twitter
    For Quick Alerts
    ALLOW NOTIFICATIONS  
    For Daily Alerts

    ರೊಮ್ಯಾಂಟಿಕ್-ಕಾಮಿಡಿಯಿಂದ ಗನ್ ಸದ್ದಿನೆಡೆಗೆ: 'ರಾಯಗಢ' ಸ್ಟೋರಿ ಬಿಚ್ಚಿಟ್ಟ ಸಿಂಪಲ್ ಸುನಿ

    |

    'ಈ ಹೀರೋ ಯಾರೆಂದು ಕಂಡುಹಿಡಿಯಿರಿ?' ಎಂದು ಕತ್ತಲೆಯಲ್ಲಿ ನಾಯಕನ ಕೈ ಮತ್ತು ಮುಖದ ಅರ್ಧಭಾಗ ಇರುವ ವಿಭಿನ್ನ ವಿನ್ಯಾಸ ಪೋಸ್ಟರ್‌ಅನ್ನು ನಿರ್ದೇಶಕ ಸಿಂಪಲ್ ಸುನಿ ಹಂಚಿಕೊಂಡಿದ್ದರು. ಕೈ ಎತ್ತಿರುವ ಸ್ಟೈಲ್ ನೋಡಿ ಕೆಲವರು ಸುದೀಪ್ ಎಂದಿದ್ದರೆ, ಇನ್ನು ಅನೇಕರು ಇದು ಪಕ್ಕಾ ಗೋಲ್ಡನ್ ಸ್ಟಾರ್ ಗಣೇಶ್ ಎಂದು ಊಹಿಸಿದ್ದರು. ಅವರ ಊಹೆ ಸರಿಯಾಗಿಯೂ ಇತ್ತು.

    Recommended Video

    Yash says New Lockdown rules is wife friendly |ಹೊಸ ಲಾಕ್ ಡೌನ್ ಯಶ್ ಮತ್ತು ರಾಧಿಕಾಗೆ ತುಂಬಾ ಇಷ್ಟ ಅಯ್ತಂತೆ.!

    ನಿಜ. ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಸಿಂಪಲ್ ಸುನಿ ಜತೆಗೂಡಿ ಮತ್ತೊಂದು ಸಿನಿಮಾಕ್ಕೆ ಅಣಿಯಾಗುತ್ತಿದ್ದಾರೆ. ಸರಳವಾದ ಕಥೆಯ ಮೂಲಕ ಪ್ರೇಕ್ಷಕರಿಗೆ ಈ ಜೋಡಿ 'ಚಮಕ್' ನೀಡಿತ್ತು. ಈಗ 'ಸಖತ್'ಆಗಿ ಕಚಗುಳಿ ಇರಿಸುವ ಸಿದ್ಧತೆ ನಡೆಸಿದೆ. ಈ ನಡುವೆಯೇ 'ರಕ್ತಚರಿತ್ರೆ' ಬರೆಯಲು ಇಬ್ಬರೂ ಮುಂದಾಗಿದ್ದಾರೆ. 'ದಿ ಸ್ಟೋರಿ ಆಫ್ ರಾಯಗಢ' ಚಿತ್ರದ ಮೂಲಕ ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದ್ದಾರೆ ಸುನಿ. ಗಣೇಶ್ ಅವರಿಗೂ ಇದು ವಿಭಿನ್ನ ಚಿತ್ರ. ಏಕೆಂದರೆ ಇಬ್ಬರೂ ರೊಮ್ಯಾಂಟಿಕ್-ಕಾಮಿಡಿ ಚಿತ್ರಗಳಿಗೆ ಹೆಸರಾದವರು. ಅಂತಹ ಕಥೆಯ ಚಿತ್ರಗಳೇ ಅವರ ಟ್ರೇಡ್ ಮಾರ್ಕ್ ಎನ್ನುವಂತಿದ್ದಾಗ ಇಬ್ಬರೂ ಜತೆಗೂಡಿ ಆ ಪ್ರಯಾಣದ ದಿಕ್ಕನ್ನೇ ಹೊರಳಿಸುತ್ತಿದ್ದಾರೆ.

    'ಸಿಂಪಲ್ಲಾಗ್ ಮತ್ತೂ ಒಂದು ಸ್ಟೋರಿ' ಹೇಳಿದ ಸಿಂಪಲ್ ಡೈರೆಕ್ಟರ್ ಸುನಿ: ಯಾವುದಾ ಸ್ಟೋರಿ?'ಸಿಂಪಲ್ಲಾಗ್ ಮತ್ತೂ ಒಂದು ಸ್ಟೋರಿ' ಹೇಳಿದ ಸಿಂಪಲ್ ಡೈರೆಕ್ಟರ್ ಸುನಿ: ಯಾವುದಾ ಸ್ಟೋರಿ?

    'ದಿ ಸ್ಟೋರಿ ಆಫ್ ರಾಯಗಢ' ಹೇಗಿರಲಿದೆ? ಇದರಲ್ಲಿ ಗಣೇಶ್ ಹೇಗೆ ಕಾಣಿಸಿಕೊಳ್ಳಲಿದ್ದಾರೆ? ತಮ್ಮ ಸಿನಿಮಾಗಳ ಕಥೆ ಎಲ್ಲಿವರೆಗೆ ಬಂದಿದೆ? ಈ ಕುತೂಹಲಗಳಿಗೆ ಸುನಿ 'ಫಿಲ್ಮಿಬೀಟ್'ಗೆ ತಿಳಿಸಿದ್ದಾರೆ. ಮುಂದೆ ಓದಿ...

    ನೈಜ ಘಟನೆಯಲ್ಲಿ ಕಾಲ್ಪನಿಕ ಕಥೆ

    ನೈಜ ಘಟನೆಯಲ್ಲಿ ಕಾಲ್ಪನಿಕ ಕಥೆ

    'ಸ್ಟೋರಿ ಆಫ್ ರಾಯಗಢ' ಚಿತ್ರದ ಕಥೆ 99ರಲ್ಲಿ ನಡೆದ ನೈಜ ಘಟನೆಯನ್ನು ಹಿನ್ನೆಲೆಯನ್ನಾಗಿರಿಸಿಕೊಂಡು ಕಾಲ್ಪನಿಕವಾಗಿ ಬೆಳೆಸಲಾಗುತ್ತಿದೆ. ಬರಹಗಾರರ ತಂಡ ಕಥೆ ರೂಪಿಸುತ್ತಿದೆ. ಗಣೇಶ್ ಮಾಸ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬ್ಲಾಕ್ ಹ್ಯೂಮರ್ ಶೇಡ್ ಇರಲಿದೆ. ಅವರದು ಸರ್ಕ್ಯಾಸ್ಟಿಕ್ ಪಾತ್ರ. 'ಗ್ಯಾಂಗ್ಸ್ ಆಫ್ ವಾಸ್ಸೆಪುರ್' ಚಿತ್ರವನ್ನು ನೆನಪಿಸುತ್ತದೆ ಎಂದು ಸುನಿ ವಿವರಿಸಿದರು.

    ಉತ್ತರ ಕರ್ನಾಟಕ ಹಿನ್ನೆಲೆ

    ಉತ್ತರ ಕರ್ನಾಟಕ ಹಿನ್ನೆಲೆ

    ಇಡೀ ಚಿತ್ರ ಉತ್ತರ ಕರ್ನಾಟಕದ ಹಿನ್ನೆಲೆಯಲ್ಲಿ ಇರಲಿದೆ. ಸಂಭಾಷಣೆಯನ್ನು ನಮ್ಮ ಶೈಲಿಯಲ್ಲಿ ಬರೆದು, ಬಳಿಕ ಉತ್ತರ ಕರ್ನಾಟಕದ ಭಾಷೆ ಬಲ್ಲವರಿಂದ ಆ ಕಾಲಘಟ್ಟದ ಸ್ಲ್ಯಾಂಗ್‌ಗೆ ಬದಲಿಸುತ್ತೇವೆ. ಗಣೇಶ್ ಸಂಪೂರ್ಣವಾಗಿ ಹೊಸ ಲುಕ್‌ನಲ್ಲಿ ಕಾಣಿಸುತ್ತಾರೆ. ಅವರ ಗೆಟಪ್, ಆಕ್ಷನ್, ಡೈಲಾಗ್ ಡೆಲಿವರಿ ಎಲ್ಲವೂ ವಿಭಿನ್ನವಾಗಿರಲಿದೆ.

    ನನಗೂ ಹೊಸ ಜಾನರ್

    ನನಗೂ ಹೊಸ ಜಾನರ್

    ನನಗೂ ಇದು ಹೊಸ ಥರದ ಜಾನರ್. ಬರಹಗಾರರ ತಂಡ ಕಥೆಯನ್ನು ಪರಿಷ್ಕರಿಸುತ್ತಾ ಇದ್ದೇವೆ. ಆ ಸಮಯದ ಕ್ಯಾಸ್ಟ್ಯೂಮ್, ಪರಿಸರ ಎಲ್ಲವನ್ನೂ ಮನದಲ್ಲಿಟ್ಟುಕೊಂಡು ಕಥೆ ಹೆಣೆಯುತ್ತಿದ್ದೇವೆ. ಲಾಕ್‌ಡೌನ್ ಮುಂಚೆ ಲೊಕೇಷನ್ ನೋಡಿದ್ದೆವು. ಮತ್ತೆ ಎಲ್ಲ ಸರಿ ಹೋದ ಬಳಿಕ ಮತ್ತೊಮ್ಮೆ ಲೊಕೇಷನ್ ನೋಡಲು ಹೋಗುತ್ತೇವೆ.

    ಗಣೇಶ್ ಮ್ಯಾನರಿಸಂ

    ಗಣೇಶ್ ಮ್ಯಾನರಿಸಂ

    ಗಣೇಶ್ ಈ ಚಿತ್ರಕ್ಕಾಗಿ ತಮ್ಮ ಮ್ಯಾನರಿಸಂ ಬದಲಾಯಿಸಿಕೊಳ್ಳಲಿದ್ದಾರೆ. ಗಡ್ಡ ಬಿಡಲಿದ್ದಾರೆ. ವಿಶಿಷ್ಟ ವಾಕಿಂಗ್ ಶೈಲಿ ಇರಲಿದೆ. ಬೀಡಾ ಹಾಕಿಕೊಂಡು ಮಾತನಾಡುವ ಗೆಟಪ್ ಇರಲಿದೆ. ಆದರೆ ಈ ಚಿತ್ರ ಶುರುವಾಗಲು ಇನ್ನೂ ಎರಡು ವರ್ಷವಿದೆ. ಗಣೇಶ್ ಮಾನಸಿಕವಾಗಿ ಚಿತ್ರಕ್ಕೆ ಸಿದ್ಧರಾಗುತ್ತಿದ್ದಾರೆ. ರಾಯಗಢ ಎಂಬ ಕಾಲ್ಪನಿಕ ಊರಲ್ಲಿ ಇಡೀ ಚಿತ್ರ ನಡೆಯಲಿದೆ. ಸಖತ್ ಮತ್ತು ಅವತಾರ ಪುರುಷ ಚಿತ್ರಗಳು ಬಳಿಕ ಇದು ಶುರುವಾಗಲಿದೆ.

    ಸಖತ್ ಮತ್ತು ಅವತಾರ ಪುರುಷ

    ಸಖತ್ ಮತ್ತು ಅವತಾರ ಪುರುಷ

    'ಸಖತ್' ಚಿತ್ರದ 15 ದಿನದ ಚಿತ್ರೀಕರಣ ನಡೆದಿದೆಯಷ್ಟೇ. ಇನ್ನೂ 45 ದಿನದ ಚಿತ್ರೀಕರಣ ಬಾಕಿ ಇದೆ. ಇದು ಮ್ಯೂಸಿಕಲ್ ಕ್ರೈಮ್ ಥ್ರಿಲ್ಲರ್. ರಿಯಾಲಿಟಿ ಶೋ ಹಿನ್ನೆಲೆಯಲ್ಲಿ ಚಿತ್ರ ನಡೆಯಲಿದೆ. ಶರಣ್ ಅಭಿನಯದ 'ಅವತಾರ ಪುರುಷ'ದ ಹಾಡು ಮತ್ತು ಫೈಟ್ ದೃಶ್ಯಗಳು ಬಾಕಿ ಇವೆ.

    ಎದೆಯಲ್ಲಿದೆ 'ಮನಮೋಹಕ'

    ಎದೆಯಲ್ಲಿದೆ 'ಮನಮೋಹಕ'

    ಶಿವರಾಜ್ ಕುಮಾರ್ ಜತೆಗಿನ 'ಮನಮೋಹಕ' ಹಾಗೆಯೇ ಉಳಿದಿದೆ. ಈ ಚಿತ್ರವನ್ನು ಮಾಡಿಯೇ ಮಾಡುತ್ತೇನೆ. ಚಿತ್ರಕ್ಕೆ ಇರುವ ವ್ಯಾಲ್ಯೂ ಎದೆಯಲ್ಲಿ ಇದ್ದೇ ಇರುತ್ತದೆ. ಒಳ್ಳೆಯ ನಿರ್ಮಾಪಕರು ಸಿಕ್ಕರೆ ಚಿತ್ರ ಮಾಡುತ್ತೇವೆ. ಇಲ್ಲವೇ ಮುಂದೆ ಯಾವತ್ತಾದರೂ ನನಗೆ ಸಾಧ್ಯವಾದರೆ ನಾನೇ ನಿರ್ಮಿಸಬಹುದು. ರೆಟ್ರೋ ಶೈಲಿಯ ಚಿತ್ರವಾದ್ದರಿಂದ ಹೆಚ್ಚು ಬಜೆಟ್ ಬೇಡುತ್ತದೆ. ಕ್ಲಾಸ್ ಸಬ್ಜೆಕ್ಟ್ ಇದು. ಯಾವುದೇ ಸಮಯದಲ್ಲಾದರೂ ಸಿನಿಮಾ ಮಾಡಲು ರೆಡಿ ಎಂದು ಶಿವಣ್ಣ ಭರವಸೆ ನೀಡಿದ್ದಾರೆ ಎಂದು ಸುನಿ ಹೇಳಿದರು.

    English summary
    Golden Star Ganesh to collaborate with director Simple Suni yet again for Rayagada movie.
    Tuesday, June 30, 2020, 16:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X