For Quick Alerts
  ALLOW NOTIFICATIONS  
  For Daily Alerts

  ಕನ್ನಡ ಸುಂದರಿ ಹರ್ಷಿಕಾ ಪೂಣಚ್ಚರ ಚೊಚ್ಚಲ ಭೋಜ್‌ಪುರಿ ಸಿನಿಮಾ ತೆರೆಗೆ

  |

  ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಿದ ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ರಾತ್ರಿ-ಹಗಲು ಶ್ರಮಿಸಿದರು. 'ಭುವನಂ ಫೌಂಡೇಶನ್' ಮೂಲಕ ಕಷ್ಟದಲ್ಲಿದ್ದ ಕುಟುಂಬಗಳನ್ನು ಹುಡುಕಿಕೊಂಡು ಹೋಗಿ ಸಹಾಯಹಸ್ತ ಚಾಚುವ ಮೂಲಕ ಜನಪರ ಕಾಳಜಿ ಮೆರೆದರು. ಕಳೆದು ಎರಡು ವರ್ಷದಿಂದಲೂ ಕೋವಿಡ್ ವಾರಿಯರ್ ಆಗಿ ಕೆಲಸ ಮಾಡಿರುವ ನಟಿ ಹರ್ಷಿಕಾ ಅವರ ಚೊಚ್ಚಲ ಭೋಜ್‌ಪುರಿ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ.

  ಹರ್ಷಿಕಾ ಪೂಣಚ್ಚ ಭೋಜ್‌ಪುರಿ ಭಾಷೆಯಲ್ಲಿ ನಟಿಸಿರುವ ''ಹಮ್ ಹೈ ರಹೀ ಪ್ಯಾರ್ ಕೆ'' ಆಗಸ್ಟ್ 15 ರಂದು ದೇಶದ ಹಲವು ಕಡೆ ತೆರೆಗೆ ಬರ್ತಿದೆ. ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ನಟಿಸಿ ಯಶಸ್ಸು ಕಂಡಿರುವ ಹರ್ಷಿಕಾ ಮೊಟ್ಟ ಮೊದಲ ಸಲ ಉತ್ತರ ಭಾರತದಲ್ಲಿ ಅದೃಷ್ಟ ಪರೀಕ್ಷಿಸಲು ಹೆಜ್ಜೆಯಿಟ್ಟಿದ್ದಾರೆ. ಚೊಚ್ಚಲ ಭೋಜ್‌ಪುರಿ ಚಿತ್ರದ ಅನುಭವ ಹೇಗಿತ್ತು? ಸಿನಿಮಾದ ವಿಶೇಷತೆಗಳು ಏನು ಎನ್ನುವುದನ್ನು ಫಿಲ್ಮಿಬೀಟ್ ಕನ್ನಡದ ಜೊತೆ ಹಂಚಿಕೊಂಡಿದ್ದಾರೆ. ಹರ್ಷಿಕಾ ಜೊತೆ ಫಿಲ್ಮಿಬೀಟ್ ನಡೆಸಿರುವ ಚಿಟ್‌ಚಾಟ್‌ ಇಲ್ಲಿದೆ. ಮುಂದೆ ಓದಿ...

  ಸಂದರ್ಶಕ- ಭರತ್ ಕುಮಾರ್

  ನಿಮ್ಮ ಮೊದಲ 'ಭೋಜ್‌ಫುರಿ' ಸಿನಿಮಾ ಬಿಡುಗಡೆಯಾಗ್ತಿದೆ, ಏನ್ ಹೇಳ್ತೀರಾ?

  ತುಂಬಾ ಖುಷಿ ಆಗ್ತಿದೆ, ತುಂಬಾ ಎಕ್ಸೈಟ್ ಆಗಿದ್ದೇನೆ. ಅದೇ ರೀತಿ ಟೆನ್ಷನ್ ಸಹ ಇದೆ. ಏಕಂದ್ರೆ, ಇದು ನನ್ನ ಮೊದಲ ಭೋಜ್‌ಪುರಿ ಸಿನಿಮಾ. ಅಲ್ಲಿನ ಜನರು ನನ್ನನ್ನು ಹೇಗೆ ಸ್ವೀಕರಿಸ್ತಾರೆ ಎಂಬ ಕುತೂಹಲ ಕಾಡ್ತಿದೆ.

  ಹರ್ಷಿಕಾ ಮಾಡಿದ ಸಹಾಯ ನೆನೆದು ಮಗುವಿಗೆ ನಟಿಯದ್ದೇ ಹೆಸರಿಟ್ಟ ಪೋಷಕರುಹರ್ಷಿಕಾ ಮಾಡಿದ ಸಹಾಯ ನೆನೆದು ಮಗುವಿಗೆ ನಟಿಯದ್ದೇ ಹೆಸರಿಟ್ಟ ಪೋಷಕರು

  ಭೋಜ್‌ಪುರಿ ಭಾಷೆ ಕಲಿತಿದ್ದೀರಾ? ಕೆಲಸ ಮಾಡೋಕೆ ಕಷ್ಟ ಆಗಿಲ್ಲವೇ?

  ಭೋಜ್‌ಪುರಿ ಭಾಷೆ ಸ್ವಲ್ಪ ಸ್ವಲ್ಪ ಕಲಿತಿದ್ದೇನೆ. ನನ್ನ ಅದೃಷ್ಟ ಏನಪ್ಪಾ ಅಂದ್ರೆ ನಾನು ಮಾಡಿರುವ ಎರಡೂ ಸಿನಿಮಾಗಳಲ್ಲಿ ಹಿಂದಿ ಮಾತಾಡ್ತೇನೆ. ಕೆಲವೊಂದು ಡೈಲಾಗ್ ಮಾತ್ರ ಭೋಜ್‌ಪುರಿ ಭಾಷೆಯಲ್ಲಿರುತ್ತದೆ. ಇದು ನನಗೆ ಅನುಕೂಲ ಆಯಿತು.

  ಎಂಟು ಭಾಷೆಯಲ್ಲಿ ನಟಿಸಿದ್ದೀರಾ? ಏನಿದರ ಗುಟ್ಟು?

  ಕನ್ನಡ, ತೆಲುಗು, ತಮಿಳು, ಮಲಯಾಳ, ತುಳು, ಕೊಂಕಣಿ, ಕೊಡುವ, ಭೋಜ್‌ಪುರಿ ಒಟ್ಟು ಎಂಟು ಭಾಷೆ ಆಗಿದೆ. ಸದ್ಯದಲ್ಲೇ ಹಿಂದಿಯಲ್ಲಿ ನಟಿಸುತ್ತೇನೆ. ಆಗ ಒಂಬತ್ತು ಭಾಷೆ ಆಗುತ್ತದೆ. ನನಗೆ ಹತ್ತು ಭಾಷೆಯಲ್ಲಿ ನಟಿಸಬೇಕು ಎನ್ನುವ ಆಸೆ ಇದೆ. ಬಹುಶಃ ಹತ್ತು ಭಾಷೆಯಲ್ಲಿ ನಟಿಸಿದ ಖ್ಯಾತಿ ನನ್ನದಾಗುತ್ತದೆ. ನನಗೆ ಎಲ್ಲಾ ಭಾಷೆಗಳ ಮೇಲೂ ಗೌರವ ಇದೆ. ಅವರ ಸಂಸ್ಕೃತಿ, ಭಾಷೆ ಕಲಿಯುವ ಆಸಕ್ತಿ ಇದೆ. ದಕ್ಷಿಣ ಭಾರತದ ಎಲ್ಲಾ ಭಾಷೆಯೂ ಮಾತಾಡ್ತೇನೆ. ಹಿಂದಿಯೂ ಬರುತ್ತೆ. ಭೋಜ್‌ಪುರಿ, ಮರಾಠಿ, ಬೆಂಗಾಳಿ ಕಲಿಯುತ್ತೇನೆ.

   Harshika Poonachas Debut Bhojpuri Movie Releasing on August 15

  ಬಾಲಿವುಡ್ ಪ್ರವೇಶ ಯಾವಾಗ ನಿರೀಕ್ಷಿಸಬಹುದು?

  ಆದಷ್ಟೂ ಬೇಗ ಬಾಲಿವುಡ್ ಪ್ರವೇಶ ಆಗುತ್ತೆ, ಖಂಡಿತಾ ನಿಮಗೆ ತಿಳಿಸುತ್ತೇನೆ.

  ಭೋಜ್‌ಪುರಿ ಚಿತ್ರದಲ್ಲಿ ಹರ್ಷಿಕಾ ಪೂಣಚ್ಚ: ಆಶೀರ್ವಾದ ಕೇಳಿದ ನಟಿಭೋಜ್‌ಪುರಿ ಚಿತ್ರದಲ್ಲಿ ಹರ್ಷಿಕಾ ಪೂಣಚ್ಚ: ಆಶೀರ್ವಾದ ಕೇಳಿದ ನಟಿ

  ಕನ್ನಡದಲ್ಲಿ ಗ್ಯಾಪ್ ಆಯಿತು ಅನ್ಸುತ್ತೆ? ಯಾವ ಸಿನಿಮಾಗಳು ಲೈನ್ ಆಪ್ ಆಗಿವೆ?

  ಎರಡು ವರ್ಷದ ಹಿಂದೆ ನನ್ನ ತಂದೆ ತೀರಿಕೊಂಡರು. ಆಮೇಲೆ ಕೊರೊನಾ ಬಂತು. ವೈಯಕ್ತಿಕ ಕಾರಣದಿಂದ ಸ್ವಲ್ಪ ಅಂತರ ಕಾಯ್ದುಕೊಂಡೆ. ಈಗಲೂ ಐದು ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಆದಷ್ಟೂ ಬೇಗ ಥಿಯೇಟರ್‌ನಲ್ಲಿ ನನ್ನ ಚಿತ್ರಗಳನ್ನು ಜನರು ನಿರೀಕ್ಷೆ ಮಾಡಬಹುದು.

  ಕೊರೊನಾ ಮೂರನೇ ಅಲೆ ಭೀತಿ? ಜನರಿಗೆ ಏನ್ ಹೇಳೋಕೆ ಇಷ್ಟಪಡ್ತೀರಾ?

  ಕೊರೊನಾ ಸಂದರ್ಭದಲ್ಲಿ 'ಭುವನಂ ಫೌಂಡೇಶನ್' ಕಡೆಯಿಂದ ಆರಂಭದಲ್ಲಿ 200 ದಿನಸಿ ಕಿಟ್ ಕೊಡೋಣ ಅಂತ ನಿರ್ಧರಿಸಿದ್ವಿ. ಆದ್ರೆ, ಸುಮಾರು 25 ಸಾವಿರ ಕುಟುಂಬಗಳಿಗೆ ಸಹಾಯ ಮಾಡುವ ಅವಕಾಶ ಸಿಕ್ತು. ಶ್ವಾಸ ಆಕ್ಸಿಜನ್ ಬಸ್‌ಗಳು, ಬಾಂಧವ ಆಟೋಗಳು ತುಂಬಾ ಉಪಯುಕ್ತ ಆಯ್ತು. ಆಂಬುಲೆನ್ಸ್ ಸಿಗದ ಸಮಯದಲ್ಲಿ ಬಾಂಧವ ಆಟೋಗಳು ಬಹಳಷ್ಟು ಜನರಿಗೆ ಸಹಕಾರಿ ಆಯ್ತು. ನಮ್ಮ ಈ ಕೆಲಸ ಬಗ್ಗೆ ತುಂಬಾ ಖುಷಿ ಇದೆ. ಜನರ ಆಶೀರ್ವಾದ ಸಹ ನಮ್ಮ ಮೇಲಿದೆ. ಅವರ ಆಶೀರ್ವಾದದಿಂದ ನನಗೆ ಇಷ್ಟೊಂದು ಸಿನಿಮಾ ಸಿಕ್ತಿದೆ ಎಂದು ಹೇಳೋಕೆ ಇಷ್ಟಪಡ್ತಿನಿ. ಮೂರನೇ ಭೀತಿ ಇದೆ. ಅದರ ಬಗ್ಗೆ ಯೋಚನೆ ಮಾಡೋಕೆ ಇಷ್ಟವಿಲ್ಲ. ಏಕಂದ್ರೆ ಎರಡನೇ ಅಲೆ ಸಂದರ್ಭದಲ್ಲಿ ಜನರು ಎಷ್ಟು ಕಷ್ಟಪಟ್ಟರು ಎಂದು ನಾನು ಕಣ್ಣಾರೆ ನೋಡಿದ್ದೇನೆ. ಕೊರೊನಾ ತಡೆಗಟ್ಟಲು ಆದಷ್ಟೂ ಬೇಗ ಎಲ್ಲರೂ ಲಸಿಕೆ ತಗೊಳ್ಳಿ, ನಾನು ಎರಡು ಡೋಸ್ ಪಡೆದಾಗಿದೆ. ಮಾಸ್ಕ್ ಹಾಕಿಕೊಳ್ಳಿ ಎಂದು ವಿನಂತಿಸುತ್ತೇನೆ. ಥ್ಯಾಂಕ್ ಯೂ.

  'ಭೋಜ್‌ಪು'ರಿ ಸೂಪರ್ ಸ್ಟಾರ್ ಪವನ್ ಕುಮಾರ್ ಈ ಚಿತ್ರದಲ್ಲಿ ನಾಯಕಯಾಗಿದ್ದು, ಝಾರ್ಖಂಡ್ ಸೇರಿದಂತೆ ಉತ್ತರ ಭಾರತದ ಹಲವು ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿದೆ.

  English summary
  Here is an interview with Harshika Poonacha; She talks about her bhojpuri movie, upcoming films and other film industry related things. Read on.
  Sunday, August 15, 2021, 9:11
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X