For Quick Alerts
ALLOW NOTIFICATIONS  
For Daily Alerts

ಹುಟ್ಟುಹಬ್ಬದ ವಿಶೇಷ ಸಂದರ್ಶನ : ರಾಜಮೌಳಿ ಶಿಷ್ಯನ ಚಿತ್ರದಲ್ಲಿ ಮಯೂರಿ

|

ಪ್ರಥಮ‌ ಸಿನಿಮಾ 'ಕೃಷ್ಣಲೀಲ'ದ ಮೂಲಕವೇ ಪ್ರೇಕ್ಷಕರು ಅಚ್ಚರಿ ಪಡುವಂತೆ ನಟನೆ ನೀಡಿದ ಪ್ರತಿಭಾವಂತ ಚೆಲುವೆ ಮಯೂರಿ ಕ್ಯಾತರಿ. ಈ ಚೆಂದದ ನಟಿ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

'ಅಶ್ವಿನಿ ನಕ್ಷತ್ರ' ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಇನ್ನಿಲ್ಲದ ಜನಪ್ರಿಯತೆ ಪಡೆದಿದ್ದ ಈ ನಟಿ ಬೆಳ್ಳಿ ಪರದೆಗೆ ಬಂದ ಮೇಲೆಯೂ ಸೃಷ್ಟಿಸಿದ ಬೇಡಿಕೆಗೆ ಕೊರತೆ ಇಲ್ಲ. ಕೈ ತುಂಬ ಚಿತ್ರಗಳಿದ್ದರೂ ಸ್ನೇಹ, ಸಂಬಂಧದಂಥ ಮಾನವೀಯ ಮೌಲ್ಯಗಳಿಗೆ ಸದಾ ಮೌಲ್ಯ ನೀಡಿರುವಂಥ ಈ ನಟಿಗೆ ಇಂದು ಜನ್ಮದಿನ.

ಮಯೂರಿಗೆ ಅವಮಾನ ಮಾಡಿದ್ದ ಆ ಜನರೇ ಕರೆದು ಸನ್ಮಾನ ಮಾಡಿದರು

ಅಂದಹಾಗೆ, ತಮ್ಮ ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಅವರ ಸದ್ಯದ ಚಿತ್ರ ಬದುಕಿನ ಒಂದಷ್ಟು‌ ವಿಶೇಷಗಳನ್ನು ಫಿಲ್ಮಿಬೀಟ್ ಜತೆಯಲ್ಲಿ ಹಂಚಿಕೊಂಡಿದ್ದಾರೆ.

ಮಯೂರಿಯವರೇ, ನಿಮಗೆ ಜನ್ಮದಿನದ ಶುಭಾಶಯಗಳು. ಏನಿದೆ ಇಂದಿನ‌ ವಿಶೇಷ?

ವಂದೆನೆಗಳು. 'ನನ್ನ ಪ್ರಕಾರ' ಮತ್ತು 'ಮೌನಂ' ಚಿತ್ರತಂಡದವರು ನನ್ನ ಜನ್ಮದಿನದ ಪ್ರಯುಕ್ತ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ನಾನು ಅಮ್ಮ ಎಲ್ಲ ಸೇರಿಕೊಂಡು ಮನೆ ಪಕ್ಕದ ವೆಂಕಟರಮಣ ದೇವಸ್ಥಾನಕ್ಕೆ ಹೋಗಲಿದ್ದೇವೆ. ನಾನು ರೇಶ್ಮೆ ಸೀರೆ ಉಡುವ ತಯಾರಿಯಲ್ಲಿದ್ದೇನೆ. (ನಗು) ಅಂದಹಾಗೆ, ನಾಳೆ ಬರ್ತ್ ಡೇ ಆಚರಿಸಲಿರುವ ಡಾ. ಶಿವರಾಜ್ ಕುಮಾರ್ ಅವರಿಗೆ ಅಡ್ವಾನ್ಸ್ ಆಗಿ ಜನ್ಮದಿನದ ಶುಭಾಶಯ ಕೋರುತ್ತೇನೆ.

'ರುಸ್ತುಂ'' ಚಿತ್ರ ತೆರೆಗೆ ಬಂದ ಮೇಲೆ ನಿಮ್ಮ ಪಾತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಹೇಗಿದೆ?

ಖಂಡಿತವಾಗಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಶಿವಣ್ಣನ ಚಿತ್ರದಲ್ಲಿ ಸಣ್ಣದೊಂದು ಪಾತ್ರದಲ್ಲಿ ಕಾಣಿಸಿಕೊಂಡರು ಕೂಡ ಅದರ ರೀಚ್ ಯಾವ ಮಟ್ಟಕ್ಕೆ ಇರುತ್ತದೆ ಎನ್ನುವುದನ್ನು 'ರುಸ್ತುಂ' ತೋರಿಸಿಕೊಟ್ಟಿದೆ. ಸ್ಟಾರ್ ಸಿನಿಮಾಗಳಲ್ಲಿ ನಾಯಕಿಯಾಗಲೇಬೇಕಿಲ್ಲ, ಪರ್ಫಾರ್ಮನ್ಸ್ ಗೆ ಒಳ್ಳೆಯ ಅವಕಾಶ ಇದ್ದರೆ ಸಾಕು ಎನ್ನುವುದು ಇದರಿಂದ ಕನ್ಫರ್ಮ್ವ್ ಆಯಿತು. ಹಾಗಾಗಿಯೇ, 'ಪೊಗರು' ಚಿತ್ರತಂಡ ನನ್ನಲ್ಲಿ ಒಂದು ವಿಶೇಷ ಪಾತ್ರವನ್ನು ಮಾಡಬೇಕು ಎಂದು ಕೇಳಿಕೊಂಡಾಗ ಒಪ್ಪಿಕೊಂಡಿದ್ದೇನೆ. ಅದು ಕೂಡ ಚೆನ್ನಾಗಿ ಮೂಡಿ ಬರಲಿದೆ ಎನ್ನುವ ನಿರೀಕ್ಷೆ ಇದೆ.

ಧ್ರುವ ಸರ್ಜಾ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ ಮಯೂರಿ

ನಿಮ್ಮ ಹೊಸ ಪ್ರಾಜೆಕ್ಟ್‌ ಬಗ್ಗೆ ಹೇಳಿ

ನಾನು ಟಾಮ್ ಬಾಯ್ ಮತ್ತು ನಯವಿನಯದ ಹೆಣ್ಣು ಮಗಳಾಗಿ ಹೀಗೆ ಎರಡು ಶೇಡ್ ನಲ್ಲಿ ನಟಿಸಿರುವ 'ಮೌನಂ' ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರುವಾಗಿದೆ. ಅದಲ್ಲದೆ, ರಾಜಮೌಳಿಯವರ ಸಹಾಯಕರಾಗಿದ್ದ ಪುನೀತ್ ಶರ್ಮ ನಿರ್ದೇಶನದ 'ಅನಾದ್ಯಂತ' ಎನ್ನುವ ಚಿತ್ರವೊಂದರಲ್ಲಿ ನಟಿಸಿದ್ದೇನೆ. ಆದರೆ, ಆ ಶೀರ್ಷಿಕೆ ಇನ್ನು ಫೈನಲಾಗಿಲ್ಲ.‌ ಥ್ರಿಲ್ಲರ್ ಸಬ್ಜೆಕ್ಟ್ ಹೊಂದಿರುವ ಆ ಸಿನಿಮಾದ ಚಿತ್ರೀಕರಣ ಮುಗಿಸಿ ನಿನ್ನೆಯಷ್ಟೇ ಕುಂಬಳಕಾಯಿ ಆಯಿತು. ಅದು ಮಹಿಳಾ ಪ್ರಧಾನ‌ ಚಿತ್ರ ಎನ್ನಬಹುದು. ಮತ್ತೊಂದು ಚಿತ್ರ ಸಿಂಪಲ್ ಸುನಿಯವರ ತಂಡದಲ್ಲಿ ನಟರಾಜ್ ನಿರ್ದೇಶಿಸಿರುವ ಸಿನಿಮಾ. ಅದರಲ್ಲಿ ನಾನು‌ ಅಂಧೆಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಇದರ ನಡುವೆ ಬಹುತಾರಾಗಣದ ಚಿತ್ರವಾದ 'ನನ್ನ ಪ್ರಕಾರ' ಮುಂದಿನ ತಿಂಗಳು ತೆರೆಗೆ ಬರಲಿದೆ.

ಮುಂದೆ ಯಾವ ರೀತಿಯ ಪಾತ್ರಗಳನ್ನು ಎದುರು ನೋಡುತ್ತಿದ್ದೀರಿ?

ನನಗೆ ಅಭಿನಯ ಎನ್ನುವುದೊಂದೇ ಪ್ರಥಮಾಸಕ್ತಿ. ನನಗೆ ಈ ಕಲೆ ಪಾರಂಪರಿಕವಾಗಿ ಬಂದಿಲ್ಲ. ಆದರೆ, ನಟನೆಗೆ ಶುರು ಮಾಡಿದರೆ ಅಭಿನಯ ರಕ್ತದಲ್ಲೇ ತುಂಬಿಕೊಂಡಿದೆಯೇನೋ ಎಂಬಂತೆ ಮೈಮರೆತು ಮುಳುಗಿ ಬಿಡುತ್ತೇನೆ. ಹಾಗೆ ತಲ್ಲೀನಗೊಳಿಸುವ ಪಾತ್ರಗಳಿಗೇನೇ ನಾನು ಆದ್ಯತೆ ನೀಡುತ್ತೇನೆ. ಮೇಲ್ನೋಟದಲ್ಲಿ ಹೇಗೆ ವೈವಿಧ್ಯಮಯ ಕಾಸ್ಟ್ಯೂಮ್ ಮೂಲಕ‌ ಕಾಣಿಸಿಕೊಳ್ಳುತ್ತೇನೋ ಅದೇ ರೀತಿ ಕಬ್ಬನ್ನು ಹಿಂಡಿ ರಸ ತೆಗೆಯುವ ರೀತಿಯಲ್ಲಿ ನನ್ನಿಂದ ನಟನೆ ಹೊರ ತೆಗೆಯುವ ಪಾತ್ರಗಳನ್ನು ಎದುರು ನೋಡುತ್ತಿದ್ದೇನೆ.

ಒಳ್ಳೆಯ ಪಾತ್ರವಿದೆ, ಆದರೆ ಸಂಭಾವನೆ ಕಡಿಮೆ ಎಂಬ ಪರಿಸ್ಥಿತಿ ಇದ್ದಾಗ ನೀವು ಆ ಆಫರ್ ನಿರಾಕರಿಸುತ್ತೀರ?

ಚಿತ್ರರಂಗದಲ್ಲಿ ನಾನು ಯಾವತ್ತೂ ಸಂಭಾವನೆಗೆ ಪ್ರಾಮುಖ್ಯತೆ ಕೊಟ್ಟಿಲ್ಲ. ನನ್ನ ಬಜೆಟ್ ಬಗ್ಗೆ ಚಿಂತೆ ಬೇಡ ಅಂತೇನೆ. ಎಲ್ಲರೂ ಒಳ್ಳೆಯ ಸಿನಿಮಾ ಮಾಡುತ್ತಾರೆ. ಆದರೆ ಅದರಲ್ಲಿ ನನಗೆ ಬೇಕಾದ ಸಿನಿಮಾವನ್ನಷ್ಟೇ ಆಯ್ದುಕೊಳ್ಳಬಲ್ಲೆ. ಒಂದೊಳ್ಳೆಯ ಸಿನಿಮಾ ಮಾಡಿ, ನನಗೆ ಒಳ್ಳೆಯ ಪಾತ್ರ ನೀಡುವವರು ಬಜೆಟ್ ವಿಚಾರದಲ್ಲಿ ಕಷ್ಟದಲ್ಲಿ ಇದ್ದಾರೆ ಎಂದರೆ ನಾನು ನನ್ನ ಸಂಭಾವನೆಯನ್ನು ಕಡಿಮೆ ಮಾಡುತ್ತೇನೆ. ಯಾಕೆಂದರೆ ಜೀವನದಲ್ಲಿ ನಾನು ಮೇಜರ್ ಇಂಪಾರ್ಟೆನ್ಸ್ ದುಡ್ಡಿಗೆ ಕೊಡೋದಿಲ್ಲ. ಯಾರ್ಯಾರಿಗೆ ಏನೇನು ಬರಬೇಕೋ ಅದು ಆಯಾ ಸಮಯದಲ್ಲಿ ಬಂದೇ ಬರುತ್ತದೆ ಎಂಬ ನಂಬಿಕೆ ನನಗಿದೆ. ಯಾಕೆಂದರೆ, ದೇವರನ್ನು ತುಂಬಾನೇ ನಂಬುತ್ತೇನೆ.

ನೀವು ಪರಭಾಷಾ ಚಿತ್ರಗಳತ್ತ ಗಮನ ಹರಿಸದಿರಲು ಭಾಷಾ ಸಮಸ್ಯೆ ಕಾರಣವೇ?

ಹಾಗೇನಿಲ್ಲ. ಹಿಂದೆ ನಿರೂಪಕಿಯಾಗಿ ಕೆಲಸ ಮಾಡಿರುವ ಕಾರಣ ಆ ದಿನಗಳಿಂದಲೇ ನನಗೆ ಭಾಷೆ ಕಲಿಯುವ ಹುಚ್ಚು. ಹಿಂದಿ, ಮರಾಠಿ ಎಲ್ಲ ಕನ್ನಡದಷ್ಟೇ ಚೆನ್ನಾಗಿ ಮಾತನಾಡಬಲ್ಲೆ. ತೆಲುಗು ಕೂಡ ಮ್ಯಾನೇಜ್ ಮಾಡುತ್ತೇನೆ. ಅಕ್ಕ ಜರ್ಮನಲ್ಲಿರುವ ಕಾರಣ ಆಕೆಯ ಮೂಲಕ ಜರ್ಮನ್ ಭಾಷೆಯನ್ನು ಕಲಿತಿದ್ದೇನೆ. ಒಂದೆರಡು ಕತೆ ಕೇಳಿದ್ದೇನಾದರೂ ನನಗೇನು ಇಂಪ್ರೆಸ್ ಆಗಿಲ್ಲ. ಅಲ್ಲದೆ ನಾನಾಗಿ ಪರಭಾಷೆಯ ಅವಕಾಶಕ್ಕಾಗಿ ನಿರೀಕ್ಷಿಸಬೇಕಿಲ್ಲ ಎನ್ನುವ ಮಟ್ಟಕ್ಕೆ ಕನ್ನಡದ ಪ್ರಾಜೆಕ್ಟ್ ಗಳು ದೊರಕಿವೆ.

ನಿಮ್ಮ ಜರ್ಮನ್ ಅಕ್ಕನ ಬಗ್ಗೆ ಹೇಳಿ

ಅಕ್ಕನ ಹೆಸರು ಮಾಧುರಿ. ಸದ್ಯದ ನನ್ನ ವಿಚಾರ ಮಾತನಾಡಬೇಕಾದರೆ ಆಕೆಯ ಬಗ್ಗೆ ಹೇಳಲೇಬೇಕು. ಯಾಕೆಂದರೆ ಮೂರು ತಿಂಗಳ ಬಳಿಕವೂ ನನ್ನನ್ನು ಫುಲ್ ಬ್ಯುಸಿ ಆಗಿರಿಸುವಲ್ಲಿ ಆಕೆಯ ಪಾತ್ರವಿದೆ. ಅಕ್ಕ ಮತ್ತು ಬಾವ ಇಬ್ಬರೂ ಜರ್ಮನಿಯಲ್ಲಿ ಇಂಜಿನಿಯರ್ ಗಳು. ಈಗ ಅಲ್ಲಿ ನನ್ನಕ್ಕ ಡೆಲಿವರಿಗೆ ರೆಡಿಯಾಗ್ತಿದ್ದಾಳೆ. ಹೊಟ್ಟೆಯಲ್ಲಿ ಟ್ವಿನ್ಸ್ ಇರೋದಾಗಿ ಡಾಕ್ಟರ್ ಕನ್ಫರ್ಮ್ ಮಾಡಿದ್ದಾರೆ. ಹಾಗಾಗಿ ಅಲ್ಲಿ ತಾಯಿ ಮಾತ್ರ ಇದ್ದರೆ ಸಾಕಾಗಲ್ಲ. ಹಾಗಾಗಿ ಸಪ್ಟೆಂಬರ್ ತಿಂಗಳಲ್ಲಿ ನಾನು ಕೂಡ ಜರ್ಮನಿಗೆ ಹೋಗುತ್ತಿದ್ದೇನೆ. ಆಕೆಯೊಂದಿಗೆ ಮಿನಿಮಮ್ ಮೂರು ತಿಂಗಳ ಕಾಲ ಜತೆಗಿದ್ದು ಅವಳು ಸುಧಾರಿಸಿಕೊಂಡ ಮೇಲೆಯೇ ವಾಪಾಸು ಬರೋದು.

ಸ್ಟಾರ್ ನಟಿಯಾಗಿ ಬದಲಾದ ಮೇಲೆ ಈಗ ವಾಪಾಸು ಮನೆಯೊಳಗೆ ಅಕ್ಕನ ಸೇವೆ ನಿಮಗೆ ಚಾಲೆಂಜ್ ಆಗಿಲ್ಲವೇ?

ನಿಜಕ್ಕೂ ಇಲ್ಲ. ನಾನು ಮೊದಲು ಹೇಗಿದ್ದೆನೋ, ಸಿನಿಮಾ ಹೀರೋಯಿನ್ ಆದ ಮೇಲೆಯೂ ಹಾಗೇ ಇದ್ದೀನಿ. ಈಗಲೂ ಮನೆ ಕೆಲಸದವಳ ಜತೆಗೆ ನಾನು ಕೆಲಸಕ್ಕೆ ನಿಲ್ತೀನಿ.‌ ಮನೆ ಮುಂದೆ ರಂಗೋಲಿ ನಾನೇ ಹಾಕ್ತೀನಿ. ಇಂದಿಗೂ ಟೂ ವೀಲರ್ ನಲ್ಲಿ ಸುತ್ತಾಡುತ್ತೇನೆ. ಚಿಕ್ಕಪೇಟೆ, ಜಯನಗರ, ವಿವಿ ಪುರಂ ಚಾಟ್ಸ್ ಎಲ್ಲವೂ ಇಷ್ಟಪಟ್ಟು ತಿನ್ನುತ್ತೇನೆ. ಧೂಳು ಅಲರ್ಜಿ ಇರುವ ಕಾರಣ ಸ್ಕಾರ್ಫ್ ಕಟ್ಟುತ್ತೇನೆ ಎನ್ನುವುದು ಬಿಟ್ಟರೆ ನಾನು ನನ್ನನ್ನು ಸಾರ್ವಜನಿಕವಾಗಿ ಅಡಗಿಸಿಕೊಳ್ಳೋಕೆ ಇಷ್ಟಪಡಲ್ಲ. ಸಿನಿಮಾ ಸೆಟ್ ನಲ್ಲಿ ಮೇಕಪ್ ನಲ್ಲಿ, ಕಾಸ್ಟ್ಯೂಮಲ್ಲಿ ಇರುವ ಕಾರಣ ಏನೋ ರಕ್ಷಣೆ ಬೇಕಾಗುತ್ತದೆ. ಅದು ಬಿಟ್ಟರೆ ನಾನು ಅಕ್ಕನ ತಂಗಿಯೇ.

English summary
Kannada actress Mayuri Kyatari birthday specila interview.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more