twitter
    For Quick Alerts
    ALLOW NOTIFICATIONS  
    For Daily Alerts

    ಕಟ್ಟೆ ಒಟಿಟಿ ಪ್ರತಿಭೆಗಳಿಗಾಗಿ ಹೊಸ ವೇದಿಕೆ: ನಿರ್ದೇಶಕ ಅರವಿಂದ ಸಂದರ್ಶನ

    |

    S.D. ಅರವಿಂದ್ ಹೆಸರು ಕೇಳಿದ ತಕ್ಷಣ ನಮ್ಮ ಕಣ್ಣೆದುರು ಬರುವುದು ಅವರ ನಿರ್ದೇಶನದಲ್ಲಿ ಮೂಡಿಬಂದಿರುವ 'ಜುಗಾರಿ', 'ಲಾಸ್ಟ್ ಬಸ್,' 'ಮಟಾಶ್' ಚಿತ್ರಗಳು. 'ಜುಗಾರಿ', 'ಲಾಸ್ಟ್ ಬಸ್' ಚಿತ್ರಗಳಂತೂ ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಂದ ಕೂಡ ಸಾಕಷ್ಟು ಮೆಚ್ಚುಗೆಯನ್ನು ಪಡೆದಿದ್ದು, ಎಸ್. ಡಿ. ಅರವಿಂದ್ ಎಂದರೆ ಕಮರ್ಷಿಯಲ್ ಆಯಾಮದಲ್ಲಿ ಪ್ರಯೋಗಾತ್ಮಕ ಚಿತ್ರಗಳನ್ನು ಮಾಡಬಲ್ಲ ನಿರ್ದೇಶಕ ಎಂಬುದನ್ನು ಈ ಚಿತ್ರಗಳ ಮೂಲಕ ಸಾಬೀತುಪಡಿಸಿದ್ದಾರೆ. ಮಾಸ್ ಕಮ್ಯುನಿಕೇಷನ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಅರವಿಂದ್ ಅವರದು ಬಹುಮುಖ ಪ್ರತಿಭೆ. ಕೇವಲ ನಿರ್ದೇಶಕರು ಮಾತ್ರವಲ್ಲ ಸಂಗೀತ ನಿರ್ದೇಶಕರಾಗಿ ಕೂಡ ಸೈ ಎನಿಸಿಕೊಂಡವರು ಅರವಿಂದ್. 'ಲಾಸ್ಟ್ ಬಸ್', 'ದಿಟ್ಟ ಹೆಜ್ಜೆ', 'ಮೋಜೋ', 'ಮಟಾಶ್', 'ಅಮೃತಾ ಅಪಾರ್ಟ್ ಮೆಂಟ್ಸ್ ' ಮುಂತಾದ ಚಿತ್ರಗಳಿಗೆ ಸಂಗೀತ ನಿರ್ದೇಶನ ಕೂಡ ಮಾಡಿದ್ದಾರೆ.

    ಚಲನಚಿತ್ರರಂಗದಲ್ಲಿ ಸಕ್ರಿಯರಾಗುವ ಮೊದಲು ರಂಗಭೂಮಿ ಮತ್ತು ಕಿರುತೆರೆಯಲ್ಲಿ ಕೂಡ ಸಾಕಷ್ಟು ಪಳಗಿದ್ದ ಅರವಿಂದ್ ಈಗ ಮತ್ತೊಂದು ಪ್ರಯೋಗಕ್ಕೆ ಮುಂದಾಗಿದ್ದಾರೆ. ಅದೇ, ತಮ್ಮ ಸೋದರ ಹಾಗೂ ನಟ ಅವಿನಾಶ್ ದಿವಾಕರ್ (ಲಾಸ್ಟ್ ಬಸ್, ಊಟಿ ,ನಿನ್ನಿಂದಲೇ) ಅವರ ಜೊತೆಗೂಡಿ ಕಟ್ಟೆ OTT (KATTE OTT) PLATFORM ಆರಂಭಿಸಿದ್ದಾರೆ. ಅಲ್ಲದೆ ಅದರ ಕ್ರಿಯೇಟಿವ್ ಹೆಡ್ ಆಗಿ ಹೊಸತನದಿಂದ ಕೂಡಿದ ಅನೇಕ ತರದ ಕಂಟೆಂಟ್ ಗಳನ್ನು ನೀಡಲು ಮುಂದಾಗಿದ್ದಾರೆ.

    ಈಗಾಗಲೇ ಇದರ ಮೂಲಕ ಹಿರಿಯ ಸಾಹಿತಿ ಗೋರೂರು ರಾಮಸ್ವಾಮಿ ಅಯ್ಯಂಗಾರ್ ಅವರ 'ನಮ್ಮ ಊರ ರಸಿಕರು' ಕಾದಂಬರಿ ಆಧಾರಿತ ಅದೇ ಹೆಸರಿನ ವೆಬ್ ಸೀರಿಯಸ್ ಆಗಿ ನಿರ್ಮಾಣಗೊಂಡಿದ್ದು. ಇದೀಗ ಕಟ್ಟೆ OTTನಲ್ಲಿ ಸ್ಟ್ರೀಮ್ ಆಗುತ್ತಿದೆ. ದಿನದಿಂದ ದಿನ ನಮ್ಮ ಊರಿನ ರಸಿಕರನ್ನು ನೋಡುವವರ ಸಂಖ್ಯೆ ಕೂಡ ಹೆಚ್ಚುತ್ತಿದ್ದು, ವ್ಯಾಪಕವಾದ ಪ್ರಶಂಸೆ ಕೂಡ ಇದಕ್ಕೆ ವ್ಯಕ್ತವಾಗುತ್ತಿದೆ. ತಮ್ಮ ಸಿನಿಮಾ ಪಯಣದಿಂದ ಮೊದಲುಗೊಂಡು KATTE OTT PLATFORM ಯೋಜನೆಗಳ ಬಗ್ಗೆ ಫಿಲ್ಮಿಬೀಟ್ ಕನ್ನಡ ಜೊತೆ ಒಟಿಟಿ ವೇದಿಕೆ ಸೂತ್ರಧಾರಿಗಳಲ್ಲಿ ಒಬ್ಬರಾದ S.D. ಅರವಿಂದ್ ಹಂಚಿಕೊಂಡಿರುವ ಹಲವು ವಿಶೇಷಗಳು ನಿಮ್ಮ ಮುಂದೆ.

    ನಿಮ್ಮ ಇದುವರೆಗಿನ ಪಯಣದ ಬಗ್ಗೆ ಒಂದೆರಡು ಮಾತು...

    ನಿಮ್ಮ ಇದುವರೆಗಿನ ಪಯಣದ ಬಗ್ಗೆ ಒಂದೆರಡು ಮಾತು...

    ಫಿಲ್ಮಿಬೀಟ್ ಕನ್ನಡ: ಒಂದಡೆ ನೀವು ನಿರ್ದೇಶಕರಾಗಿ 'ಜುಗಾರಿ', 'ಲಾಸ್ಟ್ ಬಸ್', 'ಮಟಾಶ್' ಅಂತಹ ಪ್ರಯೋಗಾತ್ಮಕ ಕಮರ್ಷಿಯಲ್ ಚಿತ್ರಗಳನ್ನು ಮಾಡಿದವರು ನಿರ್ದೇಶಕನಾಗಿ ನಿಮ್ಮ ಇದುವರೆಗಿನ ಪಯಣದ ಬಗ್ಗೆ ಒಂದೆರಡು ಮಾತು...

    S.D. ಅರವಿಂದ್: ನಾನು ಕಮರ್ಷಿಯಲ್ ಚಿತ್ರಗಳನ್ನು ಕೂಡ ಒಂದು ಪ್ರಯೋಗಾತ್ಮಕ ದೃಷ್ಟಿಕೋನದಲ್ಲಿ ಮಾಡಲು ಬಯಸುತ್ತೇನೆ. ಹೆಚ್ಚಿನ ಕಮರ್ಷಿಯಲ್ ಚಿತ್ರಗಳನ್ನು ಮಾಡಿದರೆ ಅದರಲ್ಲಿ ಏಕತಾನತೆ ಉಂಟಾಗುತ್ತದೆ. ಹೀಗಾಗಿಯೇ ಕಮರ್ಷಿಯಲ್ ಚಿತ್ರದೊಳಗೆ ಒಂದಷ್ಟು ಪ್ರಯೋಗಾತ್ಮಕ ಮತ್ತು ಚಿಂತನೆಗೆ ಒಳಪಡಿಸುವ ವಿಚಾರಗಳು ಇರುವಂತಹ ಚಿತ್ರಗಳನ್ನು ನಾನು ಹೆಚ್ಚಿಗೆ ನಿರ್ದೇಶನ ಮಾಡಲು ಇಚ್ಛಿಸುತ್ತೇನೆ. ಹೀಗಾಗಿ ನಾನು ಹೆಚ್ಚು ಚಿತ್ರಗಳು ಮಾಡುವುದಕ್ಕಿಂತ ಹೆಚ್ಚು ಅಭಿರುಚಿ ಇರುವ ಕೆಲವೇ ಚಿತ್ರಗಳನ್ನು ಮಾಡಿರುವುದು. 'ಜುಗಾರಿ', 'ಲಾಸ್ಟ್ ಬಸ್ 'ಚಿತ್ರಗಳಿಗೆ ವಿಮರ್ಶಕರಿಂದ ಉತ್ತಮವಾದ ವಿಮರ್ಶೆ ಮತ್ತು ಪ್ರೇಕ್ಷಕನಿಂದ ಒಳ್ಳೆ ಪ್ರತಿಕ್ರಿಯೆ ವ್ಯಕ್ತವಾಯಿತು.

    ಇನ್ನು ಇತ್ತೀಚಿನ ದಿನಗಳಲ್ಲಿ ನಾನು ನಿರ್ದೇಶನ ಮಾಡಿದ 'ಮಟಾಶ್' ಚಿತ್ರ ತೆಗೆದುಕೊಂಡರೆ ಅದರಲ್ಲಿ ಒಂದು ಹೀರೋ ಅಂತ ಇರುವುದಿಲ್ಲ ಬದಲಾಗಿ 12 ಜನ ಇರ್ತಾರೆ. ಇದು ಕೂಡ ಕಮರ್ಷಿಯಲ್ ಪ್ರಯೋಗಾತ್ಮಕ ಚಿತ್ರವಾಗಿತ್ತು. ಆದರೆ ರಾಂಗ್ ರಿಲೀಸ್ ಅಂತ ಒಂದ್ ಇರುತ್ತೆ ನೋಡಿ ಅದರಿಂದ ಅದು ಹೆಚ್ಚಿನ ಜನಕ್ಕೆ ರೀಚ್ ಆಗಲಿಲ್ಲ. ಈಗ ಇದನ್ನ ಕನ್ನಡದ ಪ್ರೇಕ್ಷಕರು ನಮ್ಮ ಕಟ್ಟೆ OTTನಲ್ಲಿ ನೋಡಬಹುದಾಗಿದೆ.

    ಮ್ಯೂಸಿಕ್ ಡೈರೆಕ್ಟರ್ ಆದ ಹಿನ್ನಲೆ ಬಗ್ಗೆ ಸ್ವಲ್ಪ ವಿವರಿಸಬಹುದೇ?

    ಮ್ಯೂಸಿಕ್ ಡೈರೆಕ್ಟರ್ ಆದ ಹಿನ್ನಲೆ ಬಗ್ಗೆ ಸ್ವಲ್ಪ ವಿವರಿಸಬಹುದೇ?

    ಕನ್ನಡ ಫಿಲ್ಮಿಬೀಟ್: ನೀವು ಒಂದು ರೀತಿಯಲ್ಲಿ ಬಹುಮುಖ ಪ್ರತಿಭಾವಂತ. ನಿರ್ದೇಶನದ ಜೊತೆಗೆ ಸಂಗೀತ ನಿರ್ದೇಶಕರಾಗಿ, ಸಾಹಿತಿಯಾಗಿ ಕೂಡ ಸೈ ಎನಿಸಿಕೊಂಡವರು. ನೀವು ಮ್ಯೂಸಿಕ್ ಡೈರೆಕ್ಟರ್ ಆದ ಹಿನ್ನಲೆ ಬಗ್ಗೆ ಸ್ವಲ್ಪ ವಿವರಿಸಬಹುದೇ?

    S.D. ಅರವಿಂದ್: ನಾನು ಸಿನಿಮಾ ನಿರ್ದೇಶಕನಾಗುವುದಕ್ಕೆ ಮೊದಲು ರಂಗಭೂಮಿಯಲ್ಲಿ ಕೆಲಸ ಮಾಡಿದವನು. ಅನೇಕ ನಾಟಕಗಳಿಗೆ ಹಿನ್ನೆಲೆಯ ಸಂಗೀತವನ್ನು ಮತ್ತು ಸಾಹಿತ್ಯವನ್ನು ಕೊಟ್ಟಿದ್ದೇನೆ. ಜೊತೆಗೆ ನಾನು ಇಳಯರಾಜ ಅವರ ದೊಡ್ಡ ಅಭಿಮಾನಿ. ನನ್ನ ಸಂಗೀತ ನಿರ್ದೇಶನಕ್ಕೆ ಅವರೇ ಸ್ಫೂರ್ತಿ ಮತ್ತು ನನ್ನ ಮಾನಸ ಗುರುಗಳು ಅಂತ ಹೇಳಬಹುದು. 'ಲಾಸ್ಟ್ ಬಸ್', 'ದಿಟ್ಟಹೆಜ್ಜೆ' 'ಮೋಜೋ', 'ಮಟಾಶ್", ಇತ್ತೀಚೆಗೆ ಬಿಡುಗಡೆಯಾಗಿರುವ 'ಅಮೃತಾ
    ಅಪಾರ್ಟ್ಮೆಂಟ್ಸ್' ವರೆಗೆ ಸುಮಾರು ಹತ್ತು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದೇನೆ.

    ಕನ್ನಡಿಗರಿಗೆ ಕನ್ನಡಿಗರದೇ ಆದ OTT

    ಕನ್ನಡಿಗರಿಗೆ ಕನ್ನಡಿಗರದೇ ಆದ OTT

    ಕನ್ನಡ ಫಿಲ್ಮಿಬೀಟ್: ಇತ್ತೀಚಿಗೆ OTT PLATFORM ಗಳು ಸಾಕಷ್ಟು ಜನಪ್ರಿಯವಾಗುತ್ತಿದೆ. ಈಗ ಕನ್ನಡಿಗರಿಗೆ ಕನ್ನಡಿಗರದೇ ಆದ OTT PLATFORM 'KATTE OTT' ನಿಮ್ಮ ಮೂಲಕ ಕನ್ನಡ ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನಕ್ಕೆ ಮುಂದಾಗಿದ್ದೀರಿ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಬಹುದೇ?

    S.D.ಅರವಿಂದ್: ಹೌದು KATTE OTT ಕನ್ನಡಿಗರಿಂದ ಕನ್ನಡಿಗರಿಗಾಗಿ ರೂಪಿಸಿರುವ OTT PLATFORM ಇದು. ಇದನ್ನು ನಾವು ಎರಡು ವಿಭಾಗಗಳಲ್ಲಿ ವಿಂಗಡಿಸಿದ್ದೇವೆ. ಒಂದು: ಸಬ್ಸ್ಕ್ರೈಬ್ ಆಗಿ ವೆಬ್ ಸಿರೀಸ್, ಶಾರ್ಟ್ ಫಿಲಂಗಳು, ಸ್ಟ್ಯಾಂಡಪ್ ಕಾಮಿಡಿ, ಜೊತೆಗೆ ವಿಶೇಷವಾದ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು. ಇನ್ನೊಂದು ಪೇ ಅಂಡ್ ವಾಚ್, ಇದರಲ್ಲಿ ನಿಗದಿಪಡಿಸಿದ ಹಣವನ್ನು ಪೇ ಮಾಡಿ ಹೊಸ ಸಿನಿಮಾಗಳನ್ನು ನೋಡಬಹುದಾಗಿದೆ.

    ಕಟ್ಟೆ ಒಟಿಟಿ ಚಂದಾದಾರರಾಗುವುದು ಹೇಗೆ?

    ಕಟ್ಟೆ ಒಟಿಟಿ ಚಂದಾದಾರರಾಗುವುದು ಹೇಗೆ?

    ಕನ್ನಡ ಫಿಲ್ಮಿಬೀಟ್: KATTE OTT PLATFORM ಸಬ್ಸ್ಕ್ರೈಬ್ ಆಗಲು ಎಷ್ಟು ಹಣ ನಿಗದಿ ಮಾಡಿದ್ದೀರಿ?

    S.D. ಅರವಿಂದ್: ಇದು ಈಗಷ್ಟೇ ಆರಂಭವಾಗಿದೆ. ಪ್ರಸ್ತುತ ವರ್ಷಕ್ಕೆ 120 ರೂಪಾಯಿಗಳನ್ನು ನಾವು ನಿಗದಿಪಡಿಸಿದ್ದೇವೆ. ಕೇವಲ 120 ರೂಪಾಯಿಗಳನ್ನು ಕೊಟ್ಟು ಭರಪೂರ ಎಂಟರ್ಟೈನ್ಮೆಂಟ್ ಕಟ್ಟೆ Ott ನಲ್ಲಿ ಪಡೆಯಬಹುದಾಗಿದೆ. ಇತ್ತೀಚೆಗಷ್ಟೇ ಗೊರೂರು ರಾಮಸ್ವಾಮಿ ಅಯ್ಯಂಗಾರ್ ರವರ 'ನಮ್ಮ ಊರಿನ ರಸಿಕರು' ವೆಬ್ ಸರಣಿ ಆರಂಭವಾಗಿದೆ. ಇದಕ್ಕೆ ಪ್ರೇಕ್ಷಕರಿಂದ ತುಂಬಾ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೇವಲ ಮೂರೇ ದಿನದಲ್ಲಿ ಸಾವಿರದ ಐನೂರು ಡೌನ್ಲೋಡ್ ಸಹ ಆಗಿದೆ. ಪೇ ಅಂಡ್ ವಾಚ್‌ನಲ್ಲಿ ಈಗಾಗಲೇ ಎರಡು ಚಿತ್ರಗಳು. 'ಸೋಹಂ', 'ಡೇಸ್ ಆಫ್ ಬೋರಾಪುರ' ಕೂಡ ಬಿಡುಗಡೆಯಾಗಿದೆ. ಇದರಲ್ಲಿ 'ಸೋಹಂ' ಚಿತ್ರಕ್ಕೆ ತುಂಬಾ ಒಳ್ಳೆ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

    ಯುವ ನಿರ್ಮಾಪಕ ಮತ್ತು ನಿರ್ದೇಶಕರಿಗೆ

    ಯುವ ನಿರ್ಮಾಪಕ ಮತ್ತು ನಿರ್ದೇಶಕರಿಗೆ

    ಕನ್ನಡ ಫಿಲ್ಮಿಬೀಟ್: ಯಾವ ತರದ ಕಂಟೆಂಟ್ ಅನ್ನು ತೆಗೆದುಕೊಂಡು ನಿಮ್ಮ ಹತ್ತಿರ ನಮ್ಮ ಕನ್ನಡದ ಯುವ ನಿರ್ಮಾಪಕ ಮತ್ತು ನಿರ್ದೇಶಕರು ಬರಬಹುದಾಗಿದೆ?

    S.D. ಅರವಿಂದ್: ನಾವು ಎಲ್ಲಾತರದ ಕನ್ನಡ ಮತ್ತು ಕನ್ನಡದ ಉಪಭಾಷೆಗಳಾದ ತುಳು, ಕೊಂಕಣಿ, ಬ್ಯಾರಿ, ಜೊತೆಗೆ ಉತ್ತರ ಕರ್ನಾಟಕದ ಪ್ರತಿಭಾವಂತರು ನಿರ್ದೇಶಿಸುವ ವೆಬ್ ಸರಣಿಗಳು ಅಥವಾ ಶಾರ್ಟ್ ಫಿಲಂಗಳು ಮಂಡ್ಯ ಆಕ್ಸೆಂಟ್‌ನಲ್ಲಿ ಬರುವ ಹೊಸ ಪ್ರಯೋಗಗಳು ಹೀಗೆ ಎಲ್ಲವನ್ನು ಕೂಡ ಇಲ್ಲಿ ಪ್ರದರ್ಶಿಸುತ್ತೇವೆ ಆದರೆ ಕಂಟೆಂಟ್ ವಿಚಾರದಲ್ಲಿ ನಾವು ತುಂಬಾ ಎಚ್ಚರಿಕೆಯನ್ನು ಸಹ ವಹಿಸುತ್ತವೆ ನಮ್ಮ ಚಂದಾದಾರರಿಗೆ ಉತ್ತಮವಾದ ಕಂಟೆಂಟ್ ಕೊಡುವ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಗೆ ಇಲ್ಲ. ಕನ್ನಡದ ಯಾವುದೇ ಪ್ರತಿಭಾವಂತರ ತಂಡ ತಾವು ತಯಾರಿಸುವ ಕಂಟೆಂಟ್ ನೊಂದಿಗೆ ನಮ್ಮನ್ನು ನೇರವಾಗಿ ಸಹ ಭೇಟಿಯಾಗಬಹುದು. ಗುಣಮಟ್ಟದ ಕಂಟೆಂಟ್ ಖಂಡಿತವಾಗಿಯೂ ಕೂಡಾ ಪ್ರೇಕ್ಷಕರನ್ನು ರಂಜಿಸುತ್ತದೆ ಜೊತೆಗೆ ಯುವ ಪ್ರತಿಭಾವಂತರಿಗೆ ವೇದಿಕೆಯ ಜೊತೆಗೆ ಹಣಕಾಸಿನ ರೂಪದಲ್ಲಿ ಕೂಡ ಯಶಸ್ಸು ದೊರೆಯುತ್ತದೆ.

    ನಾವು ವಿಶೇಷವಾಗಿ stand up comedyಗೆ ಕೂಡ ಆದ್ಯತೆಯನ್ನು ಕೊಟ್ಟಿದ್ದು, ಜಕ್ಕೂರ್‌ನಲ್ಲಿರುವ ನಮ್ಮ ಸ್ಟುಡಿಯೋದಲ್ಲಿಯೇ ಇವುಗಳ ಚಿತ್ರೀಕರಣ ಕೂಡ ನಡೆಸುತ್ತಿದ್ದೇವೆ. KATTE OTT PLATFORM ಗೆ ಸಂಬಂಧಪಟ್ಟಂತೆ ಯಾವುದೇ ಮಾಹಿತಿಗಾಗಿ ನಮ್ಮನ್ನು ನೇರವಾಗಿ ಭೇಟಿಯಾಗಬಹುದು. ಅಥವಾ ಇಮೇಲ್ katte.entertainmentgmail.com ಮಾಡಬಹುದು

    ಯಾವ ಚಿತ್ರಗಳ ನಿರ್ದೇಶನಕ್ಕೆ ಮುಂದಾಗಿದ್ದೀರಿ?

    ಯಾವ ಚಿತ್ರಗಳ ನಿರ್ದೇಶನಕ್ಕೆ ಮುಂದಾಗಿದ್ದೀರಿ?

    ಕನ್ನಡ ಫಿಲ್ಮಿಬೀಟ್: 'ಮಟಾಶ್' ನಂತರ ನೀವು ಯಾವುದೇ ಚಿತ್ರ ನಿರ್ದೇಶನ ಮಾಡಿಲ್ಲ ಮತ್ತೆ ಯಾವ ಚಿತ್ರಗಳ ನಿರ್ದೇಶನಕ್ಕೆ ಮುಂದಾಗಿದ್ದೀರಿ?

    S.D.ಅರವಿಂದ್: ಇತ್ತೀಚೆಗೆ KATTE OTT PLATFORM ಬಗ್ಗೆ ಹೆಚ್ಚಿಗೆ ಗಮನ ಕೊಟ್ಟಿರುವ ಕಾರಣ ಸಿನಿಮಾ ನಿರ್ದೇಶನ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಈಗಾಗಲೇ ಎರಡು ಸ್ಕ್ರಿಪ್ಟ್‌ಗಳು ಸಿದ್ಧವಾಗಿದೆ. ಶೀಘ್ರದಲ್ಲೇ ಈ ಎರಡು ಚಿತ್ರಗಳನ್ನು ನಿರ್ದೇಶನ ಮಾಡಲಿದ್ದೇನೆ. ಇವು ನೇರವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ, ಆನಂತರದಲ್ಲಿ ಅವುಗಳನ್ನು ಕೂಡ ನಮ್ಮ KATTE OTTನಲ್ಲಿ ನೋಡಲು ಅವಕಾಶವಿರುತ್ತದೆ.

    ನರಸಿಂಹರಾಜು ಕುರಿತು ಕಾರ್ಯಕ್ರಮ

    ನರಸಿಂಹರಾಜು ಕುರಿತು ಕಾರ್ಯಕ್ರಮ

    ಕನ್ನಡ ಫಿಲ್ಮಿಬೀಟ್: ಕೊನೆಯದಾಗಿ, ಅತಿಮುಖ್ಯವಾಗಿ ನಿಮ್ಮ ತಾತನವರಾದ ಕನ್ನಡ ಸಿನಿಮಾರಂಗದ ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರ ಕುರಿತು ಯಾವುದಾದರೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಆಲೋಚನೆ ಇದೆ?

    S.D. ಅರವಿಂದ್: ಖಂಡಿತವಾಗಿಯೂ...
    ನರಸಿಂಹರಾಜು ಅವರು ಕನ್ನಡ ಸಿನಿಮಾರಂಗ ಕಂಡ ಖ್ಯಾತ ಕಲಾವಿದರು, ಅಂತಹವರ ಮೊಮ್ಮಗ ಎಂಬ ಹೆಮ್ಮೆ ಖಂಡಿತ ನನಗಿದೆ. ಆದರೆ S.D. ಅರವಿಂದ್ ಅವರ ತಾತ ನರಸಿಂಹರಾಜು ಅಂತ ಜನ ಗುರುತಿಸುವಂತಹ ದಿನಗಳು ಬರಬೇಕು ಎಂಬುದು ನನ್ನ ಬಯಕೆ ಆಗಿದೆ. ಹೌದು ಅವರ ಹೆಸರಿನಲ್ಲಿ ಒಂದು ಸಾಕ್ಷ್ಯಚಿತ್ರ ನಿರ್ಮಾಣ ಕಾರ್ಯವನ್ನು ಮಾಡುವ ಕೆಲಸದಲ್ಲಿದ್ದೇವೆ. ಅವರ ಹೆಸರಿನಲ್ಲಿ ಕಾಮಿಡಿ ಶಾರ್ಟ್ ಫಿಲಂಗಳ ಕಂಟೆಸ್ಟ್ ಮಾಡುವ ಪ್ರಯತ್ನಗಳು ನಡೆಯುತ್ತಿದೆ. ಎಲ್ಲದಕ್ಕಿಂತ ಮುಖ್ಯವಾಗಿ 2023ರಲ್ಲಿ ಅವರ ಜನ್ಮಶತಮಾನೋತ್ಸವವಿದೆ ಅದಕ್ಕಾಗಿ ಒಂದು ವಿಶೇಷವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಆಲೋಚನೆಯಲ್ಲಿ ಕೂಡ ನಾವು ಇದ್ದೇವೆ.

    ಕನ್ನಡ ಫಿಲ್ಮಿಬೀಟ್: KATTE OTT ಜೊತೆಗೆ ನರಸಿಂಹರಾಜು ಅವರ ಹೆಸರಿನಲ್ಲಿಜೊತೆಗೆ ನರಸಿಂಹರಾಜು ಅವರ ಹೆಸರಿನಲ್ಲಿ ನೀವು ಕೈಗೊಳ್ಳುತ್ತಿರುವ ಎಲ್ಲಾ ಕಾರ್ಯಗಳಿಗೂ ನಮ್ಮ ಕಡೆಯಿಂದ ಶುಭ ಹಾರೈಕೆಗಳು.

    S.D. ಅರವಿಂದ್: ಧನ್ಯವಾದಗಳು...
    KATTE OTTಖಂಡಿತ ಕನ್ನಡಿಗರ ಅಭಿರುಚಿಗೆ ತಕ್ಕಂತೆ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಅಂತ ನಾನು ಮತ್ತೊಮ್ಮೆ ಈ ಮೂಲಕ ಕನ್ನಡ ಜನತೆಗೆ ಹೇಳಲು ಇಚ್ಚಿಸುತ್ತೇನೆ. ಜನ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಇದಕ್ಕೆ ಸಬ್ಸ್ಕ್ರೈಬ್ ಆಗಿ ಕನ್ನಡಿಗರ ಈ ಪ್ರಯತ್ನಕ್ಕೆ ಬೆಂಬಲಿಸಬೇಕು ಅಂತ ಕೋರುತ್ತಿದ್ದೇನೆ.

    English summary
    Here is an exclusive interview with SD Arvinda on KATTE OTT Platform and Narasimharaju Centenary ceremony. He says OTT Platform will provide platform for good content and for all kinds of talent in Karnataka. ಎಸ್.ಡಿ. ಅರವಿಂದ್ ಅವರು KATTE OTT Platform.
    Tuesday, December 28, 2021, 13:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X