For Quick Alerts
  ALLOW NOTIFICATIONS  
  For Daily Alerts

  ಭವ್ಯವಾಗಿ ಸನ್ಮಾನಿತೆಯಾದ ಭವ್ಯಾ : ಕನ್ನಡ ನಟಿಗೆ ದುಬೈ ನಲ್ಲಿ ಗೌರವ

  By ಶಶಿಕರ ಪಾತೂರ್
  |

  ಕನ್ನಡ ಚಿತ್ರರಂಗದಲ್ಲಿ ಕಳೆದ 35 ವರ್ಷಗಳಿಂದ ಸಕ್ರಿಯರಾಗಿರುವ ಅದ್ಭುತ ನಟಿ ಭವ್ಯಾ. ಇದುವರೆಗೆ ಸುಮಾರು 150ರಷ್ಟು ಚಿತ್ರಗಳಲ್ಲಿ ನಟಿಸಿರುವ ಭವ್ಯಾ ಅವರ ಸಾಧನೆಯನ್ನು ಗುರುತಿಸಿ ದುಬೈನಲ್ಲಿ ಅವಿಘ್ನಾ ಕ್ರಿಯೇಶನ್ಸ್ ವತಿಯಿಂದ ಅದ್ಧೂರಿ ಸನ್ಮಾನ ಹಮ್ಮಿಕೊಳ್ಳಲಾಯಿತು. 2018ನೇ ಸಾಲಿನ ಸ್ಟಾರ್ ಪರ್ಫಾಮರ್ ಅವಾರ್ಡ್ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಭವ್ಯಾ ಅವರನ್ನು ಸನ್ಮಾನಿಸಲಾಗಿದೆ.

  'ಪ್ರೇಮಪರ್ವ' ಚಿತ್ರದ ಮೂಲಕ ಸಿನಿಮಾರಂಗ ಪ್ರವೇಶಿಸಿದ ಅವರು ರಾಹುಲ್ ವರ್ಮ ಜೊತೆಗಿನ ವಿವಾಹದ ಬಳಿಕ ಮುಂಬೈ ಸೇರಿಕೊಂಡಿದ್ದರು. 'ನನ್ನ ಪ್ರೀತಿಯ ಹುಡುಗಿ' ಚಿತ್ರದ ಮೂಲಕ ರೀ ಎಂಟ್ರಿ ಪಡೆದ ಬಳಿಕ ಯುವತಾರೆಯರ ತಾಯಿ, ಅತ್ತಿಗೆಯಾಗಿ ವಿಶೇಷ ಪೋಷಕ ಪಾತ್ರಗಳಿಂದ ಗಮನ ಸೆಳೆಯುತ್ತಿದ್ದಾರೆ. ಮುಂದೆ ಓದಿ..

  ಮಾಸ್ಟರ್ ಆನಂದ್ ಗೆ ಅಮ್ಮನಾಗಲಿರುವ ಭವ್ಯಾ

  ಮಾಸ್ಟರ್ ಆನಂದ್ ಗೆ ಅಮ್ಮನಾಗಲಿರುವ ಭವ್ಯಾ

  ಮಾಸ್ಟರ್ ಆನಂದ್ ಮತ್ತೆ ನಾಯಕರಾಗಿ ನಟಿಸುತ್ತಿದ್ದಾರೆ. ಫ್ರೆಂಡ್ಸ್ ಚಿತ್ರದಲ್ಲಿ ಸ್ನೇಹಿತನಾಗಿ ಗಮನ ಸೆಳೆದಿದ್ದ ಅವರು ಪೂರ್ಣ ಪ್ರಮಾಣದ ನಾಯಕರಾಗಿ ನಟಿಸುತ್ತಿರುವ ಚಿತ್ರದಲ್ಲಿ ಅವರ ತಾಯಿಯಾಗಿ ಭವ್ಯಾ ನಟಿಸಲಿದ್ದಾರೆ. ಚಿತ್ರದ ಬಗ್ಗೆ 'ಫಿಲ್ಮಿಬೀಟ್ ಕನ್ನಡ' ಜೊತೆಗೆ ಮಾತನಾಡಿದ ಭವ್ಯಾ ಅವರು ಹೇಳಿದ್ದು ಹೀಗೆ, "ಚಿತ್ರದ ಹೆಸರು ಕೋಳಿ ಕೆ ರಂಗ. ಮಹೇಶ್ ಎನ್ನುವವರು ನಿರ್ದೇಶಕರು. ಅವರು ದ್ವಾರಕೀಶ್ ಅವರೊಂದಿಗೆ ಕೆಲಸ ಮಾಡಿ ಅನುಭವ ಹೊಂದಿರುವವರು. ನಿರ್ಮಾಪಕರಾಗಿ ಸೋಮಣ್ಣ ಎನ್ನುವ ಹೊಸಬರು ಎಂಟ್ರಿ ನೀಡುತ್ತಿದ್ದಾರೆ. ಚಿತ್ರದ ನಾಯಕಿಯಾಗಿ ನಿರ್ಮಾಪಕರ ಮಗಳೇ ನವನಟಿಯಾಗಿ ಪರಿಚಯಗೊಳ್ಳಲಿದ್ದಾಳೆ.'' ಎಂದಿದ್ದಾರೆ.

  ಗಾಂಧಿನಗರದ ಸುತ್ತ : 'ಮಜಾ ಟಾಕೀಸ್'ನಲ್ಲಿ ದರೋಡೆಕೋರರು.. 'ಯಜಮಾನ'ದ ಮತ್ತೊಂದು ಹಾಡು.. ಗಾಂಧಿನಗರದ ಸುತ್ತ : 'ಮಜಾ ಟಾಕೀಸ್'ನಲ್ಲಿ ದರೋಡೆಕೋರರು.. 'ಯಜಮಾನ'ದ ಮತ್ತೊಂದು ಹಾಡು..

  ಒಳ್ಳೆಯ ಸಿನಿಮಾ ಆಫರ್ ಬಂದಿದೆ

  ಒಳ್ಳೆಯ ಸಿನಿಮಾ ಆಫರ್ ಬಂದಿದೆ

  ಅಂದಹಾಗೆ, ಭವ್ಯಾ ಅವರು ನಟಿಸಿರುವ ಎರಡು ಮೂರು ಚಿತ್ರಗಳು ಬಿಡುಗಡೆಗೆ ತಯಾರಾಗಿದೆ. "ಒಳ್ಳೆಯ ಸಿನಿಮಾ ಆಫರ್ ಬಂದಾಗ ನಾನು ಖಂಡಿತವಾಗಿ ಬಿಡುವು ಮಾಡಿಕೊಂಡು ಬೆಂಗಳೂರಿಗೆ ಬರುತ್ತಲೇ ಇರುತ್ತೇನೆ. ಬೆಂಗಳೂರು ನನ್ನ ತವರು ಮನೆ. ನಾವು ಮುಂಬೈನಲ್ಲಿದ್ದರೂ ಕೂಡ ಗಂಡನ ಮನೆಯವರು ಹೈದರಾಬಾದ್ ನಲ್ಲಿದ್ದಾರೆ. ಹಾಗಾಗಿ ಅಲ್ಲಿಗೂ ಓಡಾಡೋದು ಇದ್ದೇ ಇದೆ. ತುಂಬ ಟ್ರಾವೆಲ್ ಮಾಡುತ್ತಾ ಇರುತ್ತೇನೆ.'' ಎನ್ನುತ್ತಾರೆ ಭವ್ಯಾ. ಆನಂದ್ ಮತ್ತು ಭವ್ಯಾ ತಾಯಿಮಗನ ಕಾಂಬಿನೇಶನ್ ಗೆ ಚಂದನವನ ಕಾತುರದಿಂದ ಕಾಯುತ್ತಿರುವುದು ಮಾತ್ರ ನಿಜ.

  ಭವ್ಯಾ ಕಾಂಬಿನೇಶನ್ ಬಗ್ಗೆ ಆನಂದ್ ಮಾತು

  ಭವ್ಯಾ ಕಾಂಬಿನೇಶನ್ ಬಗ್ಗೆ ಆನಂದ್ ಮಾತು

  "ಭವ್ಯಾ ಅವರೊಂದಿಗೆ ಇದು ನನ್ನ ಎರಡನೇ ಚಿತ್ರ ಎಂದು ಯಾರಿಗೂ ಗೊತ್ತಿಲ್ಲ. ಯಾಕೆಂದರೆ ಮೊದಲ ಚಿತ್ರ ಬಿಡುಗಡೆಯೇ ಆಗಿಲ್ಲ'' ಎಂದು ನಕ್ಕರು ಆನಂದ್. ಆಗ ನಾನು ಬಾಲನಟ ಆಗಿದ್ದೆ. ಭವ್ಯಾ ಅವರು ಕನ್ನಡದ ನಂಬರ್ ಒನ್ ಹೀರೋಯಿನ್ ಆಗಿದ್ದರು. ಆದರೂ ಅವರು ಮಗುವಿನ ತಾಯಿಯ ಪಾತ್ರ ಮಾಡಲು ಮುಂದೆ ಬಂದಿದ್ದರು. ಯಾಕೆಂದರೆ ಅದೊಂದು ಡಿಫರೆಂಟ್ ಸಬ್ಜೆಕ್ಟ್ ಆಗಿತ್ತು. ಚಿತ್ರದಲ್ಲಿ ನಾನು ಮೂಗನಾಗಿದ್ದೆ.

  ಚಿತ್ರಕ್ಕೆ 'ಮೌನ' ಎಂದು ಹೆಸರಿಟ್ಟಿದ್ದರು

  ಚಿತ್ರಕ್ಕೆ 'ಮೌನ' ಎಂದು ಹೆಸರಿಟ್ಟಿದ್ದರು

  ಈ ಚಿತ್ರಕ್ಕೆ 'ಮೌನ' ಎಂದು ಹೆಸರಿಟ್ಟಿದ್ದರು. ವಿಪರ್ಯಾಸ ಎಂಬಂತೆ ಚಿತ್ರ ಮಾತನಾಡಲೇ ಇಲ್ಲ! ಇದೀಗ ಅಂದಿನ ತಾಯಿ ಮಗ ಮತ್ತೆ ಒಂದಾಗಿದ್ದೇವೆ. ಇಲ್ಲಿ ನಾವು ತುಂಬಾನೇ ಮಾತನಾಡುತ್ತೇವೆ. ಚಿತ್ರವೂ ಮಾತನಾಡುತ್ತದೆ ಎನ್ನುವ ನಿರೀಕ್ಷೆ ಇದೆ'' ಎಂದಿದ್ದಾರೆ ಆನಂದ್.

  English summary
  Actress Bhavya's inteview in Filmibeat kannada. Bhavya has acted in several annada and a few Tamil and Telugu movie. She recently got honored in dubai. She did the lead actress roles for over 200 films.
  Sunday, February 24, 2019, 16:34
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X