»   » ಬೆಂಗಳೂರಿನ ಸೊಸೆ ಭಾವನ ಬಾಯಿಂದ ಬಂದ ಮಾತುಗಳಿವು

ಬೆಂಗಳೂರಿನ ಸೊಸೆ ಭಾವನ ಬಾಯಿಂದ ಬಂದ ಮಾತುಗಳಿವು

Posted By:
Subscribe to Filmibeat Kannada

ಆಗಾಗ ಕನ್ನಡಕ್ಕೆ ಬಂದು ಸಿನಿಮಾ ಮಾಡುತ್ತಿದ್ದ ಮಲೆಯಾಳಂ ನಟಿ ಭಾವನ ಕನ್ನಡದವರೆ ಎನ್ನಿಸುವ ಮಟ್ಟಿಗೆ ಎಲ್ಲರಿಗೆ ಹತ್ತಿರ ಆಗಿದ್ದರು. ಕನ್ನಡದ ಹುಡುಗ ನವೀನ್ ಅವರನ್ನು ಮದುವೆ ಆದ ಮೇಲೆ ಈಗ ಅವರು ಬೆಂಗಳೂರಿನ ಸೊಸೆ ಆಗಿದ್ದಾರೆ.

ಭಾವನ ಸದ್ಯ ಶಿವರಾಜ್ ಕುಮಾರ್ ಅವರ 'ಟಗರು' ಸಿನಿಮಾದಲ್ಲಿ ನಟಿಸಿದ್ದಾರೆ. ಪಕ್ಕಾ ಸೂರಿ ಸ್ಟೈಲ್ ಮಾಸ್ ಸಿನಿಮಾ ಇದಾಗಿದ್ದು, ಸಿನಿಮಾದ ತುಂಬ ರೌಡಿಸಂ ದೃಶ್ಯಗಳು ತುಂಬಿವೆ. ಅದರ ಮಧ್ಯೆಯೂ ನಟಿ ಭಾವನ ತೆರೆ ಮೇಲೆ ಬಂದಾಗ ಒಂದು ಬೇರೆಯದೆ ವಾತಾವರಣ ಸೃಷ್ಟ ಆಗುತ್ತದೆ. ಸ್ವತಃ ಶಿವಣ್ಣ ಅವರಿಗೆ ಸಹ ಭಾವನ ಅವರ ದೃಶ್ಯಗಳು ತುಂಬ ಇಷ್ಟ ಆಗಿದೆಯಂತೆ.


ಅಂದಹಾಗೆ, 'ಟಗರು' ಸಿನಿಮಾದ ಸಕ್ಸಸ್ ಮೀಟ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ಭಾವನ ಚಿತ್ರದ ಗೆಲುವಿನ ಸಂತಸವನ್ನು ಹಂಚಿಕೊಂಡರು. ಇದೇ ವೇಳೆ ತಮ್ಮ ಚಿತ್ರರಂಗದ ಜರ್ನಿ ಮತ್ತು ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ. ಮುಂದೆ ಓದಿ...


ಬೆಂಗಳೂರಿನ ಸೊಸೆ

''ಜನರು ನನ್ನನ್ನು ಬೆಂಗಳೂರಿನ ಸೊಸೆ ಎಂದಾಗ ತುಂಬ ಖುಷಿ ಆಗುತ್ತದೆ. ನವೀನ್ ಅವರದ್ದು ತುಂಬ ಸ್ವೀಟ್, ಕ್ಯೂಟ್ ಹ್ಯಾಪಿ ಫ್ಯಾಮಿಲಿ.''


ಈ ಹಿಂದೆಯೇ ಆಫರ್ ಬಂದಿತ್ತು

''ಈ ಹಿಂದೆಯೇ ಶಿವರಾಜ್ ಕುಮಾರ್ ಸರ್ ಅವರ ಸಿನಿಮಾಗೆ ಕರೆ ಬಂದಿತ್ತು. ಆದರೆ ನನ್ನ ಬೇರೆ ಸಿನಿಮಾದ ಕೆಲಸದಿಂದ ಅವರ ಜೊತೆ ನಟಿಸಲು ಆಗಿರಲಿಲ್ಲ. ಆದರೆ ಸೂರಿ ಸರ್ ಕಾಲ್ ಮಾಡಿದಾಗ ಒಂದು ವಿಶೇಷ ಪಾತ್ರ ಅಂತ ಹೇಳಿದರು. ಅವರು ನನ್ನನ್ನು ಕನ್ನಡದಲ್ಲಿ ಲಾಂಚ್ ಮಾಡಿದ್ದರು. ಸೋ, ನಾನು ತುಂಬ ಖುಷಿಯಿಂದ ಒಪ್ಪಿಕೊಂಡೆ.''


ಆಪ್ತರ ಸಮ್ಮುಖದಲ್ಲಿ ಜಾಕಿ ಭಾವನಾ ಅದ್ಧೂರಿ ಆರತಕ್ಷತೆ


ಮದುವೆಯ ನಂತರದ ಸಿನಿಮಾಗಳು

''ಸಿನಿಮಾ ಆಫರ್ ತುಂಬ ಇದೆ. ನಾನು ಯಾವುದೇ ಆತುರ ಇಲ್ಲದೆ ಒಂದೊಂದೆ ಸಿನಿಮಾ ಮಾಡುತ್ತಿದ್ದೇನೆ. ನನಗೆ ಇಷ್ಟ ಆದರೆ ಮಾತ್ರ ಸಿನಿಮಾ ಮಾಡುತ್ತೇನೆ. ಮದುವೆಯ ನಂತರ ಮಹಿಳಾ ಪ್ರಧಾನ ಸಿನಿಮಾ ಅಷ್ಟೇ ಮಾಡಬೇಕು ಅಂತ ಇಲ್ಲ. ಎಲ್ಲ ರೀತಿಯ ಸಿನಿಮಾ ಮಾಡುತ್ತೇನೆ. ತುಂಬ ಗ್ಲಾಮರ್ ರೋಲ್ ನಲ್ಲಿ ನಾನು ಹಿಂದೆಯೂ ಸಿನಿಮಾ ಮಾಡಿಲ್ಲ. ನನಗೆ ಸರಿ ಎನಿಸಿದ ಪಾತ್ರವನ್ನು ಆಯ್ಕೆ ಮಾಡುತ್ತೇನೆ.''


ಕನ್ನಡಕ್ಕೆ ಬಂದು 10 ವರ್ಷ ಆಯ್ತು

''ನಾನು 'ಜಾಕಿ' ಚಿತ್ರದಿಂದ ಕನ್ನಡ ಸಿನಿಮಾ ಶುರು ಮಾಡಿದೆ. ಈಗ 10 ವರ್ಷ ಆಯ್ತು ಕನ್ನಡ ಚಿತ್ರರಂಗಕ್ಕೆ ಬಂದು. 10ಕ್ಕೂ ಹೆಚ್ಚು ಸಿನಿಮಾ ಮಾಡಿದ್ದೇನೆ. ಪುನೀತ್, ಸುದೀಪ್, ಉಪೇಂದ್ರ, ಶಿವಣ್ಣ, ಗಣೇಶ್ ಹೀಗೆ ಪ್ರತಿಭಾವಂತ ನಟ ಮತ್ತು ನಿರ್ದೇಶಕರ ಜೊತೆಗೆ ಸಿನಿಮಾ ಮಾಡಿದ್ದೇನೆ. ಕನ್ನಡದಲ್ಲಿ ನನಗೆ ಒಳ್ಳೆ ಒಳ್ಳೆಯ ಹಾಡು ಸಿಕ್ಕಿದೆ. ನನಗೆ ಇಲ್ಲಿ ತುಂಬ ಪ್ರೀತಿ ಮತ್ತು ಗೌರವ ಸಿಕ್ಕಿದೆ. ಇದಲ್ಲ ತುಂಬ ವಿಶೇಷ ಅನಿಸುತ್ತದೆ.''


ಮದುವೆಯಾದ ಐದೇ ದಿನಕ್ಕೆ ಸಿಹಿಸುದ್ದಿ ಕೊಟ್ಟ 'ಜಾಕಿ' ಭಾವನಾ


ಕಾಸ್ಟಿಂಗ್ ಕೋಚ್

''ನನಗೆ ಕಾಸ್ಟಿಂಗ್ ಕೋಚ್ ಅನುಭವ ಆಗಿಲ್ಲ. ನಾನು 14- 15 ವರ್ಷ ಇರುವಾಗಲೇ ನಟನೆಯನ್ನು ಶುರು ಮಾಡಿದೆ. ನಮ್ಮ ತಂದೆ ಕೂಡ ಒಬ್ಬ ಸಿನಿಮಾಟೋಗ್ರಾಫರ್. ನನಗೆ ಚಿತ್ರರಂಗದಲ್ಲಿ ಆ ರೀತಿಯ ಅನುಭವ ಆಗಿಲ್ಲ. ನನಗೆ ಅದರ ಬಗ್ಗೆ ಗೊತ್ತಿಲ್ಲ.''


ಡ್ರಗ್ ಡೀಲರ್ ಪಾತ್ರ

''ಪ್ರಜ್ವಲ್ ದೇವರಾಜ್ ಜೊತೆಗೆ 'ಇನ್ಸಪೆಕ್ಟರ್ ವಿಕ್ರಂ' ಸಿನಿಮಾ ಮಾಡುತ್ತಿದ್ದೇನೆ. ಮದುವೆಯ ನಂತರ ಮಾಡುತ್ತಿರುವ ಸಿನಿಮಾ ಇದು. ಆ ಸಿನಿಮಾದಲ್ಲಿ ನನ್ನದು ಡ್ರಗ್ ಡೀಲರ್ ಪಾತ್ರ. ಆ ಪಾತ್ರದ ಬಗ್ಗೆ ತುಂಬ ಉತ್ಸುಕಳಾಗಿದ್ದೇನೆ.''


77 ಸಿನಿಮಾ ಮಾಡಿದ್ದೇನೆ

''77 ಸಿನಿಮಾ ಮಾಡಿದ್ದೇನೆ. ನನಗೆ ಈಗಲೂ ನಾನು ಹೊಸ ನಟಿ ಎನ್ನುವ ಭಾವ ಇದೆ. ನನಗೆ ಎಂದು ನಾನು ದೊಡ್ಡ ನಟಿ ಎನ್ನುವ ಗರ್ವ ಬಂದಿಲ್ಲ. ಇಷ್ಟು ವರ್ಷದ ಚಿತ್ರರಂಗದ ಜರ್ನಿ ತುಂಬ ಖುಷಿ ಕೊಟ್ಟಿದೆ. 100 ಸಿನಿಮಾ ಮಾಡುತ್ತೇನಾ ಗೊತ್ತಿಲ್ಲ. ಇದೇ ರೀತಿ ಆದರೆ ಆಗುತ್ತದೆ.ಫೋಟೋ ಆಲ್ಬಂ: ನಟಿ ಭಾವನಾ-ನವೀನ್ ಅದ್ಧೂರಿ ಆರತಕ್ಷತೆ

English summary
Actress Bhavana spoke about Tagaru kannada movie success in an interview with Filmibeat Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada