»   » 'ದೊಡ್ಮನೆ ಹುಡ್ಗಿ' ರಾಧಿಕಾ ಪಂಡಿತ್ ಜೊತೆ ಎಕ್ಸ್ ಕ್ಲೂಸಿವ್ ಚಿಟ್ ಚಾಟ್

'ದೊಡ್ಮನೆ ಹುಡ್ಗಿ' ರಾಧಿಕಾ ಪಂಡಿತ್ ಜೊತೆ ಎಕ್ಸ್ ಕ್ಲೂಸಿವ್ ಚಿಟ್ ಚಾಟ್

Posted By:
Subscribe to Filmibeat Kannada

'ಹುಡುಗ್ರು' ಚಿತ್ರದ ಬಳಿಕ ನಟಿ ರಾಧಿಕಾ ಪಂಡಿತ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೋಡಿ ಆಗಿರುವ ಸಿನಿಮಾ 'ದೊಡ್ಮನೆ ಹುಡ್ಗ'.

ಸೆಪ್ಟೆಂಬರ್ 23 ರಂದು 'ದೊಡ್ಮನೆ ಹುಡ್ಗ' ಗ್ರ್ಯಾಂಡ್ ರಿಲೀಸ್ ಆಗಲಿದೆ. ನಿನ್ನೆಯಷ್ಟೇ ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ. ಟ್ರೈಲರ್ ನಲ್ಲಿ ಪುನೀತ್ ಪವರ್, ಅಂಬರೀಶ್ ಖದರ್ ಜೊತೆ ಎಲ್ಲರ ಗಮನ ಸೆಳೆಯುವುದು ನಟಿ ರಾಧಿಕಾ ಪಂಡಿತ್ ರವರ ಎರಡೆರಡು ಗೆಟಪ್.


ಒಮ್ಮೆ ರಾಧಿಕಾ ಪಂಡಿತ್ ಹಳ್ಳಿ ಹುಡುಗಿ ಆಗಿ ಕಾಣಿಸಿಕೊಂಡರೆ, ಇನ್ನೊಮ್ಮೆ ಮಾರ್ಡನ್ ಹುಡುಗಿ ಆಗಿ ಕಂಗೊಳಿಸುತ್ತಾರೆ. ಹಾಗಾದ್ರೆ, 'ದೊಡ್ಮನೆ ಹುಡ್ಗ' ಚಿತ್ರದಲ್ಲಿ ನಟಿ ರಾಧಿಕಾ ಪಂಡಿತ್ ಡಬಲ್ ಆಕ್ಟಿಂಗ್ ಮಾಡಿದ್ದಾರಾ.? ['ದೊಡ್ಮನೆ ಹುಡುಗ'ನಿಗೆ ನಂಜನಗೂಡಿನಲ್ಲಿ ಆಗಿದ್ದೇನು?]


ಈ ಡೌಟ್ ನಲ್ಲೇ ನಿಮ್ಮ 'ಫಿಲ್ಮಿಬೀಟ್ ಕನ್ನಡ' ರಾಧಿಕಾ ಪಂಡಿತ್ ಜೊತೆ ಮಾತಿಗಿಳಿದ್ವಿ. ನಮ್ಮ ಮತ್ತು ರಾಧಿಕಾ ಪಂಡಿತ್ ರವರ ಮಾತುಕತೆಯ ಆಯ್ದ ಭಾಗ ಇಲ್ಲಿದೆ. ಓದಿರಿ.....[ರಿಲಯನ್ಸ್ ನಿಂದ ಕಾರಿನ ವಿಮೆ ಮಾಡಿಸಿ, ನಿರಾಳವಾಗಿರಿ]


ಸಂದರ್ಶನ : ಹರ್ಷಿತಾ ರಾಕೇಶ್


* 'ದೊಡ್ಮನೆ ಹುಡುಗಿ' ಆಗಿ ರಾಧಿಕಾ ಪಂಡಿತ್ ಹೇಗೆ.?

- 'ದೊಡ್ಮನೆ ಹುಡ್ಗ' ಚಿತ್ರದಲ್ಲಿ ನಾನು ಎರಡು ತರಹ ಕಾಣಿಸಿಕೊಳ್ಳುತ್ತೇನೆ. ಒಮ್ಮೆ ಹಳ್ಳಿ ಹುಡುಗಿಯಾಗಿ, ಇನ್ನೊಮ್ಮೆ ಸಿಟಿ ಹುಡುಗಿ ಆಗಿ. ಈ ತರಹ ಡ್ಯುಯಲ್ ಕ್ಯಾರೆಕ್ಟರ್ ಸಿಕ್ಕಾಗ, ಕಾಸ್ಟ್ಯೂಮ್ ನಿಂದ ಹಿಡಿದು Attitude ಮತ್ತು ಡೈಲಾಗ್ ಸ್ಟೈಲ್ ವರೆಗೂ ಎಲ್ಲಾ ಚೇಂಜ್ ಆಗುತ್ತೆ. ಹೀಗಾಗಿ, ಒಬ್ಬ ನಟಿಯಾಗಿ 'ದೊಡ್ಮನೆ ಹುಡುಗ' ಚಿತ್ರದ ಕ್ಯಾರೆಕ್ಟರ್ ನನಗೆ ತುಂಬಾ ಚಾಲೆಂಜಿಂಗ್. ನನಗೆ ತುಂಬಾ ಖುಷಿ ಕೊಟ್ಟಂತಹ ಪಾತ್ರ ಇದು.


* ಅಲ್ಲಿಗೆ, ರಾಧಿಕಾ ಪಂಡಿತ್ ಡಬಲ್ ಆಕ್ಟಿಂಗ್ ಮಾಡಿದ್ದಾರಾ.?

- ಅದು ನಿಮಗೆ ಸಿನಿಮಾ ನೋಡಿದ್ಮೇಲೆ ಗೊತ್ತಾಗುತ್ತೆ.


* ಪುನೀತ್ ರಾಜ್ ಕುಮಾರ್ ಜೊತೆ ಇದು ನಿಮಗೆ ಎರಡನೇ ಸಿನಿಮಾ. ಅವರ ಜೊತೆ ವರ್ಕಿಂಗ್ ಎಕ್ಸ್ ಪೀರಿಯನ್ಸ್.?

- ತುಂಬಾ ಖುಷಿ ಕೊಡುತ್ತೆ. ಸೂರಿ ಜೊತೆ ಕೂಡ ಇದು ನನ್ನ ಎರಡನೇ ಸಿನಿಮಾ. ಅಪ್ಪು ಸರ್ ತುಂಬಾ ದೊಡ್ಡ ಆರ್ಟಿಸ್ಟ್. ಸೂರಿ ಕೂಡ ತುಂಬಾ ಒಳ್ಳೆ ಡೈರೆಕ್ಟರ್. ಅವರ ಜೊತೆ ಕೆಲಸ ಮಾಡೋದೆ ನನಗೆ ಖುಷಿ. ಇಬ್ಬರಿಂದಲೂ ನಾನು ಕಲಿಯುವುದು ತುಂಬಾ ಇದೆ. [ಅಂಬರೀಶ್ ಹುಟ್ಟುಹಬ್ಬಕ್ಕೆ 'ದೊಡ್ಮನೆ'ಯಿಂದ ಸಿಕ್ಕ ಉಡುಗೊರೆ ಇದು.!]


* 'ದೊಡ್ಮನೆ'ಯಲ್ಲಿ ದೊಡ್ಡ ದೊಡ್ಡ ಸ್ಟಾರ್ ಗಳ ಜೊತೆ ನಟಿಸಿದ್ದೀರಾ. ರಾಧಿಕಾ ತುಂಬಾ ಲಕ್ಕಿ.!

- ಹೌದು, ನಾನು ತುಂಬಾ ಲಕ್ಕಿ. ಒಂದು ಸಿನಿಮಾದಲ್ಲಿ ಒಂದು ದೊಡ್ಡ ಸ್ಟಾರ್ ಜೊತೆ ನಟಿಸಬಹುದು. ಆದ್ರೆ, ಈ ಸಿನಿಮಾದಲ್ಲಿ ಅಂಬರೀಶ್ ಸರ್, ಸುಮಲತಾ ಮೇಡಂ, ಭಾರತಿ ಮೇಡಂ, ಪುನೀತ್ ಸರ್...ಇವರೆಲ್ಲರ ಮುಂದೆ ನಾನು ಜ್ಯೂನಿಯರ್ ಮೋಸ್ಟ್ ನಟಿ. ಇದಕ್ಕಿಂತ ಖುಷಿ ನನಗೆ ಮತ್ತೊಂದಿಲ್ಲ. Its a lifetime experience for me. ಅವರೆಲ್ಲರಿಂದ ನಾನು ತುಂಬಾ ಕಲಿತಿದ್ದೀನಿ. [ಕೋಟಿ ರೂಪಾಯಿ ವೆಚ್ಚದಲ್ಲಿ 'ದೊಡ್ಮನೆ ಹುಡುಗ' ಸಾಂಗ್ ಶೂಟ್]


* ಗ್ಲಾಮರ್ ಗಿಂತ ಹೆಚ್ಚಾಗಿ ರಾಧಿಕಾ ಪಂಡಿತ್ ಪರ್ಫಾಮೆನ್ಸ್ ಗೆ ಗುರುತಿಸಿಕೊಂಡಿರುವ ನಟಿ. ಹೀಗಾಗಿ 'ದೊಡ್ಮನೆ ಹುಡ್ಗ' ಒಪ್ಪಿಕೊಳ್ಳಲು ಮುಖ್ಯ ಕಾರಣ ಏನು.?

- 'ದೊಡ್ಮನೆ ಹುಡ್ಗ' ಚಿತ್ರದ ಬಗ್ಗೆ ನನಗೆ ಎಲ್ಲಾ ಇಷ್ಟ ಆಯ್ತು. ನನಗೆ ಡ್ಯುಯೆಲ್ ರೋಲ್ ಇದ್ದದ್ರಿಂದ ನನಗೆ ಆಕ್ಟಿಂಗ್ ನಲ್ಲಿ ಎಕ್ಸ್ ಪ್ಲೋರ್ ಮಾಡುವ ಅವಕಾಶ ಸಿಕ್ತು. ಹೀಗಾಗಿ ಒಪ್ಪಿಕೊಂಡೆ. [ಹುಬ್ಬಳ್ಳಿ ಹೈದರು ಕುಣಿದು ಕುಪ್ಪಳಿಸುವಂತೆ ಮಾಡಿದ ಪುನೀತ್]


* ಪುನೀತ್ ರಾಜ್ ಕುಮಾರ್ ಜೊತೆ ಡ್ಯಾನ್ಸ್ ಜುಗಲ್ಬಂದಿ ಹೇಗಿತ್ತು.?

- ನನ್ನ ಫೇವರೇಟ್ ಡ್ಯಾನ್ಸರ್ ಅಂದ್ರೆ ಅಪ್ಪು ಸರ್. ಅವರ ಡ್ಯಾನ್ಸ್ ಸೂಪರ್. ಅವರ ಜೊತೆ ಡ್ಯಾನ್ಸ್ ಮಾಡೋಕೆ ತುಂಬಾ ಎಕ್ಸೈಟ್ ಆಗಿದ್ದೆ. ಅವರನ್ನ ಮ್ಯಾಚ್ ಮಾಡಲು ತುಂಬಾ ಪ್ರಯತ್ನ ಪಟ್ಟಿದ್ದೀನಿ.


* 'ದೊಡ್ಮನೆ ಹುಡ್ಗ' ಚಿತ್ರದ ಆಡಿಯೋ ಆಲ್ಬಂನಲ್ಲಿ ನಿಮ್ಮ ಫೇವರೇಟ್ ಸಾಂಗ್ ಯಾವುದು.?

- ನನಗೆ ಎರಡು ಹಾಡು ತುಂಬಾ ಇಷ್ಟ. ಒಂದು ಬೆಡಗು ಬಿನ್ನಾಣ ಹಾಡು, ಮತ್ತೊಂದು ಹುಬ್ಳಿ ಸಾಂಗ್ ತುಂಬಾ ಇಷ್ಟ.


* 'ದೊಡ್ಮನೆ ಹುಡ್ಗ' ಟ್ರೈಲರ್ ರಿಲೀಸ್ ಆಗಿದೆ. ನಿಮ್ಮ ಪ್ರತಿಕ್ರಿಯೆ

- ನನಗೆ ಇಷ್ಟ ಆಯ್ತು. ಟ್ರೈಲರ್ ನಲ್ಲಿ ಕಂಪ್ಲೀಟ್ ಪ್ಯಾಕೇಜ್ ಇದೆ.


* ರಾಧಿಕಾ ಪಂಡಿತ್ ತುಂಬಾ Disciplined Artist, Punctual ಅಂತ ಎಲ್ಲರೂ ಕಾಮೆಂಟ್ ಮಾಡ್ತಾರೆ.!

- ಕೆಲಸವನ್ನ ನಾನು ಸೀರಿಯಸ್ ಆಗಿ ಮಾಡ್ತೀನಿ. ನನಗೆ ಟೈಮ್ ತುಂಬಾ ಮುಖ್ಯ. ನನ್ನಿಂದ ಇನ್ನೊಬ್ಬರಿಗೆ ತೊಂದರೆ ಆಗ್ಬಾರ್ದು. ಸೋ, ಲೇಟ್ ಆಗಿ ಬಂದು ನನಗಾಗಿ ಇನ್ನೊಬ್ಬರು ಕಾಯುವುದು ನನಗೆ ಇಷ್ಟ ಆಗಲ್ಲ. ಹೀಗಾಗಿ Punctuality ಮೇನ್ಟೇನ್ ಮಾಡ್ತೀನಿ.


* ಹತ್ತು ವರ್ಷದ ಹಿಂದೆ ರಾಧಿಕಾ ಪಂಡಿತ್ ಹೇಗಿದ್ರೋ, ಈಗಲೂ ಹಾಗೇ ಇದ್ದಾರೆ. ಸೀಕ್ರೆಟ್ ಏನು.?

- ನಾನು ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳಲ್ಲ. ನಾನು ಡಯೆಟ್ ಮಾಡಲ್ಲ. ಉಪವಾಸ ಮಾಡಲ್ಲ. ಏನೇ ಇಷ್ಟ ಆದರೂ ತಿಂತೀನಿ. ಹಾಗಂತ ಜಾಸ್ತಿ ತಿನ್ನಲ್ಲ. ಮೈಂಡ್ ಫ್ರೀ ಆಗಿದ್ರೆ, ಅದೇ ರೀತಿ ನಾವು ಕಾಣ್ತೀವಿ. ಅದೇ ನನ್ನ ಸೀಕ್ರೆಟ್.


English summary
Kannada Actress Radhika Pandit shared her experience working with Puneet Rajkumar, Ambareesh, Sumalatha, Bharathi Vishnuvardhan in Kannada Movie 'Doddmane Hudga'. Here is an exclusive interview with the actress, Take a look.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada