twitter
    For Quick Alerts
    ALLOW NOTIFICATIONS  
    For Daily Alerts

    ಆಗ ದೊಡ್ಡಣ್ಣ.. ನಂತರ ಚಿಕ್ಕಣ್ಣ.. ಮುಂದೆ ಧರ್ಮಣ್ಣ..

    |

    ''ನಾನು ಅಲ್ಪ ತೃಪ್ತ. ಅದು ಬೇಕು.. ಇದು ಬೇಕು.. ಎನ್ನುವುದು ನನಗೆ ಇಲ್ಲ. ಇರುವುದರಲ್ಲಿ ಖುಷಿ ಪಡುವುದನ್ನು ನಾನು ನಾಟಕಗಳಿಂದ ಕಲಿತಿದ್ದೇನೆ. ಮುಖ್ಯವಾಗಿ ಎಲ್ಲರು ಪ್ರೀತಿ ವಿಶ್ವಾಸದಿಂದ ಇರಬೇಕು.'' ಹೀಗೆಂದು ತಮ್ಮ ಸಂದರ್ಶನದ ನಡುವೆ ಹೇಳುತ್ತಾರೆ ಧರ್ಮಣ್ಣ.

    ಹಾಸ್ಯ ನಟ ಧರ್ಮಣ್ಣ 'ರಾಮಾ ರಾಮ ರೇ' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಬಂದರು. ಒಂದರ ನಂತರ ಒಂದರಂತೆ ನಾನ್ ಸ್ಟಾಪ್ ಸಿನಿಮಾಗಳನ್ನು ಮಾಡುತ್ತಿರುವ ಅವರು ದಿನೇ ದಿನೇ ಬೆಳೆಯುತ್ತಿದ್ದಾರೆ. ಇದೀಗ ಅವರ ಐದು ಸಿನಿಮಾಗಳು ಬಿಡುಗಡೆಗೆ ರೆಡಿ ಇದ್ದರೆ, ಇನ್ನೊಂದಷ್ಟು ಸಿನಿಮಾಗಳ ಚಿತ್ರೀಕರಣ ನಡೆಯುತ್ತಿದೆ. ಮತ್ತೊಂದಷ್ಟು ಸಿನಿಮಾಗಳ ಮಾತುಕತೆ ನಡೆಯುತ್ತಿದೆ.

    ''ಆಗ ದೊಡ್ಡಣ್ಣ.. ನಂತರ ಚಿಕ್ಕಣ್ಣ.. ಮುಂದೆ ಧರ್ಮಣ್ಣ..'' ಎಂಬ ಶೀರ್ಷಿಕೆ ಹಾಕಿದಕ್ಕೂ ಕಾರಣ ಇದೆ. ಕಾಮಿಡಿ ಜಗತ್ತಿನಲ್ಲಿ ಒಂದು ಕಾಲಕ್ಕೆ ದೊಡ್ಡಣ್ಣ ಅವರ ಟ್ರೆಂಡ್ ಇತ್ತು, ಸದ್ಯ, ಚಿಕ್ಕಣ್ಣ ಅವರ ಕಾಮಿಡಿ ಎಲ್ಲರನ್ನು ರಂಜಿಸುತ್ತದೆ. ಮುಂದೆ ಆ ಸ್ಥಾನಕ್ಕೆ ಧರ್ಮಣ್ಣ ಕೂಡ ಹೋಗಬೇಕು ಎನ್ನುವುದು ಅನೇಕರ ಆಸೆಯಾಗಿದೆ. ಆಸೆ ಮಾತ್ರವಲ್ಲ ಆ ಮಟ್ಟದ ಪ್ರತಿಭೆ ಧರ್ಮಣ್ಣ ಹೊಂದಿದ್ದಾರೆ.

    ಧರ್ಮಣ್ಣ ಅವರಿಗೆ ತಮ್ಮದೆ ಆದ ಸ್ಟೈಲ್ ಇದೆ. ಅವರು ಸ್ಕ್ರೀನ್ ಮೇಲೆ ಬಂದರೆ ಇಡೀ ಚಿತ್ರಮಂದಿರ ನಗುತ್ತದೆ. ಕಡೂರಿನಲ್ಲಿ ಒಬ್ಬ ಸಾಮಾನ್ಯ ಹೂವಿನ ವ್ಯಾಪಾರಿ ಕುಟುಂಬದಿಂದ ಬಂದ ಹುಡುಗ ಇಂದು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

    ಸ್ಯಾಂಡಲ್ ವುಡ್ ನಲ್ಲಿ ಧರ್ಮಣ್ಣನ ದರ್ಬಾರ್ ಸ್ಯಾಂಡಲ್ ವುಡ್ ನಲ್ಲಿ ಧರ್ಮಣ್ಣನ ದರ್ಬಾರ್

    ಅಂದಹಾಗೆ, ಹುಟ್ಟುಹಬ್ಬದ ವಿಶೇಷವಾಗಿ ಫಿಲ್ಮೀಬೀಟ್ ಕನ್ನಡಕ್ಕೆ ಧರ್ಮಣ್ಣ ನೀಡಿರುವ ವಿಶೇಷ ಸಂದರ್ಶನ ಮುಂದಿದೆ ಓದಿ...

    ಸಂದರ್ಶನ : ನವಿ ಕನಸು (ನವೀನ ಎಮ್ ಎಸ್)

    ಹೇಗಿದ್ದೀರಿ...? ಎಷ್ಟೊಂದು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದೀರಿ ಅಲ್ವಾ..?

    ಹೇಗಿದ್ದೀರಿ...? ಎಷ್ಟೊಂದು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದೀರಿ ಅಲ್ವಾ..?

    ''ನಾನು ಸೂಪರ್ ಆಗಿದ್ದೇನೆ. ನನ್ನ ಐದು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದೆ. 'ಗ್ರಾಮಾಯಣ', 'ಇನ್ಸ್ಪೆಕ್ಟರ್ ವಿಕ್ರಮ್' ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಮೈನ್ ಲೀಡ್ ಕಾಮಿಡಿ ಚಿತ್ರಗಳೂ ಬಂತು, ಆದರೆ ಸದ್ಯಕ್ಕೆ ಬೇಡ ಅಂತ ನಾನೇ ಒಪ್ಪಲಿಲ್ಲ. ಡೇಟ್ ಕ್ಲಾಶ್ ಆದ ಕಾರಣ ಕೆಲವು ಸಿನಿಮಾಗಳು ಕೈ ತಪ್ಪಿದವು. ಇನ್ನೆರಡು ಚಿತ್ರಗಳ ಮಾತುಕತೆ ನಡೆಯುತ್ತಿದೆ.''

    ಮುಂದೆ ಯಾವ ರೀತಿಯ ಪಾತ್ರ ಮಾಡುವ ಆಸೆ ಇದೆ?

    ಮುಂದೆ ಯಾವ ರೀತಿಯ ಪಾತ್ರ ಮಾಡುವ ಆಸೆ ಇದೆ?

    ''ರಾಮಾ ರಾಮಾ ರೇ' ಯಿಂದ ಶುರು ಮಾಡಿ ಈವರೆಗೆ 11 ಚಿತ್ರಗಳಲ್ಲಿ ನಟಿಸಿದ್ದೇನೆ. ಚಾಲೆಂಜಿಂಗ್ ಪಾತ್ರಗಳಲ್ಲಿ ನಟಿಸಬೇಕು, ಜನರನ್ನು ನಗಿಸಬೇಕು ಎನ್ನುವ ಆಸೆ ಇದೆ. ಕೆಟ್ಟ ಕಾಮಿಡಿ ಮಾಡಲು ನನಗೆ ಇಷ್ಟವಿಲ್ಲ. ಸಿನಿಮಾ ನೋಡಿದವರಿಗೆ ನೆನಪಿನಲ್ಲಿ ಉಳಿಯುವ ಹಾಗೆ ಆಗಬೇಕು.''

    ನಿಮ್ಮ ಪ್ರತಿಭೆ ಬಗ್ಗೆ ಯಾರಾದ್ರು ನಿರ್ದೇಶಕರು ಹೇಳಿದ ಮರೆಯಲಾಗದ ಮಾತು?

    ನಿಮ್ಮ ಪ್ರತಿಭೆ ಬಗ್ಗೆ ಯಾರಾದ್ರು ನಿರ್ದೇಶಕರು ಹೇಳಿದ ಮರೆಯಲಾಗದ ಮಾತು?

    ''ನಮ್ಮ ಸತ್ಯನೇ (ಡಿ ಸತ್ಯ ಪ್ರಕಾಶ್) ಆಗಲಿ, ಭಟ್ ಸರ್ ರೇ ಆಗಲಿ ನನ್ನ ಬಗ್ಗೆ ಬಹಳ ಒಳ್ಳೆಯ ಮಾತನ್ನು ಆಡಿದ್ದಾರೆ. 'ಮುಗುಳುನಗೆ' ಸಿನಿಮಾ ಮಾಡುವಾಗ ಮೊದಲ ದಿನ ಭಟ್ ಸರ್ ಒಂದು ಮಾತು ಹೇಳಿದ್ರು. ಲೇ ನಿನಗೆ ಗೊತ್ತಿಲ್ಲದ ಹಾಗೆ ನಿನ್ನೊಳಗೆ ಒಂದು ಲೋಕಲ್ ಕ್ವಾಲಿಟಿ ಇದೆ. ನಿನಗೆ ಅದು ಗೊತ್ತಿಲ್ಲ, ಅದು ಗೊತ್ತಾಗುವುದು ಬೇಡ. ಅದು ಗೊತ್ತಾದ ದಿನ ನೀನು ಇಂಡಸ್ಟ್ರಿಯಲ್ಲಿ ಇರುವುದಿಲ್ಲ. ನೀನು ಹೇಗಿದ್ದೀಯಾ ಹಾಗೆ ಇರು. ಅಂತ ಹೇಳಿದ್ರು. ಸತ್ಯ ಕೂಡ ನೀನು ದಿನ ಮಾಡುವ ಮಂಗನಾಟವನ್ನೇ ಸ್ಕ್ರೀನ್ ಮೇಲೆ ಮಾಡು ಅಂತ ಹೇಳುತ್ತಾನೆ.''

    ಕಾಮಿಡಿ ನಟರು ಹೀರೋ ಆಗ್ತಾರೆ ನಿಮಗೂ ಆ ಆಸೆ ಇದ್ಯಾ?

    ಕಾಮಿಡಿ ನಟರು ಹೀರೋ ಆಗ್ತಾರೆ ನಿಮಗೂ ಆ ಆಸೆ ಇದ್ಯಾ?

    ''ಹೀರೋ ಅಲ್ಲ.. ಒಳ್ಳೆಯ ಪಾತ್ರ ಮಾಡುವ ಆಸೆ ಇದೆ. ನನಗೆ ಪಾತ್ರವಷ್ಟೇ ಮುಖ್ಯ. ನನಗೆ ನನ್ನ ಸಾಮರ್ಥ್ಯ ಹಾಗೂ ವೀಕ್ ನೆಸ್ ಎರಡೂ ಗೊತ್ತಿದೆ. ಪಾತ್ರ ನನಗೆ ಸೂಟ್ ಆದರೆ ಮಾಡುತ್ತೇನೆ. ಕೆಲವು ಸಿನಿಮಾಗಳನ್ನು ಕಥೆ ಹೇಳುವಾಗಲೇ ಒಪನ್ ಆಗಿ ನಾನ್ ಮಾಡೋಕ್ಕೆ ಆಗಲ್ಲ ಎಂದು ಹೇಳಿದ್ದು ಇದೆ.''

    ಯಾವ ನಟ / ನಿರ್ದೇಶಕರುಗಳ ಜೊತೆಗೆ ಕೆಲಸ ಮಾಡುವ ಬಯಕೆ ಇದೆ?

    ಯಾವ ನಟ / ನಿರ್ದೇಶಕರುಗಳ ಜೊತೆಗೆ ಕೆಲಸ ಮಾಡುವ ಬಯಕೆ ಇದೆ?

    ''ಕನ್ನಡದ ಎಲ್ಲ ನಟರ ಜೊತೆಗೆ ಕೆಲಸ ಮಾಡುವ ಆಸೆ ಇದೆ. ಜಗ್ಗೇಶ್ ಸರ್, ಅನಂತ್ ನಾಗ್ ಸರ್ ಜೊತೆಗೆ ಸಿನಿಮಾ ಮಾಡಬೇಕು ಎನ್ನುವ ಬಯಕೆ ಇದೆ. ಅಷ್ಟೊಂದು ತಿಳಿದುಕೊಂಡ ನಟರ ಜೊತೆಗೆ ಸಿನಿಮಾ ಮಾಡುವುದು ಖುಷಿಯ ವಿಷಯ. ಜಗ್ಗೇಶ್ ಸರ್ ಜೊತೆಗೆ 'ಮುಗುಳುನಗೆ' ಹಾಡಿನಲ್ಲಿ ಕಾಣಿಸಿಕೊಂಡಿದ್ದೇನೆ. ಮುಂದೆ ಸಿನಿಮಾ ಮಾಡಬೇಕು.''

    ಎಷ್ಟು ವರ್ಷ ರಂಗಭೂಮಿಯಲ್ಲಿ ಇದ್ರಿ? ಹೇಗಿತ್ತು ರಂಗಭೂಮಿ ಬದುಕು?

    ಎಷ್ಟು ವರ್ಷ ರಂಗಭೂಮಿಯಲ್ಲಿ ಇದ್ರಿ? ಹೇಗಿತ್ತು ರಂಗಭೂಮಿ ಬದುಕು?

    ''2005 ರಿಂದ ನಾಟಕ ಮಾಡುತ್ತಿದ್ದೇನೆ. ಏಳೆಂಟು ವರ್ಷ ಕರ್ನಾಟಕದ ತುಂಬ ತಿರುಗಾಡಿದ್ದೇವೆ. ಅಲ್ಲಿ ಎಲ್ಲ ಕೆಲಸವನ್ನು ಮಾಡಿದ್ದೇನೆ. ವಾರಕ್ಕೆ ಒಂದು ಊರಿಗೆ ಹೋಗುತ್ತಿದ್ದೆವು. ಸಣ್ಣ ಪಾತ್ರದಿಂದ ನಾಟಕ ಶುರು ಮಾಡಿದೆ. ಪಿ ಲಂಕೇಶರ 'ತೆರೆಗಳು' ಎಂಬ ನಾಟಕದ ಮೂಲಕ ಮೊದಲು ಕಾಲೇಜಿನಲ್ಲಿ ವೇದಿಕೆ ಏರಿದ್ದೆ. ಈ ನಾಟಕಕ್ಕೆ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಬಂತು. ನಾವು ಇಲ್ಲಿವರೆಗೆ ಬರಲು ಇದೇ ನಾಟಕ ಕಾರಣ.''

    ಚಿತ್ರರಂಗಕ್ಕೆ ಬರಲು ಆಸೆ ಇಟ್ಟುಕೊಂಡಿರುವ ಕಲಾವಿದರಿಗೆ ನಿಮ್ಮ ಸಲಹೆ?

    ಚಿತ್ರರಂಗಕ್ಕೆ ಬರಲು ಆಸೆ ಇಟ್ಟುಕೊಂಡಿರುವ ಕಲಾವಿದರಿಗೆ ನಿಮ್ಮ ಸಲಹೆ?

    ''ದುಡ್ಡು ಪಡೆದು ಸುಮ್ಮನೆ ಚಾನ್ಸು ಕೊಡುತ್ತೇನೆ ಎಂದು ಹೇಳುವವರ ಹಿಂದೆ ಹೋಗಬೇಡಿ. ಮೊದಲು ತಾಳ್ಮೆ ಇರಬೇಕು. ಇಂಡಸ್ಟ್ರಿಗೆ ಬಂದ ತಕ್ಷಣ ಏನೋ ಮಾಡಬೇಕು ಅಂತ ಇರುತ್ತಾರೆ. ಇದ್ದಕ್ಕಿದ್ದ ಹಾಗೆ ಯಾವುದು ಆಗುವುದಿಲ್ಲ. ನೀವೆ ಒಂದಷ್ಟು ಅನುಭವ ಪಡೆದುಕೊಂಡು ಒಳಗೆ ಬರಲು ಪ್ರಯತ್ನ ಮಾಡಿ. ತಾಳ್ಮೆ ಇದ್ದರೆ ಖಂಡಿತ ಎಲ್ಲ ಆಗುತ್ತದೆ.''

    ನಿಮ್ಮ ಸಿನಿಮಾ ಜರ್ನಿಗೆ ಕುಟುಂಬದ ಬೆಂಬಲ ಹೇಗಿದೆ?

    ನಿಮ್ಮ ಸಿನಿಮಾ ಜರ್ನಿಗೆ ಕುಟುಂಬದ ಬೆಂಬಲ ಹೇಗಿದೆ?

    ''ನಾನು ಇಂದು ಏನೇ ಮಾಡಿದ್ದರು. ನಮ್ಮ ಅಣ್ಣ ಹೊನ್ನಪ್ಪ ಹಾಗೂ ನಮ್ಮ ಕುಟುಂಬವೇ ಕಾರಣ. ಊರಿನಲ್ಲಿ ನಾವು ಹೂವಿನ ವ್ಯಾಪರಿಗಳು. ಮೊದಲು ನಾಟಕ ಮಾಡುವ ಸಮಯದಲ್ಲಿ ಬಯ್ಯುತ್ತಿದ್ದರು. ಆದರೆ ಬಳಿಕ ಮಾಡು ಅಂತ ಸಪೋರ್ಟ್ ಮಾಡಿದರು. ಈಗ ಅವರಿಗೂ ತುಂಬ ಖುಷಿ ಇದೆ.''

    English summary
    Kannada comedy actor Dharmanna Kadur interview on the occupation of his birthday.
    Monday, February 11, 2019, 13:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X