twitter
    For Quick Alerts
    ALLOW NOTIFICATIONS  
    For Daily Alerts

    'ಕಾಲಾಪತ್ಥರ್' ಲುಕ್ ನೋಡಿ ಅಪ್ಪು ಮಾಮ ಖಂಡಿತಾ ಫೋನ್ ಮಾಡ್ತಿದ್ರು- ಧನ್ಯಾ ರಾಮ್ ಕುಮಾರ್!

    |

    ದೊಡ್ಡನೆ ಕುಟುಂಬದಿಂದ ಹೆಣ್ಣು ಮಕ್ಕಳು ಹೀರೊಯಿನ್ ಆಗಿದ್ದೇ ಇಲ್ಲ. ಆದರೆ, ಅಣ್ಣಾವ್ರ ಮೊಮ್ಮಗಳು ಮೊದಲ ಬಾರಿಗೆ ಬಣ್ಣ ಹಚ್ಚಲು ಮುಂದೆ ಬಂದಾಗ ಇಡೀ ಚಿತ್ರರಂಗವೇ ಅಚ್ಚರಿಯಿಂದ ನೋಡಿತ್ತು. ಮೊದಲ ಸಿನಿಮಾ 'ನಿನ್ನ ಸನಿಹಕೆ' ಅನೌನ್ಸ್ ಆದಾಗ ಖುಷಿ ಪಟ್ಟಿತ್ತು. ಇತ್ತ ಅಣ್ಣಾವ್ರ ಫ್ಯಾನ್ಸ್ ಕೂಡ ಸಿನಿಮಾ ನೋಡಿ ಖುಷಿ ಪಟ್ಟಿದ್ದರು. ಒಂದೇ ಸಿನಿಮಾ ಅಷ್ಟೇ ಇನ್ನೊಂದು ಡೌಟು ಅಂದಾಗಲೇ 'ಕಾಲಾಪತ್ಥರ್' ಶೂಟಿಂಗ್ ಶುರುವಾಗಿತ್ತು.

    'ಕಾಲಾಪತ್ಥರ್' ಸಿನಿಮಾದಲ್ಲಿ ಧನ್ಯ ರಾಮ್‌ಕುಮಾರ್ ಲುಕ್ ನೋಡಿದ್ಮೇಲೆ ಸಿನಿಪ್ರಿಯರು ಥ್ರಿಲ್ ಆಗಿದ್ದರು. ಹಳ್ಳಿ ಹುಡುಗಿಯಾಗಿ ಡಿ ಗ್ಲಾಮರ್ ರೋಲ್‌ನಲ್ಲಿ ಧನ್ಯ ರಾಮ್ ರಾಮ್‌ಕುಮಾರ್ ಎಲ್ಲರ ಮನಗೆದ್ದಿದ್ದರು. ಈಗ ವರಮಹಾಲಕ್ಷ್ಮಿ ಹಬ್ಬಕ್ಕೆ ಇದೇ ಸಿನಿಮಾದ ಮತ್ತೊಂದು ಲುಕ್ ರಿವೀಲ್ ಆಗಿದೆ. ಈ ಲುಕ್ ಕೂಡ ಅಷ್ಟೇ ಕುತೂಹಲ ಕೆರಳಿಸಿದೆ

    ಸದ್ಯ ಧನ್ಯ ರಾಮ್‌ಕುಮಾರ್ ಬ್ಯಾಂಕಾಕ್‌ನಲ್ಲಿ ಇದ್ದಾರೆ. ಅಲ್ಲಿಂದಲೇ ತಮ್ಮ ಸಿನಿಮಾ ಬಗ್ಗೆ, 'ಕಾಲಾ ಪತ್ಥರ್' ಪಾತ್ರದ ಬಗ್ಗೆ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ಎರಡನೇ ಸಿನಿಮಾ, ಡಿ ಗ್ಲಾಮರ್ ರೋಲ್, ಅಪ್ಪ-ಅಮ್ಮನ ಬೆಂಬಲ, ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ಫಿಲ್ಮಿಬೀಟ್ ಜೊತೆ ಮನಬಿಚ್ಚಿ ಮಾತಾಡಿದ್ದಾರೆ.

    ವರಮಹಾಲಕ್ಷ್ಮಿ ಹಬ್ಬ ಬಗ್ಗೆ ನಿಮ್ಮ ನೆನಪುಗಳೇನು?

    ವರಮಹಾಲಕ್ಷ್ಮಿ ಹಬ್ಬ ಬಗ್ಗೆ ನಿಮ್ಮ ನೆನಪುಗಳೇನು?

    " ಪ್ರತಿವರ್ಷ ನಾವು ವರಮಹಾಲಕ್ಷ್ಮಿ ಹಬ್ಬ ಆರಿಸುತ್ತೇವೆ. ಈ ವರ್ಷ ನಾವು ಹಬ್ಬ ಮಾಡುತ್ತಿಲ್ಲ. ಯಾಕೆ ಅನ್ನೋದು ನಿಮಗೂ ಗೊತ್ತಿರುತ್ತೆ. ಪ್ರತಿವರ್ಷ ಹೇಗೆ ಅಂದರೆ, ಮಮ್ಮಿ ಕಳಶ ಇಡೋರು. ಮತ್ತೆ ನಮ್ಮ ಆಂಟಿಯಂದಿರು ಹಾಗೂ ಅಕ್ಕ-ಪಕ್ಕದವರನ್ನು ಮನೆಗೆ ಕರೆದು ಕುಂಕುಮ ಕೊಡುತ್ತೇವೆ. ನಮ್ಮ ಮನೆಯಲ್ಲೇ ತೆಂಗಿನ ಮರ ಇದೆ. ಅದನ್ನೇ ನಾವು ಮನೆಗೆ ಬಂದವರಿಗೆ ಕೊಡುತ್ತೇವೆ. ಅಲ್ಲದೆ ಮನೆಗೆಲ್ಲಾ ಅಲಂಕಾರ ಮಾಡುತ್ತಾರೆ. ನನಗೆ ಹೊಸ ಬಟ್ಟೆ ತಂದುಕೊಡುತ್ತಾರೆ. ಹಬ್ಬದ ವಾತಾವರಣ ಇರುತ್ತೆ. ನಮ್ಮ ಪಾರ್ವತಜ್ಜಿ ಇದ್ದಾಗ ಯಾವಾಗಲೂ ಮನೆಗೆ ಬರುತ್ತಿದ್ದರು. ಎಲ್ಲರೂ ನಮ್ಮ ಮನೆಯಲ್ಲೇ ಕೂತು ಮಾತಾಡುತ್ತಾರೆ. ಹಬ್ಬ ಅಂದರೆ, ನಾವು ಹಾಗೆನೇ ಆಚರಣೆ ಮಾಡುತ್ತಿದ್ದೆವು. ನಮ್ಮ ಅಜ್ಜಿ ನಮ್ಮ ಅಮ್ಮನಿಗೆ ಹೇಳಿಕೊಟ್ಟಿದ್ದಾರೆ. ಹಾಗೇ ನಮ್ಮ ಅಮ್ಮ ನನಗೆ ಹೇಳಿಕೊಟ್ಟಿದ್ದಾರೆ. ಮುಂದೆ ನಾನು ಹಾಗೇ ಹೇಳಿಕೊಡ್ತಿನೇನೋ." ಎನ್ನುತ್ತಾರೆ ಧನ್ಯ ರಾಮ್‌ಕುಮಾರ್.

    'ಕಾಲಾ ಪತ್ಥರ್' ಬಗ್ಗೆ ನಿಮ್ಮ ಅನುಭವವೇನು?

    'ಕಾಲಾ ಪತ್ಥರ್' ಬಗ್ಗೆ ನಿಮ್ಮ ಅನುಭವವೇನು?

    " ಕಾಲಾಪತ್ಥರ್ ಬಂದು ನನ್ನ ಎರಡನೇ ಪ್ರಾಜೆಕ್ಟ್. ವಿಕ್ಕಿ ವರುಣ್ ಅವರೊಂದಿಗೆ ಮೊದಲ ಸಿನಿಮಾ. ವಿಕ್ಕಿ ವರುಣ್ ಜೊತೆ ಕೆಲಸ ಮಾಡಿ ಅನುಭವ ತುಂಬಾನೇ ಡಿಫ್ರೆಂಟ್ ಆಗಿತ್ತು. ಕಲಿಯುವುದಕ್ಕೆ ತುಂಬಾನೇ ಸಿಕ್ಕಿದೆ. ಪ್ರತಿಯೊಬ್ಬ ನಿರ್ದೇಶನದ್ದೂ ಬೇರೆ ಬೇರೆ ಸ್ಟೈಲ್ ಇರುತ್ತೆ. ಇಲ್ಲಿ ನನಗೆ ಕಲಿಯುವುದಕ್ಕೆ ತುಂಬಾನೇ ಸಿಕ್ಕಿದೆ. ಬಹುತೇಕ ಚಿತ್ರೀಕರಣ ಮುಗಿಸಿದ್ದೇವೆ. ಪ್ಯಾಚ್ ವರ್ಕ್ ಹಾಗೂ ಡಬ್ಬಿಂಗ್ ಇನ್ನೂ ಇದೆ. ಪೋಸ್ಟ್ ಪ್ರೊಡಕ್ಷನ್ ಎಲ್ಲಾ ಸೇರಿದ ಡಿಸೆಂಬರ್‌ನಲ್ಲಿ ರಿಲೀಸ್ ಆಗಬಹುದು ಅಂತ ಅಂದ್ಕೊಂಡಿದ್ದೀನಿ."

    ಈ ಪಾತ್ರ ನಿಮಗೆ ಸೂಟ್ ಆಗುತ್ತೆ ಅನಿಸಿತ್ತಾ?

    ಈ ಪಾತ್ರ ನಿಮಗೆ ಸೂಟ್ ಆಗುತ್ತೆ ಅನಿಸಿತ್ತಾ?

    " ನನಗೆ ಹಳ್ಳಿ ಹುಡುಗಿ ಗೆಟಪ್‌ನಲ್ಲಿ ಕಾಣಿಸಿಕೊಳ್ಳುವುದು ಆಶ್ಚರ್ಯ ಅಂತೇನು ಅನಿಸಲಿಲ್ಲ. ಆದರೆ ಬೇರೆಯವರು ನನ್ನನ್ನು ಆ ತರ ನೋಡಿರಲ್ಲ ಅಲ್ವಾ. ಹೀಗಾಗಿ ಮಾಡರ್ನ್ ಲುಕ್‌ಗಿಂತ ಇದು ಭಿನ್ನವಾಗಿ ಕಾಣುತ್ತೆ. ಇಲ್ಲಿವರೆಗೂ ಬಂದಿರೋ ರಿವ್ಯೂ ಪ್ರಕಾರ, ತುಂಬಾ ಚೆನ್ನಾಗಿದ್ದೀಯಾ? ಲಕ್ಷಣವಾಗಿದ್ದೀಯಾ ಅಂತ ಹೇಳಿದ್ದಾರೆ. ನಾವು ಅಂದಕೊಂಡಿರಲಿಲ್ಲ ನೀನು ಸೂಟ್ ಆಗುತ್ತೀಯಾ ಅಂತ ತುಂಬಾ ಚೆನ್ನಾಗಿ ಕಾಣುತ್ತಿದ್ದೀಯಾ ಅಂತ ಹೇಳಿದ್ದಾರೆ. ಇಂತಹ ರೋಲ್‌ಗಳನ್ನು ಮಾಡಬೇಕು ಅಂತ ಹೇಳಿದ್ದಾರೆ."

    ಡಿ ಗ್ಲಾಮರ್ ರೋಲ್‌ ಬಗ್ಗೆ ಏನಂತಿರಾ?

    ಡಿ ಗ್ಲಾಮರ್ ರೋಲ್‌ ಬಗ್ಗೆ ಏನಂತಿರಾ?

    "ನಾನೊಬ್ಬ ನಟಿಯಾಗಿ ಎಲ್ಲಾ ತರಹದ ಪಾತ್ರವನ್ನು ಮಾಡಬೇಕು. ಗ್ಲಾಮರ್ ಹಾಗೂ ಡಿ-ಗ್ಲಾಮರ್ ರೋಲ್ ಅಂತ ನೋಡಲು ಹೋಗುವುದಿಲ್ಲ. ಕಂಟೆಂಟ್ ಚೆನ್ನಾಗಿರಬೇಕು ಅಷ್ಟೇ."

    ವಿಕ್ಕಿ ವರುಣ್ ಡೈರೆಕ್ಷನ್ ಹೇಗಿದೆ?

    ವಿಕ್ಕಿ ವರುಣ್ ಡೈರೆಕ್ಷನ್ ಹೇಗಿದೆ?

    " ಸೂರಜ್‌ಗಿಂತ ವಿಕ್ಕಿ ವರುಣ್ ತುಂಬಾನೇ ಡಿಫ್ರೆಂಟ್. ವಿಕ್ಕಿ ಅವರಿಂದ ತುಂಬಾ ರಗಡ್ ಆಗಿ ಹೇಗೆ ನಟನೆ ಮಾಡಬೇಕು ಅನ್ನೋದನ್ನು ಕಲಿತಿದ್ದೀನಿ. ವಿಕ್ಕಿ ಅವರಿಗೆ ಸೂರಿ ಸರ್ ಅವರಿಂದಲೇ ಬಂದಿರಬೇಕು. ನಮ್ಮೊಳಗಿರುವ ಫೀಲಿಂಗ್ ಅನ್ನು ಹೇಗೆ ತರಬೇಕು ಅನ್ನೋದನ್ನು ನಾನು ವಿಕ್ಕಿ ಅವರಿಂದ ಕಲಿತಿದ್ದೇನೆ. ಇವರ ಸ್ಟೈಲ್ ಡಿಫ್ರೆಂಟ್. ಇವರ ಡೈರೆಕ್ಷನ್‌ನಲ್ಲಿ ಎಮೋಷನ್‌ಗೆ ಹೊಡೆಯುವಂತಹ ಸ್ಟೈಲ್ ಇರುತ್ತೆ ಅಂತ ನಾನು ಹೇಳಬಹುದು."

    ನಿಮ್ಮ ಜರ್ನಿ ಬಗ್ಗೆ ಮನೆಯವರು ಏನಂತಾರೆ?

    ನಿಮ್ಮ ಜರ್ನಿ ಬಗ್ಗೆ ಮನೆಯವರು ಏನಂತಾರೆ?

    " ಮೊದಲಿನಿಂದನೂ ನಮ್ಮ ಫ್ಯಾಮಿಲಿ ತುಂಬಾನೇ ಸಪೋರ್ಟಿವ್ ಆಗಿದೆ. ಅಪ್ಪ-ಅಮ್ಮ, ಶಿವಣ್ಣ ಮಾಮ, ಅಪ್ಪು ಮಾಮ, ರಾಘು ಮಾಮ, ಧೀರೇನ್, ವಿನಯ್, ಗುರು ಇರಬಹುದು ಎಲ್ಲರೂ ತುಂಬಾನೇ ಸಪೋರ್ಟಿವ್ ಆಗಿದ್ದಾರೆ. ಪ್ರತಿ ಸಿನಿಮಾ ಒಪ್ಪಿಕೊಂಡಾಗಲೂ, ಅವರಿಗೆ ಹೇಳಿ, ಅವರ ಆಶೀರ್ವಾದ ಪಡೆದೇ ಮುಂದಕ್ಕೆ ಹೋಗೋದು. ನನ್ನ ಜರ್ನಿ ಬಗ್ಗೆ ಅವರು ಏನು ಅಂದುಕೊಂಡಿದ್ದಾರೆ ಅನ್ನೋದು ನನಗೆ ಸರಿಯಾಗಿ ಗೊತ್ತಿಲ್ಲ."

    ನಿಮ್ಮ ಆಯ್ಕೆ ನಿಮ್ಮ ತಂದೆಗೆ ಖುಷಿ ಕೊಟ್ಟಿದೆಯಾ?

    ನಿಮ್ಮ ಆಯ್ಕೆ ನಿಮ್ಮ ತಂದೆಗೆ ಖುಷಿ ಕೊಟ್ಟಿದೆಯಾ?

    " ನಾನು ಮೊದಲ ಸಿನಿಮಾ ಬಗ್ಗೆ ಹೇಳಿದಾಗ ಅವರು ಬೇಡಾ ಅಂತಾನೇ ಹೇಳಿದ್ದರು. ಯಾಕೆ ಮಾಡಬೇಕು ಅಂತ ಹೇಳಿದ್ದರು. ಶೂಟಿಂಗ್‌ಗೆ ಹೋಗೋದು. ಅಲ್ಲಿ ಶಿಸ್ತಿನಿಂದ ಇದ್ದಿದ್ದನ್ನು ನೋಡಿ ಒಪ್ಪಿಕೊಂಡರು. ಅದರಲ್ಲೂ ನಿನ್ನಸನಿಹಕೆ ನೋಡಿದ ಮೇಲೆ ತುಂಬಾನೇ ಖುಷಿ ಪಟ್ಟರು. ಈಗ ನನ್ನ ಬಗ್ಗೆ ತುಂಬಾ ಹೆಮ್ಮೆಯಿದೆ. ಅವರು ಹೇಳಿಕೊಟ್ಟಿದ್ದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ನಾನು ಸಿನಿಮಾ ಆಯ್ಕೆ ಮಾಡುತ್ತಿದ್ದೇನೆ. ಆದರೆ, ನಮ್ಮ ಅಮ್ಮನೇ ಎಲ್ಲಾ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ.

    ನಿಮ್ಮ ಪ್ರತಿಭೆ ಬಗ್ಗೆ ನೀವೇನು ತಿಳಿದುಕೊಂಡ್ರಿ?

    ನಿಮ್ಮ ಪ್ರತಿಭೆ ಬಗ್ಗೆ ನೀವೇನು ತಿಳಿದುಕೊಂಡ್ರಿ?

    "ನಾನೇ ನನ್ನ ಟ್ಯಾಲೆಂಟ್ ಬಗ್ಗೆ ಮಾತಾಡಬಾರದು. ನ್ಯಾಚುರಲ್ ಆಗಿ ಆಕ್ಟ್ ಮಾಡುತ್ತೀರಾ. ಬ್ಲಡ್‌ನಲ್ಲೇ ಬಂದಿದೆ ಅಂತ ಹೇಳುತ್ತಾರೆ. ಮೊದಲ ಸಿನಿಮಾದಂತೆ ಕಾಣುವುದಿಲ್ಲ ಅಂತಾನೂ ಹೇಳುತ್ತಾರೆ. ಇದೆಲ್ಲಾ ನನ್ನ ಮುಡಿಗೊಂದು ಗರಿ."

    ಇಂಡಸ್ಟ್ರಿ ನಿಮ್ಮನ್ನು ವೆಲ್‌ಕಮ್ ಮಾಡಿದ್ದೇಗೆ?

    ಇಂಡಸ್ಟ್ರಿ ನಿಮ್ಮನ್ನು ವೆಲ್‌ಕಮ್ ಮಾಡಿದ್ದೇಗೆ?

    " ಸಿನಿಮಾ ಇಂಡಸ್ಟ್ರೀ ಕೂಡ ತುಂಬಾನೇ ಸಪೋರ್ಟಿವ್ ಆಗಿದೆ. ಮೊದಲನಿಂದ ಚಿತ್ರರಂಗದಲ್ಲಿ ಕೆಲವೇ ಕೆಲವು ಮಂದಿ ಸ್ನೇಹಿತರಿದ್ದಾರೆ. ವಿಕ್ರಮ್ ರವಿಚಂದ್ರನ್, ಶ್ರೇಯಸ್ ಮಂಜು ಬಿಟ್ಟರೆ ಬೇರೆಯವರು ಅಷ್ಟು ಗೊತ್ತಿರಲಿಲ್ಲ. ನಮ್ಮ ಕುಟುಂಬದವರೇ ಹೆಚ್ಚು ಗೊತ್ತಿದ್ರು. ಮಾಧ್ಯಮದವರು, ಚಿತ್ರರಂಗದವರು ನಮ್ಮ ಮನೆಗೆ ಬರೋರು ಹಾಗೆ ಗೊತ್ತಿತ್ತು. ಅವರು ಈಗ ನನ್ನನ್ನೂ ಗುರುತಿಸುತ್ತಾರೆ. ಚೆನ್ನಾಗಿ ಕೆಲಸ ಮಾಡಿದರೆ ರಿವ್ಯೂ ಮಾಡುತ್ತಾರೆ. ಒಳ್ಳೆ ಅಡ್ವೈಸ್ ಕೊಡುತ್ತಾರೆ. "

    'ಕಾಲಾ ಪತ್ಥರ್' ನಿಮಗೆ ಯಾಕಿಷ್ಟ?

    'ಕಾಲಾ ಪತ್ಥರ್' ನಿಮಗೆ ಯಾಕಿಷ್ಟ?

    " ಇದೊಂದು ಫ್ಯಾಂಟಸಿ ಡ್ರಾಮ. ಇಂತಹದ್ದೊಂದು ಕಾಂಸೆಪ್ಟ್ ಎಲ್ಲೂ ನೋಡಿರಲ್ಲ. ಈ ಸಿನಿಮಾದಲ್ಲಿ ನನ್ನನ್ನು ಟಚ್ ಮಾಡಿದ ಒಂದು ಸಂಗತಿ ಇದೆ. ಆದರೆ ಈಗಲೇ ನಾನು ಹೇಳಲು ಸಾಧ್ಯವಿಲ್ಲ. ಕಥೆನೇ ತುಂಬಾನೇ ಸ್ಟ್ರಾಂಗ್ ಆಗಿದೆ. ಎಲ್ಲರಿಗೂ ಇಷ್ಟ ಆಗುತ್ತೆ."

    ಪುನೀತ್ ಅವರು ಈ ಲುಕ್ ನೋಡಿ ಏನಂತಿದ್ರು?

    ಪುನೀತ್ ಅವರು ಈ ಲುಕ್ ನೋಡಿ ಏನಂತಿದ್ರು?

    "ಅಪ್ಪು ಮಾಮ ಯಾವಾಗಲೂ ಏನಾದರೂ ಇಷ್ಟ ಆದರೆ, ಅವರು ಪೋನ್ ಮಾಡಿ ಹೇಳುತ್ತಿದ್ದರು. ನಾನು ಒಂದು ಹಾಡು ಹಾಡಿದ್ದೆ. ಅವರು ತಕ್ಷಣ ನನಗೆ ಪೋನ್ ಮಾಡಿ ಹೇಳಿದ್ರು. ತುಂಬಾ ಚೆನ್ನಾಗಿದೆ. ನಾವು ಕೂಡ ಹಾಡೋಣ. ಒಟ್ಟಿಗೆ ಒಂದು ಅಲ್ಬಮ್ ತರ ಮಾಡೋಣ ಅಂತ. ಇದು ಅವರ ವ್ಯಕ್ತಿತ್ವ. ಏನಾದರೂ ಇಷ್ಟ ಆದರೆ ಪೋನ್ ಮಾಡಿ ಅವರಿಗೆ ಹೇಳಿ, ಅವರನ್ನು ಖುಷಿ ಪಡಿಸುತ್ತಿದ್ದರು. ಈ ಲುಕ್ ನೋಡಿ ಹೀಗೆನೇ ಪ್ರತಿಕ್ರಿಯೆ ಕೊಡಬಹುದಿತ್ತು ಅನಿಸುತ್ತೆ." ಎಂದು ಧನ್ಯ ರಾಮ್‌ಕುಮಾರ್ ಹೇಳಿದ್ದಾರೆ.

    English summary
    Varamahalakshmi Special Interview With Dhanya Ramkumar: Kaala Patthar Movie New Look Revealed, Know More.
    Thursday, August 4, 2022, 20:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X