»   » ಸಂದರ್ಶನ: 'ಆ ಎರಡು ವರ್ಷಗಳು' ಪ್ರೀತಿಯ ಅನುಭವ ಬಿಚ್ಚಿಟ್ಟ ನಟ ರೇಣುಕ್

ಸಂದರ್ಶನ: 'ಆ ಎರಡು ವರ್ಷಗಳು' ಪ್ರೀತಿಯ ಅನುಭವ ಬಿಚ್ಚಿಟ್ಟ ನಟ ರೇಣುಕ್

Posted By:
Subscribe to Filmibeat Kannada

ಚಂದನವನಕ್ಕೆ ವಿಭಿನ್ನ ಮತ್ತು ಹೊಸ ರೀತಿಯ ಕಥೆಗಳ ಸಿನಿಮಾ ಮೂಲಕ ಹೊಸ ಪ್ರತಿಭೆಗಳು ಪಾದಾರ್ಪಣೆ ಮಾಡುತ್ತಿವೆ. ಅಂತಹ ಸಾಲಿಗೆ ಈಗ ಕಳೆದ ವಾರವಷ್ಟೇ ಬಿಡುಗಡೆ ಆದ 'ಆ ಎರಡು ವರ್ಷಗಳು' ಚಿತ್ರದ ನಾಯಕ ನಟ ರೇಣುಕ್ ಮಠದ್ ಸೇರಿಕೊಂಡಿದ್ದಾರೆ. ಈ ಹಿಂದೆ ಸುವರ್ಣ ವಾಹಿನಿಯಲ್ಲಿನ 'ಅನುರೂಪ' ಧಾರಾವಾಹಿಯಲ್ಲಿ ಕಾಲೇಜು ಯುವಕನ ಪಾತ್ರದಲ್ಲಿ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದಿದ್ದರು.

ವಿಮರ್ಶೆ: ಪ್ರೀತಿಯಲ್ಲಿ ಸೋತವರಿಗೆ 'ಆ ಎರಡು ವರ್ಷ'ಗಳಲ್ಲಿ ಸ್ಫೂರ್ತಿದಾಯಕ ಸಂದೇಶ

ರೇಣುಕ್ ಮಠದ್ ಬೆಳ್ಳಿತೆರೆಯ ಮೊದಲ ಸಿನಿಮಾದಲ್ಲಿಯೇ ಲವರ್ ಬಾಯ್ ಪಾತ್ರದಲ್ಲಿ ಹೀರೋಯಿನ್‌ ಜೊತೆಗಿನ ಉತ್ತಮ ಕೆಮಿಸ್ಟ್ರಿಯಿಂದ ಗಮನ ಸೆಳೆದಿದ್ದಾರೆ. ನೋಡಲು ಸೈಲೆಂಟ್ ಮತ್ತು ಮುಜುಗರದ ವ್ಯಕ್ತಿತ್ವದವರಾದರು ನಟನೆಯಲ್ಲಿ ಅತೀ ನಿಪುಣರು. ಇನ್ನುಮುಂದೆ ಬೆಳ್ಳಿತೆರೆಯಲ್ಲಿಯೇ ಮುಂದುವರೆಯುವ ಆಸೆ ಇಟ್ಟುಕೊಂಡಿರುವ ರೇಣು ತಮ್ಮನ್ನು ಯಾವಾಗಲು ವಿಭಿನ್ನ ಪಾತ್ರಗಳಲ್ಲಿ ತೊಡಗಿಸಿಕೊಳ್ಳಲು ಬಯಸುತ್ತಾರೆ. ಅದಕ್ಕಾಗಿ ಎಷ್ಟು ಬೇಕಾದರೂ ಕಾಯುತ್ತೇನೆ ಎನ್ನುತ್ತಾರೆ.

ರೇಣುಕ್ ಮಠದ್ ಇತ್ತೀಚೆಗೆ ಫಿಲ್ಮಿಬೀಟ್ ಜೊತೆಗೆ ಸಿಕ್ಕಾಗ, ಮೊದಲ ಚಿತ್ರ 'ಆ ಎರಡು ವರ್ಷಗಳು' ಸಿನಿಮಾದಲ್ಲಿ ನಟಿಸಿದ ಅನುಭವದ ಬಗ್ಗೆ ಹಂಚಿಕೊಂಡಿದ್ದಾರೆ. ಅವರೊಂದಿಗಿನ ಸಂದರ್ಶನದ ಆಯ್ದ ಭಾಗ ಈ ಕೆಳಗಿನಂತಿದೆ ಓದಿರಿ...

ಸಂದರ್ಶನ: ಸುನೀಲ್, ಬಿಂಡಹಳ್ಳಿ

ಮೊದಲ ಬಾರಿಗೆ ಬಿಗ್ ಸ್ಕ್ರೀನ್‌ನಲ್ಲಿ ಕ್ಯಾಮೆರಾ ಫೇಸ್ ಮಾಡಿದ್ದೀರಿ.. ಹೇಗನಿಸಿತು?

ಬೇಸಿಕಲಿ ಎಲ್ಲರಿಗೂ ಒಂದು ಕನಸು ಇರುತ್ತೆ. ಸ್ಮಾಲ್ ಸ್ಕ್ರೀನ್ ನಲ್ಲಿ ಕಾಣಿಸಿಕೊಂಡವರಿಗೆ ನಾನು ಬಿಗ್ ಸ್ಕ್ರೀನ್ ಮೇಲೆ ಬರಬೇಕು ಅಂತ. ನನ್ನ ಮುಖ್ಯ ಉದ್ದೇಶ ಇದ್ದದ್ದು ಅದೇ. ನನಗೆ ಒಂಥರಾ ಪ್ರಮೋಷನ್ ಇದು. ಮೊದಲು ರಂಗಭೂಮಿಗೆ ಬಂದೆ. ನಂತರ ಸೀರಿಯಲ್.. ಈಗ ಸಿನಿಮಾ. ಸ್ಟೆಪ್ ಬೈ ಸ್ಟೆಪ್ ಬಂದಿದ್ದು ಖುಷಿಕೊಟ್ಟಿದೆ.

ರೀಲ್‌ನಲ್ಲಿ ಲವರ್ ಬಾಯ್ ಆಗಿ ನಟಿಸಿದ್ದೀರಿ! ರಿಯಲ್ಲಾಗಿ ಹೇಗೆ ನೀವು?

ಲವ್ ಬಗ್ಗೆ ಗೊತ್ತಿಲ್ಲ. ಅದರ ಬಗ್ಗೆ ಯೋಚನೆ ಮಾಡಿಲ್ಲ. ನನ್ನ ಪಾಡಿಗೆ ನಾನಿದೀನಿ. 'ಆ ಎರಡು ವರ್ಷಗಳಲ್ಲಿ' ಕ್ಯಾರೆಕ್ಟರ್‌ಗೆ ಏನ್ ಬೇಕೋ ಅದನ್ನ ಚಿತ್ರದಲ್ಲಿ ಆಕ್ಟ್ ಮಾಡಿದಿನಿ ಅಷ್ಟೆ.

ಚಿತ್ರದಲ್ಲಿ ತುಂಬಾ ಮುಜುಗರದ ಹುಡುಗನ ರೀತಿ ಕಾಣ್ತೀರ, ನಿಜವಾಗಿ...?

ರಿಯಲ್ಲಾಗಿ ನಾನು ಸ್ವಲ್ಪ ಮುಜುಗರದ ವ್ಯಕ್ತಿಯೇ. ಯಾರ ಜೊತೆನು ಅಷ್ಟು ಬೇಗ ಬೆರೆಯೋದಿಲ್ಲ. ಜಾಸ್ತಿ ಮಾತಾಡಬೇಕು ಅಂದ್ರೆ ಸ್ವಲ್ಪ ಟೈಮ್ ತಗೋತಿನಿ. ಆ ನನ್ನ ಕ್ಯಾರೆಕ್ಟರ್ ಸಿನಿಮಾದಲ್ಲಿಯೂ ಅಲ್ಲಲ್ಲಿ ಮ್ಯಾಚ್ ಆಗಿದೆ.

ಅಮಿತಾ ಮತ್ತು ನಿಮ್ಮದು ಫಸ್ಟ್ ಚಿತ್ರ. ಕೆಮಿಸ್ಟ್ರಿ ಇಷ್ಟೊಂದು ಚೆನ್ನಾಗಿದೆಯಲ್ಲ ಹೇಗೆ ಸಾಧ್ಯವಾಯ್ತು?

ಲವ್ ಸ್ಟೋರಿಗೆ ಮುಖ್ಯವಾಗಿ ಬೇಕಿರುವುದು ಕೆಮಿಸ್ಟ್ರಿ. ಸೀರಿಯಲ್ ಆದ್ರೆ ಮಿನಿಮಮ್ ಒಂದು ವರ್ಷ ಜೊತೆಗೆ ಇರ್ತೀವಿ. ಗೆಳೆತನ ಬೆಳೆಯುತ್ತೆ. ಆದರೆ ಸಿನಿಮಾಗೆ ಹಾಗಿರಲ್ಲ. ಮೂವತ್ತು ದಿನಗಳಲ್ಲಿ ಬಾಂಡಿಂಗ್ ಬೆಳೆಯಬೇಕಿತ್ತು. ಹಾಗಾಗಿ ಇಬ್ಬರಿಗೂ ಶೂಟಿಂಗ್ ಮುಂಚಿತವಾಗಿ ಮೂರು ದಿನಗಳ ಕಾಲ ವರ್ಕ್ ಶಾಪ್ ಇತ್ತು. ರಿಹರ್ಸಲ್ ಮಾಡಿಸಿದ್ರು. ಮೊದಲು ಹಾಯ್ ಬಾಯ್ ಇತ್ತು. ನಂತರ ಗೆಳತನ ಆಯ್ತು. ಇಬ್ಬರು ಕ್ಯಾಮೆರಾ ಮುಂದೆ ಹೋಗುವ ಮುನ್ನ ಜೊತೆಯಲ್ಲಿ ಸ್ಕ್ರೀನ್ ಪ್ಲೇ ಓದಿಕೊಂಡು ಹೋಗುತ್ತಿದ್ವಿ. ಹೀಗಾಗಿ ಕೆಮಿಸ್ಟ್ರಿ ಚೆನ್ನಾಗಿದೆ.

'ಆ ಎರಡು ವರ್ಷಗಳು' ಬಗ್ಗೆ ನಿಮ್ಮ ನಿಲುವು?

ಈ ಸಿನಿಮಾಗೆ ನಾನು ಹೀರೋನು ಅಲ್ಲಾ.. ಅಮಿತಾ ಹೀರೋಯಿನ್ ಸಹ ಅಲ್ಲ. ಕಥೆಯೇ ನಮಗೆ ಹೀರೋ. ಇದು ನಾನು ನಂಬಿರೋದು. ಸಿನಿಮಾ ನೋಡಿದಾಗ ನಾವೆಲ್ಲ ಪಾತ್ರಧಾರಿಗಳು ಅಷ್ಟೆ.

ಈ ಸಿನಿಮಾನ ಏಕೆ ನೋಡಬೇಕು ಅಂದ್ರೆ ಏನ್ ಹೇಳ್ತೀರಾ?

ಬೇಸಿಕಲಿ ಒಂದು ಹೊಸ ಪ್ರಯತ್ನ. ಎಲ್ಲೂ ಕೂಡ ಡ್ರಾಮ ತೋರಿಸಿಲ್ಲ. ಲವ್ ಆರಂಭವಾದ ತಕ್ಷಣ ಒಬ್ಬ ವಿಲನ್ ಎಂಟ್ರಿ ಕೊಡೋದು. ಅವನನ್ನ ಹೀರೋ ಹೊಡೆಯೋದು. ಅದಕ್ಕೆ ಒಂದು ಬ್ಯಾಗ್ರೌಂಡ್ ಮ್ಯೂಸಿಕ್, ಆಮೇಲೆ ಒಂದು ಸಾಂಗ್ ಈ ರೀತಿ ಏನು ಸಹ ಚಿತ್ರದಲ್ಲಿ ಇಲ್ಲ. ತುಂಬಾ ರಿಯಲಿಸ್ಟಿಕ್ ಆಗಿ ತೋರಿಸಿದ್ದಾರೆ. ಈಗಿನ ಜನರೇಷನ್ ಒಂದು ಹುಡುಗ-ಹುಡುಗಿ ನಡುವೆ ಪ್ರೀತಿ ಆದಾಗ ಭಾವನಾತ್ಮಕವಾಗಿ ಏನ್ ನಡೆಯುತ್ತೆ ಅದನ್ನ ತೆರೆಮೇಲೆ ತರಲಾಗಿದೆ. ಕ್ಲೈಮ್ಯಾಕ್ಸ್ 30 ನಿಮಿಷ ಎಲ್ಲರಿಂದಲೂ ಕುತೂಹಲದಿಂದ ನೋಡಿಸಿಕೊಳ್ಳುತ್ತದೆ. ಚಿತ್ರದ ಸಂದೇಶ ಎಲ್ಲರಿಗೂ ಇಷ್ಟ ಆಗೇ ಆಗುತ್ತೆ.

ನಿಮ್ಮ ಮುಂದಿನ ಪ್ರಾಜೆಕ್ಟ್‌ ಗಳು

ಕಥೆಗಳನ್ನು ಕೇಳುತ್ತಿದ್ದೀನಿ. ಆದರೆ ಇಂತಹ ಉತ್ತಮ ಕಥೆ ಸಿನಿಮಾ ಮಾಡಿ ಮತ್ತೆ ನಾರ್ಮಲ್ ಆಗಿ ಕಮರ್ಷಿಯಲ್, ಹಾರರ್ ಸಿನಿಮಾ ಮಾಡೋದು ಬೇಡ ಅಂತ. ಸ್ವಲ್ಪ ಟೈಮ್ ತೆಗೆದುಕೊಂಡರೂ ಸಹ ವಿಭಿನ್ನ ಚಿತ್ರದಲ್ಲಿ ನಟಿಸುವ ಆಸೆ. ಆದ್ದರಿಂದ ಯಾವುದನ್ನು ಒಪ್ಪಿಕೊಂಡಿಲ್ಲ.

ಧಾರಾವಾಹಿಯಲ್ಲಿಯೂ ಅಭಿನಯಿಸುತ್ತಿದ್ದೀರಾ?

ಮತ್ತೆ ಆಫರ್ ಬಂತು. ಆದರೆ ಓಕೆ ಎಂದಿಲ್ಲ. ಸಿನಿಮಾದಲ್ಲೇ ಮುಂದುವರೆಯೋಣ ಅಂತ...

English summary
Kannada Movie 'Aa Eradu Varshagalu' Actor Renuk Mathad interview.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada