»   » ಸಂದರ್ಶನ : 'ಕಾಫಿತೋಟ'ದ ಓನರ್ ಆದ 'ರಂಗಿತರಂಗ' ಬೆಡಗಿ ರಾಧಿಕಾ ಚೇತನ್

ಸಂದರ್ಶನ : 'ಕಾಫಿತೋಟ'ದ ಓನರ್ ಆದ 'ರಂಗಿತರಂಗ' ಬೆಡಗಿ ರಾಧಿಕಾ ಚೇತನ್

Posted By:
Subscribe to Filmibeat Kannada

ಟಿ.ಎನ್.ಸೀತಾರಾಮ್ ಅವರ ನಿರ್ದೇಶಕದ 'ಕಾಫಿತೋಟ' ಸಿನಿಮಾದಲ್ಲಿ ನಟಿ ರಾಧಿಕಾ ಚೇತನ್ ನಾಯಕಿ ಆಗಿದ್ದಾರೆ. ಯಾವಾಗಲು ವಿಭಿನ್ನ ಪಾತ್ರಗಳ ಹುಡುಕಾಟದಲ್ಲಿರುವ ರಾಧಿಕಾ ಚೇತನ್ ಈ ಸಿನಿಮಾದಲ್ಲಿ 'ಕಾಫಿತೋಟ'ದ ಓನರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

'ಕಾಫಿತೋಟ' ಟ್ರೇಲರ್ ನೋಡಿ ತಮ್ಮ ಧಾರಾವಾಹಿ ದಿನಗಳನ್ನು ನೆನಪಿಸಿಕೊಂಡ ಯಶ್

'ರಂಗಿತರಂಗ' ಸಿನಿಮಾ ಸೂಪರ್ ಸಕ್ಸಸ್ ನ ಬಳಿಕ ರಾಧಿಕಾ ಚೇತನ್ 'ಯೂ ಟರ್ನ್' ಮತ್ತು 'ಬಿಬಿ5' ಸಿನಿಮಾದಲ್ಲಿ ನಟಿಸಿದ್ದರು. ದೊಡ್ಡ ಸಿನಿಮಾದ ಜೊತೆ ಕಿರುಚಿತ್ರದ ಮೂಲಕವೂ ರಾಧಿಕಾ ಎಲ್ಲರ ಗಮನ ಸೆಳೆದಿದ್ದರು.

ಟ್ರೈಲರ್: 'ಕಾಫಿ ತೋಟ'ದಲ್ಲಿ ನಡೆದ ಕೊಲೆಯ ಸುತ್ತಾ ಮುತ್ತಾ

ಸದ್ಯ 'ಕಾಫಿತೋಟ' ಸಿನಿಮಾದ ನಾಯಕಿಯಾಗಿ ನಟಿಸಿರುವ ರಾಧಿಕಾ ಚೇತನ್ ಈ ಸಿನಿಮಾದ ಬಗ್ಗೆ ಮತ್ತು ತಮ್ಮ ಮುಂದಿನ ಕನಸುಗಳ ಬಗ್ಗೆ ಮಾತನಾಡಿದ್ದಾರೆ. 'ಕಾಫಿತೋಟ' ಚಿತ್ರದ ರಿಲೀಸ್ ಹಿನ್ನಲೆಯಲ್ಲಿ ನಟಿ ರಾಧಿಕಾ ಚೇತನ್ ಅವರ ಸಂದರ್ಶನದ ಆಯ್ದ ಭಾಗ ಇಲ್ಲಿದೆ ಓದಿ...

ಸಂದರ್ಶನ : ನವೀನ.ಎಂ.ಎಸ್

'ಕಾಫಿತೋಟ' ಸಿನಿಮಾದಲ್ಲಿ ನಿಮ್ಮ ಪಾತ್ರ ಏನು..?

''ಕಾಫಿತೋಟ' ಚಿತ್ರದಲ್ಲಿ ನಾನು ಕಾಫಿತೋಟದ ಓನರ್ ಪಾತ್ರ ಮಾಡುತ್ತಿದ್ದೇನೆ. ಈ ಪಾತ್ರಕ್ಕೆ ಒಂದು ವಿಭಿನ್ನ ಎಮೋಷನಲ್ ಗ್ರಾಫ್ ಇದೆ. ಜಾಸ್ತಿ ಸೀರಿಯಸ್ ಇಲ್ಲದ ತಮಾಷೆ ಮಾಡುವ ಹುಡುಗಿಯ ಪಾತ್ರ ನನ್ನದು''

ನೀವು 'ಕಾಫಿತೋಟ' ಚಿತ್ರವನ್ನು ಒಪ್ಪಿಕೊಳ್ಳುವುದಕ್ಕೆ ಮುಖ್ಯ ಕಾರಣ ಸೀತಾರಾಮ್ ಸರ್ ಅವರಾ.. ಅಥವಾ ಬೇರೆ ಏನಾದರೂ ಕಾರಣ ಇದೆಯಾ..?

''ನಾನು ಒಂದು ಸಿನಿಮಾವನ್ನು ಒಪ್ಪಿಕೊಳ್ಳಬೇಕು ಅಂದರೆ ಅದರ ನಿರ್ದೇಶಕರು, ಸ್ಕ್ರಿಪ್ಟ್.. ಮತ್ತು ನನ್ನ ಪಾತ್ರ ಈ ಮೂರು ಅಂಶಗಳನ್ನು ತಲೆಯಲ್ಲಿ ಇಟ್ಟುಕೊಂಡಿರುತ್ತೇನೆ. ಮುಂಚೆಯಿಂದಲೂ ನನಗೆ ಸೀತಾರಾಮ್ ಸರ್ ಅವರ ಧಾರಾವಾಹಿ ತುಂಬ ಇಷ್ಟ ಆಗಿತ್ತು. ಸೀತಾರಾಮ್ ಸರ್ ಅವರ ಸಿನಿಮಾದಲ್ಲಿ ನಟಿಸಬೇಕು ಅಂತಲೇ ಈ ಚಿತ್ರ ಒಪ್ಪಿಕೊಂಡೆ.''

ನಿಮ್ಮ ಮೊದಲ ಸಿನಿಮಾ 'ರಂಗಿತರಂಗ' ಮತ್ತು 'ಯೂ ಟರ್ನ್' ಚಿತ್ರದಲ್ಲಿ ಆಕ್ಸಿಡೆಂಟ್ ಆಗಿತ್ತು. ಈ ಸಿನಿಮಾದಲ್ಲಿ ಅದೇ ರೀತಿಯ ಕಥೆ ಇದೆ ಅಲ್ವಾ..?

''ಹೌದು, ಅದನ್ನು ನೀವು ಸಿನಿಮಾದಲ್ಲಿಯೇ ನೋಡಬೇಕು. ಕೆಲವರು ನನಗೆ ಇದೇ ರೀತಿ ಕೇಳಿದ್ದರು. ಯಾರಿಗೆ ಗೊತ್ತು ಅದೇ ನನ್ನ ಗೆಲುವಿನ ಸೂತ್ರ ಇರಬಹುದೇನೋ.''

ಸಸ್ಪೆನ್ಸ್ ಥ್ರಿಲ್ಲರ್ 'ಕಾಫಿತೋಟ'ದ ನಿರ್ದೇಶಕ ಸೀತಾರಾಮ್ ಸಂದರ್ಶನ

ಕನ್ನಡದ ಸಿನಿಮಾ ನಟಿಯರು ಶಾರ್ಟ್ ಫಿಲ್ಮ್ ಮಾಡುವುದು ಈಗ ಜಾಸ್ತಿಯಾಗುತ್ತಿದೆ. ನೀವು ಕೂಡ ಒಂದು ಶಾರ್ಟ್ ಫಿಲ್ಮ್ ನಲ್ಲಿ ನಟಿಸಿದ್ದೀರಿ. ಅದರ ಬಗ್ಗೆ ಹೇಳಿ..?

''ನಾನು ಧೀರಜ್ ಅವರು ನಿರ್ದೇಶನ ಮಾಡಿದ್ದ 'ನೆವರ್ ಎಂಡ್' ಎನ್ನುವ ಶಾರ್ಟ್ ಫಿಲ್ಮ್ ನಲ್ಲಿ ನಟಿಸಿದ್ದೆ. ನನಗೆ ಅದನ್ನು ಮಾಡಿರುವುದು ಖುಷಿ ಇದೆ. ಒಬ್ಬ ಕಲಾವಿದನಿಗೆ ತನ್ನನ್ನು ವಿವಿಧ ಆಯಾಮಗಳಲ್ಲಿ ಗುರುತಿಸಿಕೊಳ್ಳುವುದಕ್ಕೆ ಈ ರೀತಿಯ ಪ್ರಾಜೆಕ್ಟ್ ಗಳು ಸಹಾಯ ಮಾಡುತ್ತದೆ.''

'ರಂಗಿತರಂಗ' ಸೂಪರ್ ಹಿಟ್ ಆದರೂ ಯಾಕೆ ನೀವು ಹೆಚ್ಚು ಸಿನಿಮಾ ಮಾಡಲಿಲ್ಲ..?

''ರಂಗಿತರಂಗ ನಂತರ 'ಯೂ ಟರ್ನ್' ಮತ್ತು 'ಬಿಬಿ5' ಎಂಬ ಸಿನಿಮಾ ಮಾಡಿದೆ. ಮೊದಲ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆದಾಗ ನಮ್ಮ ಮೇಲೆ ಹೆಚ್ಚು ಜವಾಬ್ದಾರಿ ಇರುತ್ತದೆ. ಮಾಡಿದರೆ ಕ್ವಾಲಿಟಿ ಸಿನಿಮಾಗಳನ್ನೇ ಮಾಡೋಣ ಎನ್ನುವುದು ನನ್ನ ಭಾವನೆ. ಯಾವಾಗಲೂ ಡಿಫರೆಂಟ್ ಪಾತ್ರಗಳನ್ನು ಮಾಡಬೇಕು ಎನ್ನುವುದು ನನ್ನ ಚಡಪಡಿಕೆ''

ಸಂದರ್ಶನ: 'ಕಾಫಿ ತೋಟ'ಕ್ಕಾಗಿ ಕಾಲಿವುಡ್ ನಿಂದ ಬಂದ ಉಡುಪಿಯ ಹುಡುಗ ರಾಹುಲ್

ಟಿ.ಎನ್.ಸೀತಾರಾಮ್ ಅವರಿಂದ ನೀವು ಏನು ಕಲಿತುಕೊಂಡಿದ್ದೀರಿ..?

''ಅವರು ದೊಡ್ಡ ನಿರ್ದೇಶಕರು... ದೊಡ್ಡ ಬರಹಗಾರರು. ಕನ್ನಡವನ್ನು ಸ್ಪಷ್ಟವಾಗಿ ಉಚ್ಛಾರಣೆ ಮಾಡುವುದನ್ನು ಅವರಿಂದ ನಾನು ಕಲಿತೆ. ನನಗೆ ಸ್ಕ್ರಿಪ್ಟ್ ಮುಂಚೆಯೇ ನೋಡಿಕೊಂಡು ಕೆಲಸ ಮಾಡುವುದು ಅಭ್ಯಾಸ. ಆದರೆ ಈಗ ಚಿತ್ರದ ಚಿತ್ರೀಕರಣದ ಬಳಿಕ ಅರ್ಧ ಗಂಟೆ ಮುಂಚೆ ಸ್ಕ್ರಿಪ್ಟ್ ಸಿಕ್ಕಿದರೂ ಸಾಕು''

ಚಿತ್ರ ನಿರ್ದೇಶನ ಮತ್ತು ನಿರ್ಮಾಣದ ಕನಸು ಏನಾದರೂ ಇದೆಯಾ.?

''ಸದ್ಯಕ್ಕೆ ಇಲ್ಲ... ಆದರೆ ಹತ್ತು ವರ್ಷದ ನಂತರ ನಿರ್ದೇಶನ ಮಾಡುಬಹುದು. ಯಾಕಂದ್ರೆ ನನಗೆ ಚಿತ್ರರಂಗದಲ್ಲಿಯೇ ಉಳಿಯಬೇಕು ಅಂತ ಆಸೆ. ಒಳ್ಳೆಯ ಸಿನಿಮಾ ಮಾಡಬೇಕು ಎಂಬ ಹಂಬಲ. ಈ ಸಮಯದಲ್ಲಿ ನಾನು ಡೈರೆಕ್ಷನ್ ಬಗ್ಗೆ ಯೋಚನೆ ಮಾಡಿಲ್ಲ. ಆದರೆ ಮುಂದೆ ಮಾಡಬಹುದು.''

ಯಾವ ನಿರ್ದೇಶಕರ ಜೊತೆ ಸಿನಿಮಾ ಮಾಡಬೇಕು ಅಂತ ಇಷ್ಟ..?

''ತುಂಬ ಜನ ಇದ್ದಾರೆ. ಸಿಂಪಲ್ ಸುನಿ, ಯೋಗರಾಜ್ ಭಟ್, ಹೇಮಂತ್ ರಾವ್, ನಿರ್ದೇಶನದಲ್ಲಿ ಸಿನಿಮಾ ಮಾಡುವುದಕ್ಕೆ ಇಷ್ಟ. ಜೊತೆಗೆ ಮಣಿರತ್ನಂ ಮತ್ತು ಸಂಜಯ್ ಲೀಲಾ ಬನ್ಸಾಲಿ ಅವರ ಸಿನಿಮಾ ಮಾಡುವ ದೊಡ್ಡ ಕನಸು ಇದೆ.''

'ಕಾಫಿತೋಟ' ಸಿನಿಮಾ ಒಬ್ಬ ಕಮರ್ಶಿಯಲ್ ಪ್ರೇಕ್ಷಕನಿಗೆ ತೃಪ್ತಿ ನೀಡುತ್ತದೆ ಅನಿಸುತ್ತಾ..?

''ಖಂಡಿತ.. ಯಾಕಂದ್ರೆ ಈ ಚಿತ್ರದಲ್ಲಿ ಎಲ್ಲ ರೀತಿಯ ಅಂಶಗಳು ಇದೆ. ಫ್ಯಾಮಿಲಿ ಎಂಟರ್ಟೈನರ್ ಸಿನಿಮಾ ಇದು. ಕಾಮಿಡಿ, ಸಸ್ಪೆನ್ಸ್, ಲವ್, ಒಳ್ಳೆಯ ಕ್ಯಾಮರಾ ವರ್ಕ್ ಮತ್ತು ಹಾಡುಗಳು ಎಲ್ಲವೂ ಜನರ ಮನ ಮುಟ್ಟುತ್ತದೆ ಅಂತ ನನಗೆ ನಂಬಿಕೆ ಇದೆ.''

English summary
Interview with 'Kaafi Thota' Movie Actress Radhika Chetan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada