For Quick Alerts
  ALLOW NOTIFICATIONS  
  For Daily Alerts

  'ನಾನಿರುವುದೇ ಹೀಗೆ': ನಿಮಗೆ ಗೊತ್ತಿರದ ಸುಧಾರಾಣಿ ಬದುಕು...

  |

  ಸುಧಾರಾಣಿ ತಾರುಣ್ಯದಲ್ಲಿಯೇ ನಾಯಕಿಯಾಗಿ ಬೆಳ್ಳಿತೆರೆಗೆ ಬಂದವರು. ಅಂದು ಇವರಿಗೆ ಮೊದಲ ಜೋಡಿಯಾಗಿದ್ದ ಶಿವರಾಜ್ ಕುಮಾರ್ ಪ್ರಸ್ತುತ ಚಿತ್ರರಂಗದ ನಾಯಕತ್ವ ವಹಿಸುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ನಾಯಕಿಯಾಗಿದ್ದಾಗ ಅಂಬರೀಷ್, ರವಿಚಂದ್ರನ್, ಶಶಿಕುಮಾರ್ ಮೊದಲಾದ ತಾರೆಯರಿಗೆ ಜೋಡಿಯಾಗಿದ್ದ ಸುಧಾರಾಣಿ, ಇಂದು ಪೋಷಕ ಪಾತ್ರ ನಿರ್ವಹಿಸುವಾಗಲೂ ತಮ್ಮ ಸ್ಟಾರ್ ಇಮೇಜ್ ಉಳಿಸಿಕೊಂಡಿದ್ದಾರೆ ಎನ್ನುವುದು ವಿಶೇಷ. ಇದಕ್ಕೆ ಕಳೆದ ವರ್ಷ ತೆರೆಕಂಡ 'ಕನ್ನಡ್ ಗೊತ್ತಿಲ್ಲ' ಮತ್ತು ಈ ವರ್ಷ ಒಟಿಟಿಯಲ್ಲಿ ಬಂದ 'ಲಾ' ಚಿತ್ರಗಳಲ್ಲಿನ ಅವರ ಪಾತ್ರಗಳೇ ಉತ್ತಮ ಉದಾಹರಣೆ.

  "ಬದಲಾದ ಕಾಲದಲ್ಲಿ ಪಾತ್ರಗಳು ಬದಲಾಗಬಹುದು. ಆದರೆ ತಾವು ಪಾತ್ರದ ಬಗ್ಗೆ ಹೊಂದಿರುವ ಧೋರಣೆ ಬದಲಾಗುವುದಿಲ್ಲ" ಎನ್ನುವ ಸುಧಾರಾಣಿ ಅವರು ಸಿನಿಮಾ ಮಾತ್ರವಲ್ಲ, ನಿಜ ಜೀವನದಲ್ಲಿ ಕೂಡ ಒಂದು ರೀತಿಯಲ್ಲಿ ನಾಯಕಿಯೇ. ಯಾಕೆಂದರೆ ದುಂದು ವೆಚ್ಚ, ಪ್ಲಾಸ್ಟಿಕ್ ಬಳಕೆ ಮೊದಲಾದವುಗಳ ವಿರುದ್ಧ ಅವರು ತಮ್ಮ ಒಂಟಿ ಹೋರಾಟವನ್ನು ಮುಂದುವರಿಸಿದ್ದಾರೆ. ಸಾಕಷ್ಟು ಮಂದಿಗೆ ತಿಳಿದಿರದ ಇಂಥ ಒಂದಷ್ಟು ವಿಚಾರಗಳನ್ನು ಫಿಲ್ಮೀಬೀಟ್' ಜತಗೆ ವಿಶೇಷವಾಗಿ ಹಂಚಿಕೊಂಡಿದ್ದಾರೆ ಸುಧಾರಾಣಿ.

   ಸಿನಿಮಾಗಳು ಒಟಿಟಿಯಲ್ಲಿ ತೆರೆಕಾಣುತ್ತಿರುವುದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

  ಸಿನಿಮಾಗಳು ಒಟಿಟಿಯಲ್ಲಿ ತೆರೆಕಾಣುತ್ತಿರುವುದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

  ಬಹುಶಃ ಇದು ಇಂದಿನ ಅನಿವಾರ್ಯತೆ ಎಂದು ಹೇಳಬಹುದು. ನಾಲ್ಕೈದು ತಿಂಗಳಿನಿಂದ ಹೊಸ ಸಿನಿಮಾ ನೋಡಲು ಕಾದವರಿಗೆ ಮತ್ತು ಚಿತ್ರ ತಯಾರು ಮಾಡಿ ಹೇಗಾದರೂ ಬಿಡುಗಡೆ ಮಾಡಬೇಕು ಎಂದುಕೊಂಡವರಿಗೆ ಒಟಿಟಿ ವರದಾನದಂತೆ ಆಗಿದೆ. ಅದರಲ್ಲಿ ಈಗಾಗಲೇ ಇತರ ಹಿಂದಿ, ಇಂಗ್ಲಿಷ್ ಭಾಷೆಯ ಒಳ್ಳೊಳ್ಳೆಯ ಸಿನಿಮಾಗಳು ಬರುತ್ತಿವೆ. ಮನೆಯಲ್ಲಿ ಹೋಮ್ ಥಿಯೇಟರ್ ಮಾಡಿಕೊಳ್ಳುವವರ ಸಂಖ್ಯೆಯೂ ಹೆಚ್ಚಿದೆ.

  ಸೆಲೆಬ್ರಿಟಿಗಳಿಗೂ ತಪ್ಪದ ಕಾಟ: ಮಧ್ಯರಾತ್ರಿ ಆಸ್ಪತ್ರೆ ಎದುರು ಅಲೆದಾಡಿದ ನಟಿ ಸುಧಾರಾಣಿಸೆಲೆಬ್ರಿಟಿಗಳಿಗೂ ತಪ್ಪದ ಕಾಟ: ಮಧ್ಯರಾತ್ರಿ ಆಸ್ಪತ್ರೆ ಎದುರು ಅಲೆದಾಡಿದ ನಟಿ ಸುಧಾರಾಣಿ

  ಒಟಿಟಿಯಲ್ಲಿ ನೋಡಿದರೆ ಮಲ್ಟಿಪ್ಲೆಕ್ಸ್ ನಲ್ಲಿ ಸಿನಿಮಾ ನೋಡುವುದರ ಕಾಲು ಭಾಗ ಕೂಡ ಖರ್ಚಾಗುವುದಿಲ್ಲ. ಇಂಥ ಕಾರಣಗಳು ಒಟಿಟಿಗೆ ಸದ್ಯ ಮಾರುಕಟ್ಟೆ ತಂದ ಹಾಗಿದೆ. ಮಾತ್ರವಲ್ಲ, ಸದ್ಯಕ್ಕೆ ಮನೆಯಿಂದ ಆಚೆ ಹೋದರೆ ಏನಾದೀತೇನೋ ಎಂಬ ಭಯವೂ ಜನರಲ್ಲಿದೆ. ಇತ್ತೀಚೆಗೆ ಇಂಟರ್ನೆಟ್ ಬಳಸದವರೇ ಇಲ್ಲ ಎನ್ನಬಹುದು. ಹಳೆಯ ಸಿನಿಮಾಗಳಿಂದ ಹಿಡಿದು ಹೊಸದರ ತನಕ ಎಲ್ಲವೂ ಇಲ್ಲೇ ಲಭ್ಯವಾಗುತ್ತಿವೆ. ಇತ್ತೀಚೆಗೆ ನಾನು ಅತಿಥಿ ಪಾತ್ರದಲ್ಲಿದ್ದ `ಲಾ' ಸಿನಿಮಾ ಕೂಡ ಬಿಡುಗಡೆಯಾಗಿದೆ. ನನಗೆ ಅದರ ಬಗ್ಗೆ ಖುಷಿಯೇ ಇದೆ.

   ನೀವು ಪಾತ್ರಗಳನ್ನು ಆಯ್ಕೆ ಮಾಡುವ ವಿಧಾನ ಏನು?

  ನೀವು ಪಾತ್ರಗಳನ್ನು ಆಯ್ಕೆ ಮಾಡುವ ವಿಧಾನ ಏನು?

  ನಾನು ನಾಯಕಿಯಾಗಿ ನಟಿಸುತ್ತಿದ್ದ ದಿನಗಳಿಂದಲೂ ಇಡೀ ಕತೆ ಕೇಳಿಯೇ ಒಪ್ಪುತ್ತೇನೆ. ಯಾಕೆಂದರೆ ಅಂತಿಮವಾಗಿ ಚಿತ್ರದಲ್ಲಿ ಏನಾದರೊಂದು ಇಂಪ್ರೆಸ್ ಮಾಡುವ ಅಂಶ ಇರಬೇಕು. ಪ್ರಪಂಚದಲ್ಲಿ ಬೇಕಾದಷ್ಟು ಕೆಡುಕುಗಳು ನಡೆಯುತ್ತದೆ. ನಮಗೆ ಇಂಟರ್ನೆಟ್, ಟಿವಿ, ಪತ್ರಿಕೆ ಎಲ್ಲವುಗಳ ಮೂಲಕ ಕೂಡ ಸುದ್ದಿ, ಅದರಲ್ಲಿಯೂ ನೆಗೆಟಿವ್ ಸುದ್ದಿಗಳು ಸಾಕಷ್ಟು ಹರಡುತ್ತಿವೆ. ಇಂಥ ಸಂದರ್ಭದಲ್ಲಿ ನಾವೇ ಸೃಷ್ಟಿಸುವಾಗ ಎಲ್ಲೋ ಒಂದು ಕಡೆ ಒಂದಷ್ಟು ವೀಕ್ಷಕರ ಬದುಕಿಗಾದರೂ ಪಾಸಿಟಿವ್ ಆಗುವಂಥ ಕತೆ ಮಾಡಿಕೊಂಡಿರಬೇಕು. ಸಿನಿಮಾದವರಿಗೆ ಎಂದಷ್ಟೇ ಅಲ್ಲ; ಪ್ರತಿಯೊಬ್ಬ ಸಾಮಾನ್ಯರಿಗೂ ಸಮಾಜದ ಮೇಲೆ ಒಂದು ಜವಾಬ್ದಾರಿ ಇರುತ್ತದೆ. ಹಾಗಾಗಿ ಚಿತ್ರದಲ್ಲಿ ಸಂದೇಶ ನೀಡಲು ಸಾಧ್ಯವಾಗದಿದ್ದರೂ ಪರವಾಗಿಲ್ಲ. ಒಳ್ಳೆಯ ಮನರಂಜನೆಯನ್ನಾದರೂ ಒದಗಿಸುವಂತಿರಬೇಕು. ಕೆಟ್ಟದ್ದನ್ನು ಪ್ರತಿಪಾದಿಸುವ ದೃಶ್ಯಗಳಿರುವ ಸಿನಿಮಾದಲ್ಲಿ ಮಾಡಲು ನಾನು ಬಯಸುವುದಿಲ್ಲ. ಇದು ನನ್ನ ವೈಯಕ್ತಿಕ ಅನಿಸಿಕೆ.

  ಕ್ವಾರಂಟೈನ್ ಕಲಿಸಿದ ಪಾಠದ ಬಗ್ಗೆ ಸುಮಲತಾ ಅಂಬರೀಷ್ ಮಾತುಕ್ವಾರಂಟೈನ್ ಕಲಿಸಿದ ಪಾಠದ ಬಗ್ಗೆ ಸುಮಲತಾ ಅಂಬರೀಷ್ ಮಾತು

   `ಲಾ' ಚಿತ್ರದ ಪಾತ್ರ ಒಪ್ಪಲು ಕೂಡ ಇದೇ ಕಾರಣವೇ?

  `ಲಾ' ಚಿತ್ರದ ಪಾತ್ರ ಒಪ್ಪಲು ಕೂಡ ಇದೇ ಕಾರಣವೇ?

  ಖಂಡಿತವಾಗಿ ಹೌದು. ಚಿತ್ರದಲ್ಲಿ ಒಂದು ಒಳ್ಳೆಯ ಸಂದೇಶ ಇತ್ತು. 'ಹೆಣ್ಣೇ ಹೆಣ್ಣಿಗೆ ಶತ್ರು' ಎನ್ನುವುದನ್ನು ಅಲ್ಲ ಎನ್ನುವುದನ್ನು ಸಿನಿಮಾ ಪ್ರತಿಪಾದಿಸುತ್ತದೆ. ಅದರಲ್ಲಿ ನನ್ನ ಪಾತ್ರವೂ ಅಷ್ಟೇ. ಯಾರೋ ಕೇಳಿದರು, ಯಾಕೆ ಒಂದೇ ದೃಶ್ಯದಲ್ಲಿ ಕಾಣಿಸಿಕೊಳ್ಳುವ ಪಾತ್ರವನ್ನೆಲ್ಲ ಒಪ್ಪಿಕೊಂಡಿದ್ದೀರಿ ಎಂದು. ಆದರೆ ಒಂದೇ ದೃಶ್ಯ ವಾದರೂ ಮಹತ್ವ ಇತ್ತು. ನಾಯಕಿಗೆ ಬೆಂಬಲವಾಗಿ ನಿಲ್ಲುವ ಪಾತ್ರವಾಗಿತ್ತು. ಅಂಥ ಸಿನಿಮಾಗಳಲ್ಲಿ ಪ್ರಭಾವ ಬೀರಬಲ್ಲ ಒಂದೇ ದೃಶ್ಯವಾದರೂ ನಾನು ಮಾಡಬಲ್ಲೆ. ಇದು ಈಗಷ್ಟೇ ಅಲ್ಲ; ಈ ಹಿಂದೆಯೇ 'ದೇವತಾ ಮನುಷ್ಯ', 'ಜೀವನ ಚೈತ್ರ', ಅದರಲ್ಲಿ ನನ್ನ ಪಾತ್ರ ದೊಡ್ಡದೇನಲ್ಲ. ಆದರೆ ಜನರ ಮನಸಲ್ಲಿ ಕುಳಿತುಕೊಳ್ಳುವಂಥ ಪಾತ್ರ. ಇಂದು ಸಿನಿಮಾ ಮೇಕಿಂಗ್ ರೀತಿ ಬದಲಾಗಿದೆ. ಮುಂಚಿನಂತೆ ಕಾದಂಬರಿ ಆಧಾರಿತ ಸಿನಿಮಾಗಳು ಇಲ್ಲ. ಇಂದು ಚಿತ್ರಕತೆ ಮಾಡುವ ರೀತಿಯೇ ವಿಭಿನ್ನ.

   ಲಾಕ್ಡೌನ್ ಬಳಿಕ ನಿಮ್ಮ ಜೀವನದ ರೀತಿ ಬದಲಾಗಿದೆಯೇ?

  ಲಾಕ್ಡೌನ್ ಬಳಿಕ ನಿಮ್ಮ ಜೀವನದ ರೀತಿ ಬದಲಾಗಿದೆಯೇ?

  ನಾನು ಮೊದಲಿನಿಂದಲೂ ಕೆಲವೊಂದು ವಿಚಾರದಲ್ಲಿ ಚಿತ್ರರಂಗದ ಇತರರಿಗೆ ವಿಭಿನ್ನ ಎನಿಸುವ ರೀತಿಯಲ್ಲಿ ಬದುಕುತ್ತಿರುವವಳು. ಒಂದು ಹಂತದಲ್ಲಿ ನಾನು ಕೂಡ ಅವರಂತೆ ಇರುವುದೇ ಸರಿಯೇನೋ ಎನ್ನುವ ಗೊಂದಲ ಕೂಡ ಕಾಡಿತ್ತು. ಆದರೆ ಈ ಲಾಕ್‌ಡೌನ್ ನನ್ನ ಸ್ವಂತಿಕೆಯೇ ನನಗೆ ಸರಿ ಎನ್ನುವುದನ್ನು ತೋರಿಸಿಕೊಟ್ಟಿತು. ಯಾಕೆಂದರೆ ಜೀವನದ ಕುರಿತಾದ ನನ್ನ ಆಲೋಚನೆಗಳೇ ಹೀಗೆ. ನಾನು ಸುಮಾರು ವರ್ಷಗಳಿಂದ ದುಂದು ವೆಚ್ಚ ಇರದ ಬದುಕನ್ನು ನಡೆಸುತ್ತಿದ್ದೇನೆ. ಕೆಮಿಕಲ್ ಮಿಶ್ರಿತ ಪದಾರ್ಥಗಳು, ಪ್ರಾಣಿಜನ್ಯ ವಸ್ತುಗಳು ಸೇರಿದಂತೆ ಆದಷ್ಟು ಪ್ಲಾಸ್ಟಿಕ್ ಬಳಸದೆ ಇರುವ ಬದುಕು ನನ್ನದು. ಅದೇ ನಾನು ಸಿಲ್ಕ್ ಸೀರೆ ಉಡುವುದೇ ಇಲ್ಲ. ಎಷ್ಟೊಂದು ಬಾರಿ ಯಾಕೆ ನೀವು ಕಾಟನ್ನೇ ಉಡುತ್ತೀರಿ ಎಂದು ಪ್ರಶ್ನಿಸುತ್ತಾರೆ. ಇಂದಿಗೂ ನಾನು ಲೆದರ್ ಪರ್ಸ್ ಬಳಸುವುದಿಲ್ಲ.

  Interview: ನಿರ್ದೇಶನ ರಂಗಕ್ಕೆ ಇಳಿದ ಕವಿ ದೊಡ್ಡರಂಗೇಗೌಡInterview: ನಿರ್ದೇಶನ ರಂಗಕ್ಕೆ ಇಳಿದ ಕವಿ ದೊಡ್ಡರಂಗೇಗೌಡ

  ಕೆಲವೊಮ್ಮೆ ಯಾರಾದರೂ ಒತ್ತಾಯ ಮಾಡುವಾಗ ಉಡುಗೊರೆಯಾಗಿ ತೆಗೆದುಕೊಳ್ಳಬೇಕಾದ ಬಾಧ್ಯತೆ ನಮಗಿದೆ ಎಂದು ಪಡೆಯಬೇಕೇನೋ ಅನಿಸುವುದಿದೆ. ಆದರೆ ಅದು ಖಂಡಿತವಾಗಿ ನಾನು ಪಡೆಯಬಾರದು ಎಂದು ನಿರ್ಧಾರ ಮಾಡಿದ್ದೇನೆ. ಉಳಿದ ಸೆಲೆಬ್ರಿಟಿಗಳಂತೆ ಅಲ್ಲದೆ ಬಹಳಷ್ಟು ಬಾರಿ ನನ್ನ ಬಟ್ಟೆಗಳನ್ನು ರಿಪೀಟ್ ಮಾಡುತ್ತಿರುತ್ತೇನೆ. ಈ ತರಹ ನೆನಪಿಸಿಕೊಂಡು ಹೋದರೆ ಬಹಳಷ್ಟು ಇವೆ. ಯಾಕೆಂದರೆ ಇದೇ ನಾನು. ಯಾರದೋ ಮಾತಿಗಾಗಿ, ಟ್ರೆಂಡ್, ಫ್ಯಾಷನ್ ಎನ್ನುವ ಹೆಸರಲ್ಲಿ ಬದಲಾಗಬೇಕಾದ ಅನಿವಾರ್ಯತೆ ಇಲ್ಲ ಎಂದು ಅನಿಸುತ್ತದೆ. ನಾನು ಮಾಡಲ್ಲ.

  English summary
  Veteran Kannada actress, talks about the life during Lockdown period, OTT and theatre Problems.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X