Just In
Don't Miss!
- News
ಅಧ್ಯಕ್ಷರಾಗಿ ಜೋ ಬೈಡನ್ ಮೊದಲ ಭಾಷಣದ ಮುಖ್ಯಾಂಶಗಳು
- Sports
ಐಪಿಎಲ್ 2021: ಎಲ್ಲಾ 8 ತಂಡಗಳು ಉಳಿಸಿಕೊಂಡ, ಬಿಟ್ಟುಕೊಟ್ಟ ಆಟಗಾರರ ಸಂಪೂರ್ಣ ಪಟ್ಟಿ
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Lifestyle
ಯಾವಾಗ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುತ್ತಾರೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನನ್ನ ಮೊದಲ ಸಿನಿಮಾ: ಒಂದು ಹಾಡು ಕೇಳಿ ಅನುರಾಧ ಭಟ್ ಗೆ ಮೂರು ಹಾಡು ಕೊಟ್ಟ ಹಂಸಲೇಖ
'ಅಪ್ಪ ಐ ಲವ್ ಯೂ..' ಸೇರಿದಂತೆ ಕನ್ನಡದಲ್ಲಿ ಸಾಕಷ್ಟು ಸೂಪರ್ ಹಿಟ್ ಹಾಡುಗಳನ್ನು ಹಾಡಿರುವ ಗಾಯಕಿ ಅನುರಾಧ ಭಟ್. ಅನುರಾಧ ಭಟ್ ಸದ್ಯ ಸ್ಯಾಂಡಲ್ ವುಡ್ ನಲ್ಲಿ ಬಹು ಬೇಡಿಕೆಯ ಗಾಯಕಿ. ಇಂತಹ ಗಾಯಕಿ ಮೊದಲು ಮೈಕ್ ಮುಂದೆ ನಿಂತು ಹಾಡಿದ ಹಾಡು 'ಮೀರಾ ಮಾಧವ ರಾಘವ' ಸಿನಿಮಾ 'ವಸಂತ ವಸಂತ..' ಹಾಡು.
ಹಂಸಲೇಖ ಎಂಬ ಸಂಗೀತದ ಮೇರು ಶಿಖರದ ಜೊತೆಗೆ ಅನುರಾಧ ಭಟ್ ತಮ್ಮ ಸಿನಿಮಾ ಪಯಣವನ್ನು ಶುರು ಮಾಡಿದರು. ಮೊದಲ ಸಿನಿಮಾದಲ್ಲಿಯೇ ಬರೋಬ್ಬರಿ ಮೂರು ಹಾಡುಗಳನ್ನು ಹಾಡಿದರು. ತಮ್ಮ ಮೊದಲ ಸಿನಿಮಾ, ಮೊದಲ ಹಾಡಿನ ಬಗ್ಗೆ ಸದ್ಯ ಅನುರಾಧ ಭಟ್ ಮಾತನಾಡಿದ್ದಾರೆ. 'ಫಿಲ್ಮೀಬೀಟ್ ಕನ್ನಡ'ದ 'ನನ್ನ ಮೊದಲ ಸಿನಿಮಾ' ಲೇಖನ ಸರಣಿಯಲ್ಲಿ ತಮ್ಮ ಮೊದಲ ಚಿತ್ರದ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಸಂದರ್ಶನ : ನವಿಕನಸು (ನವೀನ್.ಎ.ಎಸ್)

ಮೊದಲ ಸಿನಿಮಾದಲ್ಲಿಯೇ ಮೂರು ಹಾಡು ಹಾಡಿದೆ
''ನೆನಪಿರಲಿ' ಚಿತ್ರದಿಂದ ನಾನು ಹಂಸಲೇಖ ಸರ್ ಅವರ ಹಾಡುಗಳಿಗೆ ಕೋರಸ್, ಟ್ರಾಕ್ ಹಾಡುಗಳನ್ನು ಹಾಡುತ್ತಿದೆ. 'ಮೀರಾ ಮಾಧವ ರಾಘವ' ಸಿನಿಮಾಗೆ ಸಹ ಮೊದಲು ಟ್ರಾಕ್ ಅಂತಲೇ ನಾನು ಹಾಡಿದ್ದು. ಆಮೇಲೆ ನನ್ನ ಧ್ವನಿ ಇಷ್ಟ ಆಗಿ ಅದೇ ಹಾಡನ್ನು ಉಳಿಸಿಕೊಂಡರು. ನನ್ನ ಮೊದಲ ಸಿನಿಮಾದ ಮೂರು ಹಾಡನ್ನು ನಾನೇ ಹಾಡಿದೆ.''

ಹಂಸಲೇಖ ಸರ್ 'ಎಷ್ಟು ಚೆನ್ನಾಗಿ ಹಾಡುತ್ತೀಯಾ' ಅಂದ್ರು
''ನನ್ನ ಮೊದಲ ಸಿನಿಮಾದ ಬಗ್ಗೆ ನನಗೆ ತುಂಬ ಖುಷಿ ಇದೆ. ನಾನು ಹಂಸಲೇಖ ಸರ್ ಅವರ ದೊಡ್ಡ ಆಭಿಮಾನಿ. ನಾನು ಅವರ ಸಿನಿಮಾದ ಮೂಲಕ ಲಾಂಚ್ ಆಗುತ್ತೇನೆ ಅಂತ ಎಂದು ಅಂದುಕೊಂಡಿರಲಿಲ್ಲ. ಅದು ಆಕಸ್ಮಿಕವಾಗಿ ಆಯ್ತು. ನನ್ನ ಒಂದು ಹಾಡನ್ನು ಅವರ ಅಸಿಸ್ಟೆಂಟ್ ಕೇಳಿದ್ದರು. 'ನೆನಪಿರಲಿ' ಚಿತ್ರಕ್ಕೆ ಕೋರಸ್ ಹಾಡಲು ಕರೆಸಿದ್ದರು. ಆಗ ನನ್ನ ಹಾಡು ಕೇಳಿದ ಹಂಸಲೇಖ ಸರ್ 'ಎಷ್ಟು ಚೆನ್ನಾಗಿ ಹಾಡುತ್ತೀಯಾ ನೀನು, ಇಷ್ಟು ವರ್ಷ ಎಲ್ಲಿದೆ' ಅಂತ ಹೇಳಿದರು. ಅಂದಿನಿಂದ ಅವರ ಜೊತೆಗೆ ತುಂಬ ಸಿನಿಮಾ ಕೆಲಸ ಮಾಡಿದೆ.''

ರಾತ್ರಿ 10.30ಕ್ಕೆ ಹಾಡಿದ ಹಾಡು ಇದು
''ರಾತ್ರಿ 10.30ಕ್ಕೆ ಹಂಸಲೇಖ ಸರ್ ಅವರ ಮ್ಯಾನೆಜರ್ ಕಾಲ್ ಮಾಡಿ ಮೇಡಮ್ ಈಗ ಬಂದು ಹಾಡೋಕ್ಕೆ ಆಗುತ್ತಾ ಅಂತ ಹೇಳಿದರು. ಸಂಗೀತಕ್ಕಾಗಿಯೇ ಜೀವನವನ್ನು ಮುಡಿಪಾಗಿಟ್ಟ ನಾನು ಟೈಂ ನೋಡಲಿಲ್ಲ. ಆಗಲೇ ಹೋಗಿ ಹಾಡಿದೆ. ಹಂಸಲೇಖ ಸರ್ ಜೊತೆಗೆ ಚಿತ್ರದ ನಿರ್ದೆಶಕರಾದ ಟಿ.ಎನ್.ಸೀತಾರಾಮ್ ಸರ್ ಕೂಡ ಇದ್ದರು. ಎಲ್ಲರೂ ನನ್ನ ಹಾಡು ಕೇಳಿ ಇಷ್ಟ ಪಟ್ಟರು. ಅದೇ ಹಾಡನ್ನು ಉಳಿಸಿಕೊಂಡರು. ಜೊತೆಗೆ ಇನ್ನೂ ಎರಡು ಹಾಡನ್ನು ಕೊಟ್ಟರು.''

ಕನಸು ನನಸಾಗುವ ಸಮಯ
''ಹಂಸಲೇಖ ಸರ್ ಒಬ್ಬ ಸಿಂಗರ್ ಗೆ ಬೇಕಾದ ಸ್ವಾತಂತ್ಯ ಕೊಡುತ್ತಾರೆ. ಆಗ ನಮ್ಮ ಮನೋಧರ್ಮಕ್ಕೆ ತಕ್ಕಂತೆ ಹಾಡನ್ನು ನಾವು ಇನ್ನೂ ಚೆನ್ನಾಗಿ ಹಾಡಬಹುದು. ಮೊದಲ ಹಾಡಿನ ರೆಕಾರ್ಡಿಂಗ್ ಆದ ಆ ಸಂದರ್ಭದಲ್ಲಿ ನನಗೆ ಭಯ ಏನು ಆಗಲಿಲ್ಲ. ನಾನು ಆ ಸಂದರ್ಭದಲ್ಲಿ ಖುಷಿಯಾಗಿ ಇದ್ದೇ. ನನ್ನ ಕನಸು ನನಸಾಗುವ ಸಮಯ ಆದಾಗಿತ್ತು.''

ಫಸ್ಟ್ ಟೈಂ ನನ್ನ ಹಾಡನ್ನು ಕೇಳುವ ಮಜಾನೇ ಬೇರೆ ಇತ್ತು
''ಆಡಿಯೋ ಲಾಂಚ್ ಆದಾಗ ಮೀಡಿಯಾ ಮುಂದೆ ನನ್ನ ಬಗ್ಗೆ ಚೆನ್ನಾಗಿ ಮಾತನಾಡಿದರು. ಎಲ್ಲರಿಗೂ ನನ್ನನ್ನು ಪರಿಚಯ ಮಾಡಿಸಿದರು. ಆ ದಿನದ ಪ್ರತಿ ಕ್ಷಣ ಕೂಡ ಸೂಪರ್ ಆಗಿತ್ತು. ಸಿನಿಮಾ ಪ್ರಿಮಿಯರ್ ವೇಳೆ ನನ್ನ ಹಾಡುಗಳನ್ನು ಮೊದಲ ಬಾರಿಗೆ ತೆರೆ ಮೇಲೆ ನೋಡುವಾಗ ಬಹಳ ಖುಷಿ ಆಯ್ತು. ಫಸ್ಟ್ ಟೈಂ ನನ್ನ ಹಾಡುಗಳನ್ನು ದೊಡ್ಡ ಪರದೆ ಮೇಲೆ ಡಿಟಿಎಸ್ ಸೌಂಡ್ ನಲ್ಲಿ ಕೇಳುವ ಮಜಾನೇ ಬೇರೆ ಇತ್ತು''

ಯಾವಾಗಲೂ ಪಾಸಿಟಿವ್ ಆಗಿ ಇರುತ್ತೇನೆ
''ನಾನು ಯಾವಾಗಲೂ ಪಾಸಿಟಿವ್ ಆಗಿ ಇರುತ್ತೇನೆ. ಹಂಸಲೇಖ ಸರ್ ರಿಂದ ನನ್ನ ಸಿನಿಮಾ ಜರ್ನಿ ಶುರು ಆಗುತ್ತೆ ಅಂತ ಗೊತ್ತಿರಲಿಲ್ಲ. 'ಮೀರಾ ಮಾಧವ ರಾಘವ' ಸಿನಿಮಾದಲ್ಲಿ 'ಭೂಮಿ ಭಾನು..', 'ವಸಂತ ವಸಂತ..', ಮತ್ತು 'ರಾಧೆಯ ನೋಡಲು..' ಎಂಬ ಮೂರು ಹಾಡುಗಳನ್ನು ಹಾಡಿದ್ದೇನೆ. ನನ್ನ ಹಾಡುಗಳನ್ನು ಕೇಳಿ ನಮ್ಮ ತಂದೆ, ತಾಯಿ, ನನ್ನ ಫ್ರೆಂಡ್ಸ್ ಕೂಡ ಖುಷಿ ಆದರು.''

ಮ್ಯೂಸಿಕ್ ಡೈರೆಕ್ಷನ್ ಬಗ್ಗೆ ಯೋಜನೆ ಮಾಡಿಲ್ಲ
''ನಾನು ಸಿಂಗರ್ ಆಗಿ ಮಾಡುವುದು ತುಂಬ ಇದೆ. ಮ್ಯೂಸಿಕ್ ಡೈರೆಕ್ಟರ್ ಆಗುವ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ. ಸಂಗೀತ ನಿರ್ದೇಶನಕ್ಕೆ ತುಂಬ ಸಮಯ ಬೇಕಾಗುತ್ತದೆ. ನನ್ನ ಏಮ್, ಡ್ರೀಮ್ ಎಲ್ಲವೂ ಸಿಂಗಿಂಗ್''