For Quick Alerts
  ALLOW NOTIFICATIONS  
  For Daily Alerts

  'ವರಹ ರೂಪಂ' ಟ್ಯೂನ್ ಕದ್ದ ಆರೋಪ: ಫಿಲ್ಮಿಬೀಟ್‌ಗೆ ಅಜನೀಶ್ ಲೋಕನಾಥ್ ಪ್ರತಿಕ್ರಿಯೆ

  |

  ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ' ಬ್ಲಾಕ್‌ಬಸ್ಟರ್ ಹಿಟ್ ಲಿಸ್ಟ್ ಸೇರಿದೆ. ದಿನದಿಂದ ದಿನಕ್ಕೆ ಸಿನಿಮಾ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ತಲುಪುತ್ತಿದೆ. ಅಬಾಲ ವೃದ್ಧರಾಗಿ ಎಲ್ಲರನ್ನು ಈ ಕರಾವಳಿಯ ದೈವಿಕ ಚಿತ್ರ ಸೆಳೆಯುತ್ತಿದೆ. ಇದೆಲ್ಲದರ ನಡುವೆ 'ಕಾಂತಾರ' ಸಿನಿಮಾ ಮೇಲೆ ಅಪವಾದವೊಂದು ಕೇಳಿಬಂದಿದೆ. ಚಿತ್ರದ 'ವರಹ ರೂಪಂ' ಹಾಡನ್ನು ಕದ್ದಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಈ ಬಗ್ಗೆ ಸ್ವತಃ ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಫಿಲ್ಮಿಬೀಟ್‌ಗೆ ಸ್ಪಷ್ಟನೆ ನೀಡಿದ್ದಾರೆ.

  'ಕಾಂತಾರ' ಸಿನಿಮಾ ಎಲ್ಲಾ ವಿಭಾಗಗಳಲ್ಲೂ ಫಸ್ಟ್ ಕ್ಲಾಸ್. ಅದರಲ್ಲೂ ರಿಷಬ್ ಶೆಟ್ಟಿ ನಿರ್ದೇಶನ, ನಟನೆಯ ಜೊತೆಗೆ ಅಜನೀಶ್ ಸಂಗೀತ ಹಾಗೂ ಅರವಿಂದ್ ಕಶ್ಯಪ್ ಛಾಯಾಗ್ರಹಣ ಪ್ಲಸ್ ಪಾಯಿಂಟ್. ಪ್ರೇಕ್ಷಕರು ಅಜನೀಶ್ ಸಾಂಗ್ಸ್ ಹಾಗೂ ಬಿಜಿಎಂ ಬಗ್ಗೆ ಹೆಚ್ಚೇ ಮಾತನಾಡುತ್ತಿದ್ದಾರೆ. ಅದರಲ್ಲೂ 'ವರಹ ರೂಪಂ' ಹಾಡು ಚಿತ್ರದ ಜೀವಾಳ. ಆದರೆ ಮಲಯಾಳಂನ 'ನವರಸಂ' ಎನ್ನುವ ಆಲ್ಬಮ್ ಸಾಂಗ್ ಟ್ಯೂನ್ ಕದ್ದು ಅಜನೀಶ್ ಈ ಸಾಂಗ್ ಮಾಡಿದ್ದಾರೆ ಎನ್ನುವುದು ಕೆಲವರ ವಾದ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೀತಿದೆ.

  'ಕಾಂತಾರ'ದ 'ವರಹ ರೂಪಂ' ಹಾಡು ಕದ್ದಿದ್ದು: ಮಲಯಾಳಂ ಸಾಂಗ್ ಸಾಕ್ಷಿ ಎಂದ ನೆಟ್ಟಿಗರು!'ಕಾಂತಾರ'ದ 'ವರಹ ರೂಪಂ' ಹಾಡು ಕದ್ದಿದ್ದು: ಮಲಯಾಳಂ ಸಾಂಗ್ ಸಾಕ್ಷಿ ಎಂದ ನೆಟ್ಟಿಗರು!

  'ನವರಸಂ' ಆಲ್ಬಮ್ ಸಾಂಗ್‌ಗೂ 'ಕಾಂತಾರ' ಚಿತ್ರದ 'ವರಹ ರೂಪಂ' ಸಾಂಗ್‌ಗೂ ಸಾಕಷ್ಟು ಸಾಮ್ಯತೆಯಿದೆ. ಅದೇ ಕಾರಣಕ್ಕೆ ಇಂತಹ ಅನುಮಾನ ಮೂಡುವುದು ಸಹಜ. ಆದರೆ ಆಲ್ಬಮ್ ಸಾಂಗ್ ಮಾಡಿದವರು ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ಯಾಕೆಂದರೆ ಒಬ್ಬ ಸಂಗೀತ ನಿರ್ದೇಶಕನಿಗೆ ಯಾವುದು ಕಾಪಿ ? ಯಾವುದು ಕಾಪಿ ಅಲ್ಲ ಎನ್ನುವುದು ಗೊತ್ತಾಗುತ್ತದೆ ಎಂದು ಅಜನೀಶ್ ಹೇಳಿದ್ದಾರೆ.

  ಸ್ಟೈಲ್ ವಿಚಾರದಲ್ಲಿ ಇನ್‌ಸ್ಪೈರ್ ಆಗಿದ್ದೀನಿ

  ಸ್ಟೈಲ್ ವಿಚಾರದಲ್ಲಿ ಇನ್‌ಸ್ಪೈರ್ ಆಗಿದ್ದೀನಿ

  "ವರಹ ರೂಪಂ ಹಾಗೂ ನವರಸಂ. ಎರಡೂ ಹಾಡುಗಳ ಸಂಯೋಜನೆ ಬೇರೆ ಬೇರೆ. ಆ ರಾಕ್‌ಬ್ಯಾಂಡ್ ಸ್ಟೈಲ್‌ನಿಂದ ಇನ್‌ಸ್ಪೈರ್ ಆಗಿದ್ದೀವಿ. ಆದರೆ ಆದರೆ ನಮ್ಮ ಹಾಡಿನ ಸಂಯೋಜನೆಯೇ ಬೇರೆ. ಸ್ಟೈಲ್ ವಿಚಾರದಲ್ಲಿ 'ವರಹ ರೂಪಂ' ಸಾಂಗ್‌ ಕೇಳಿ ಇನ್‌ಸ್ಪೈರ್ ಆಗಿರೋದು ನಿಜ. ಅದು ಯಾವ ರೀತಿ ಅಂದರೆ ಬರೀ ಸ್ಟೈಲ್‌. ಅದು ಬಿಟ್ಟು ಅದಕ್ಕು ಇದಕ್ಕೂ ಯಾವುದೇ ಸಂಬಂಧ ಇಲ್ಲ."

  ನಮ್ಮನ್ನೇ ಹೊಡೆದುಹಾಕಿ ಮುಂದೆ ಹೋದ್ರು; ಫಿಲ್ಮ್‌ಫೇರ್‌ನಲ್ಲೂ 'ಕಾಂತಾರ' ಹೊಗಳಿದ ತೆಲುಗು ನಟ ನಾನಿ!ನಮ್ಮನ್ನೇ ಹೊಡೆದುಹಾಕಿ ಮುಂದೆ ಹೋದ್ರು; ಫಿಲ್ಮ್‌ಫೇರ್‌ನಲ್ಲೂ 'ಕಾಂತಾರ' ಹೊಗಳಿದ ತೆಲುಗು ನಟ ನಾನಿ!

  ಆ ಸಾಂಗ್‌ ತಲೇಲಿ ಇಟ್ಟುಕೊಂಡು ಮಾಡಿಲ್ಲ

  ಆ ಸಾಂಗ್‌ ತಲೇಲಿ ಇಟ್ಟುಕೊಂಡು ಮಾಡಿಲ್ಲ

  "ಮಲಯಾಳಂ ಸಾಂಗ್‌ನ ತಲೆಯಲ್ಲಿ ಇಟ್ಟುಕೊಂಡು ಈ ಸಾಂಗ್ ಖಂಡಿತ ಮಾಡಿಲ್ಲ. ಇಂಗ್ಲೀಷ್ ಸಾಂಗ್ಸ್ ಕೇಳಿ ಕೆಲವೊಮ್ಮೆ ಇದೇ ಸ್ಟೈಲ್‌ನಲ್ಲಿ ಸಾಂಗ್ ಮಾಡೋಣ ಎಂದುಕೊಳ್ಳುತ್ತೀವಿ ಅಲ್ವಾ ಅದೇ ರೀತಿ ಇದು. 'ನವರಸಂ' ಸಾಂಗ್ ರೀತಿ ರಾಕ್ ಬ್ಯಾಂಡ್, ಗಿಟಾರ್ ಸ್ಟೈಲ್‌ನಲ್ಲಿ ಮಾಡಬೇಕು ಎಂದುಕೊಂಡೆ. ನಾವು ತೋಡಿ, ವರಾಳಿ, ಮುಖಾರಿ ರಾಗಗಳನ್ನು ಬಳಸಿ ಈ ಸಾಂಗ್ ಮಾಡಿದ್ದೇವೆ. ರಾಗಗಳ ಛಾಯೆ ಒಂದೇ ರೀತಿ ಇರುವುದರಿಂದ ಕೇಳವವರಿಗೆ ಸಾಮ್ಯತೆ ಎನ್ನಿಸಬಹುದು. ಆದರೆ ಸಂಯೋಜನೆ ಬೇರೆ, ಟ್ಯೂನ್ ಬೇರೆ. ರಿದಮ್ಸ್, ಇನ್‌ಸ್ಟ್ರೂಮೆಂಟ್ಸ್ ಇರೋದನ್ನೇ ಬಳಸೋಕೆ ಸಾಧ್ಯ. ನಾನು ಎಲೆಕ್ಟ್ರಿಕ್ ಗಿಟಾರ್ ಬಳಸಿದ್ದೀನಿ".

  ಪ್ಯೂರ್ ಕರ್ನಾಟಿಕ್ ಕ್ಲಾಸಿಕಲ್ ಕಂಪೋಸಿಷನ್

  ಪ್ಯೂರ್ ಕರ್ನಾಟಿಕ್ ಕ್ಲಾಸಿಕಲ್ ಕಂಪೋಸಿಷನ್

  "ನವರಸಂ ಆಲ್ಬಮ್ ಸಾಂಗ್ ಬಗ್ಗೆ ನನಗೆ ಗೊತ್ತೇಯಿಲ್ಲ ಎಂದು ಹೇಳುವುದಿಲ್ಲ. ನನಗೆ ಗೊತ್ತು. ಆ ರಾಕ್‌ಬ್ಯಾಂಡ್‌ ಸ್ಟೈಲ್‌ನಿಂದ ಖಂಡಿತ ಇನ್‌ಸ್ಪೈರ್ ಆಗಿದ್ದೀನಿ. ಆ ರಾಗ ಒಂದೇ ಆಗಿರುವುದರಿಂದ ಅದರ ಸಂಚಾರಗಳು ಒಂದೇ ಆಗಿರುವುದರಿಂದ ಆ ರೀತಿ ಎನ್ನಿಸಬಹುದು. ಒಬ್ಬ ಸಂಗೀತ ನಿರ್ದೇಶಕನನ್ನು ಕೇಳಿದರೆ ಇದರ ಬಗ್ಗೆ ಗೊತ್ತಾಗುತ್ತದೆ. ಇದು ಪ್ಯೂರ್ ಕರ್ನಾಟಿಕ್ ಕ್ಲಾಸಿಕಲ್ ಕಂಪೋಸಿಷನ್. ಆಲ್ಬಮ್ ಸಾಂಗ್ ಮಾಡಿದವರು ಈ ಬಗ್ಗೆ ಕೇಳಿಲ್ಲ. ಯಾಕೆಂದರೆ ಇದು ಕಾಪಿ ಅಲ್ಲ ಎಂದು ಅವರಿಗೂ ಗೊತ್ತು. ಅವರಿಗೂ ಈಗಾಗಲೇ ಈ ಸಾಂಗ್ ರೀಚ್ ಆಗಿರುತ್ತದೆ. ಇದೇ ಬೇರೆ ಕಂಪೋಸಿಷನ್ ಎನ್ನುವುದು ಅವರಿಗೂ ಗೊತ್ತಿರುತ್ತದೆ"

  ಯಾಕೆ ಸಾಮ್ಯತೆ ಅನ್ನಿಸ್ತಿದೆ ಅಂದರೆ?

  ಯಾಕೆ ಸಾಮ್ಯತೆ ಅನ್ನಿಸ್ತಿದೆ ಅಂದರೆ?

  "ಒಂದು ರಾಗ ಅಂದಾಕ್ಷಣ, ಅದರ ಸಂಚಾರ, ಛಾಯೆ ಒಂದೇ ರೀತಿ ಇರುತ್ತದೆ. 'ನವರಸಂ' ಸಾಂಗ್‌ ನನಗೆ ಗೊತ್ತೇಯಿಲ್ಲ ಎಂದು ಹೇಳುತ್ತಿಲ್ಲ. ಅದನ್ನು ಕೇಳಿದಾಗ ನಿಜಕ್ಕೂ ಅದ್ಭುತವಾಗಿದೆ ಎನ್ನಿಸಿತ್ತು. ಈ ಸ್ಟೈಲ್‌ನಲ್ಲೇ ನಾವು ಒಂದು ಹೊಸ ಸಾಂಗ್ ಮಾಡೋಣ ಎಂದು ಮಾಡಿದ್ದು. ಎಲ್ಲಿ ನಮಗೆ ಸಾಮ್ಯತೆ ಅನ್ನಿಸುತ್ತಿದ ಅಂದರೆ, ಆ ರಾಗದ ಛಾಯೆ. ಜೊತೆಗೆ ಅದರ ಟೆಂಪೋ(ವೇಗ) ಒಂದೇ ತರ ಇರುವುದರಿಂದ ಎರಡೂ ಒಂದೇ ಎನ್ನಿಸುತ್ತೆ. ಅದು ಬಿಟ್ಟರೆ ಎರಡೂ ಕೂಡ ಬೇರೆ ಬೇರೆ ಕಂಪೋಸಿಷನ್."

  ರಾಗದ ಛಾಯೆ ಒಂದೇ ರೀತಿ ಇದೆ

  ರಾಗದ ಛಾಯೆ ಒಂದೇ ರೀತಿ ಇದೆ

  "ಮ್ಯೂಸಿಕ್ ಗೊತ್ತಿರುವವರು ಯಾರು ಕೂಡ ಇದು ಕಾಪಿ ಎಂದು ಹೇಳುವುದಿಲ್ಲ. ಯಾಕಂದರೆ ಇದು ರೆಗ್ಯುಲರ್ ಆಗಿ ಕಂಪೋಸ್ ಮಾಡುವ ಸಾಂಗ್ ಅಲ್ಲ. ಇದು ದಕ್ಷಿಣ ಕರ್ನಾಟಕದ ಕರ್ನಾಟಿಕ್ ಕ್ಲಾಸಿಕಲ್ ಕಂಪೋಸಿಷನ್. ಆ ರಾಗದ ಛಾಯೆ ಒಂದೇ ರೀತಿ ಇರುವುದರಿಂದ ಎರಡನ್ನು ಕೇಳಿದಾಗ ಒಂದೇ ಎನ್ನಿಸಬಹುದು. ಅವರು ಯಾವ ರಾಗ ಬಳಸಿದ್ದಾರೋ ಗೊತ್ತಿಲ್ಲ, ನಾನು ತೋಡಿ, ವರಾಳಿ, ಮುಖಾರಿ ರಾಗಗಳನ್ನು ಬಳಸಿದ್ದೇನೆ" ಎಂದು ಅಜನೀಶ್ ಲೋಕನಾಥ್ ಫಿಲ್ಮಿಬೀಟ್‌ಗೆ ಸ್ಪಷ್ಟನೆ ನೀಡಿದ್ದಾರೆ.

  English summary
  Ajaneesh B Loknath Clarification About Kantara Movie Varaha Roopam Song Copycat Allegations. Know More.
  Tuesday, October 11, 2022, 14:00
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X