»   » ಸಂದರ್ಶನ: ಬಿಗ್ ಬಾಸ್ ಸೋತರು, ಜೀವನದಲ್ಲಿ ಗೆದ್ದ ದಿವಾಕರ್

ಸಂದರ್ಶನ: ಬಿಗ್ ಬಾಸ್ ಸೋತರು, ಜೀವನದಲ್ಲಿ ಗೆದ್ದ ದಿವಾಕರ್

Posted By:
Subscribe to Filmibeat Kannada
ಬಿಗ್ ಬಾಸ್ ಸೋತರು, ಜೀವನದಲ್ಲಿ ಗೆದ್ದ ದಿವಾಕರ್ | Filmibeat Kannada

'ಬಿಗ್ ಬಾಸ್ ಕನ್ನಡ' 5ನೇ ಆವೃತ್ತಿಯಲ್ಲಿ ರನ್ನರ್ ಅಪ್ ಆದ ಸೇಲ್ಸ್ ಮ್ಯಾನ್ ದಿವಾಕರ್ ಸಿನಿಮಾಗಳಲ್ಲಿ ಮತ್ತು ಧಾರಾವಾಹಿಗಳಲ್ಲಿ ಅಭಿನಯಿಸಲು ಆಫರ್ ಬರುತ್ತಿದೆಯಂತೆ?.. ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಜೊತೆ ಹೊಸ ಸಿನಿಮಾ ಮಾಡ್ತಾರಂತೆ?.. ಅರೇ, 'ಉಗ್ರಂ' ಚಿತ್ರದಲ್ಲಿ ಅಭಿನಯಿಸಿದ್ದಾರಂತೆ?..

ಬಿಗ್ ಬಾಸ್ ನಿಂದ ಹೊರ ಬಂದ್ಮೆಲೆ ದಿವಾಕರ್ ಬಗ್ಗೆ ಇಷ್ಟೆಲ್ಲಾ ಕೂತುಹಲ, ಅನುಮಾನಗಳು ಕಾಡುತ್ತಿದೆ. ಆದ್ರೆ, ಇದ್ಯಾವುದಕ್ಕು ತಲೆಕೆಡಿಸಿಕೊಳ್ಳದ ದಿವಾಕರ್ ತಮ್ಮ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಈ ಮಧ್ಯೆ ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿರುವ ದಿವಾಕರ್ ಮನೆಗೆ ನಾವು ಭೇಟಿ ನೀಡಿ ಅವರ ವಿಶೇಷ ಸಂದರ್ಶನ ಮಾಡಿದ್ವಿ.

ಹಾಗಿದ್ರೆ, ಬಿಗ್ ಬಾಸ್ 5ನೇ ಆವೃತ್ತಿಯ ರನ್ನರ್ ಅಪ್ ಸ್ಫರ್ದಿ ದಿವಾಕರ್ ಅವರ ಮುಂದಿನ ಯೋಜನೆಗಳೇನು? ದಿವಾಕರ್ ಗೆದ್ದ 1 ಲಕ್ಷ ಹಣದಲ್ಲಿ ಏನು ಮಾಡಲಿದ್ದಾರೆ? ಸಿನಿಮಾ, ಧಾರವಾಹಿಗಳಲ್ಲಿ ಅಭಿನಯಿಸ್ತಾರ? ಈ ಎಲ್ಲ ಕುತೂಹಲಗಳಿಗೆಲ್ಲಾ ಸ್ವತಃ ದಿವಾಕರ್ ನಿಮ್ಮ 'ಫಿಲ್ಮಿಬೀಟ್ ಕನ್ನಡ'ದ ಜೊತೆ ಮಾತನಾಡಿದ್ದಾರೆ. ಮುಂದೆ ಓದಿ......

ಬಿಗ್ ಬಾಸ್ ಗೆ ಹೋಗ್ಬೇಕು ಅಂತ ನಿಮಗೆ ಅನಿಸಿದ್ದು ಯಾಕೆ?

''ಬಿಗ್ ಬಾಸ್ ಆವೃತ್ತಿಗಳನ್ನ ನಾನು ನೋಡಿಲ್ಲ. ಯಾಕಂದ್ರೆ, ನನ್ನ ಕೆಲಸದಲ್ಲಿ ಇರುತ್ತಿದ್ದೆ. ಆದ್ರೆ, ನಮ್ಮ ಮನೆಯಲ್ಲಿ ನೋಡುತ್ತಿದ್ದರು. ಸುದೀಪ್ ಅವರ ಪ್ರೋಮೋಗಳನ್ನ ನೋಡಿದ್ದೆ. ಬಿಗ್ ಬಾಸ್ ಅಂದ್ರೆ ಈಗಲೂ ನನಗೆ ಏನು ಅಂತ ಗೊತ್ತಿಲ್ಲ. ಮನೆಯೊಳಗೆ ಹೋದ್ಮೆಲೆ ಅನ್ಸುತ್ತೆ. ಅದೊಂದು ಬೇರೆ ಪ್ರಪಂಚ ಅಂತ.''

ಬಿಗ್ ಬಾಸ್ ಗೆ ಹೋಗಿ ಬಂದ್ಮೇಲೆ ನಿಮ್ಮಲ್ಲಿ ಆದ ಬದಲಾವಣೆ ಏನು?

''ನನಗೆ ಕೋಪ ಹೆಚ್ಚಿತ್ತು. ಅದು ಕಡಿಮೆ ಮಾಡಿಕೊಂಡಿದ್ದೇನೆ. ಯಾರಾದರೂ ಏನಾದರೂ ಹೇಳಿದ್ರೆ ಕೇಳುವ ತಾಳ್ಮೆ ಇರಲಿಲ್ಲ. ಈಗ ಕಿವಿಕೊಟ್ಟು ಕೇಳುವಷ್ಟು ತಾಳ್ಮೆ ಇದೆ. ಆದ್ರೆ, ನನಗೆ ಏನು ಕರೆಕ್ಟ್ ಅನಿಸುತ್ತೋ ಅದನ್ನ ಮಾಡ್ತೀನಿ.''

ಬಿಗ್ ಬಾಸ್ ಮನೆಯ ಅನುಭವ ಹೇಳುವುದಾರೇ ಹೇಗಿತ್ತು?

''106 ದಿನ ಬಿಗ್ ಬಾಸ್ ಮನೆಯಲ್ಲಿದ್ದೆ. ಪ್ರತಿಯೊಂದು ಕಡೆ ಹೋದಾಗಲು ದಿವಾಕರ್ ಅದ್ಭುತ, ದಿವಾಕರ್ ಅದ್ಭುತ ಅಂತ ಗುರುತಿಸುತ್ತಿದ್ದಾರೆ. ತುಂಬ ಖುಷಿ ಆಗ್ತಿದೆ. ಕೋಪ, ಸಿಟ್ಟು, ಜಗಳ ಎಲ್ಲವೂ ಸ್ವಾಭಾವಿಕವೇ. ಯಾಕಂದ್ರೆ, ಬೇರೆ ಪ್ರಪಂಚದಲ್ಲಿ 17 ಜನರನ್ನ ಬಿಟ್ಟಿರುತ್ತಾರೆ. ಹೊರಗಿನ ಜಗತ್ತಿನ ಬಗ್ಗೆ ನಮಗೆ ಯಾವುದೇ ಅರಿವಿಲ್ಲ. ಅಷ್ಟು ಜನ ಅಷ್ಟು ದಿನ ಒಂದೇ ಕಡೆ ಇದ್ದಾಗ ಎಲ್ಲವು ಬರುತ್ತೆ''.

ಬಿಗ್ ಬಾಸ್ ನಂತರ ಮುಂದಿನ ಯೋಜನೆ ಏನು?

''ಪ್ಲಾನ್ ಏನು ಅಂತ ಇನ್ನು ನಿರ್ಧಾರ ಮಾಡಿಲ್ಲ. ಈಗ ಸ್ವಲ್ಪ ಫ್ರೀ ಆಗ್ತಿದ್ದೀನಿ. ಸಿನಿಮಾ ಅವಕಾಶಗಳು ಬರ್ತಿದೆ. ಒಂದೊಳ್ಳೆ ಕಥೆ ಮಾಡ್ಕೊಂಡು, ಕನ್ನಡಿಗರ ಮುಂದೆ ಬರಬೇಕು ಎನ್ನುವ ಆಸೆ. ನಿಮ್ಮ ಪ್ರೀತಿಗೆ ಚಿರಋಣಿ. ನಾನು ಯಾವತ್ತಿದ್ರೂ ಕಾಮನ್ ಮ್ಯಾನ್.''

ಉಗ್ರಂ ಸಿನಿಮಾದಲ್ಲಿ ಅಭಿನಯಿಸಿದ್ದೀರಂತೆ ಹೌದಾ?

''ಉಗ್ರಂ ಸಿನಿಮಾನ ಇನ್ನೊಂದು ಸಲ ನೋಡಿ. ನಾನು ಎಲ್ಲೂ ಇಲ್ಲ. ನನ್ನನ್ನ ನಾನೇ ಹುಡುಕಿ ಬಿಟ್ಟಿದ್ದೀನಿ. ಅದೇನಂದ್ರೆ, ನನ್ನ ಫ್ರೆಂಡ್ ಒಬ್ಬರು ಸಿನಿಮಾದಲ್ಲಿ ಕೆಲಸ ಮಾಡ್ತಿದ್ರು. ಅವರನ್ನ ಡ್ರಾಪ್ ಮಾಡೋಕೆ ಹೋಗ್ತಿದ್ದೆ. ಒಂದೆರೆಡು ಗಂಟೆ ನಿಂತ್ಕೊಳ್ಳಿ ಅಂತ ಪಕ್ಕದಲ್ಲಿ ನಿಲ್ಲಿಸಿದ್ರು. ಅದನ್ನ ಯಾರೋ ಫೋಟೋ ತೆಗೆದು ಹಾಕಿದ್ದಾರೆ ಅಷ್ಟೇ. ಫೋಟೋ ಹೇಗೆ ಬೇಕಾದ್ರು ಮಾಡಬಹುದು. ಇಷ್ಟು ದಿನ ಇಲ್ಲದ ಫೋಟೋ ಈಗ್ಯಾಕೆ?''

ಕಿರುಚಿತ್ರದಲ್ಲಿ ಅಭಿನಯಿಸಿರುವುದು ನಿಜಾ ಅಲ್ವಾ.!

''ಹೌದು, ಅದು ನಿಜ. ಮೊಬೈಲ್ ನಲ್ಲಿ ಮಾಡಿರುವುದು. ಅದು ತುಂಬ ದಿನ ಆಯ್ತು. ನಾನು ಸೇಲ್ಸ್ ಮಾಡಬೇಕಾದ್ರೆ, ಕಾಮಿಡಿ ಮಾಡೋದು, ಡೈಲಾಗ್ ಹೇಳೋದೆಲ್ಲ ಇತ್ತು.''

1 ಲಕ್ಷ ಬಹುಮಾನ ಬಂತು. ಅದರಿಂದ ಏನು ಮಾಡ್ತೀರಾ?

''1 ಲಕ್ಷ ಹಣವನ್ನ ಏನು ಮಾಡೋಕೆ ಆಗುತ್ತೆ. ಅದರಿಂದ ಏನು ಮಾಡೋಕೆ ಆಗಲ್ಲ. ಸ್ವಲ್ಪ ಸಮಸ್ಯೆಗಳಿದೆ ಅದನ್ನ ನಿವಾರಿಸಬೇಕು ಅಷ್ಟೇ.''

ದಿವಾಕರ್ ಗೆ ದುಡ್ಡು ಕೊಡ್ಬೇಕಿತ್ತು ಅಂತ ಹೇಳಿದವ್ರಿಗೆ ಚಂದನ್ ಶೆಟ್ಟಿ ಕೊಟ್ಟ ಉತ್ತರ ಇದು.!

ಚಂದನ್ ಶೆಟ್ಟಿ ಜೊತೆ ಸಿನಿಮಾ ಮಾಡ್ತೀರಾ?

''ಅದು ಬಿಗ್ ಬಾಸ್ ಮನೆಯಲ್ಲಿರುವ ವೇಳೆ ಮಾತನಾಡಿದ್ದು ನಿಜ. ನಾನೊಂದು ನಿನಗೆ ಸಿನಿಮಾ ಮಾಡ್ತೀನಿ, ಅದಕ್ಕೆ ನಾನೇ ಮ್ಯೂಸಿಕ್ ಮಾಡ್ತೀನಿ ಅಂದಿದ್ರು. ಈಗ ಅವರು ಬ್ಯುಸಿ ಇದ್ದಾರೆ. ಅದರ ಬಗ್ಗೆ ಕೂತ್ಕೊಂಡು ಮಾತನಾಡಬೇಕು. ಇನ್ನು ನಿರ್ಧಾರ ಮಾಡಿಲ್ಲ.''

'ಬಿಗ್ ಬಾಸ್ ಕನ್ನಡ-5' ಗ್ರ್ಯಾಂಡ್ ಫಿನಾಲೆ ಹೈಲೈಟ್ಸ್ - ಭಾಗ 2

ನಿಮಗೆ ಸೆಲೆಬ್ರಿಟಿ ಫೀಲ್ ಇದಿಯಾ?

''ನನಗೆ ಸೆಲೆಬ್ರಿಟಿ ಎನ್ನುವು ಫೀಲ್ ಬಂದಿಲ್ಲ. ಜನರು ಸೆಲ್ಫಿ ತಗೊಳ್ತಾರೆ. ಫೋಟೋ ತಗೊಳ್ತಾರೆ. ಖುಷಿಯಾಗುತ್ತೆ. ಅವರು ಅಷ್ಟು ವೋಟ್ ಮಾಡಿದ್ದಾರೆ. ಸಾಮಾನ್ಯವಾಗಿ ಓಡಾಡುತ್ತೇನೆ. ಕಂಡು ಹಿಡಿದು ಮಾತನಾಡಿಸುತ್ತಾರೆ. ನಾನು ಸೇಲ್ಸ್ ಮ್ಯಾನ್ ಆಗಿ ಓಡಾಡಿರುವ ನನಗೆ ಸೆಲೆಬ್ರಿಟಿ ಎಂಬ ಭಾವನೆ ಇಲ್ಲ.''

ಸದ್ಯದಲ್ಲೇ ದಿವಾಕರ್ 'ಹೀರೋ' ಆದರೆ ಅಚ್ಚರಿ ಪಡಬೇಡಿ.!

ಈ ಕ್ಷಣದಲ್ಲಿ ನೀವು ಯಾರಿಗೂ ಥ್ಯಾಂಕ್ಸ್ ಹೇಳ್ತೀರಾ?

''ಬಿಗ್ ಬಾಸ್ ತಂಡಕ್ಕೆ ಧನ್ಯವಾದಗಳು. ದೇಶದ ನಂಬರ್ ವನ್ ರಿಯಾಲಿಟಿ ಶೋ. ಸುದೀಪ್ ಸರ್, ಪರಮ್ ಸರ್ ಅವರಿಗೆ ಸ್ಪೆಷಲ್ ಥ್ಯಾಂಕ್ಸ್. ನನ್ನ ತಪ್ಪನ್ನ ತಿದ್ದಿದ್ದಾರೆ. ಜನರಿಗೆ ದೊಡ್ಡ ಥ್ಯಾಂಕ್ಸ್. ನನಗೆ ವೋಟ್ ಮಾಡಿದ್ದಾರೆ. ನನ್ನನ್ನ ಈ ಮಟ್ಟಕ್ಕೆ ಬರುವುದಕ್ಕೆ ಅವರೇ ಕಾರಣ.''

English summary
Bigg boss kannada 5 Runner up Contestant diwakar interview. he shared 106 days experience at bigg boss house with filmibeat kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada