»   » 'ಬಿಗ್ ಬಾಸ್' ಮನೆಯ ಆಟದ ರಹಸ್ಯ ತೆರೆದಿಟ್ಟ ಕಾರುಣ್ಯ ರಾಮ್

'ಬಿಗ್ ಬಾಸ್' ಮನೆಯ ಆಟದ ರಹಸ್ಯ ತೆರೆದಿಟ್ಟ ಕಾರುಣ್ಯ ರಾಮ್

Posted By:
Subscribe to Filmibeat Kannada

''ಬಿಗ್ ಬಾಸ್ ಮನೆಯಲ್ಲಿ ನಾನು ನನ್ನ ಹಾಗೇ ಇದ್ದೆ. ಮನೆಯಲ್ಲಿರುವ ಎಲ್ಲರೂ ಪಕ್ಕಾ ಗೇಮ್ ಆಡುತ್ತಿದ್ದಾರೆ. ನಾನು ಇಷ್ಟು ಬೇಗ ಹೊರಗೆ ಹೋಗುವಂತಹ ಸ್ವರ್ಧಿ ಅಲ್ಲ. ಆದರೂ, ನಾನು ಎಲಿಮಿನೇಟ್ ಆಗಿದ್ದು, ಬೇಜಾರಾಗಿದೆ''

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಆರು ವಾರಗಳ ಕಾಲ ಯಶಸ್ವಿಯಾಗಿ ಭಾಗವಹಿಸಿದ್ದ ಕಾರುಣ್ಯ ರಾಮ್, ತಮ್ಮ ಸೂಪರ್ ಆಟದ ಮೂಲಕ ಕನ್ನಡ ವೀಕ್ಷಕರನ್ನ ರಂಜಿಸಿದ್ದರು. ಸುಮಾರು 40 ದಿನಗಳ ಕಾಲ ಬಿಗ್ ಮನೆಯಲ್ಲಿದ್ದ ಕಾರುಣ್ಯ, ಮೊದಲನೇ ಸಲ ನಾಮಿನೇಟ್ ಆಗಿ, ಮೊದಲನೇ ಬಾರಿಯೇ ಎಲಿಮಿನೇಟ್ ಈಗ ಮನೆಯಿಂದ ಹೊರಬಂದಿದ್ದಾರೆ.

ಈ ವೇಳೆ ನಿಮ್ಮ 'ಫಿಲ್ಮ್ ಬೀಟ್ ಕನ್ನಡ' ಜೊತೆ ಮಾತಿಗೆ ಸಿಕ್ಕ ಕಾರುಣ್ಯ, 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ತಮ್ಮ ಅನುಭವ ಹೇಗಿತ್ತು ಎಂಬುದರ ಜೊತೆ ಕೆಲವು ಇಂಟ್ರಸ್ಟಿಂಗ್ ವಿಚಾರಗಳನ್ನ ಹಂಚಿಕೊಂಡಿದ್ದಾರೆ.

ಬಿಗ್ ಮನೆಯಲ್ಲಿ ಕಾರುಣ್ಯ ಹಾಗೂ ಸಂಜನಾ ನೋಡಿದ್ದು ನಿಜವಾದ ದೆವ್ವನಾ? ಹುಚ್ಚ ವೆಂಕಟ್, ಪ್ರಥಮ್ ಮೇಲೆ ಹಲ್ಲೆ ಮಾಡಿದ್ದು ಯಾಕೆ ಗೊತ್ತಾ ? ಭುವನ್ ಗೌಡ ಹಾಗೂ ಸಂಜನಾ ಸಂಬಂಧದ ಬಗ್ಗೆ ಕಾರುಣ್ಯ ಮಾತು? ಬಿಗ್ ಬಾಸ್ ಮನೆಯಲ್ಲಿ ಡವ್ ರಾಣಿ ಯಾರು ? ಡವ್ ರಾಜ್ ಯಾರು ? ಎಂಬ ಈ ಎಲ್ಲ ಪ್ರಶ್ನೆಗಳಿಗೂ ಕಾರುಣ್ಯ ರಾಮ್ ಅವರು ಅಚ್ಚರಿಯ ಉತ್ತರ ಕೊಟ್ಟಿದ್ದಾರೆ.

'ಬಿಗ್ ಬಾಸ್' ಮನೆಯಿಂದ ಆರನೇ ವಾರ ಎಲಿಮಿನೇಟ್ ಆದ ಕಾರುಣ್ಯ ರಾಮ್, ನಿಮ್ಮ ಫಿಲ್ಮಿ ಬೀಟ್ ಕನ್ನಡಗೆ ನೀಡಿರುವ ಎಕ್ಸ್ ಕ್ಲೂಸಿವ್ ಸಂದರ್ಶನ ಇಲ್ಲಿದೆ ನೋಡಿ.....

English summary
Here is the interview of Kannada Actress Karunya Ram after elimination from Bigg Boss Kannada 4 reality show. Watch the video..

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada