For Quick Alerts
  ALLOW NOTIFICATIONS  
  For Daily Alerts

  ಫಿಲ್ಮಿಬೀಟ್ ಕಂಡಂತೆ ಫಿಲ್ಮ ಫೇರ್ ಬೆಸ್ಟ್ ಡೈರೆಕ್ಟರ್ ರಕ್ಷಿತ್ ಶೆಟ್ಟಿ

  By Suneetha
  |

  ಉಳಿದವರು ಕಂಡಂತೆ ಚಿತ್ರದ ನಿರ್ದೇಶನಕ್ಕೆ ಅತ್ಯುತ್ತಮ ನಿರ್ದೇಶಕ ಪಟ್ಟ ಅಲಂಕರಿಸಿ ಫಿಲಂ ಫೇರ್ ಪ್ರಶಸ್ತಿ ಗರಿ ಮುಡಿಗೇರಿಸಿಕೊಂಡ ಕನ್ನಡಿಗ, ಕರಾವಳಿಯ ಕುವರ ರಕ್ಷಿತ್ ಶೆಟ್ಟಿ ಫಿಲ್ಮಿ ಬೀಟ್ ಕನ್ನಡದೊಂದಿಗೆ ಮಾತನಾಡಿದ್ದಾರೆ. ತಮ್ಮ ಮುಂದಿನ ಯೋಜನೆಗಳು ಹಾಗೂ ಸ್ಯಾಡಂಲ್ ವುಡ್ ಬಗ್ಗೆ ರಕ್ಷಿತ್ ಶೆಟ್ಟಿ ಮನಬಿಚ್ಚಿ ಮಾತನಾಡಿದ್ದಾರೆ.

  ಮೂಲತಃ ಉಡುಪಿಯವರಾದ ರಕ್ಷಿತ್ ಶೆಟ್ಟಿ ತಮ್ಮ ವ್ಯಾಸಂಗವನ್ನು ಕಾರ್ಕಳದ ನಿಟ್ಟೆ ಕಾಲೇಜಿನಲ್ಲಿ ಪೂರೈಸಿದ್ದಾರೆ. ಚಿತ್ರರಂಗಕ್ಕೆ ಕಾಲಿಟ್ಟ ಅತೀ ಕಡಿಮೆ ಸಮಯದಲ್ಲಿ ಇಂತಹ ದೊಡ್ಡ ಸಾಧನೆ ಮಾಡಿರುವ ರಕ್ಷಿತ್ ಶೆಟ್ಟಿ ಅವರಿಗೆ ಶುಭ ಕೋರುತ್ತಾ, 'ಫಿಲ್ಮಿಬೀಟ್ ಕನ್ನಡ' ನಡೆಸಿರುವ ಚುಟುಕು ಸಂದರ್ಶನ ಇಲ್ಲಿದೆ.

  * Congratulations ರಕ್ಷಿತ್

  - ಥ್ಯಾಂಕ್ ಯು...

  * 'ಉಳಿದವರು ಕಂಡಂತೆ' ಚಿತ್ರಕ್ಕಾಗಿ ಬೆಸ್ಟ್ ಡೈರೆಕ್ಷನ್ ಅವಾರ್ಡ್ ಪಡೆದುಕೊಂಡಿದ್ದಿರಾ, ಹೇಗಿದೆ ಫೀಲಿಂಗ್, ನೀವೇನು ಹೇಳ್ತೀರಾ?

  -ತುಂಬಾ ಖುಷಿಯಾಗ್ತ ಇದೆ. ಯಾಕಂದ್ರೆ ತುಂಬಾ ಶ್ರಮಪಟ್ಟು ಮಾಡಿದಂತಹ ಸಿನೆಮಾ ಇದು. ಈ ಮೊದಲು ನನ್ನ ಸಿನೆಮಾದ ಬಗ್ಗೆ ಪ್ರೇಕ್ಷಕರಿಂದ ಎರಡು ಥರದಾ ಅನಿಸಿಕೆಗಳು ಬಂದಾಗ ಒಂಥರಾ ಅನಿಸಿತ್ತು. ಆದ್ರೆ ಇವಾಗ ಅವಾರ್ಡ್ ಬಂದಾಗ ಒಂದು ರೀತಿಯಲ್ಲಿ ಖುಷಿಯಾಗ್ತಿದೆ. [ಉಳಿದವರು ಕಂಡಂತೆ ರಿಮೇಕ್, ರಿಚಿ ರೋಲ್ ರಕ್ಷಿತ್ ಬೆಸ್ಟ್!]

  * ನಿಮಗೆ ಡೈರೆಕ್ಷನ್ ಮೇಲೆ ಒಲವು ಮೂಡಿದ್ದು ಹೇಗೆ ?

  - ಆಕ್ಷುವಲಿ ನಾನು ಇಂಡಸ್ಟ್ರಿಗೆ ಕಾಲಿಟ್ಟಿದ್ದು, ಆಕ್ಟರ್ ಆಗಬೇಕು ಅಂತಾನೆ. ಪ್ರಾರಂಭದಲ್ಲಿ ನಾನು ಆಕ್ಟಿಂಗ್ ಕಡೆನೇ ಜಾಸ್ತಿ ಗಮನ ಕೊಟ್ಟೆ. ಅಲ್ಲದೇ ನನ್ನ ಆಕ್ಟಿಂಗ ಕೆಪೆಬಿಲಿಟಿ ತೋರಿಸುವ ಸಲುವಾಗಿ, ನನ್ನನ್ನು ನಾನೇ ಹಾಕಿಕೊಂಡು ಅಥವಾ ನನ್ನನ್ನೆ ಒಂದು ವಿಷಯವಾಗಿ ಇಟ್ಟುಕೊಂಡು ಒಂದು ಸ್ಕ್ರಿಪ್ಟ್ ಬರೆದೆ.

  ಆಮೇಲೆ ಅದಕ್ಕೆ ನಾನೇ ಡೈರೆಕ್ಷನ್ ಮಾಡಿದೆ. ಹೀಗೆ ಎರಡು ಮೂರು ಬಾರಿ ಮಾಡಿದಾಗ ಬರೆಯುವ ಹುಚ್ಚು ಶುರು ಆಯ್ತು. ಜೊತೆಗೆ ಡೈರೆಕ್ಷನ್ ಹುಚ್ಚು ಶುರು ಆಯ್ತು. ಸೋ ಈ ಥರಾ ಐಡಿಯಾ ಸಿಕ್ಕಾಗ ನನಗೆ ಇಂಟ್ರೆಸ್ಟ್ ಬಂತು.

  * ಇದೀಗ ಮಾಡಿದ ಡೈರಕ್ಷನ್ ನಿಮ್ಮ ಮೊದಲ ಪ್ರಯತ್ನನಾ ಅಥವಾ ಇದಕ್ಕಿಂತ ಮೊದಲು ಮಾಡಿದ್ದೀರಾ?

  - ಕಾಲೇಜ್ ಡೇಸ್ ನಲ್ಲಿ ಜಾಸ್ತಿ ನಾಟಕಗಳನ್ನು ಮಾಡುತ್ತಿದ್ದೆ, ಸ್ಕೂಲ್ ಹೋಗುತ್ತಿರುವಾಗಿನ ಸಂದರ್ಭದಿಂದಲೂ ನಾಟಕದ ಹುಚ್ಚಿತ್ತು. ಅಲ್ಲದೇ 6ನೇ ತರಗತಿಯಲ್ಲಿ ಇರಬೇಕಾದರೆ ನಾನೇ ಒಂದು ನಾಟಕ ಬರೆದು, ಅದಕ್ಕೆ ನಾನೇ ಡೈರೆಕ್ಷನ್ ಮಾಡಿದ್ದೆ. ಈ ಥರಾದ್ದು ಸುಮಾರು ಮಾಡಿದ್ದೀನಿ. [ಫಿಲಂಫೇರ್ ಪ್ರಶಸ್ತಿ - ಯಶ್ ಮತ್ತು ಶ್ವೇತಾ ಶ್ರೀವಾತ್ಸವ್ ಬೆಸ್ಟ್.!]

  ಆದ್ರೆ, ಪ್ರೊಫೆಷನಲ್ ಆಗಿ ಇಲ್ಲಿ ಬೆಂಗಳೂರಿನಲ್ಲಿ ಹವ್ಯಾಸಿ ರಂಗಮಂದಿರ ಥರಾ ಯಾವುದು ಮಾಡಿಲ್ಲಾ. ಚಿಕ್ಕ ವಯಸ್ಸಿನಲ್ಲಿ ಎಷ್ಟು ಗೊತ್ತಿದೆ ಅಷ್ಟೆ ಮಾಡ್ತಾ ಇದ್ದೆವು. ಆದ್ರೆ ನಾನು ಬೆಂಗಳೂರಿಗೆ ಬಂದು ಥಿಯೇಟರ್ ಮಾಡಿದ ಮೇಲೆ ಕೆಲವೊಂದು ಹೊಸ ವಿಷಯಗಳನ್ನು ಕಲಿತುಕೊಂಡೆ, ಸೋ ಅದು ಹೆಲ್ಪ್ ಆಯ್ತು.

  * ನಿಮ್ಮ 'ಉಳಿದವರು ಕಂಡಂತೆ' ಚಿತ್ರದಲ್ಲಿ ಹೆಚ್ಚಾಗಿ ಹೈಲೈಟ್ ಆಗಿದ್ದು, ಮ್ಯೂಸಿಕ್, ಹಾಗೂ ತುಳುನಾಡಿನ ಸಂಸ್ಕೃತಿ 'ಹುಲಿವೇಷ'. ಇದನ್ನು ತೋರಿಸೋಕೆ ನಿಮಗೆ ಐಡಿಯಾ ಹೇಗೆ ಬಂತು?

  - ನನಗೆ ತುಳುನಾಡಿನ ಬಗ್ಗೆ ಅಭಿಮಾನ ಇದೆ. ಆದ್ರೆ ನನಗೆ ಮೊದಲಿನಿಂದಲೂ ತಲೆಯಲ್ಲಿ ಈ ಐಡಿಯಾ ಕೊರೀತಾನೇ ಇತ್ತು. ಇವಾಗ ಏನಪ್ಪಾ ಅಂದ್ರೆ ಬೇರೆ ಇಂಡಸ್ಟ್ರಿಯವರೆಲ್ಲಾ ಅವರವರ ಕಲ್ಚರ್ ಗಳನ್ನೆಲ್ಲಾ ತೋರಿಸ್ತಾರೆ. ಬೇರೆ ಬೇರೆ ಜಾಗಗಳಲ್ಲಿ ಸಿನೆಮಾ ಸೆಟಪ್ ಮಾಡಿಕೊಂಡು ಸಿನೆಮಾ ಮಾಡುತ್ತಾರೆ.

  ಆದ್ರೆ ಕನ್ನಡದವರು ಮಾತ್ರ ಯಾವಾಗ್ಲೂ ಬರೀ ಮೈಸೂರು ಕಡೆ ಎಲ್ಲಾ ಮಾಡಿದ್ದಾರೆ ಅಂದ್ರೆ ಜಾಸ್ತಿ ಕಲ್ಚರ್ ಎಕ್ಸ್ ಫೋಸ್ ಮಾಡಿಲ್ಲಾ ಅಂತಾ. ಆದ್ರೆ ನಾನು ಹುಟ್ಟಿದ್ದು-ಬೆಳೆದಿದ್ದು, ಎಲ್ಲಾ ಉಡುಪಿ ಆದ್ರಿಂದ, ನಾನು ಬರಿಯೋಕೆ ಕೂತಾಗ ಅಲ್ಲಿಯ ವಿಷಯಗಳೇ ತಲೆಯಲ್ಲಿ ಬರೋಕೆ ಶುರು ಆಗ್ತಾ ಇತ್ತು. ಯಾಕಂದ್ರೆ ನಾನು ಬರೀಬೇಕಾದ್ರೆ ನನಗೆ ಬೆಂಗಳೂರಿನ ಬಗ್ಗೆ ಜಾಸ್ತಿ ತಿಳಿದಿರಲಿಲ್ಲ. ನಾನು ಬೆಂಗಳೂರಿಗೆ ಬಂದು 2-3 ವರ್ಷಗಳಷ್ಟೇ ಆಗಿತ್ತು. ಆದ್ರಿಂದ ಅಲ್ಲಿಯ ವಿಷಯಗಳನಿಟ್ಟುಕೊಂಡು ಜಾಸ್ತಿ ಬರೆದೆ.

  English summary
  62 Filmfare Best Director Award winner Rakshit Shetty chit chat with Filmibeat Kannada.He shared upcoming projects and experience of Filmfare winning movement.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X