿತ್ರ 14 ವಿಭಾಗಗಳಲ್ಲಿ ಅಕಾಡೆಮಿ ಪ್ರಶಸ್ತಿಗೆ ನಾಮಾಂಕಿತಗೊಂಡು 11 ಪ್ರಶಸ್ತಿ ಗಳಿಸಿದೆ.
  # ದಿ ಅವೆಂಜರ್ಸ್

  # ದಿ ಅವೆಂಜರ್ಸ್

  ಏಪ್ರಿಲ್ 11, 2012ರಲ್ಲಿ 220 ಮಿಲಿಯನ್ ಡಾಲರ್ ಬಜೆಟ್ ನೊಂದಿಗೆ ನಿರ್ಮಾಣವಾದ ಈ ಚಿತ್ರ 1.511 ಬಿಲಿಯನ್ ಡಾಲರ್ ಗಳಿಕೆ ಕಂಡಿದೆ.

  ರಾಬರ್ಟ್ ಡಾನಿ ಜ್ಯೂನಿಯರ್, ಕ್ರಿಸ್ ಎವನ್ಸ್, ಸ್ಕಾರ್ಲೆಟ್ ಜಾನ್ಸನ್, ಸ್ಯಾಮುಯಲ್ ಎಲ್ ಜಾಕ್ಸನ್ ಮುಖ್ಯಭೂಮಿಕೆಯಲ್ಲಿದ್ದಾರೆ.
  ಹ್ಯಾರಿ ಪಾಟರ್

  ಹ್ಯಾರಿ ಪಾಟರ್

  ಹ್ಯಾರಿ ಪಾಟರ್ ಹಾಗೂ ಡೆಥ್ಲಿ ಹಾಲೋಸ್ 8 ಹಾಗೂ ಸರಣಿ ಚಿತ್ರ ಜು 7, 2011ರಲ್ಲಿ ತೆರೆ ಕಂಡಿತ್ತು. ಹ್ಯಾರಿಪಾಟರ್ ಚಿತ್ರ ಒಟ್ಟಾರೆ1.328 ಬಿಲಿಯನ್ ಡಾಲರ್ ಗಳಿಸಿತ್ತು.

  3 ವಿಭಾಗಗಳಲ್ಲಿ ಆಸ್ಕರ್ ಗೆ ನಾಮಾಂಕಿತಗೊಂಡಿತ್ತು. ಡೇನಿಯಲ್ ರಾಡ್ ಕ್ಲಿಫ್, ರುಪರ್ಟ್ ಗ್ರಿಂಟ್, ಎಮ್ಮಾ ವಾಟ್ಸನ್ ಮುಖ್ಯಪಾತ್ರದಲ್ಲಿದ್ದಾರೆ.
  ಟ್ರಾನ್ಸ್ ಫಾರ್ಮರ್ಸ್

  ಟ್ರಾನ್ಸ್ ಫಾರ್ಮರ್ಸ್

  ಜು.23,2011 ರಲ್ಲಿ ತೆರೆ ಕಂಡ ಟ್ರಾನ್ಸ್ ಫಾರ್ಮರ್ಸ್ ಚಿತ್ರ ಸರಣಿಯ ಮೂರನೇ ಚಿತ್ರ ಡಾರ್ಕ್ ಆಫ್ ದಿ ಮೂನ್ ಚಿತ್ರ ಒಟ್ಟಾರೆ 1.123 ಬಿಲಿಯನ್ ಡಾಲರ್ ಗಳಿಸಿದೆ. ಶಿಯಾ ಲಾಬಿಯೊಫ್, ರೊಸಿ ಹಂಟಿಂಗ್ಟನ್ -ವೈಟ್ಲಿ ಅಭಿನಯದ ಈ ಚಿತ್ರ ಮೂರು ವಿಭಾಗಗಳಲ್ಲಿ ಆಸ್ಕರ್ ಗೆ ನಾಮಂಕಿತಗೊಂಡಿತ್ತು.

  ದಿ ಲಾರ್ಡ್ ಆಫ್ ದಿ ರಿಂಗ್ಸ್

  ದಿ ಲಾರ್ಡ್ ಆಫ್ ದಿ ರಿಂಗ್ಸ್

  ಈ ಸರಣಿಯ ಮೂರನೇ ಚಿತ್ರ ಡಿ.13, 2003ರಲ್ಲಿ ತೆರೆ ಕಂಡಿತ್ತು. 94 ಮಿಲಿಯನ್ ಡಾಲರ್ ವೆಚ್ಚದಲ್ಲಿ ನಿರ್ಮಾಣಗೊಂಡರೂ 1.119 ಬಿಲಿಯನ್ ಡಾಲರ್ ಕೊಳ್ಳೆ ಹೊಡೆಯಿತು.ಜೊತೆಗೆ 2003ರಲ್ಲಿ ಅತ್ಯಧಿಕ ಹಣ ಗಳಿಕೆ ಚಿತ್ರ ಎನಿಸಿತು. 11 ಅಕಾಡೆಮಿ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

  ಸ್ಕೈ ಫಾಲ್

  ಸ್ಕೈ ಫಾಲ್

  ಜೇಮ್ಸ್ ಬಾಂಡ್ ಸರಣಿಯ 23ನೇ ಚಿತ್ರದ ನಿರ್ಮಾಣ ವೆಚ್ಚ 200 ಮಿಲಿಯನ್ ಡಾಲರ್, ಅಕ್ಟೋಬರ್ 23, 2012ರಲ್ಲಿ ಬಿಡುಗಡೆಗೊಂಡಿತ್ತು. ಈ ಚಿತ್ರದ ಗಳಿಕೆ 1.108 ಬಿಲಿಯನ್ ಡಾಲರ್. ಡೇನಿಯಲ್ ಕ್ರೇಗ್, ಜೂಡಿ ಡೆಂಚ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

  5 ಆಸ್ಕರ್ ಪ್ರಶಸ್ತಿಗೆ ನಾಮಾಂಕಣಗೊಂಡು 2 ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಜೇಮ್ಸ್ ಬಾಂಡ್ ಸರಣಿಯ ಅತಿ ಹೆಚ್ಚು ಗಳಿಕೆಯ ಚಿತ್ರ ಇದಾಗಿದೆ.

  ದಿ ಡಾರ್ಕ್ ನೈಟ್ ರೈಸಸ್

  ದಿ ಡಾರ್ಕ್ ನೈಟ್ ರೈಸಸ್

  ಬ್ಯಾಟ್ ಮನ್ ಸರಣಿ ಚಿತ್ರ ಡಿ ಡಾರ್ಕ್ ನೈಟ್ ರೈಸಸ್ 250 ಮಿಲಿಯನ್ ಡಾಲರ್ ನಿರ್ಮಾಣದಲ್ಲಿ ತಯಾರಾದ ಚಿತ್ರ. ವಿಶ್ವದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆದು 1.081 ಬಿಲಿಯನ್ ಡಾಲರ್ ಗಳಿಸಿತು.

  ಕ್ರಿಶ್ಚಿಯನ್ ಬೇಲ್, ಮೈಕಲ್ ಕೈನ್, ಅನ್ನೆ ಹಾಥಾವೇ, ಗ್ಯಾರಿ ಓಲ್ಡ್ ಮ್ಯಾನ್ , ಮಾರ್ಗನ್ ಫ್ರೀಮನ್ ಚಿತ್ರದಲ್ಲಿದ್ದಾರೆ.

  ಪೈರೇಟ್ಸ್ ಆಫ್ ದಿ ಕೆರಿಬಿಯನ್

  ಪೈರೇಟ್ಸ್ ಆಫ್ ದಿ ಕೆರಿಬಿಯನ್

  ಪೈರೆಟ್ಸ್ ಸರಣಿಯ ಡೆಡ್ ಮ್ಯಾನ್ ಚೆಸ್ಟ್ ಭಾಗ 225 ಮಿಲಿಯನ್ ಡಾಲರ್ ವೆಚ್ಚದಲ್ಲಿ ನಿರ್ಮಾಣವಾಗಿತ್ತು. 1.066 ಬಿಲಿಯನ್ ಡಾಲರ್ ಗಳಿಸಿತು. ಜಾನಿ ಡೆಪ್, ಕೈರಾ ನೈಟ್ಲಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ನಾಲ್ಕು ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮಾಂಕಿತಗೊಂಡಿತ್ತು.

  ದಿ ಟಾಯ್ ಸ್ಟೋರಿ

  ದಿ ಟಾಯ್ ಸ್ಟೋರಿ

  ಪಿಕ್ಸಾರ್ ನಿರ್ಮಾಣದ ಟಾಯ್ ಸ್ಟೋರಿ ಮೂರನೇ ಭಾಗ 200 ಮಿಲಿಯನ್ ಡಾಲರ್ ವೆಚ್ಚದಲ್ಲಿ ನಿರ್ಮಾಣವಾಗಿತ್ತು. 1.063 ಬಿಲಿಯನ್ ಡಾಲರ್ ಗಳಿಸಿತು. ಜು.18,2010ರಲ್ಲಿ ತೆರೆಕಂಡ ಈ ಚಿತ್ರ 5 ಅಕಾಡೆಮಿ ನಾಮಾಂಕಣಗೊಂಡಿತ್ತು. 1 ಬಿಲಿಯನ್ ಗುರಿ ದಾಟಿದ ಮೊದಲ ಅನಿಮೇಷನ್ ಚಿತ್ರ ಇದಾಗಿದೆ.

  English summary
  In Hollywood, there are some movies like Avatar, Titanic, The Avengers, Transformers and Harry Potter, which have done mind-blowing business in the worldwide Box Office. We bring you Top 10 All Time Highest Grossing Hollywood Movies. Continue to see them in slide show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X