For Quick Alerts
  ALLOW NOTIFICATIONS  
  For Daily Alerts

  'ಬೆತ್ತನಗೆರೆ' ಸೀನನ (ಸುಮಂತ್ ಶೈಲೇಂದ್ರ) ಜೊತೆ ಚಿಟ್ ಚಾಟ್

  By Suneetha
  |

  ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಇತ್ತೀಚೆಗೆ ಚಾಕಲೇಟು ಹೀರೋಗಳು ಕಾಲಿಡುತ್ತಿರೋದು ಸರ್ವೇ ಸಾಮಾನ್ಯ ಆಗಿದೆ. ಅದ್ರಲ್ಲೂ ಖ್ಯಾತ ನಿರ್ಮಾಪಕರೊಬ್ಬರ ಮುದ್ದಿನ ಮಗ ಸುಮಂತ್ ಶೈಲೇಂದ್ರ ಅವರು 'ಆಟ' ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟು ತಮ್ಮ ತುಂಟಾಟವನ್ನು ಶುರು ಹಚ್ಚಿಕೊಂಡವರು.

  ಆ ನಂತರ ರೊಮ್ಯಾಂಟಿಕ್ ಚಿತ್ರಗಳಾದ 'ದಿಲ್ ವಾಲಾ' ಹಾಗೂ 'ತಿರುಪತಿ ಎಕ್ಸ್ ಪ್ರೆಸ್' ಮತ್ತು 'ಭಲೇ ಜೋಡಿ' ಚಿತ್ರಗಳ ಮೂಲಕ ತಮ್ಮ ಸಿನಿ ಕೆರಿಯರ್ ನಲ್ಲಿ ಸ್ವಲ್ಪ ಮಟ್ಟಿಗೆ ಗುರುತಿಸಿಕೊಳ್ಳುವಂತಹ ನಟನೆ ಮಾಡಿದರು.

  ಇದೀಗ ಲವ್, ರೊಮ್ಯಾನ್ಸ್ ಎಲ್ಲವನ್ನು ಪಕ್ಕಕ್ಕೆ ಇಟ್ಟು ಕೊಂಚ ಡಿಫರೆಂಟ್ ಆಗಿ 'ಬೆತ್ತನಗೆರೆ' ಚಿತ್ರದ ಮೂಲಕ ಸಖತ್ ಫೈಟ್ ಮಾಡಿ ಫುಲ್ ಮಾಸ್ ಹೀರೋ ಥರ ಆಕ್ಟ್ ಮಾಡಿದ್ದಾರೆ.[139 ಕಟ್ ಗಳೊಂದಿಗೆ ಸೆನ್ಸಾರ್ ಪಾಸ್ ಆದ 'ಬೆತ್ತನಗೆರೆ']

  ಈ ನಡುವೆ ಬಿಡುವು ಮಾಡಿಕೊಂಡು 'ಬೆತ್ತನಗೆರೆ' ಚಿತ್ರದ ಬಗ್ಗೆ ಹಾಗೂ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ತಮಗಾದ ಅನುಭವವನ್ನು ಫಿಲ್ಮಿಬೀಟ್ ಕನ್ನಡದ ಜೊತೆ ಮಾತಿಗೆ ಸಿಕ್ಕಾಗ, ಡೀಟೈಲ್ ಆಗಿ ಹಂಚಿಕೊಂಡಿದ್ದಾರೆ.

  'ಬೆತ್ತನಗೆರೆ' ನಟ ಸುಮಂತ್ ಶೈಲೇಂದ್ರ ಅವರೊಂದಿಗೆ ಒನ್ ಇಂಡಿಯಾ ಕನ್ನಡ ಫಿಲ್ಮಿಬೀಟ್ ನಡೆಸಿದ ಚಿಟ್ ಚಾಟ್ ನ ಆಯ್ದ ಭಾಗ ಇಲ್ಲಿದೆ ನೋಡಿ..

  * ಬೆತ್ತನಗೆರೆ ಸಿನಿಮಾ ರಿಲೀಸ್ ಆಗ್ತಾ ಇದೆ. ನಿಮ್ಮ ಪರ್ಫಾಮೆನ್ಸ್ ಬಗ್ಗೆ ನಿಮ್ಗೆ ಏನನ್ನಿಸ್ತಾ ಇದೆ.

  - ಸಖತ್ ಖುಷಿ ಆಗ್ತಾ ಇದೆ. ಇದಕ್ಕಿಂತ ಮೊದಲು ನಾನು ಕಮರ್ಷಿಯಲ್ ಮೂವಿ ಮಾಡ್ತಾ ಇದ್ದೆ. 'ದಿಲ್ ವಾಲ' ಫುಲ್ ಕಮರ್ಷಿಯಲ್ ಪಿಕ್ಚರ್, ಅದ್ರ, ಸಾಂಗ್ಸ್ ನ ಜನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ರು. ನಂತ್ರ 'ತಿರುಪತಿ ಎಕ್ಸ್ ಪ್ರೆಸ್' ಅಂತ ಕಾಮಿಡಿ ಸಿನಿಮಾ ಮಾಡಿದ್ದೆ.

  ಇದೀಗ ಡಿಫರೆಂಟ್ ಆಂಗಲ್ ಇರೋ ಸಿನಿಮಾ ಮಾಡೋಕೆ ನಂಗಿಷ್ಟ. ಸೋ ಇವಾಗ ಫಸ್ಟ್ ಟೈಮ್ ಫುಲ್ ಮಾಸ್ ಚಿತ್ರ, 'ಬೆತ್ತನಗೆರೆ' ಮಾಡಿದ್ದೀನಿ. ಇದ್ರಲ್ಲಿ ರೊಮ್ಯಾನ್ಸ್, ಹೀರೋಯಿನ್, ಲವ್ ಅಂತ ಯಾವುದಕ್ಕೂ ಜಾಗನೇ ಇಲ್ಲ. ಕಾಮಿಡಿನೂ ಇಲ್ಲ, ಫುಲ್ ಆಕ್ಷನ್ ಜೊತೆಗೆ ರಿಯಲಿಸ್ಟಿಕ್ ಆಗಿ ಮಾಡಿರೋದು. ಫೈಟ್ಸ್ ಎಲ್ಲಾ ನ್ಯಾಚುರಲ್ ಇದೆ. ಡ್ಯೂಪ್ ಅಂತ ಯಾವುದನ್ನು ಬಳಸ್ಕೊಂಡಿಲ್ಲ.

  ನನಗೆ ಸಿಕ್ಕಾಪಟ್ಟೆ ಹೆದರಿಕೆ ಆಗಿತ್ತು. ಚಿತ್ರದಲ್ಲಿ ಒಂದು ಜೈಲ್ ಫೈಟ್ ಇದೆ ಮತ್ತೆ ಒಂದು ಬ್ರ್ಯಾಂಚ್ ನಲ್ಲಿ ಫುಲ್ ಬೆಂಕಿ ಹಾಕ್ ಬಿಟ್ಟು ಹೊಡಿತಾರೆ ಆ ಸಂದರ್ಭದಲ್ಲಿ ನಾನು ಜಸ್ಟ್ ಮಿಸ್, ಕೇವಲ ಒಂದು ಇಂಚಲ್ಲಿ ನನ್‌ ತಲೆ ಹಾಗೂ ಮುಖ ಮಿಸ್ ಆಗಿದೆ. ಸೋ ಈ ಥರ ಸಖತ್ ರಿಸ್ಕಿ ಫೈಟ್ ಎಲ್ಲಾ ಫೇಸ್ ಮಾಡಿದ್ದೀನಿ.

  ರಿಯಲ್ ಕಥೆ ಆಗಿರೋದ್ರಿಂದ, ರಿಯಲಿಸ್ಟಿಕ್ ಆಗಿರ್ಲಿ ಅಂತ ನಾವು ಜಂಪ್ ಮಾಡುವಾಗ, ಹಾರುವಾಗ ಡ್ಯೂಪ್ ಬಳಸಿಕೊಂಡಿಲ್ಲ. ಒಂಥರಾ ಡಿಫರೆಂಟ್ ಅನುಭವ. ಕಮರ್ಷಿಯಲ್ ಸಿನಿಮಾ ಮಾಡಿದಾಗ ಅಲ್ಲಿ ಹಾಡು, ಡಾನ್ಸ್, ಸ್ಟೈಲ್ ಎಲ್ಲವೂ ಇತ್ತು ಆದರೆ ಈ ಚಿತ್ರದಲ್ಲಿ ಅದೆಲ್ಲಾ ಏನು ಇಲ್ಲ. ನೀವು ಸುಮಂತ್ ನ, ಸುಮಂತ್ ಆಗಿ ನೋಡೋಕ್ಕಾಗಲ್ಲ. ಬದ್ಲಾಗಿ ಸೀನ ಪಾತ್ರದಲ್ಲಿ ಸೀನನನ್ನ ನೋಡಬಹುದು.[ಚಿತ್ರ ವಿಮರ್ಶೆ: ತಿರುಪತಿ ಎಕ್ಸ್ ಪ್ರೆಸ್ ಪ್ರೇಕ್ಷಕರಿಗೆ ಸಮ್ಮತಿ]

  ಒಂಥರಾ ಬೇರೆ ತರ ಅನುಭವ, ಒಂದು ರಿಯಲಿಸ್ಟಿಕ್ ಸಿನಿಮಾ ಮಾಡ್ಬೇಕು ಅಂತ ತುಂಬಾ ದಿನಗಳಿಂದ ಅಂದುಕೋತಾ ಇದ್ದೆ, ಅದೀಗ 'ಬೆತ್ತನಗೆರೆ' ಮೂಲಕ ಆ ಆಸೆ ತೀರ್ತಾ ಇದೆ. ನನಗೆ ಮೊದ್ಲಿಗಿಂತಲೂ ಲಾಂಗ್, ಮಚ್ಚು ಹಿಡಿಬೇಕು ಅಂತ ತುಂಬಾ ಆಸೆ ಇತ್ತು. 'ಜೋಗಿ' ಸಿನಿಮಾದಲ್ಲಿ ಶಿವಣ್ಣ ಲಾಂಗ್ ಹಿಡಿದಿದ್ದು, ಆಮೇಲೆ 'ಕರಿಯ' ಫಿಲ್ಮ್ ನಲ್ಲಿ ದರ್ಶನ್ ಅವರು ಲಾಂಗ್ ಹಿಡಿಯೋ ಸ್ಟೈಲ್ ಮತ್ತೆ 'ಹುಬ್ಬಳ್ಳಿ' ಸಿನಿಮಾದಲ್ಲಿ ಸುದೀಪ್ ಅವರನ್ನೆಲ್ಲಾ ನೋಡಿ ನನಗೆ ಸಖತ್ ಖುಷಿ ಆಗ್ತಾ ಇತ್ತು ಅಲ್ಲದೇ ಅವರ ಸ್ಟೈಲ್ ಕೂಡ ನನಗಿಷ್ಟ.

  * ಸಿನಿಮಾದಲ್ಲಿ ಸೀನನ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡುವಾಗ ನಿಮ್ಗೆ ಕಷ್ಟ ಅಂತ ಅನ್ನಿಸಿದೆಯೇ?.

  - ಮೊದ್ಲು ಸ್ವಲ್ಪ ಕಷ್ಟ ಅಂತ ಅನ್ನಿಸ್ತು. ಯಾಕಂದ್ರೆ ಅವರ ಥರ ಮಾಡೋರು ಅಥವಾ ಮಾಡಿ ತೋರಿಸೋರು ಯಾರು ಇರ್ಲಿಲ್ಲಾ. ಸೋ ನಾನೇ ತುಂಬಾ ಸ್ಟಡಿ ಮಾಡಿದೆ. ಹೇಗೆ ಮಾಡಬಹುದು ಅಂತ ನಾನೇ ಕುತ್ಕೊಂಡು ತುಂಬಾ ಯೋಚನೆ ಮಾಡಿದೆ. ಸೋ ಬೇರೆ ಲೋಕಲ್ ರೌಡಿಗಳ ಬಗ್ಗೆ ಸ್ಟಡಿ ಮಾಡಿದೆ. ಇನ್ ಫ್ಯಾಕ್ಟ್ ಪರ್ಸನಲ್ ಆಗಿ ರೌಡಿ ಶೀಟರ್ ಗಳನ್ನು ಹೈಕೋರ್ಟ್ ನಿಂದ ಅನುಮತಿ ಪಡೆದುಕೊಂಡು ಮೀಟ್ ಮಾಡಿದೆ.

  ಅವರ ಬಳಿ ಹೋಗಿ ಅವರೆಲ್ಲರನ್ನ, ಏನು ಎತ್ತ ಅಂತ ಮಾತಾಡಿಸಿ, ಅವರ ನಿಜ ಜೀವನದ ಬಗ್ಗೆ ಕೇಳಿದೆ. ಜನರಲ್ ಆಗಿ ಪ್ರಶ್ನೆಗಳನ್ನು ಕೇಳಿ ಅವರ ಬಗ್ಗೆ ತಿಳ್ಕೊಂಡೆ. ಯಾಕಂದ್ರೆ ನಾನು ಸೀನನ ಪಾತ್ರ ಮಾಡಬೇಕು ಅಂದ್ರೆ ಎಲ್ಲೂ ಹೋಗಕ್ಕಾಗಲ್ಲ, ಸೀನ ಅವರ ಹತ್ರ ಅಂತೂ ಆಗಲ್ಲ, ಅವರದು ಆಗಲೇ ಎನ್ ಕೌಂಟರ್ ಆಗಿದೆ. ಸೋ ಬೇರೆ ರೌಡಿಸಂ ಸ್ಟಡಿ ಮಾಡ್ಕೊಂಡು ಅವರ ಲೈಫ್ ಸ್ಟೈಲ್ ಅವರ ಕ್ಯಾರೆಕ್ಟರ್ ಅನ್ನು ಸ್ಟಡಿ ಮಾಡ್ಕೊಂಡು, ಅವರ ಲುಕ್, ಗತ್ತು, ವಾಕಿಂಗ್ ಸ್ಟೈಲ್, ಎಲ್ಲ ನೋಡಿ ಕಲಿತುಕೊಂಡು ಪ್ರಿಪೇರ್ ಆದೆ.

  * ಶೂಟಿಂಗ್ ಸ್ಪಾಟ್ ನಲ್ಲಿ ರಿಯಲ್ ರೌಡಿಗಳು ತೊಂದರೆ ಮಾಡಿದಾಗ ನೀವು ಹೇಗೆ ಮ್ಯಾನೇಜ್ ಮಾಡಿದ್ರಿ.?

  - ಯಾವಾಗ್ಲೂ, ಯಾರಾದ್ರೂ ಬರ್ತಾನೇ ಇದ್ರು, ಪ್ರತಿದಿನ ಸುಮಾರು 23 ಜನ ಬರ್ತಾ ಇದ್ರು. ಶೂಟಿಂಗ್ ಮಾಡೋಕೆ ಬಿಡ್ತಾ ಇರ್ಲಿಲ್ಲ. ನಾನು ಶೂಟಿಂಗ್ ಮಾಡ್ತಾ ಇದ್ರೆ ಅಕ್ಷಯ್ ರೋಲ್ ಯಾಕೆ ಸ್ವಲ್ಪ ಇದೆ. ಅಕ್ಷಯ್ ಮಾಡಿದ್ರೆ ನನ್ ರೋಲ್ ಯಾಕೆ ಇಷ್ಟೇ ಇದೆ ಅಂತ ಜಗಳ ಆಡ್ತಾ ಇದ್ರು. ಸೋ ಯಾವಾಗ್ಲೂ ಜಗಳ ಆಗ್ತಾ ಇತ್ತು.

  ಆದ್ರೆ ಏನ್ ಮಾಡೋದು ನಾವು ಮಾಡ್ತೀರೋದು ಸಿನಿಮಾ ಅಷ್ಟೆ, ಅವರಿಗೆ ಸಿನಿಮಾ ಶೂಟಿಂಗ್ ಬಗ್ಗೆ ಗೊತ್ತಿಲ್ಲ ಅವರಿಗೆ ಸಿನಿಮಾ ಸೆನ್ಸ್ ಇಲ್ಲ. ಅವರ ರಿಯಲ್ ಲೈಫ್ ನಲ್ಲಿ ಬರೀ ಜಗಳ ಆಡೋದು, ಕಿರುಚಾಡೋದು, ಹೊಡಿಯೋದು, ಸಾಯಿಸೋದು ಅಷ್ಟೆ ಗೊತ್ತಿರುತ್ತೆ. ಆದ್ರೆ ನಮ್ಮ ರೀಲ್ ಲೈಫ್ ನಲ್ಲಿ ನಾವು ಯಾವ ಥರ ಸಿನಿಮಾ ಮಾಡ್ತಾ ಇದ್ದೀವಿ ಅಂತ ಅವರಿಗೆ ಗೊತ್ತಿರಲ್ಲ. ಆದ್ರೆ ನಮಗೆ ಗೊತ್ತಿರುತ್ತೆ ಯಾವ ಥರ ಮೂವಿ ಹೀರೋ ಆಗಿ ರೋಲ್ ಮಾಡ್ಬೋದು ಅಂತ.

  English summary
  Kannada movie 'Bettangere' releasing this week (October 30th). Kannada Actor Sumanth Shailendra spoke to Filmibeat. Actor Sumanth Shared his experience about 'Bettangere' movie shooting. Here is the Interview. The movie is directed by debudent Mohan Gowda.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X