twitter
    For Quick Alerts
    ALLOW NOTIFICATIONS  
    For Daily Alerts

    ರಿಯಲ್ ಅಂಡರ್ ವರ್ಲ್ಡ್ ಡಾನ್, ನೋಡಿ ಸುಮಂತ್ ಭಯಪಟ್ಟಿದ್ದು, ಯಾಕೆ?

    By Suneetha
    |

    ಸದಾ ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದ ಕ್ಯೂಟ್ ನಟ ಸುಮಂತ್ ಶೈಲೇಂದ್ರ ಅವರು 'ಬೆತ್ತನಗೆರೆ' ಚಿತ್ರದಲ್ಲಿ ಮಾತ್ರ ಸಖತ್ ಫೈಟ್ ಜೊತೆಗೆ ರಿಯಲ್ ರೌಡಿ ಶೀಟರ್ ಬೆತ್ತನಗೆರೆ ಸೀನನ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡಿದ್ದಾರೆ.

    ಇದೀಗ ರಿಯಲ್ ರೌಡಿಯೊಬ್ಬರನ್ನು ನೋಡಿ ಭಯಪಟ್ಟುಕೊಂಡ ಆ ಸಂದರ್ಭವನ್ನು ಸುಮಂತ್ ಅವರು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಸುಮಂತ್ ಅವರೊಂದಿಗೆ ನಡೆಸಿದ ಚಿಟ್ ಚಾಟ್ ನ ಮುಂದುವರಿದ ಭಾಗ ಇಲ್ಲಿದೆ. ಮುಂದೆ ಓದಿ..

    * ನಿಮಗೆ ರಿಯಲ್ ರೌಡಿಶೀಟರ್ ಗಳು ಅಂದ್ರೆ ಸ್ವಲ್ಪ ಭಯ ಇದೆ ಅಂತೆ! ಹೌದಾ?

    - ಹೇ ಇಲ್ಲಪ್ಪಾ, ಭಯ ಏನು ಇಲ್ಲ ಆಕ್ಚುವಲಿ ನಾನೊಂದು ಸಾರಿ ದುಬೈಗೆ ಹೋಗಿದ್ದಾಗ ಅಲ್ಲಿ ಕುದುರೆ ರೇಸ್ ಕೋರ್ಸ್ ನೋಡುತ್ತಿದ್ದ ಸಂದರ್ಭದಲ್ಲಿ ನನ್ನ ಪಕ್ಕದಲ್ಲಿ ಒಬ್ಬ ಅಂಡರ್ ವರ್ಲ್ಡ್ ಡಾನ್ ಕೂತಿದ್ರು. ಅವರ ಪಕ್ಕ ಹಿಂದೆ ಮುಂದೆ ಎಲ್ಲಾ ಫುಲ್ ಬಾಡಿಗಾರ್ಡ್ ಗಳು ನಿಂತಿದ್ರು. ನಾನು ಯಾರೋ ಒಬ್ರು ದೊಡ್ಡೋರು ಬಂದಿರ್ ಬೋದು ಅಂತ ಸುಮ್ಮನೆ ಕುಳಿತಿದ್ದೆ.

    ನಾನು ನೋಡ್ತಾನೆ ಇದ್ದೆ. ಆಮೇಲೆ ಒಂದೆರಡು ರೇಸ್ ಮುಗಿದ ಮೇಲೆ ಪಕ್ಕದಲ್ಲಿದ್ದ ಕೂತಿದ್ದವರು ನನ್ನ ಕರೆದು ಈ ಕಡೆ ಕೂತ್ಕೋಬೇಡಿ ನೀವು ಇವರ ಎದುರು ತುಂಬಾ ಸಣ್ಣವರಾಗ್ತೀರಾ, ದಯವಿಟ್ಟು ಬನ್ನಿ ನನ್ನ ಜೊತೆ ನಾವು ಹೊರಗಡೆ ಹೋಗೋಣ ಅಂದ್ರು.[ಅಕ್ಟೋಬರ್ 30ಕ್ಕೆ ರಕ್ತಸಿಕ್ತ 'ಬೆತ್ತನಗೆರೆ' ತೆರೆ ಮೇಲೆ]

    ಇವರು ಯಾಕೆ ಹೀಗಂತಿದ್ದಾರೆ ಅಂತ ನನಗೆ ಸಿಟ್ಟು ಬಂದು 'ಹೇ ಹೋಗಪ್ಪ ನಾನ್ ಆಮೇಲೆ ಬರ್ತೀನಿ' ಅಂದೆ. ಆದ್ರೆ ಅವರು ನನ್ನ ಹೊರಗಡೆ ಎಳ್ಕೊಂಡು ಹೋಗ್ ಬಿಟ್ಟು ಅವರು 'ಹೀ ಇಸ್ ಅ ವೆರಿ ಬಿಗ್ ಅಂಡರ್ ವರ್ಲ್ಡ್ ಡಾನ್, ವೆರಿ ಮೋಸ್ಟ್ ವಾಂಟೆಡ್ ಪರ್ಸನ್' ಅಂತ ಅವರ ಹೆಸರು ಹೇಳಿದ್ರು. ಆಮೇಲೆ ನಾನು ಆ ಡಾನ್ ಹೆಸರನ್ನ ಗೂಗಲ್ ನಲ್ಲಿ ಸರ್ಚ್ ಮಾಡಿ ನೋಡಿದಾಗ ಅವರ ಡೀಟೈಲ್ಸ್ ಸಿಕ್ಕಿತ್ತು. (ಅವರ ಹೆಸರು ನಾನಿಲ್ಲಿ ಹೇಳೋಕೆ ಇಷ್ಟ ಪಡಲ್ಲ)

    ಇಲ್ಲಿ ಸ್ವಲ್ಪ ನನಗೆ ಭಯ ಆಯ್ತು ಯಾಕಂದ್ರೆ, ಅಷ್ಟು ದೊಡ್ಡ ಡಾನ್ , ಬೇರೆ ಗ್ಯಾಂಗ್ ಬಂದು ಶೂಟೌಟ್, ಅದು ಇದೂ ಅಂತ ಆಗ್ ಬಿಟ್ಟು ಏನಾದ್ರೂ ಹೆಚ್ಚು ಕಡಿಮೆ ಆದ್ರೆ, ನಾವು ಬೇರೆ ಅಮಾಯಕರು ಅಂತ ಹೆದ್ರ್ ಕೊಂಡು ಯಾಕೆ ಸುಮ್ಮನೆ ರಿಸ್ಕ್ ಅಂತ ಜಾಗ ಖಾಲಿ ಮಾಡಿದೆ.

    ಆದ್ರೆ ತುಂಬಾ ಹೆದ್ರಿಕೆ ಏನೂ ಇಲ್ಲ ಯಾಕಂದ್ರೆ ನಮ್ಮ ಅಪ್ಪನೂ ದೊಡ್ಡ ಫೈನಾನ್ಷಿಯರ್, ಇದೇ ಫೀಲ್ಡ್ ನಲ್ಲಿ ನಾನು ಹುಟ್ಟಿ ಬೆಳೆದೋನು ಆದ್ರೆ ಈ ಥರ ಅನುಭವ ಆಗಿದ್ದು ಮೊದಲನೇ ಸಾರಿ ಸೋ ಹಾಗೆ ಸ್ವಲ್ವ ಭಯ ಬಿದ್ದೆ ಅಷ್ಟೆ.

    * 'ಬೆತ್ತನಗೆರೆ' ಸೀನನ ಪಾತ್ರ ಮಾಡ್ತಾ ಇದ್ದೀರಾ ಸಖತ್ ಥ್ರಿಲ್ಲಿಂಗ್ ಅನ್ನಿಸ್ತಾ ಇದ್ಯಾ?

    - ಹಾ!! ಸಖತ್ ಥ್ರಿಲ್ಲ್ ಆಗ್ತಾ ಇದೆ. ಯಾಕಂದ್ರೆ ನಾನು ಇದಕ್ಕಾಗಿ ಸಖತ್ ಚೇಂಜಸ್ ಮಾಡ್ಕೊಂಡಿದ್ದೀನಿ, ಚೇಂಜಸ್ ಮಾಡ್ಕೊಳ್ಳೇ ಬೇಕು ಯಾಕಂದ್ರೆ ಬೇರೆ ಥರ ಸಿನಿಮಾ ಮಾಡುವಾಗ ಅದಕ್ಕೆ ತಕ್ಕಂತೆ ನಾನು ಬದಲಾಗಬೇಕು ಅಲ್ವಾ?. ಹಾಗೆ ತುಂಬಾ ಜನರನ್ನ ಮೀಟ್ ಮಾಡಿ ಅವರ ಕ್ಯಾರೆಕ್ಟರ್ ಅರ್ಥ ಮಾಡ್ಕೊಂಡಿದ್ದೀನಿ.

    'ಬೆತ್ತನಗೆರೆ' ಸೀನ ಅಂತ ಹೇಳೋವಾಗ ನಾನು ಅವರ ಕ್ಯಾರೆಕ್ಟರ್ ಅನ್ನು ಇಮ್ಯಾಜಿನ್ ಮಾಡ್ಕೊಂಡು ಆಕ್ಟ್ ಮಾಡ್ಬೇಕು. ಸೋ ಹಾಗಾಗಿ ಲವರ್ ಬಾಯ್ ಬಿಟ್ಟು ಮಾಸ್ ಆಕ್ಟ್ ಮಾಡೋವಾಗ ಬೇರೆ ಥರಾನೇ ಏನೋ ಒಂಥರ, ಸ್ವಲ್ಪ ಥ್ರಿಲ್ಲಿಂಗ್ ಇತ್ತು.

    * ಸಡನ್ ಆಗಿ ಲವರ್ ಬಾಯ್ ಇಂದ ಮಾಸ್ ಬಾಯ್ ಆಗಿ ಜಂಪ್ ಆಗಲು ಕಾರಣ.

    - ನಾನು ಮೊದ್ಲಿನಿಂದಲೂ ಬೇರೆ ಬೇರೆ ಜಾನರ್ ಇರೋ ಸಿನಿಮಾಗಳನ್ನು ಮಾಡ್ಬೇಕು ಅಂತ ಅನ್ಕೋತಾ ಇದ್ದೆ. ನಾನು ಈ ಮೊದಲು ಮಾಡಿದ ಎರಡು ಚಿತ್ರಗಳಲ್ಲೂ ಡಿಫರೆಂಟ್ ಆಂಗಲ್ ಇದೆ. 'ದಿಲ್ ವಾಲಾ' ರೊಮ್ಯಾಂಟಿಕ್ ಮೂವಿ ಆದ್ರೆ, 'ತಿರುಪತಿ ಎಕ್ಸ್ ಪ್ರೆಸ್' ಪಕ್ಕಾ ಕಾಮಿಡಿ ಮತ್ತು ಫ್ಯಾಮಿಲಿ ಎಂರ್ಟಟೈನರ್.

    ಸೋ ಫಸ್ಟ್ 'ಬೆತ್ತನಗೆರೆ' ಸ್ಟೋರಿ ಕೇಳಿದಾಗ ಸಖತ್ ಖುಷಿ ಜೊತೆಗೆ ತುಂಬಾ ಥ್ರಿಲ್ಲ್ ಆಯ್ತು. ಆಮೇಲೆ ಈ ಸಿನಿಮಾ ಮಾಡ್ಲೇಬೇಕು ಅಂತ ಡಿಸೈಡ್ ಮಾಡಿದೆ. ಅದ್ರಲ್ಲೂ ರಿಯಲ್ ರೌಡಿ ಶೀಟರ್ ಗಳಾದ 'ಬೆತ್ತನಗೆರೆ ಸೀನ, ಶಂಕ್ರ' ಅವರ ಬಗ್ಗೆ ಕೇಳಿ ಅವರ ಪವರ್ ನೋಡಿ ಇನ್ನೂ ಥ್ರಿಲ್ಲ್ ಆಯ್ತು.

    ಯಾವ ಥರ ಸೀನ ಮತ್ತು ಶಂಕ್ರ ಅವರು ಇಡೀ ಕರ್ನಾಟಕವನ್ನ ಗಡಗಡ ಅಂತ ನಡುಗಿಸಿದ್ದಾರೆ ಅಂತ ಗೊತ್ತಾಯ್ತು. ಅಕ್ಷಯ್ ಜೊತೆ ಕುತ್ಕೊಂಡು ತುಂಬಾ ಸ್ಟಡಿ ಮಾಡಿದೆ. ನಾವಿಬ್ಬರು ಈ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡ್ತಾ ಇದ್ದೀವಿ. ಇಬ್ಬರು ಯಾವ ಥರ ಆಕ್ಟ್ ಮಾಡ್ಬೋದು, ಅಂತ ಕೂತು ಡಿಸ್ಕಸ್ ಮಾಡಿ ಶಾಟ್ ಗೆ ರೆಡಿ ಆಗ್ತಾ ಇದ್ವಿ. (ಫಿಲ್ಮಿಬೀಟ್ ಕನ್ನಡ)

    * ನಮ್ಮ ಓದುಗರಿಗೆ ನೀವು ಏನು ಹೇಳೋಕೆ ಇಷ್ಟಪಡ್ತೀರಾ?

    - ಹಾ!! ಎಲ್ಲರೂ 'ಬೆತ್ತನಗೆರೆ' ಸಿನಿಮಾ ನೋಡಿ. ಫಸ್ಟ್ ಟೈಮ್ ಮಾಸ್ ಹೀರೋ ಆಗಿ ಕಾಣಿಸಿಕೊಂಡಿದ್ದೇನೆ. ರಿಯಲ್ ಸ್ಟೋರಿ, ನೋಡಿ ಹಾರೈಸಿ.

    ಸಂದರ್ಶನ: ಸುನೀತಾ ಆರ್.ಜೆ. ಗೌಡ

    English summary
    Debudent director Mohan Gowda's Kannada movie 'Bettangere' releasing this week (October 30th). Kannada Actor Sumanth Shailendra spoke to Filmibeat. Here is the Interview. Actor Sumanth Expressed the experience about his Dubai trip and 'Bettangere' movie shooting.
    Wednesday, October 28, 2015, 15:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X