»   » ಸ್ಟೈಲಿಶ್ ನಿರ್ದೇಶಕ ಇಂದ್ರಜಿತ್ ಲಂಕೇಶ್ ಜೊತೆ ಸ್ಪೆಷಲ್ ಟಾಕ್

ಸ್ಟೈಲಿಶ್ ನಿರ್ದೇಶಕ ಇಂದ್ರಜಿತ್ ಲಂಕೇಶ್ ಜೊತೆ ಸ್ಪೆಷಲ್ ಟಾಕ್

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಸ್ಟೈಲಿಶ್ ನಿರ್ದೇಶಕ ಅಂತಲೇ ಇಂದ್ರಜಿತ್ ಲಂಕೇಶ್ ಹೆಸರುವಾಸಿ. 'ತುಂಟಾಟ', 'ಮೊನಾಲಿಸಾ', 'ಐಶ್ವರ್ಯ' ಸೇರಿದಂತೆ ಸಾಲು ಸಾಲು ಸೂಪರ್ ಸ್ಟೈಲಿಶ್ ಚಿತ್ರಗಳನ್ನ ಕನ್ನಡಕ್ಕೆ ನೀಡಿರುವ ಇಂದ್ರಜಿತ್ ಇದೀಗ ಅಂತದ್ದೇ ಮತ್ತೊಂದು ರಿಚ್ ಸಿನಿಮಾ 'ಲವ್ ಯು ಆಲಿಯ'ಗೆ ಆಕ್ಷನ್ ಕಟ್ ಹೇಳಿದ್ದಾರೆ.

ಕ್ರೇಜಿಸ್ಟಾರ್ ರವಿಚಂದ್ರನ್, ಬಹುಭಾಷಾ ತಾರೆ ಭೂಮಿಕಾ ಚಾವ್ಲಾ, ಧ್ಯಾನ್, ಸ್ಮಾಲ್ ಸ್ಕ್ರೀನ್ ಸ್ಟಾರ್ ಚಂದನ್, ಶಕೀಲಾ, ಸಾಧು ಕೋಕಿಲಾ, ಬುಲ್ಲೆಟ್ ಪ್ರಕಾಶ್ ಸೇರಿದಂತೆ ದೊಡ್ಡ ತಾರಾಬಳಗ 'ಲವ್ ಯು ಆಲಿಯ' ಚಿತ್ರದಲ್ಲಿದೆ.


ಎರಡು ವರ್ಷಗಳ ಬಳಿಕ 'ಲವ್ ಯು ಆಲಿಯ' ಚಿತ್ರದ ಮೂಲಕ ಮರಳಿ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ಇಂದ್ರಜಿತ್ ಲಂಕೇಶ್, ರವಿಮಾಮ ಮತ್ತು ಭೂಮಿಕಾಗಾಗಿ ವಿಭಿನ್ನ ಪಾತ್ರ ನೀಡಿದ್ದಾರೆ. 'ಲವ್ ಯು ಆಲಿಯ' ಚಿತ್ರದ ಬಗ್ಗೆ ಇಂದ್ರಜಿತ್ 'ಫಿಲ್ಮಿಬೀಟ್ ಕನ್ನಡ'ಗೆ ನೀಡಿದ ಸಂದರ್ಶನ ಇಲ್ಲಿದೆ.


Director Indrajith Lankesh Interview

* ನೀವು ಚಿತ್ರ ನಿರ್ದೇಶನ ಮಾಡಿ ಎರಡು ವರ್ಷ ಆಯ್ತು. ಇಷ್ಟು ಲಾಂಗ್ ಗ್ಯಾಪ್ ಯಾಕೆ?


ನಾನು ಮೂಲತಃ ಪತ್ರಕರ್ತ. ಎಲೆಕ್ಷನ್ ಇತ್ತು. ಅದ್ರಲ್ಲಿ ಬಿಜಿ ಇದ್ದೆ. ಅದಕ್ಕೆ ಸಿನಿಮಾ ಮಾಡೋಕೆ ಆಗಿರ್ಲಿಲ್ಲ. ಒಂದು ವರ್ಷ ಆದ್ಮೇಲೆ ಸಿನಿಮಾ ಮಾಡೋಣ ಅಂತ ಅಂದುಕೊಂಡೆ. ಸ್ಕ್ರಿಪ್ಟ್, ಆರ್ಟಿಸ್ಟ್ ಡೇಟ್ಸ್ ಎಲ್ಲಾ ಹೊಂದಿಸಿಕೊಳ್ಳುವಷ್ಟರಲ್ಲಿ ಎರಡು ವರ್ಷ ಆಗೋಯ್ತು. ನಿರ್ದೇಶಕರಿಗೆ ಒಂದು ವರ್ಷ ಟೈಮ್ ಬೇಕೇ ಬೇಕು ಒಂದು ಒಳ್ಳೆ ಸಿನಿಮಾ ಮಾಡುವುದಕ್ಕೆ. ಅಷ್ಟು ಶ್ರಮ ಇರುತ್ತೆ. ಇದು ಕ್ರಿಯೇಟಿವ್ ಜಾಬ್.


Director Indrajith Lankesh Interview

* ನಿಮ್ಮ ಹೊಸ ಸಿನಿಮಾ 'ಲವ್ ಯು ಆಲಿಯ' ಬಗ್ಗೆ....


- 'ಲವ್ ಯು ಆಲಿಯ' ಸ್ಟ್ರೈಟ್ ಸಿನಿಮಾ. ಕನ್ನಡ ಚಿತ್ರರಂಗದ ಒನ್ ಆಫ್ ದಿ ಬಿಗ್ ಫಿಲ್ಮ್ಸ್. ಡ್ರಾಮಾ, ಸೆಂಟಿಮೆಂಟ್, ಎಮೋಷನ್ಸ್ ಎಲ್ಲಾ ಇದೆ. ರವಿಚಂದ್ರನ್ ಫಸ್ಟ್ ಟೈಮ್ ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭೂಮಿಕಾ ಚಾವ್ಲಾ ಅವರ ಕೆರಿಯರ್ ನಲ್ಲೇ ಇದುವರೆಗೂ ಮಾಡದ ರೋಲ್ ನಲ್ಲಿ ನಟಿಸಿದ್ದಾರೆ. ಇದನ್ನ ಅವರೇ ಹೇಳಿಕೊಂಡಿದ್ದಾರೆ. ಇದು ನಮಗೆ ಕಾಂಪ್ಲಿಮೆಂಟ್. ತುಂಬಾ ಕಷ್ಟ ಪಟ್ಟು, ಇಷ್ಟ ಪಟ್ಟು ಮಾಡಿರುವ ಸಿನಿಮಾ. [ಸ್ಯಾಂಡಲ್ ವುಡ್ಡಿಗೆ ಮತ್ತೆ ಬಂದ 'ಕಾರ್ ಕಾರ್ ಹುಡುಗ' ಧ್ಯಾನ್]


Director Indrajith Lankesh Interview

* ನೀವು ಯೂತ್ ಓರಿಯೆಂಟೆಡ್ ಸಿನಿಮಾಗಳಿಂದಲೇ ಜನಪ್ರಿಯತೆ ಪಡೆದವರು. 'ಲವ್ ಯು ಆಲಿಯ' ಚಿತ್ರದಲ್ಲಿ ರವಿಚಂದ್ರನ್ ಅಂತಹ ಸಿನಿಯರ್ ಆರ್ಟಿಸ್ಟ್ಸ್ ಇದ್ದಾರೆ. ಏನು ಎಕ್ಸ್ ಪೆಕ್ಟ್ ಮಾಡಬಹುದು?


- ನಾನು ಜಂಭದಿಂದ ಹೇಳುತ್ತಿಲ್ಲ. ದಿಗಂತ್ ನನ್ನ ಸಿನಿಮಾ ಮಾಡುತ್ತಿರುವಾಗ ಬಾಲಿವುಡ್ ಗೆ ಟ್ರೈ ಮಾಡುತ್ತಿದ್ದರು. 'ದೇವ್ ಸನ್ ಆಫ್ ಮುದ್ದೇಗೌಡ' ಸಿನಿಮಾ ಕ್ಲಿಪ್ಪಿಂಗ್ಸ್ ಮತ್ತು ಫೋಟೋಸ್ ಕೊಟ್ಟಾಗ, ಅವರಿಗೆ ಆಫರ್ ಸಿಕ್ತು. ದೀಪಿಕಾ ಪಡುಕೋಣೆ ಬಗ್ಗೆ ನಿಮಗೆ ಗೊತ್ತಿದೆ. ಸದಾ ಕೂಡ 'ಮೊನಾಲಿಸಾ' ಆದ್ಮೇಲೆ ಟಾಲಿವುಡ್ ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡರು. ನಮ್ಮ ಸಿನಿಮಾದಲ್ಲಿ ಸ್ಟೈಲಿಂಗ್ ಆ ರೀತಿ ಇರುತ್ತೆ. ಪಾತ್ರಗಳಿಗೆ ಜೀವ ತುಂಬಬೇಕು. ಈ ಸಿನಿಮಾ ಮೂಲಕ ಚಂದನ್ ಕೂಡ ದೊಡ್ಡ ಸ್ಟಾರ್ ಆಗಿ ಬೆಳೆಯುತ್ತಾರೆ. ಸಂಗೀತಾಗೆ ಆಲ್ರೆಡಿ ಆಫರ್ಸ್ ಬರುತ್ತಿದೆ. 'ಲವ್ ಯು ಆಲಿಯ' ಸಿನಿಮಾ ಮೈಲ್ ಸ್ಟೋನ್ ಆಗಲಿದೆ. ಆ ತರಹ ಕ್ವಾಲಿಟಿ ಇದೆ. [ಟೈಟಲ್ ಗೊಂದಲದಲ್ಲಿ ಕ್ರೇಜಿ ಸ್ಟಾರ್ ಹೊಸ ಸಿನಿಮಾ]


Director Indrajith Lankesh Interview

* ರವಿಚಂದ್ರನ್ 'ಸ್ತ್ರೀ ರೋಗ ತಜ್ಞ' ಪಾತ್ರ ಮಾಡಿದ್ದಾರೆ. ಅವರಿಗೆ ಆಕ್ಷನ್ ಕಟ್ ಹೇಳಿದ ಅನುಭವ....


- ಕೆಲಸ ನೀಟ್ ಆಗಿ ಗೊತ್ತಿದ್ದರೆ, ಅವರ ಜೊತೆ ಕೆಲಸ ಮಾಡುವುದು ಸುಲಭ. ಕೆಲಸ ಗೊತ್ತಿಲ್ಲದೇ ಇದ್ದಾಗ ಅವರಿಗೆ ಇರಿಟೇಟ್ ಆಗುತ್ತೆ. ಅವರು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡುವುದಕ್ಕೆ ತಯಾರಿರಬೇಕು. ಹೀಗಾಗಿ ನನಗೆ ಕಷ್ಟ ಆಗ್ಲಿಲ್ಲ. ಇನ್ ಫ್ಯಾಕ್ಟ್ ಶೂಟಿಂಗ್ ಇಷ್ಟು ಬೇಗ ಮುಗಿದುಹೋಯ್ತಾ ಅಂತ ನನಗೆ ಕೇಳ್ತಿದ್ರು. ತುಂಬಾ ಸ್ಮೂತ್ ಆಗಿತ್ತು ಅವರ ಜೊತೆ ಕೆಲಸ. [ಇದೇ ಮೊದಲ ಬಾರಿಗೆ ಸ್ತ್ರೀರೋಗ ತಜ್ಞರಾಗಿ ಕ್ರೇಜಿಸ್ಟಾರ್]


Director Indrajith Lankesh Interview

* ಇಷ್ಟು ವರ್ಷಗಳ ನಂತರ ಭೂಮಿಕಾ ಕನ್ನಡಕ್ಕೆ ಬರುತ್ತಿದ್ದಾರೆ. ನಿಮ್ಮ ಸಿನಿಮಾದಲ್ಲಿ ಅವರಿಗೆ ಇಷ್ಟವಾಗಿದ್ದು..?


- ರವಿಚಂದ್ರನ್ ಅಂದ್ಮೇಲೆ ಅವರಿಗೆ ತಕ್ಕ ಹೀರೋಯಿನ್ ಬೇಕು. ಪಾತ್ರಕ್ಕೆ ಇವರು ಬೆಸ್ಟ್ ಅಂತ ನನಗೆ ಅನಿಸ್ತು. ಅವರಿಗೂ ರೋಲ್ ತುಂಬಾ ಇಷ್ಟ ಆಯ್ತು. ಒಪ್ಪಿಕೊಂಡರು. ಈ ತರಹದ ಪಾತ್ರವನ್ನ ಅವರು ಇದುವರೆಗೂ ಮಾಡಿಲ್ಲ. ಅವರನ್ನ ಕನ್ವಿನ್ಸ್ ಮಾಡುವುದು ತುಂಬಾ ಕಷ್ಟವಾಯ್ತು.


Director Indrajith Lankesh Interview

* ನೀವು ಯಶ್ ಛೋಪ್ರಾ ಆಫ್ ಸ್ಯಾಂಡಲ್ ವುಡ್ ಅಂತ ನಿಮ್ಮ ನಾಯಕಿ ಸಂಗೀತಾ ಹೇಳಿದ್ದಾರಂತೆ...


- ನನಗೆ ಮುಂಚೆ ಕನ್ನಡದ ಕರಣ್ ಜೋಹರ್ ಅಂತ ಕರೆಯುತ್ತಿದ್ದರು. ಇದು ನನಗೆ ಕಾಂಪ್ಲಿಮೆಂಟ್. ಯಶ್ ಛೋಪ್ರಾ ನನ್ನ ಫೇವರಿಟ್ ಡೈರೆಕ್ಟರ್. ಇಂತಹ ಕಾಂಪ್ಲಿಮೆಂಟ್ ಸಿಕ್ಕಿರುವುದು ನನಗೆ ಖುಷಿ. [ಕ್ರೇಜಿಸ್ಟಾರ್ ರವಿಮಾಮ ಇನ್ಮುಂದೆ ಡಾ.ರವಿಚಂದ್ರನ್! ]


Director Indrajith Lankesh Interview

* 'ಲವ್ ಯು ಆಲಿಯ' ರಿಲೀಸ್ ಪ್ಲಾನ್..?
- ಶೂಟಿಂಗ್ ಈಗ ಕಂಪ್ಲೀಟ್ ಆಗಿದೆ. ಬ್ಯಾಂಕಾಕ್ ನಲ್ಲಿ 14 ದಿನ ಶೂಟಿಂಗ್ ಮಾಡಿದ್ವಿ. ಫ್ಲೈಟ್ ನಲ್ಲಿ ಶೂಟ್ ಮಾಡಿದ್ದೀವಿ. ನಾಯಕಿ ಏರ್ ಹಾಸ್ಟೆಸ್. ಅದಕ್ಕಾಗಿ. ಇನ್ನೆರಡು ವಾರಗಳಲ್ಲಿ ಆಡಿಯೋ ರಿಲೀಸ್ ಆಗುತ್ತೆ. ಏಪ್ರಿಲ್ ಹೊತ್ತಿಗೆ ಸಿನಿಮಾ ಬಿಡುಗಡೆ ಮಾಡ್ತೀವಿ.


ಸಂದರ್ಶನ : ಹರ್ಷಿತಾ ನಾಗರಾಜ್

English summary
Kannada Movie Love You Alia is in news for various specialties. Director Indrajith Lankesh has revealed few interesting facts about his movie Love You Alia. Here is his interview.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada