»   » 'ಪ್ಯಾಕು ಪ್ಯಾಕು' ಹಿತೇಶ್ ಬಗ್ಗೆ ಅನೇಕರಿಗೆ ತಿಳಿಯದ ನೋವಿನ ಕಥೆ

'ಪ್ಯಾಕು ಪ್ಯಾಕು' ಹಿತೇಶ್ ಬಗ್ಗೆ ಅನೇಕರಿಗೆ ತಿಳಿಯದ ನೋವಿನ ಕಥೆ

Posted By:
Subscribe to Filmibeat Kannada

ಜೀ ಕನ್ನಡ ವಾಹಿನಿಯ ಜನಪ್ರಿಯ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದಲ್ಲಿ ಎರಡನೇ ರನ್ನರ್ ಅಪ್ ಅರ್ಥಾತ್ ಮೂರನೇ ಸ್ಥಾನ ಗಳಿಸಿದ 'ಪ್ಯಾಕು ಪ್ಯಾಕು' ಹಿತೇಶ್ ಈಗ ಇಡೀ ಕರ್ನಾಟಕಕ್ಕೆ ಚಿರಪರಿಚಿತ.

'ಕಾಮಿಡಿ ಕಿಲಾಡಿಗಳು' ವೇದಿಕೆ ಮೇಲೆ ಲೇಡಿ ಗೆಟಪ್ ಹಾಕಿ ನುಲಿಯುತ್ತಾ, ನಿಮ್ಮನ್ನೆಲ್ಲ ನಗೆಗಡಲಿನಲ್ಲಿ ತೇಲಿಸುತ್ತಿದ್ದ ಹಿತೇಶ್ ಮನದಲ್ಲಿ ಇದ್ದ ನೋವು ಮಾತ್ರ ಯಾರಿಗೂ ಗೊತ್ತಿಲ್ಲ.[ಛೇ..'ಕಾಮಿಡಿ ಕಿಲಾಡಿಗಳು' ಮುಗ್ದೋಯ್ತಲ್ಲ ಅಂತ ಬೇಸರ ಪಡ್ತಿದ್ದೋರಿಗೆ ಹ್ಯಾಪಿ ನ್ಯೂಸ್.!]

ಡಿಗ್ರಿ ಓದಿದರೂ ಕೆಲಸ ಸಿಗದೆ, ರಿಚಾರ್ಜ್ ಅಂಗಡಿಯಲ್ಲಿ ಕುಳಿತಿದ್ದ ಹಿತೇಶ್ ಒಂದೊಳ್ಳೆ ಅವಕಾಶಕ್ಕಾಗಿ ಪ್ರತಿದಿನ ದೇವರಲ್ಲಿ ಪ್ರಾರ್ಥಿಸುತ್ತಿದ್ದರು. ಕಡೆಗೂ ಹಿತೇಶ್ ಪ್ರಾರ್ಥನೆಗೆ ದೇವರು ಅಸ್ತು ಎಂದ.! 'ಕಾಮಿಡಿ ಕಿಲಾಡಿಗಳು' ವೇದಿಕೆ ಮೇಲೆ ಮಿನುಗುವ ಅವಕಾಶ ಸಿಕ್ತು. ಕೆಲಸ ಇಲ್ಲ ಅಂತ ಕೊರಗುತ್ತಿದ್ದ ಹಿತೇಶ್ ಮೊಗದಲ್ಲಿ ಮಂದಹಾಸ ಮೂಡಿತು.

ಪ್ಯಾಕು ಪ್ಯಾಕು ಹಿತೇಶ್ ರವರ ಜೀವನಗಾಥೆ ಇಲ್ಲಿದೆ ಓದಿರಿ....
ಸಂದರ್ಶನ : ಹರ್ಷಿತಾ ರಾಕೇಶ್

* ನಮ್ಮ ಓದುಗರಿಗೆ ನಿಮ್ಮ ಪರಿಚಯ...

- ನನ್ನ ಹೆಸರು ಹಿತೇಶ್ ಕುಮಾರ್. ಕಾಪಿನಡ್ಕ ನನ್ನ ಊರು. ತಂದೆ - ಮುತ್ತಪ್ಪ ಪೂಜಾರಿ, ತಾಯಿ - ರತ್ನಾವತಿ. ನಮ್ಮ ಮನೆ 'ಮುತ್ತುರತ್ನ' ನಿವಾಸ. ನನಗೆ ಇಬ್ಬರು ಅಣ್ಣಂದಿರು ನಿತೇಶ್ ಮತ್ತು ಸುಖೇಶ್. [Exclusive: 'ಕಾಮಿಡಿ ಕಿಲಾಡಿಗಳು' ಗೆದ್ದು ಕಿಲಕಿಲ ಎಂದ ಕಿಲಾಡಿ ಯಾರು.?]

ನಿಮ್ಮ ವಿದ್ಯಾಭ್ಯಾಸ..

- ನಾನು ಬಿ.ಕಾಂ ಮಾಡಿದ್ದೇನೆ. ಕೆಲಸ ಇಲ್ಲದೇ ರಿಚಾರ್ಜ್ ಶಾಪ್ ಸೇರಿಕೊಂಡಿದ್ದೆ. ಅದಕ್ಕಿಂತ ಮೊದಲು ಟಿವಿ ಶಾಪ್ ನಲ್ಲಿ ಕೆಲಸಕ್ಕೆ ಇದ್ದೆ. ಹೀಗೆ ಕೆಲಸ ಮಾಡುವಾಗಲೇ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ. ['ಕಾಮಿಡಿ ಕಿಲಾಡಿಗಳು' ಗೆದ್ದ ಪ್ರತಿಭಾವಂತರಿಗೆ ಸಿಕ್ಕ ಬಹುಮಾನ ಹಣ ಎಷ್ಟು ಗೊತ್ತೇ.?]

ನಟನೆ ಬಗ್ಗೆ ನಿಮಗೆ ಒಲವು ಮೂಡಿದ್ದು ಹೇಗೆ.?

- ನನ್ನ ತಂದೆಯ ತಂದೆ ಕೂಡ ಹಾಸ್ಯ ಮಾಡುತ್ತಿದ್ದರು. ಯಕ್ಷಗಾನಕ್ಕೆಲ್ಲ ಹಾಡುತ್ತಿದ್ದರು. ನಮ್ಮ ತಂದೆ ಕೂಡ ಭಜನೆ ಮಾಡುತ್ತಿದ್ದರು. ನನ್ನ ತಾಯಿ ತುಂಬಾ ತಮಾಷೆ ಮಾಡುತ್ತಾರೆ. ಹೀಗಾಗಿ ಹಾಸ್ಯ ಮಾಡುವುದು ನನಗೂ ರಕ್ತದಲ್ಲೇ ಬಂದಿದೆ.[ಶಿವರಾಜ್.ಕೆ.ಆರ್.ಪೇಟೆಗೆ ಅದೃಷ್ಟ ಖುಲಾಯಿಸಿದೆ: ಅವಕಾಶ ಒದ್ಗೊಂಡು ಬರ್ತಿದೆ.!]

ತುಂಬಾ ಚೆನ್ನಾಗಿ ಮಿಮಿಕ್ರಿ ಮಾಡ್ತೀರಲ್ಲ.?

ಅಂಗನವಾಡಿಗೆ ಹೋಗುವಾಗಲೇ ಕಥೆ ಕೇಳುವ ಕಾಂಪಿಟೇಷನ್ ಗೆ ಹೋಗುತ್ತಿದ್ದೆ. ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ್ದೆ. ಸಣ್ಣ ವಯಸ್ಸಿನಲ್ಲಿ ತುಂಬಾ ಪ್ರೈಸ್ ಬರುತ್ತಿತ್ತು ನನಗೆ. ವಾಣಿ ಪಿಯು ಕಾಲೇಜ್ (ಬೆಳ್ತಂಗಡಿ) ನಲ್ಲಿ ಎನ್.ಎಸ್.ಎಸ್ ಸೇರಿಕೊಂಡಾಗ ಮಿಮಿಕ್ರಿ ಮಾಡ್ತಿದ್ದೆ. ಅಲ್ಲಿ ನನ್ನ ಪ್ರತಿಭೆಯನ್ನ ಗುರುತಿಸಿದರು. ಮಂಗಳೂರು ಆಕಾಶವಾಣಿಯಲ್ಲಿ ಮೊದಲು ಮಿಮಿಕ್ರಿ ಮಾಡಿದ್ದೆ.

ಪ್ಯಾಕು ಪ್ಯಾಕು' ಅಂತಲೇ ಫೇಮಸ್ ಆಗಿದ್ದೀರಲ್ಲ...

ಮಿಮಿಕ್ರಿ ಅಂದ್ರೆ ಪ್ರಾಣಿ ಪಕ್ಷಿಗಳ ಶಬ್ದ ಮಾಡುತ್ತಿದ್ದೆ. ಈಗ ನನ್ನ ಜನ ಗುರುತಿಸುವುದು ಪ್ಯಾಕು ಪ್ಯಾಕು ಅಂತಲೇ. ಅದೇ ಪ್ಯಾಕು ಪ್ಯಾಕು ನ ನಾನು ಊರಲ್ಲಿ ಎಷ್ಟೋ ಪ್ರೋಗ್ರಾಂನಲ್ಲಿ ಮಾಡಿದ್ದೇನೆ. ಆಗ ಯಾವನೂ ನನ್ನನ್ನ ಗುರುತಿಸಿರಲಿಲ್ಲ. 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮಕ್ಕೆ ಬಂದ್ಮೇಲೆ ಮೊದಲ ಶೋನಲ್ಲಿ ಪ್ಯಾಕು ಪ್ಯಾಕು ಮಾಡಿದ್ರಿಂದ ಜನ ನನ್ನನ್ನ ಈಗಲೂ 'ಪ್ಯಾಕು ಪ್ಯಾಕು' ಅಂತಲೇ ಗುರುತಿಸುತ್ತಾರೆ.

ಕಾಮಿಡಿ ಕಿಲಾಡಿಗಳು ಕಾರ್ಯಕ್ರಮಕ್ಕೆ ಬರಬೇಕು ಅಂದುಕೊಂಡಿದ್ದು....

- ಎನ್.ಎಸ್.ಎಸ್ ನಲ್ಲಿ ಇರುವಾಗ ಸ್ಕಿಟ್ ಮಾಡುತ್ತಿದ್ವಿ. ನಮಗೆಲ್ಲ ಆಗ ವೇದಿಕೆ ಸಿಗುತ್ತಿತ್ತು. ಅದೇ ನಮಗೆ ಖುಷಿ. ಆದ್ರೆ, ಮನೆಯಲ್ಲಿ ಮಾತ್ರ ಕಷ್ಟ ಪಟ್ಟು ಹಣ ಕೊಡುತ್ತಿದ್ದರು. ನಾನು ಎಷ್ಟೇ ಕಾಮಿಡಿ ಮಾಡಬಹುದು. ಆದ್ರೆ, ನನ್ನೊಳಗೆ ಬಹಳ ನೋವಿದೆ.

ನೋವು

- ನಿಜ. ನಾನು ಎಷ್ಟೇ ಕಾಮಿಡಿ ಮಾಡಬಹುದು. ಆದ್ರೆ, ನನ್ನೊಳಗೆ ಬಹಳ ನೋವಿದೆ. ನಾನು ಡಿಗ್ರಿ ಮಾಡಿದ್ರೂ, ಕೆಲಸ ಇಲ್ಲ. ನನ್ನ ಲೈಫ್ ಇನ್ನೂ ಸೆಟೆಲ್ ಆಗಿಲ್ಲ. ಪ್ರತಿ ದಿನ ನನಗೆ ಟೆನ್ಷನ್ ಆಗೋದು. ಮನೆಯವರಿಗೂ ನನ್ನ ಬಗ್ಗೆ ತುಂಬಾ ಟೆನ್ಷನ್ ಮಾಡಿಕೊಳ್ಳೋರು. ನಮ್ಮದು ಮಧ್ಯಮ ವರ್ಗದ ಕುಟುಂಬ ತುಂಬಾ ಸಾಲ ಇದೆ. ಇಬ್ಬರು ಅಣ್ಣಂದಿರು ದುಡಿಯುತ್ತಾರೆ. ಆದರೂ ಹೊಸ ಮನೆ ಕಟ್ತಿರೋದ್ರಿಂದ ಸಾಲ ಇದೆ. ದಿನ ಕೊರಗುತ್ತಿದ್ದೆ.

ಕೊರಗು....

- ಪ್ರತಿದಿನ ತಾಯಿ ಹೇಳ್ತಿದ್ರು. ಹೀಗೆ ಹೋಗ್ತಿದ್ರೆ, ಹೇಗೆ.. ಸಂಪಾದನೆ ಬೇಕು ಅಲ್ವಾ.? ಪ್ರತಿ ದಿನ ಎದ್ದರೆ ಬೇಜಾರು ಆಗೋದು. ನನ್ನ ಫೀಲಿಂಗ್ ನ ನಾನು ಯಾರ ಬಳಿಯೂ ಹೇಳಿಕೊಳ್ಳುತ್ತಿರಲಿಲ್ಲ. ನಾನು ದಿನಾ ಕೊರಗುತ್ತಿದ್ದೆ. ದೇವರ ಹತ್ತಿರ ಪ್ರತಿ ದಿನ ಬೇಡಿಕೊಳ್ಳುತ್ತಿದ್ದೆ. ಒಂದು ಒಳ್ಳೆ ಫೀಲ್ಡ್ ಕಡೆ ದಾರಿ ತೋರಿಸು ಅಂತ. ಈಗ ನನ್ನ ಬೇಡಿಕೆಯನ್ನ ದೇವರು ಈಡೇರಿಸಿದ್ದಾನೆ. ನನ್ನ ಇಷ್ಟದ ಫೀಲ್ಡ್ ನ ದೇವರು ಕೊಟ್ಟಿದ್ದಾನೆ. ಈಗ ಲೈಫ್ ತುಂಬಾ ಚೆನ್ನಾಗಿದೆ. ಜನ ಗುರುತಿಸುತ್ತಾರೆ, ಪ್ರೀತಿ ಮಾಡುತ್ತಾರೆ. ಎಲ್ಲೋ ಇದ್ದಂತ ಒಬ್ಬ ಹಿತೇಶನನ್ನ ಇಡೀ ಕರ್ನಾಟಕಕ್ಕೆ ಪರಿಚಯಸಿದವರು ಜೀ ಕನ್ನಡ ವಾಹಿನಿ.

ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮಕ್ಕೆ ಸೆಲೆಕ್ಟ್ ಆಗಿದ್ದು...

ನಮ್ಮ ಮನೆಯಲ್ಲಿ ಅಮ್ಮ ಯಾವಾಗಲೂ ಜೀ ಕನ್ನಡ ನೋಡೋರು. ಯಾವಾಗಲೂ ಸೀರಿಯಲ್. ಆಗಲೇ ಆಡಿಷನ್ ಬಗ್ಗೆ ಗೊತ್ತಾಗಿದೆ. ಎಲ್ಲರೂ ನನಗೆ ತುಂಬಾ ಸಪೋರ್ಟ್ ಮಾಡಿದರು ಆಡಿಷನ್ ನಲ್ಲಿ ಭಾಗವಹಿಸುವುದಕ್ಕೆ. ಆಡಿಷನ್ ಗೆ ಹೋಗುವ ಹಿಂದಿನ ದಿನ ಪಿತ್ತ ನನಗೆ ನೆತ್ತಿಗೇರಿ, ಬೆಳಗ್ಗಿನ ವರೆಗೂ ವಾಂತಿ ಆಗ್ತಿತ್ತು. ಆರೋಗ್ಯ ಸರಿಯಿಲ್ಲ ಅಂತ ಆದಾಗ ಆಡಿಷನ್ ಗೆ ಹೋಗುವುದು ಬೇಡ ಅಂತಾಯ್ತು. ಆದರೂ ಹೋಗೋಣ ಅಂತ ಹೋದೆ. ಆಡಿಷನ್ ಮಾಡುವಾಗ ಭಯ ಆಗಿತ್ತು. ಮುಕ್ಕಾಲು ಗಂಟೆ ಆಡಿಷನ್ ಮಾಡಿ ಸೆಲೆಕ್ಟ್ ಆಗ್ತೀನೋ, ಇಲ್ವೋ ಅಂತ ಭಯ ಇತ್ತು. ಆದರೆ ಸೆಲೆಕ್ಟ್ ಆಗಿಬಿಟ್ಟೆ.

ಹೆಚ್ಚು ಬಾರಿ ಲೇಡಿ ಗೆಟಪ್ ಹಾಕಿದ್ರಿ...

ಲೇಡಿ ಪಾರ್ಟು ನಾನು ನನ್ನ ಲೈಫ್ ನಲ್ಲಿ ಮಾಡಿರಲಿಲ್ಲ. ಮುಂಚೆ ನಾಟಕ ಮಾಡುವಾಗ ಲೇಡಿ ಪಾರ್ಟ್ ಮಾಡು ಅಂತ ಹೇಳಿದ್ರೆ, ಆಗಲ್ಲ ಅಂತ ಹೇಳ್ತಿದ್ದೆ. ಒಂದ್ಸಲಿ ಆಗಲ್ಲ ಅಂತ ಹೇಳಿದ್ದಕ್ಕೆ ನಾಟಕ ಕ್ಯಾನ್ಸಲ್ ಮಾಡಿದ್ರು. ನಮ್ಮ ಊರಿನಲ್ಲಿ ಈಗ ಹೇಳುತ್ತಾರೆ ಲೇಡಿ ಪಾರ್ಟ್ ಸೂಪರ್ ಆಗಿ ಮಾಡ್ತೀರಾ ಅಂತ. ಸೀರೆ ಕಲರ್ ಸಮೇತ ನೆನಪಿಟ್ಟುಕೊಂಡು ಹೇಳುತ್ತಾರೆ.

ಲೇಡಿ ಗೆಟಪ್ ನಿಮಗೆ ಲಕ್ಕಿ ಅನ್ಸುತ್ತೆ

ನಾನು ಮಾಮೂಲಿ ಆಗಿ ಆಕ್ಟ್ ಮಾಡಿ ಮೂರು ಸಲ ಡೇಂಜರ್ ಝೋನ್ ಗೆ ಹೋಗಿದ್ದೆ. ಲೇಡಿ ಪಾರ್ಟ್ ಹಾಕಿದಾಗಿನಿಂದ ನಾನು ಯಾವತ್ತೂ ಡೇಂಜರ್ ಝೋನ್ ಗೆ ಹೋಗಿದ್ದೇ ಇಲ್ಲ. ಅದೇ ನನಗೆ ಲಕ್ ಆಯ್ತು.

ಡಾ.ರಾಜ್ ಕುಮಾರ್ ರವರನ್ನ ಅನುಕರಣೆ ಮಾಡಿದ್ರಿ...

ಹೌದು, ಉಪೇಂದ್ರ ರವರನ್ನ ಮಿಮಿಕ್ರಿ ಮಾಡಿದ್ದೆ. ಮಾಸ್ಟರ್ ಆನಂದ್ ಹಾಗೂ ಡಾ.ರಾಜಕುಮಾರ್ ರವರನ್ನ ಮಿಮಿಕ್ರಿ ಮಾಡುವಾಗ ತುಂಬಾ ಭಯ ಆಗಿತ್ತು.

ಕಾಮಿಡಿ ಮಾಡುವುದು ಸುಲಭವೋ... ಕಷ್ಟವೋ...

- ಕಾಮಿಡಿ ಮಾಡುವುದು ತುಂಬಾ ಕಷ್ಟ. ಸ್ಟೇಜ್ ಪ್ರೋಗ್ರಾಂನಲ್ಲಿ ನಗಿಸುವುದು ತುಂಬಾ ಕಷ್ಟ. ಕೆಲವರು ನಗುವುದಿಲ್ಲ. ತುಂಬಾ ಪೇಚಾಡಬೇಕು. ಅದರಲ್ಲೂ ಈಗ ನಗಿಸುತ್ತಿದ್ದೇವೆ ಅನಿಸ್ತಿದೆ.

ಸಿನಿಮಾ ಆಫರ್ಸ್ ಬರ್ತಿದ್ಯಾ.?

- ಸಿನಿಮಾ ಆಫರ್ಸ್ ಬರ್ತಿದೆ. ಮೊದಲು ಪ್ರೋಗ್ರಾಂ ಮುಗಿಯಲಿ ಅಂತ ಅಂದುಕೊಳ್ತಿದ್ವಿ. ಸಿನಿಮಾ ಮಾಡುತ್ತೇನೆ. ಸಿನಿಮಾ ಫೀಲ್ಡ್ ನಲ್ಲಿಯೇ ಸಾಧನೆ ಮಾಡುವ ಆಸೆ ಇದೆ.

English summary
Here is an Exclusive Interview of Hitesh, 2nd Runner Up of Zee Kannada Channel's popular show 'Comedy Khiladigalu'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada