»   » ಸಂದರ್ಶನ: 'ಕಾಫಿ ತೋಟ'ಕ್ಕಾಗಿ ಕಾಲಿವುಡ್ ನಿಂದ ಬಂದ ಉಡುಪಿಯ ಹುಡುಗ ರಾಹುಲ್

ಸಂದರ್ಶನ: 'ಕಾಫಿ ತೋಟ'ಕ್ಕಾಗಿ ಕಾಲಿವುಡ್ ನಿಂದ ಬಂದ ಉಡುಪಿಯ ಹುಡುಗ ರಾಹುಲ್

Posted By:
Subscribe to Filmibeat Kannada

ನಿರ್ದೇಶಕ ಟಿ.ಎನ್.ಸೀತಾರಾಮ್ ಅವರ 'ಕಾಫಿತೋಟ' ಸಿನಿಮಾದ ಮೇಲಿನ ಕುತೂಹಲ ದಿನೇ ದಿನೇ ಹೆಚ್ಚಾಗುತ್ತಿದೆ. ಕ್ರೈಂ ಥ್ರಿಲ್ಲರ್ ಚಿತ್ರ ಇದಾಗಿದ್ದು, ಸಿನಿಮಾದ ಒಂದೊಂದು ಪಾತ್ರಗಳೂ ತುಂಬ ವಿಶೇಷವಾಗಿದೆ. ಅದರಲ್ಲಿ ಮ್ಯೂಸೀಶಿಯನ್ ಪಾತ್ರವೂ ಒಂದು.

'ಕಾಫಿ ತೋಟ' ಚಿತ್ರದಲ್ಲಿ ಮ್ಯೂಸೀಶಿಯನ್ ಪಾತ್ರದಲ್ಲಿ ನಟಿಸಿರುವುದು ನಟ ರಾಹುಲ್. ಮೂಲತಃ ಉಡುಪಿಯ ಹುಡುಗನಾಗಿರುವ ರಾಹುಲ್ ಮೊದಲು ಕಾಲಿವುಡ್ ನಲ್ಲಿ ಸಿನಿಮಾ ಮಾಡಿದ್ದರು. ಆ ಬಳಿಕ ಕನ್ನಡ 'ಕಿರಗೂರಿನ ಗಯ್ಯಾಳಿಗಳು' ಚಿತ್ರದಲ್ಲಿ ನಟಿಸಿದ್ದ ರಾಹುಲ್ ಈಗ 'ಕಾಫಿತೋಟ' ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

'ಕಾಫಿತೋಟ' ಸಿನಿಮಾ ಸದ್ಯ ಬಿಡುಗಡೆಗೆ ಸಿದ್ಧವಾಗಿದೆ. ಈ ಹಿನ್ನಲೆಯಲ್ಲಿ ಚಿತ್ರದ ನಟ ರಾಹುಲ್ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಕ್ಕೆ ನೀಡಿರುವ ವಿಶೇಷ ಸಂದರ್ಶನದ ಆಯ್ದ ಭಾಗ ಇಲ್ಲಿದೆ ಓದಿರಿ...

ಸಂದರ್ಶನ : ನವೀನ.ಎಂ.ಎಸ್

ಕನ್ನಡ ಪ್ರೇಕ್ಷಕರಿಗೆ ನಿಮ್ಮ ಪರಿಚಯ ಮಾಡಿಕೊಳ್ಳಿ

''ನನ್ನ ಹೆಸರು ರಾಹುಲ್. 'ಕಾಫಿತೋಟ' ನನ್ನ ಎರಡನೇ ಕನ್ನಡ ಸಿನಿಮಾ. ಈ ಹಿಂದೆ ಸುಮನ ಕಿತ್ತೂರ್ ಅವರ 'ಕಿರಗೂರಿನ ಗಯ್ಯಾಳಿಗಳು' ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ಆ ನಂತರ ಈಗ 'ಕಾಫಿತೋಟ' ಸಿನಿಮಾ ಮಾಡಿದ್ದೇನೆ''

ಸಿನಿಮಾದ ಮೇಲೆ ಆಸಕ್ತಿ ಮೊದಲಿನಿಂದ ಇತ್ತ..?

''ಇಲ್ಲ.. ನಾನು ಮೂಲತಃ ಉಡುಪಿಯವನು. ಹುಟ್ಟಿದ್ದು ಕೇರಳ, ಓದಿದ್ದು ತಮಿಳುನಾಡು. ಚೆನ್ನೈನ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವಾಗ ಹಾಗೆ ಜಾಹಿರಾತು ಚಿತ್ರಗಳಲ್ಲಿ ನಟನೆ ಶುರು ಮಾಡಿದೆ. ಆ ನಂತರ ತಮಿಳು ಸಿನಿಮಾದಲ್ಲಿ ಸೆಕೆಂಡ್ ಹೀರೋ ಆಗಿ ಅವಕಾಶ ಸಿಕ್ಕಿತ್ತು''

ಹಾಗಾದ್ರೆ.. 'ಕಾಫಿತೋಟ' ಚಿತ್ರಕ್ಕೆ ಅವಕಾಶ ಸಿಕ್ಕಿದ್ದು ಹೇಗೆ..?

''ಕ್ಯಾಮರಾ ಮ್ಯಾನ್ ಅಶೋಕ್ ಕಶ್ಯಪ್ ಸರ್ ನನ್ನ ಒಂದು ಸಿನಿಮಾ ನೋಡಿದ್ದರು. ಅವರು ಸೀತಾರಾಮ್ ಸರ್ ಗೆ ನನನ್ನು ರೆಫರ್ ಮಾಡಿದ್ದರು. ಸೀತಾರಾಮ್ ಸರ್ ಅವರಿಗೂ ನಾನು ಇಷ್ಟ ಆಗಿ 'ಕಾಫಿತೋಟ' ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು.''

'ಕಾಫಿತೋಟ' ಸಿನಿಮಾದ ಅನುಭವ ಹೇಗಿತ್ತು..?

''ಸೂಪರ್ ಆಗಿತ್ತು... ಸೀತಾರಾಮ್ ಸರ್.. ರಘು ಮುಖರ್ಜಿ ಸರ್, ರಾಧಿಕಾ, ಸುಂದರ್ ರಾಜ್ ಸರ್, ಹೀಗೆ ಎಲ್ಲರ ಜೊತೆಗೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ. ಶೂಟಿಂಗ್ ಸಮಯದಲ್ಲಿ ಎಲ್ಲರೂ ಫ್ಯಾಮಿಲಿ ತರ ಇದ್ವೀ. ನನಗೆ 'ಕಾಫಿತೋಟ' ತುಂಬ ಒಳ್ಳೆಯ ಅನುಭವ ಕೊಟ್ಟಿದೆ''

ಸೀತಾ ರಾಮ್ ಸರ್ ಜೊತೆ ಕೆಲಸ ಮಾಡಿದ್ದು ಹೇಗನಿಸಿತು..?

''ಸೀತಾ ರಾಮ್ ಸರ್ ಅಂತ ಹೇಳುವಾಗ ಅವರು ದೊಡ್ಡ ನಿರ್ದೇಶಕರು. ಅವರ ದೊಡ್ಡ ಫ್ಯಾನ್ ನಾನು.. ನಮ್ಮ ಮನೆಯಲ್ಲಿ ಎಲ್ಲರಿಗೂ ಅವರ ಧಾರಾವಾಹಿ ಅಂದರೆ ಇಷ್ಟ. ತುಂಬ ಚೆನ್ನಾಗಿತ್ತು ಅವರ ಜೊತೆ ಕೆಲಸ ಮಾಡಿದ್ದು.''

ನಿಮ್ಮ ಪಾತ್ರದ ಬಗ್ಗೆ ಹೇಳಿ..?

''ನನ್ನ ಪಾತ್ರದ ಹೆಸರು ಚಾರ್ಮಿ ಅಂತ. ಒಬ್ಬ ಮ್ಯೂಸೀಶಿಯನ್ ಪಾತ್ರ ಮಾಡುತ್ತಿದ್ದೇನೆ. ಚಿತ್ರದಲ್ಲಿ ನನ್ನದು ಫನ್ ಲವಿಂಗ್ ಕ್ಯಾರೆಕ್ಟರ್....''

ಮುಂದೆ ಯಾವ ರೀತಿಯ ಪಾತ್ರವನ್ನು ಮಾಡುವ ಕನಸು ಇದೆ.?

''ನನಗೆ ಕನಸಿನ ಪಾತ್ರ ಅಂತ ಇಲ್ಲ. ಒಳ್ಳೆಯ ನಿರ್ದೇಶಕರ ಜೊತೆ ಸಿನಿಮಾ ಮಾಡುವುದಕ್ಕೆ ಇಷ್ಟ. ಚಿಕ್ಕ ಪಾತ್ರವಾಗಲಿ.. ದೊಡ್ಡ ಪಾತ್ರವೇ ಆಗಲಿ.. ಒಳ್ಳೆಯ ನಿರ್ದೇಶಕರ ಜೊತೆ ಸಿನಿಮಾ ಮಾಡಬೇಕು ಅಂತ ಆಸೆ ಇದೆ.

'ಕಾಫಿತೋಟ' ಜೊತೆಗೆ ಕನ್ನಡದಲ್ಲಿ ಸದ್ಯ ಯಾವುದಾದರೂ ಸಿನಿಮಾ ಮಾಡುತ್ತಿದ್ದೀರಾ..?

''ಸದ್ಯಕ್ಕೆ ನನಗೆ ಯಾವ ಸಿನಿಮಾ ಅವಕಾಶಗಳು ಬಂದಿಲ್ಲ.. ಈ ಸಿನಿಮಾ ರಿಲೀಸ್ ಆದ ಮೇಲೆ ಅವಕಾಶ ಬಂದರೆ ಖಂಡಿತ ಸಿನಿಮಾ ಮಾಡುತ್ತೇನೆ.''

ಸಿನಿಮಾದ ಬಗ್ಗೆ ನಮ್ಮ ಓದುಗರಿಗೆ ನಿಮ್ಮ ಮಾತು

''ನಮ್ಮ ಸಿನಿಮಾ ಸದ್ಯ ಸೆನ್ಸಾರ್ ನಲ್ಲಿದ್ದು, ಸಿನಿಮಾ ಆಗಸ್ಟ್ ಮೂರನೇ ವಾರಕ್ಕೆ ರಿಲೀಸ್ ಆಗುವ ಸಾದ್ಯತೆ ಇದೆ. ದಯವಿಟ್ಟು ಹೋಗಿ ಸಿನಿಮಾ ನೋಡಿ.. ಇದು ಸೀತಾರಾಮ್ ಸರ್ ಅವರ ಫ್ಯಾಮಿಲಿ ಸಿನಿಮಾ ಎಲ್ಲರಿಗೂ ಇಷ್ಟ ಆಗುತ್ತದೆ.''

English summary
Interview with TN Seetharam directorial 'Kaafi Thota' Movie Actor Rahul.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada