For Quick Alerts
  ALLOW NOTIFICATIONS  
  For Daily Alerts

  ನನ್ನ ಮೊದಲ ಸಿನಿಮಾ : ಅವಕಾಶ ಇಲ್ಲದಾಗ ಬರೆದ ಕಥೆ ಅದ್ಭುತ ಸೃಷ್ಟಿಸಿತು!

  By Naveen
  |

  ಯಾವಾಗ ಏನು ಆಗುತ್ತದೆ ಎಂದು ಹೇಳುವುದಕ್ಕೆ ಆಗಲ್ಲ. ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದ ಒಬ್ಬ ಹುಡುಗ ಅವಕಾಶ ಇಲ್ಲವೆಂದು ತಾನೇ ಒಂದು ಕಥೆ ಮಾಡಿಕೊಂಡ. ಆದರೆ ಆ ಕಥೆ ಇಂದು ಆತನ ಜೀವನದಲ್ಲಿ ಅದ್ಭುತ ಸೃಷ್ಟಿ ಮಾಡಿದೆ. ಆ ಹುಡುಗ ಬೇರೆ ಯಾರು ಅಲ್ಲ ನಿರ್ದೇಶಕ ತರುಣ್ ಸುಧೀರ್.

  ಕಾಶಿನಾಥ್‌ರನ್ನು ನೆನೆದು ಭಾವುಕರಾದ ಅಲೋಕ್..! | Filmibeat Kannada

  ಇವತ್ತು ಸುಧೀರ್ ಸುಪುತ್ರರನ್ನು ಕಂಡರೆ ಎಲ್ಲರಿಗೂ ಖುಷಿ ಆಗುತ್ತದೆ. ಅಪ್ಪನ ಹೆಸರನ್ನು ಇಬ್ಬರು ಮಕ್ಕಳು ಉಳಿಸಿದ್ದಾರೆ. ತರುಣ್ ಸುಧೀರ್ ಅವರ ಮೊದಲ ಸಿನಿಮಾ 'ಚೌಕ' 125 ದಿನ ಪೂರೈಸಿದೆ. ಜೊತೆಗೆ ಇತ್ತೀಚಿಗಷ್ಟೆ ಆ ಚಿತ್ರಕ್ಕಾಗಿ ತರುಣ್ ಗೆ ಫಿಲ್ಮ್ ಫೇರ್ ಪ್ರಶಸ್ತಿ ಕೂಡ ಬಂದಿದೆ. ಇದೀಗ ಇಂತಹ ಸಿನಿಮಾ ಹುಟ್ಟಿದ ಕಥೆಯನ್ನು ತರುಣ್ ಸುಧೀರ್ ಹೇಳಿಕೊಂಡಿದ್ದಾರೆ.

  ನನ್ನ ಮೊದಲ ಸಿನಿಮಾ : ಸೂರಿ ಜೊತೆಗೆ ಕೆಲಸ ಮಾಡುತ್ತಿದ್ದ ವಿಕ್ಕಿ ಹೀರೋ ಆದ ಕಥೆ

  'ಚೌಕ' ಚಿತ್ರದ ರೀತಿ ಆ ಸಿನಿಮಾದ ತೆರೆ ಹಿಂದಿನ ಕಥೆ ಕೂಡ ಇಂಟ್ರೆಸ್ಟಿಂಗ್ ಆಗಿದೆ. ಮುಂದೆ ಓದಿ...

  ನಾನು ನಟಿಸೋಕ್ಕೆ ಅಂತ ಮಾಡಿಕೊಂಡಿದ್ದ ಕಥೆ

  ನಾನು ನಟಿಸೋಕ್ಕೆ ಅಂತ ಮಾಡಿಕೊಂಡಿದ್ದ ಕಥೆ

  ಎಂಟು ವರ್ಷದ ಹಿಂದೆ ನಾನು ಇನ್ನೂ ಒಬ್ಬ ನಟ ಆಗಿದ್ದೆ. ಯಾವುದೇ ದೊಡ್ಡ ಆಫರ್ ಇರಲಿಲ್ಲ. ಇದು ಯಾಕೋ ವರ್ಕ್ ಔಟ್ ಆಗುತ್ತಿಲ್ಲ ಎನಿಸಿ ನಾವೇ ಒಂದು ಕಥೆ ಮಾಡಿಕೊಂಡರೆ ಹೇಗೆ ಅಂತ ಶುರು ಮಾಡಿದೆ. ಇದು ನನಗೆ ಅಂತ ಮಾಡಿಕೊಂಡ ಕಥೆ. ನಾವೇ ಫ್ರೆಂಡ್ಸ್ ಗಳು ಸೇರಿ ಮಾಡಬೇಕು ಅಂತ ಇತ್ತು. ಆಗ ಇಂಗ್ಲೀಷ್ ಸಿನಿಮಾಗಳು ಇಷ್ಟ ಅಗುತ್ತಿತ್ತು. ಆ ಜಾನರ್ ಕನ್ನಡಕ್ಕೆ ತರಬೇಕು ಎನಿಸಿತು. ಅಲ್ಲಿ ಯೋಚನೆ ಮಾಡುತ್ತ ಒಂದು ಕಥೆ ಹೊಳೆಯಿತು. ಬೇರೆ ಬೇರೆ ಹಿನ್ನಲೆಯಿಂದ ಬಂದ ನಾಲ್ಕು ಜನ ಮಾಡದ ತಪ್ಪಿಗೆ ಜೈಲಿಗೆ ಹೋಗುತ್ತಾರೆ. ಅಲ್ಲಿ ಇನ್ನೊಬ್ಬರು ಸಿಕ್ಕು ಪಾರಾಗುತ್ತಾರೆ. ಕೊನೆಗೆ ಒಂದು ಮೆಸೇಜ್ ನೀಡಬೇಕು. ಎಂಬ ಈ ಲೈನ್ ತಕ್ಷಣಕ್ಕೆ ಬಂತು. ಆಮೇಲೆ ಈ ಲೈನ್ ಅನ್ನು ಡಿಟೇಲಿಂಗ್ ಮಾಡುತ್ತ ಹೋದೆ.

  ಹತ್ತೇ ನಿಮಿಷದಲ್ಲಿ ಯೋಗಿ ಸರ್ ಗೆ ಕಥೆ ಹೇಳಿದೆ

  ಹತ್ತೇ ನಿಮಿಷದಲ್ಲಿ ಯೋಗಿ ಸರ್ ಗೆ ಕಥೆ ಹೇಳಿದೆ

  ನಂದನ (ನಂದ ಕಿಶೋರ್) ಜೊತೆಗೆ ನಾನು 'ರನ್ನ' ಸಿನಿಮಾ ಮಾಡುತ್ತಿದೆ. ಆಗ ಸುದೀಪ್ ಸರ್ ಅವರ ಡೇಟ್ಸ್ ಗಳನ್ನು ಯೋಗೇಶ್ ದ್ವಾರಕೀಶ್ ಸರ್ ನೋಡಿಕೊಳ್ಳುತ್ತಿದ್ದರು. 'ರನ್ನ' ಚಿತ್ರದ ಕೆಲಸ ಹೇಗೆ ನಡೆಯುತ್ತಿದೆ ಎಂದು ಹೇಳಲು ಒಮ್ಮೆ ನಮ್ಮ ಆಫೀಸ್ ಗೆ ಬಂದರು. ಯಾವುದಾದರು ಒಳ್ಳೆ, ಒಳ್ಳೆಯ ಕಥೆ ಇದ್ದರೇ ಹೇಳು ಅಂದರು. ನಾನು ಒಂದು ಒಳ್ಳೆಯ ಕಥೆ ಇದೇ. ಆದರೆ, ಅದಕ್ಕೆ ರೆಗ್ಯೂಲರ್ ಪ್ರೊಡ್ಯೂಸರ್ ಗಳು ಯಾರು ಒಪ್ಪುತ್ತಿಲ್ಲ ಎಂದು ಹತ್ತು ನಿಮಿಷದಲ್ಲಿ ಅವರಿಗೆ ಆ ಕಥೆ ಹೇಳಿದೆ. ಅವ್ರು ನಾನೇ ಮಾಡುತ್ತೇನೆ ಎಂದರು. ಪ್ರೀತಿ ವಿಶ್ವಾಸಕ್ಕೆ ಅವ್ರು ಹಾಗೆ ಹೇಳುತ್ತಿದ್ದಾರೆ ಎಂದುಕೊಂಡೆ. ಆದರೆ ಅವ್ರು 'ಆಟಗಾರ' ಸಿನಿಮಾ ಮುಗಿಸಿ ಮಾತುಕತೆ ಮಾಡಿದರು. ಆಮೇಲೆ ಫಿಲ್ಮ್ ಛೇಂಬರ್ ನಲ್ಲಿ ರಿಜಿಸ್ಟರ್ ಮಾಡಿಸುವಾಗ ಗೊತ್ತಾಯ್ತು 'ಚೌಕ' ದ್ವಾರಕೀಶ್ ಬ್ಯಾನರ್ ನ 50ನೇ ಸಿನಿಮಾ ಅಂತ. ಕೊನೆಗೆ ಮತ್ತೆ ಹುಷಾರಾಗಿ ಮತ್ತೆ ಇನ್ನೊಮ್ಮೆ ಕಥೆ ಡಿಟೇಲಿಂಗ್ ಮಾಡಿದೆ.

  ಲಾಯರ್ ಆಗಿದ್ದ ಶ್ರದ್ಧಾ ಕಳುಹಿಸಿದ್ದ ಒಂದು ಇ-ಮೇಲ್ ನಾಯಕಿ ಆಗುವಂತೆ ಮಾಡಿತು

  ನನ್ನ ಮೊದಲ ಸಿನಿಮಾ 'ಚೌಕ' ಆಗಬೇಕು ಎಂದುಕೊಂಡಿದ್ದೆ

  ನನ್ನ ಮೊದಲ ಸಿನಿಮಾ 'ಚೌಕ' ಆಗಬೇಕು ಎಂದುಕೊಂಡಿದ್ದೆ

  ನಂದಗಿಂತ (ನಂದ ಕಿಶೋರ್) ಮುಂಚೆಯೇ ನಾನು ಡೈರೆಕ್ಟರ್ ಆಗಬಹುದಾಗಿತ್ತು. ಆದರೆ, ನನಗೆ ನನ್ನ ಮೊದಲ ಸಿನಿಮಾ 'ಚೌಕ' ಆಗಬೇಕು ಅಂತ ತುಂಬ ಇಷ್ಟ ಇತ್ತು. ಸೋ, ತುಂಬ ಹೋಮ್ ವರ್ಕ್ ಮಾಡಿ ಸಿನಿಮಾ ಮಾಡೋಣ ಅಂತ ಇತ್ತು. ಟೆಕ್ನಿಕಲಿ ಸ್ಟ್ರಾಂಗ್ ಆಗಬೇಕು ಅಂತ 'ಗಜಕೇಸರಿ', 'ಅಧ್ಯಕ್ಷ', 'ರನ್ನ' ಸಿನಿಮಾಗೆ ಕೆಲಸ ಮಾಡಿದೆ. ನನಗೆ ಕಮರ್ಶಿಯಲ್ ಸಿನಿಮಾ ಮಾಡುವುದು ತುಂಬ ಸುಲಭವಾಗಿತ್ತು. ಆದರೆ, ಸಿನಿಮಾ ತುಂಬ ಸ್ಟ್ರಾಂಗ್ ಮೀಡಿಯಾ ಇದರ ಮೂಲಕ ಏನಾದರೂ ಮೆಸೇಜ್ ಹೇಳಬೇಕು ಎನ್ನುವುದು ನನ್ನ ನಂಬಿಕೆ.

  ಒಂದೇ ವಯಸ್ಸಿನ ನಾಲ್ಕು ಹೀರೋಗಳು

  ಒಂದೇ ವಯಸ್ಸಿನ ನಾಲ್ಕು ಹೀರೋಗಳು

  ನಾನು ಯಾವಾಗ 'ಚೌಕ' ಸಿನಿಮಾದಲ್ಲಿ ಹೀರೋ ಆಗಲ್ಲ ಅನಿಸಿತೋ ಆಗ ಒಂದೇ ವಯಸ್ಸಿನ ನಾಲ್ಕು ಹೀರೋಗಳು ಬೇಕು ಅಂತ ಹುಡುಕಿದೆ. ಆಗ ನನ್ನ ಸರ್ಕಲ್ ನಲ್ಲಿ ಅಲ್ಲಿ ನೋಡಿದಾಗ ದಿಗಂತ್, ಪ್ರಜ್ವಲ್, ಪ್ರೇಮ್, ವಿಜಯ ರಾಘವೇಂದ್ರ ಈ ನಾಲ್ಕು ಜನ ಸಿಕ್ಕರು. ಒಬ್ಬೊಬ್ಬರನ್ನು ಹೀಗೇಯೇ ತೋರಿಸಬಹುದು ಎಂದು ಮೈಂಡ್ ನಲ್ಲಿ ಬಂದು ಬಿಡ್ತು. ಸುಮ್ನೆ ಸಿಕ್ಕಾಗ ಎಲ್ಲರಿಗೂ ಕಥೆ ಕೇಳುತ್ತಿದೆ. ಎಲ್ಲರೂ ಕೇಳಿ ಒಪ್ಪಿಕೊಂಡರು. ಆಗ ಇನ್ನೂ ನನ್ನ ಬಳಿ ನಿರ್ಮಾಪಕರು ಇರಲಿಲ್ಲ.

  ರಿಸ್ಕ್ ಬೇಡ ಎಂದಿದ್ದರು ಕಾಶೀನಾಥ್ ಸರ್

  ರಿಸ್ಕ್ ಬೇಡ ಎಂದಿದ್ದರು ಕಾಶೀನಾಥ್ ಸರ್

  ಬಹುಷಃ ನಾನ್ನೊಬ್ಬ ನಟನ ಮಗ ಆಗಿದ್ದರಿಂದ ನನಗೆ ಒಂದು ವಿಷಯ ಗೊತ್ತಿತ್ತು. ಒಬ್ಬ ನಟ ಅವರಾಗಿಯೇ ಒಂದು ಇಮೇಜ್ ಗೆ ಬಂದಿರೋದಿಲ್ಲ. ನನಗೆ ಒಂದು ನಂಬಿಕೆ ಏನು ಅಂದ್ರೆ, ಒಬ್ಬ ಹಾಸ್ಯ ಮಾಡುವವನು ಎಮೋಷನ್ ಅನ್ನು ಕೂಡ ಅಷ್ಟೇ ಚೆನ್ನಾಗಿ ಮಾಡುತ್ತಾನೆ ಅಂತ. ಚಿತ್ರದ ಒಂದು ಪಾತ್ರಕ್ಕೆ ಕಾಶೀನಾಥ್ ಸರ್ ನೆನಪಾದರು. ಅವರ ಮಗ ಅಭಿ ನನಗೆ ತುಂಬ ಫ್ರೆಂಡ್. ಅವನಿಗೆ ನಾನು ಒಂದು ಕಥೆ ಮಾಡಿಕೊಂಡಿದ್ದೇನೆ, ನಿಮ್ಮ ಅಪ್ಪನಿಗೆ ಹೇಳಬೇಕು ಎನ್ನುತ್ತಿದ್ದೆ. ಫಸ್ಟ್ ಟೈಂ ಕಾಶೀ ಸರ್ ಗೆ ಕಥೆ ಹೇಳಿದಾಗ ಅವ್ರು ಈ ಪಾತ್ರಕ್ಕೆ ನನ್ನನ್ನು ಹಾಕಿಕೊಳ್ಳುತ್ತಿದ್ದೀಯಾ ಇದು ರಿಸ್ಕ್ ಅನಿಸುತ್ತಿಲ್ವಾ, ಸ್ವಲ್ಪ ಮಿಸ್ ಆದರೆ ನಾನೇ ಸಿನಿಮಾಗೆ ಮೈನಸ್ ಆಗುತ್ತೇನೆ ಎಂದರು. ಇಲ್ಲ ಸರ್ ನೀವೇ ಬೇಕು ಎಂದಾಗ ನನಗಿಂತ ಹೆಚ್ಚು ಉತ್ಸಾಹ ತೋರಿಸಿದರು.

  ಫಸ್ಟ್ ಶಾಟ್ ತೆಗೆದದ್ದು ಶಿವಣ್ಣನ ಕಟ್ ಔಟ್

  ಫಸ್ಟ್ ಶಾಟ್ ತೆಗೆದದ್ದು ಶಿವಣ್ಣನ ಕಟ್ ಔಟ್

  ಚಿತ್ರದಲ್ಲಿ ಪ್ರೇಮ್ ಅವರ ಒಂದು ಸೀನ್ ಇದೆ. ಅದರಲ್ಲಿ ಮೇನಕಾ ಥಿಯೇಟರ್ ನಲ್ಲಿ ಬರುತ್ತದೆ. ಆ ಕಥೆ 1986ರಲ್ಲಿ ನಡೆಯುತ್ತದೆ. 1986ರಲ್ಲಿ 'ಆನಂದ್' ಸಿನಿಮಾ ರಿಲೀಸ್ ಆಗಿತ್ತು. ಅದನ್ನು ನಾನು ರಿಕ್ರಿಯೇಟ್ ಮಾಡಿದೆ. ಮೇನಕಾ ಥಿಯೇಟರ್ ನಲ್ಲಿ ಶಿವಣ್ಣನ 70 ಅಡಿ ಕಟ್ ಔಟ್ ಹಾಕಿಸಿದ್ದೆ. ಅದೇ ನನ್ನ ಫಸ್ಟ್ ಶಾಟ್. ಶಿವಣ್ಣನ ಕಟ್ ಔಟ್ ನಾನು ತೆಗೆದ ಮೊದಲ ಶಾಟ್. ಜನವರಿ 7 ಗುರುವಾರ ಅದನ್ನು ಶೂಟ್ ಮಾಡಿದ್ದೆ.

  ಶೂಟಿಂಗ್ ಮೊದಲ ದಿನವೇ ಸ್ನೇಹಿತ ತೀರಿಕೊಂಡಿದ್ದ

  ಶೂಟಿಂಗ್ ಮೊದಲ ದಿನವೇ ಸ್ನೇಹಿತ ತೀರಿಕೊಂಡಿದ್ದ

  ಶೂಟಿಂಗ್ ಮಾಡಿದ ಮೊದಲ ದಿನ ನನಗೆ ತುಂಬ ದುಖಃವಾಗಿದ್ದ ದಿನ. ನನ್ನ ಫ್ರೆಂಡ್ ರವಿ ಅಂತ ಇದ್ದ, ಅವನನ್ನು ನಮ್ ಟೀಂ ರವಿ ಅಂತ ಕರೆಯುತ್ತಿದ್ದರು. ಪೋಸ್ಟರ್ ಡಿಸೈನ್ ಮಾಡುತ್ತಿದ್ದ, ನಮ್ಮ ಎಲ್ಲ ಸಿನಿಮಾಗೆ ಅವನೇ ಪೋಸ್ಟರ್ ಡಿಸೈನ್ ಮಾಡಿದ್ದ. ನನಗೆ ತಮ್ಮನ ತರ ಇದ್ದ. ಅವನು ಹುಷಾರಿಲ್ಲ ಅಂತ ಆಸ್ಪತ್ರೆಯಲ್ಲಿ ಇದ್ದ. ಆದರೆ, 'ಚೌಕ' ಶೂಟಿಂಗ್ ಇದ್ದ ಮೊದಲ ದಿನವೇ ಅವನು ತೀರಿ ಹೋದ ಎಂಬ ಸುದ್ದಿ ಬಂತು. ಆ ದುಖಃ ಇಟ್ಟುಕೊಂಡೆ ಕೆಲಸ ಮಾಡಿದೆ. ಎಲ್ಲ ಕೆಲಸ ಮುಗಿಸಿ ಸಂಜೆ ಅವನ ಮಣ್ಣಿಗೆ ಹೋಗಿ ಬಂದೆ.

  ಎಲ್ಲ ಟೆಕ್ನಿಷಿಯನ್ ಗಳು ಪರಿಚಯ ಇದ್ದರು

  ಎಲ್ಲ ಟೆಕ್ನಿಷಿಯನ್ ಗಳು ಪರಿಚಯ ಇದ್ದರು

  ನನಗೆ ಎಲ್ಲ ಮ್ಯೂಸಿಕ್ ಡೈರೆಕ್ಟರ್ ಗಳು, ಎಲ್ಲ ಕ್ಯಾಮರಾ ಮ್ಯಾನ್ ಗಳು, ಬಹುತೇಕ ಎಲ್ಲ ಟೆಕ್ನಿಷಿಯನ್ ಗಳು ಪರಿಚಯ ಇದ್ದರು. ನನ್ನ ಮೊದಲ ಸಿನಿಮಾಗೆ ಯಾರನ್ನು ಹಾಕಿಕೊಳ್ಳೊಣ ಎಂಬ ಆಸೆ ಇತ್ತು. ಕೆಲವರು ಇದನ್ನು ಕೇಳಿ ಬೇಡ ಅದು ಸುಮ್ಮನೆ ರಿಸ್ಕ್ ಎಂದರು. ಆದರೆ, ಎಲ್ಲರಿಗೂ ಕಥೆ ಹೇಳಿದೆ ಎಲ್ಲರೂ ಒಪ್ಪಿಕೊಂಡರು. ಎಲ್ಲರೂ ಅವರವರ ಕೆಲಸವನ್ನು ಮಾಡಿದರು.

  ಮೊದಲು ಓಕೆ ಹೇಳಿ ಆಮೇಲೆ ಕಥೆ ಹೇಳಿದರು ದರ್ಶನ್

  ಮೊದಲು ಓಕೆ ಹೇಳಿ ಆಮೇಲೆ ಕಥೆ ಹೇಳಿದರು ದರ್ಶನ್

  ದರ್ಶನ್ ಸರ್ ತುಂಬ ಪರಿಚಯ ಇದ್ದರು, ನನ್ನನ್ನು ತಮ್ಮನ ತರ ನೋಡುತ್ತಿದ್ದರು. ಈ ಚಿತ್ರದಲ್ಲಿ ನಟಿಸಿ ಎಂದರೆ ಎಲ್ಲಿ ಅವರನ್ನು ಅಡ್ವಾನ್ಟೆಜ್ ಆಗಿ ತೆಗೆದುಕೊಂಡ ಹಾಗೆ ಆಗುತ್ತದೆಯೋ ಎಂದುಕೊಂಡಿದೆ. ಒಮ್ಮೆ ಹೋಗಿ ನೀವು ಈ ಚಿತ್ರದಲ್ಲಿ ಮಾಡಿದರೆ ತುಂಬ ಸಹಾಯ ಆಗುತ್ತದೆ ಎಂದೆ. ನಿನಗೆ ಒಳ್ಳೆಯದು ಆಗುತ್ತದೆ ಎಂದರೆ ಖಂಡಿತ ಮಾಡುತ್ತೇನೆ ಅಂತ ಐದೇ ನಿಮಿಷದಲ್ಲಿ ಓಕೆ ಮಾಡಿದರು. ಮೊದಲು ಓಕೆ ಹೇಳಿ ಆಮೇಲೆ ಕಥೆ ಹೇಳಿದರು.

  'ಅಲಾಡ್ಸು.. ಅಲಾಡ್ಸು..' ವೇದಾಂತ ತುಂಬಿದ ಹಾಡು

  'ಅಲಾಡ್ಸು.. ಅಲಾಡ್ಸು..' ವೇದಾಂತ ತುಂಬಿದ ಹಾಡು

  'ಅಲಾಡ್ಸು.. ಅಲಾಡ್ಸು..' ಹಾಡಿಗೆ ಮುಂಚೆ ಯೋಗರಾಜ್ ಭಟ್ಟರು ಬೇರೆ ತರ ಹಾಡು ಬರೆದಿದ್ದರು. ಅದು ಯಾಕೋ ಇಷ್ಟ ಆಗಿರಲಿಲ್ಲ. ಆ ಹಾಡಿನಲ್ಲಿ 'ಅಲಾಡ್ಸು' ಎಂಬ ಒಂದು ಪದ ಇತ್ತು. ಅದನ್ನು ಇಟ್ಟುಕೊಂಡೆ ಒಂದು ಸಾಂಗ್ ಮಾಡಿದರೆ ಹೇಗೆ ಅಂದೆ ಅವರು ಸರಿ ಅಂದರು. ಆಗ ನನಗೆ ಫಸ್ಟ್ ನೆನಪಾಗಿದ್ದು, ಟಾನಿಕ್ ಬಾಟಲಿಯ ಮೇಲೆ shake well before use ಎಂದು ಬರೆದಿರುವುದು. ಅದು ಯಾಕೆ ಅಂದರೆ ಅವರ ಕೆಮಿಕಲ್ ಎಲ್ಲ ಕೆಳಗೆ ಇರುತ್ತದೆ ಶೇಕ್ ಮಾಡಿದಾಗ ಮತ್ತೆ ಸರಿಯಾಗುತ್ತದೆ. ಅದನ್ನೇ ಅವರು ಜೀವನ ಟಾನಿಕ್ ಬಾಟ್ಲಿ ಕುಡಿಯೋ ಮುಂಚೆ ಅಲಾಡ್ಸು ಎಂದು ಬರೆದರು. ಹಾಗೆಂದರೆ, ಜೀವನದಲ್ಲಿ ಏನು ಇಲ್ಲ ಎಂದು ಕುಗ್ಗಿ ಕೂತಾದ ಬಾಡಿನ ಅಲ್ಲಾಡಿಸು, ಏನರ್ಜಿ ತಗೋ, ಸಾಧಿಸು ಎಂದು ಹೇಳಿದ್ದು ಅದು. 'ನಾಳೆ ನಾವೇ ಇರೋದಿಲ್ಲ ಬೇಕಾ ಮಿಟಿಂಗು.. ಶಾಶ್ವತ ಯಾವ್ದು ಇಲ್ಲ ಎಲ್ಲ ಶಾಕಿಂಗು..' ಹೀಗಂದರೆ ನಾಳೆ ಯಾರು ಇರೋದಿಲ್ಲ ಯಾಕೆ ಎಲ್ಲರ ಹತ್ತಿರ ಮಾತಾಡಿ ಟೈಂ ವೆಸ್ಟ್ ಮಾಡುತ್ತಿಯ, ಫಸ್ಟ್ ಕೆಲಸ ಮಾಡು ಎಂದು. ಈ ರೀತಿ ಈ ಹಾಡು ಬಂತು.

  'ಅಪ್ಪ ಐ ಲವ್ ಯೂ..' ಹಾಡು ಇರಲಿಲ್ಲ

  'ಅಪ್ಪ ಐ ಲವ್ ಯೂ..' ಹಾಡು ಇರಲಿಲ್ಲ

  'ಅಪ್ಪ ಐ ಲವ್ ಯೂ..' ಹಾಡು ಕಥೆ ಬರೆದಾಗ ಇರಲಿಲ್ಲ. ಆಮೇಲೆ ನನಗೆ ಆ ಎಮೋಷನ್ಸ್ ಅನ್ನು ತೋರಿಸೋಕ್ಕೆ ಒಂದು ಹಾಡು ಬೇಕು ಎನಿಸಿತು. 'ಅಪ್ಪ ಐ ಲವ್ ಯೂ ಪಾ..' ಎಂಬ ಲೈನ್ ಇಟ್ಟುಕೊಂಡೆ ಅರ್ಜುನ್ ಜನ್ಯ ಅವರ ಬಳಿಗೆ ಹೋದೆ ಅವರು ತುಂಬ ಚೆನ್ನಾಗಿ ಹಾಡನ್ನು ಮಾಡಿಕೊಟ್ಟರು.

  ಏನು ಸಿನಿಮಾ ಇದು.. ಎರಡು ದಿನ ಓಡುವುದಿಲ್ಲ ಎಂದರು

  ಏನು ಸಿನಿಮಾ ಇದು.. ಎರಡು ದಿನ ಓಡುವುದಿಲ್ಲ ಎಂದರು

  ಫಸ್ಟ್ ಡೇ ಸಿನಿಮಾ ರಿಲೀಸ್ ಆಯ್ತು ಎಲ್ಲ ಸಿನಿಮಾ ನೋಡುತ್ತಿದ್ದರು. ಮಧ್ಯಾಹ್ನ ಒಂದು ಗಂಟೆಗೆ ರಿಪೋರ್ಟ್ ಕೇಳುವ ಅಭ್ಯಾಸ ನನಗೆ ಇದೆ. ಹಾಗೆ ಕೇಳಿದಾಗ ಅನೇಕರು ನೆಗೆಟಿವ್ ಕಮೆಂಟ್ ಹೇಳಿದರು. ಏನು ಸಿನಿಮಾ ಇದು.. ಎರಡು ದಿನ ಓಡುವುದಿಲ್ಲ ಎಂದರು. ಸಿನಿಮಾದವರೇನೆ, ಗಾಂಧಿನಗರದವರೇನೆ ಚೆನ್ನಾಗಿಲ್ಲ ಎಂದರು. ಆದರೆ ಇನ್ನೊಂದು ಕಡೆ ಥಿಯೇಟರ್ ನವರು ಕಾಲ್ ಮಾಡಿ ಸರ್ ಬಹಳ ಚೆನ್ನಾಗಿದೆ ಎಂದ ಹೇಳುತ್ತಿದ್ದರು. ಇದರಲ್ಲಿ ಯಾವುದನ್ನು ನಂಬಬೇಕು ಅಂತ ಗೊತ್ತಾಗಲಿಲ್ಲ. ಈ ಸಿನಿಮಾ ದೊಡ್ಡದಾಗಿ ತೆಗದುಕೊಂಡೆ ಅಂತ ಸೋಮವಾರ ಗೊತಾಯ್ತು. ಫ್ಯಾಮಿಲಿ ಎಲ್ಲ ಹೊತ್ತಿದ್ದರು. ಎಲ್ಲರೂ ಅವರವರೇ ಸಿನಿಮಾನ ಪ್ರಮೋಟ್ ಮಾಡಿದರು.

  English summary
  Nanna Modala Cinema Series: Kannada director Tarun Sudheer spoke about his first movie 'Chowka' in an exclusive interview with FilmiBeat Kannada.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X