»   » 'ಫಿಲ್ಮಿಬೀಟ್ ಕನ್ನಡ' ಜೊತೆ ನವವಧು ರೂಪಶ್ರೀ ಚಿಟ್ ಚಾಟ್

'ಫಿಲ್ಮಿಬೀಟ್ ಕನ್ನಡ' ಜೊತೆ ನವವಧು ರೂಪಶ್ರೀ ಚಿಟ್ ಚಾಟ್

Posted By:
Subscribe to Filmibeat Kannada

'ಸಂಕ್ರಾಂತಿ', 'ಜಟಾಯು', 'ಸಿಗರೇಟ್', 'ಚಡ್ಡಿದೋಸ್ತ್' ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ರೂಪಶ್ರೀ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕೋಲ್ಕತ್ತಾ ಮೂಲದ ಉದ್ಯಮಿ ನೀರಜ್ ರೊಂದಿಗೆ ಎಂಗೇಜ್ ಆಗಿದ್ದಾರೆ ನಟಿ ರೂಪಶ್ರೀ.

ಹೊಸ ಕನಸುಗಳನ್ನ ಹೊತ್ತು, ಹೊಸ ಜೀವನಕ್ಕೆ ಅಡಿಯಿಡುವುದಕ್ಕೆ ಸಿದ್ಧತೆ ನಡೆಸುತ್ತಿರುವ ನಟಿ ರೂಪಶ್ರೀಗೆ ಶುಭಕೋರುತ್ತಾ, 'ಫಿಲ್ಮಿಬೀಟ್ ಕನ್ನಡ' ನಡೆಸಿರುವ ಚುಟುಕು ಸಂದರ್ಶನ ಇಲ್ಲಿದೆ.

* Congratulations ರೂಪಶ್ರೀ....

- ಥ್ಯಾಂಕ್ ಯು ಸೋ ಮಚ್

Kannada Actress Roopashri interview

* ಹೊಸ ಜೀವನಕ್ಕೆ ಅಡಿಯಿಡುತ್ತಿದ್ದೀರಾ. ಹೇಗಿದೆ ಫೀಲಿಂಗ್?

- ಇಟ್ ಫೀಲ್ಸ್ ಗುಡ್. ಯಾಕಂದ್ರೆ ಇಷ್ಟು ದಿನ ತುಂಬಾ ಹುಡುಗಾಟದ ಹುಡುಗಿ ತರಹ ಇದ್ದೆ. ಇವಾಗ ಜವಾಬ್ದಾರಿ ಹೆಚ್ಚಾಗಿದೆ. ಭವಿಷ್ಯದ ಬಗ್ಗೆ ನಿರ್ಧಾರವನ್ನ ನಾನೇ ತೆಗೆದುಕೊಳ್ಳಬೇಕು. ಅದಕ್ಕಿಂತ ಹೆಚ್ಚಾಗಿ ಮ್ಯಾರೇಜ್ ಶಾಪ್ಪಿಂಗ್ ಬಗ್ಗೆ ಎಕ್ಸೈಟ್ ಆಗಿದ್ದೇನೆ. ಎಲ್ಲಾ ಹುಡುಗೀಯರಿಗೂ ಇದು ಸಂಭ್ರಮದ ವಿಷಯ. ಪ್ರತಿದಿನ ನಂಗೆ ಇದೇ ಚಿಂತೆ. ಯಾವ ತರಹದ ಡ್ರೆಸ್ ತಗೆದುಕೊಳ್ಳಬೇಕು. ಏನು ಹಾಕೋದು. ಯಾವ ತರಹದ ಮೇಕಪ್ ಅಂತೆಲ್ಲಾ. ಇಟ್ಸ್ ವೆರಿ ಎಕ್ಸೈಟಿಂಗ್.

Kannada Actress Roopashri interview

* ನಿಮ್ಮದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಅಲ್ವಾ?

- ಹೌದು, ನಾನು ಯಾವಾಗ್ಲೂ ಲವ್ ಮ್ಯಾರೇಜ್ ನಲ್ಲಿ ನಂಬಿಕೆ ಇಟ್ಟಿದ್ದೆ. ನಾವು ಅರ್ಥ ಮಾಡಿಕೊಳ್ಳೋದು ತುಂಬಾನೇ ಮುಖ್ಯ. ನಮ್ಮ ತಂದೆ-ತಾಯಿಯಿಂದ ಯಾವುದೇ ಆಬ್ಜೆಕ್ಷನ್ಸ್ ಇರ್ಲಿಲ್ಲ. ನನ್ನ ಫ್ಯಾಮಿಲಿಯಲ್ಲೇ ಸುಮಾರು ಲವ್ ಮ್ಯಾರೇಜ್ ಅಗಿದ್ರಿಂದ ಎಲ್ಲರೂ ಬ್ರಾಂಡ್ ಮೈಂಡೆಡ್ ಆಗಿದ್ದರು. ನಾನೇನು ಅಂದುಕೊಂಡಿದ್ದೆ ನನ್ನ ಮನಸ್ಸಲ್ಲಿ, ಹಾಗೇ ನನಗೆ ನೀರಜ್ ಸಿಕ್ಕಿದ್ರು. ಎಲ್ಲರ ಒಪ್ಪಿಗೆಯಿಂದ ಈಗ ಮದುವೆ ಆಗುತ್ತಿದ್ದೇವೆ.

Kannada Actress Roopashri interview

* ನಿಮ್ಮ ಲವ್ ಸ್ಟೋರಿ ಬಗ್ಗೆ ಸ್ವಲ್ಪ ಹೇಳ್ಬಹುದಾ?

- ನಾವು ಮೀಟ್ ಮಾಡಿದ್ದು ಒಂದು ಫಂಕ್ಷನ್ ನಲ್ಲಿ. ಫ್ರೆಂಡ್ಸ್ ಮೂಲಕ ಪರಿಚಯ ಆಯ್ತು. ಅದಾದ ಮೇಲೆ ಮಾತನಾಡುವುದಕ್ಕೆ ಶುರುಮಾಡಿದ್ವಿ. ಅದಾದ ಮೇಲೆ ನನ್ನ ಮೀಟ್ ಮಾಡೋಕೆ ಅವರು ಬೆಂಗಳೂರಿಗೆ ಬಂದರು. ಆಮೇಲೆ ಒಂದು ವಾರ ಇಬ್ಬರು ಹೊರಗೆ ಹೋಗಿದ್ವಿ. ನಂತರ ನಾನು ಕೋಲ್ಕತ್ತಾಗೆ ಹೋಗಿ ಒಂದು ವಾರ ಇದ್ದೆ. ಅದಾದ ಮೇಲೆ ಫ್ರೆಂಡ್ಸ್ ಜೊತೆ ಇಬ್ಬರೂ ಹಾಲಿಡೇಗೆ ಹೊರಗೆ ಹೋದ್ವಿ. ಅರ್ಥ ಮಾಡಿಕೊಳ್ಳೋಕೆ ಟೈಮ್ ತೆಗೆದುಕೊಂಡ್ವಿ. ನಮ್ಮ ಅಂಡರ್ಸ್ಟ್ಯಾಂಡಿಂಗ್ ಚೆನ್ನಾಗಿತ್ತು. ನಂತರ ಫ್ಯಾಮಿಲಿ ಜೊತೆ ಮಾತನಾಡಿದ್ವಿ. [ಸದ್ದಿಲ್ಲದೇ ಎಂಗೇಜ್ ಆದ ನಟಿ ರೂಪಶ್ರೀ]

Kannada Actress Roopashri interview

* ನೀರಜ್ ಹಿನ್ನಲೆ...

- ಅವರ ಮೂಲ ರಾಜಸ್ತಾನ. ಅವರು ಸೆಟ್ಲ್ ಆಗಿರೋದು ಮಾತ್ರ ಕೋಲ್ಕತ್ತಾದಲ್ಲಿ. ತುಂಬಾ ಪುಟ್ಟ ಸಂಸಾರ. ನೀರಜ್ ಗೆ ತಮ್ಮ ಒಬ್ಬರಿದ್ದಾರೆ. ಅವರ ತಾಯಿ ತುಂಬಾ ಸಾಫ್ಟ್. ಅವರ ಫ್ಯಾಮಿಲಿಯಲ್ಲಿ ಸುಮಾರು ಲವ್ ಮ್ಯಾರೇಜ್ ಆಗಿವೆ. ಹೀಗಾಗಿ ನಮಗೆ ಸಮಸ್ಯೆ ಆಗ್ಲಿಲ್ಲ. ನನಗೆ ಯಾವುದರಲ್ಲೂ ರಿಸ್ಟ್ರಿಕ್ಷನ್ ಮಾಡಿಲ್ಲ. ನಾನು ನಟಿ ಅಂತ ಅವರು ತುಂಬಾ ಮರ್ಯಾದಿ ಕೊಡುತ್ತಾರೆ. ನನಗೆ ಇದು ತುಂಬಾ ಮುಖ್ಯ ಆಗಿತ್ತು.

Kannada Actress Roopashri interview

* ಮದುವೆ ನಂತ್ರ ನಟನೆ ಮುಂದುವರಿಸುತ್ತೀರಾ?

- ಖಂಡಿತ. ನೀರಜ್ ಫ್ಯಾಮಿಲಿಯಿಂದ ನನಗೆ ಫುಲ್ ಸಪೋರ್ಟ್ ಇದೆ. ನಿನಗೆ ಬಿಡಬೇಕು ಅನ್ಸಿದ್ರೆ ಮಾತ್ರ ಬಿಡು. ನಮಗೇನು ಅಭ್ಯಂತರ ಇಲ್ಲ ಅಂದಿದ್ದಾರೆ. ಇದು ನನಗೆ ತುಂಬಾ ಖುಷಿ ಕೊಟ್ಟಿದೆ. ವೆರಿ ಸ್ವೀಟ್ ಫ್ಯಾಮಿಲಿ.

* ಮದುವೆ ಯಾವಾಗ?
- ನವೆಂಬರ್ ನಲ್ಲಿ ಪ್ಲಾನ್ ಇದೆ.

* ಆಲ್ ದಿ ಬೆಸ್ಟ್.....
- ಥ್ಯಾಂಕ್ ಯು

English summary
Kannada Actress Roopashri engaged to her long-term boyfriend Neeraj. The couple will be tying knot in November. Here is an interview with the Actress Roopashri, Take a look.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada